ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಾರತ್ ಸ್ಕೌಟ್ಸ್ ಮತ್ತು ಗೈಡ್ ವತಿಯಿಂದ ಸ್ಕೌಟ್ಸ್ ಗೈಡ್ ವಿದ್ಯಾರ್ಥಿಗಳಿಗೆ ವಸುಪುರ ಬೆಟ್ಟ “ಚಾರಣ” ಹಾಗೂ ಇತಿಹಾಸ ಆಧ್ಯಯನ ನಡೆಯಿತು. ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಗುಣರತ್ನ ಕಾರ್ಯಕ್ರಮ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಕಾರ್ಯದರ್ಶಿ ಪಿಯುಸ್ ಡಿ’ಸೋಜ ಅನೇಕ ಸ್ಥಳಿಯ ಶಾಲೆಗಳ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಬಂಡೆ ಕಲ್ಲುಗಳ ಮೇಲೆ ಇರುವ ಶಾಸನಗಳನ್ನು ವೀಕ್ಷಿಸಿ ಚಾರಣದಲ್ಲಿ ಭಾಗವಹಿಸಿದರು. ಸಂಜೆ ಶಿಬಿರಾಗ್ನಿ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಅಧ್ಯಕ್ಷೆ ಗುಣರತ್ನ ಶಿಬಿರಾಗ್ನಿ ಉದ್ಘಾಟಿಸಿ ಶುಭಹಾರೈಸಿದರು. ಶಿಕ್ಷಕ ಜಯಶೀಲ ಅತಿಥಿಗಳಾಗಿ ಉಪಸ್ಥಿತರಿದ್ದರು.












