ಪಂಚವರ್ಣ ರಾಜ್ಯೋತ್ಸವ ಪೋಸ್ಟರ್ ಬಿಡುಗಡೆ ಸಮಾರಂಭ

0
217

Click Here

Click Here

ನಾಡೋಜ ಡಾ.ಜಿ ಶಂಕರ್ ಅರ್ಥಪೂರ್ಣ ಆಯ್ಕೆ- ಆನಂದ್ ಸಿ ಕುಂದರ್

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪಂಚವರ್ಣ ಸಂಘಟನೆ ರಾಜ್ಯೋತ್ಸವದಂತಹ ಹಲವಾರು ಸಾಮಾಜಿಕ ಕಾರ್ಯಕ್ರಮಗಳಿಂದ ಮನೆಮಾತಾಗಿ ಬೆಳೆದು ನಿಂತಿದೆ. ಈ ದಿಸೆಯಲ್ಲಿ ಪಂಚವರ್ಣ ರಾಜ್ಯೋತ್ಸವ ಗೌರವಕ್ಕೆ ಈ ಸಮಾಜದ ಆಸ್ತಿ ನಾಡೋಜ ಡಾ‌.ಜಿ ಶಂಕರ್ ಆಯ್ಕೆ ಅರ್ಥಪೂರ್ಣ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.
ಭಾನುವಾರ ಆನಂದ್ ಸಿ. ಕುಂದರ್ ಗೃಹದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇದೇ ಬರುವ ನವೆಂಬರ್ 6 ರಂದು ನಡೆಯಲಿರುವ ಪಂಚವರ್ಣ ರಾಜ್ಯೋತ್ಸವ ಸಮಾರಂಭದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಪಂಚವರ್ಣ ಸಂಘಟನೆ ರಾಜ್ಯಕ್ಕೆ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದ್ದು. ರಾಜ್ಯ ರಾಜ್ಯೋತ್ಸವದಂತಹ ಪ್ರಶಸ್ತಿಗಳು ಅರಸಿ ಬರಲಿ ಎಂದು ಹಾರೈಸಿದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಪಂಚವರ್ಣ ಸಾಮಾಜಿಕ ಕಾರ್ಯಗಳು ರಾಜ್ಯೋತ್ಸವ ಕಾರ್ಯಕ್ರಮಗಳು ಜನಮುಟ್ಟುವ ಕಾರ್ಯಕ್ರಮಗಳಾಗಿ ಗುರುತಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಕಾಶ್ ತೋಳಾರ್, ಸಾಲಿಗ್ರಾ‌ಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ. ತಾರಾನಾಥ ಹೊಳ್ಳ,
ಕೋಟ ಪಂಚಾಯತ್ ಮಾಜಿ‌ ಸದಸ್ಯ ಭುಜಂಗ ಗುರಿಕಾರ, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್, ಗೀತಾನಂದ ಫೌಂಡೇಶನ್ ಸಮಾಜಸೇವಾ ವಿಭಾಗದ ರವಿಕಿರಣ್ ಕೋಟ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಯಶೋದ ಹಂದಟ್ಟು, ಪಂಚವರ್ಣದ ನಾಗಾರಜ್ ಗಾಣಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here