ಗ್ರಾಮೀಣ ಕರಾವಳಿ ಭಾಗ ಅಭಿವೃದ್ಧಿಗೆ ಆನಂದ್ ಸಿ ಕುಂದರ್ ಕೊಡುಗೆ ಅಪಾರ

0
76

Click Here

Click Here

ಮಣೂರು ಪಡುಕರೆಯಲ್ಲಿ ನೂತನ ರಿಕ್ಷಾ ನಿಲ್ದಾಣ ಲೋಕಾರ್ಪಣಾ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಹೇಳಿಕೆ

Click Here

​ಕುಂದಾಪುರ: ಒಂದು ಗ್ರಾಮ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿನ ಸೌಲಭ್ಯಗಳ ವ್ಯವಸ್ಥೆಯ ಮೇಲೆ ಅವಲಂಬಿತಗೊಳ್ಳುತ್ತದೆ. ಆದರೆ ಮಣೂರು ಪಡುಕರೆ ಹಿಂದೆ ಇದ್ದ ಸ್ಥಿತಿಗಿಂತ ಪ್ರಸ್ತುತ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವಾಗಿ ಮೂಡಿ ಬಂದಿದೆ. ಇದಕ್ಕೆ ಇಲ್ಲಿನ ದಾನಿಗಳಾದ ಆನಂದ್ ಸಿ ಕುಂದರ್ ಎಂಬ ಶಕ್ತಿ ಕಾರಣ ಎಂದು ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಪ್ರಧಾನಕಾರ್ಯದರ್ಶಿ ದಿನೇಶ್ ಗಾಣಿಗ ಹೇಳಿದರು
ಭಾನುವಾರ ಮಣೂರು ಪಡುಕರೆಯಲ್ಲಿ ಗೀತಾನಂದ ಫೌಂಡೇಶನ್ ವತಿಯಿಂದ ನಿರ್ಮಾಣಗೊಂಡ ನೂತನ ರಿಕ್ಷಾ ನಿಲ್ದಾಣದ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿ ಕುಂದರ್ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಅನುದಾನ ಒದಗಿಸಿ ಪರಿಸರದ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಇದೀಗ ಮಣೂರು ಪಡುಕರೆ ಸರ್ಕಲ್ ಸುಂದರ ನಗರ ಪಟ್ಟಣ ವ್ಯಾಪ್ತಿಯ ರೀತಿಯಲ್ಲಿ ಅಭಿವೃದ್ಧಿಗೊಳಿಸಿದ್ದಾರೆ. ಇಂತಹ ಮಹಾದಾನಿ ಬಲುಅಪರೂಪ ಎಂದರು.
ಕಾರ್ಯಕ್ರಮದಲ್ಲಿ ಆಟೋ ನಿಲ್ದಾಣದ ರೂವಾರಿ ಆನಂದ್ ಸಿ ಕುಂದರ್ ಹಾಗೂ ಅರ್ಚಕ ನರಸಿಂಹಯ್ಯ ಇವರನ್ನು ಸನ್ಮಾನಿಸಲಾಯಿತು‌
​ ಸಭಾ​ಧ್ಯಕ್ಷತೆಯನ್ನು ರಿಕ್ಷಾ ಯೂನಿಯನ್‌ನ ಅಧ್ಯಕ್ಷರಾದ ನಾರಾಯಣ ಮೆಂಡನ್ ಮಣೂರು ಪಡುಕರೆ ಅವರು ವಹಿಸಿದ್ದರು.
​ಮುಖ್ಯ ಅತಿಥಿಗಳಾಗಿ ಗೋವನ್ ಫ್ರೆಶ್ ಮರೈನ್ ಪ್ರೈ.ಲಿ.ನ ಪಾಲುದಾರ ಬಿಜು ನಾಯರ್, ತೋಳಾರ್ ಓಷಿಯನ್ ಪ್ರೊಡಕ್ಟ್ಸ್‌ನ ಡಾ. ಪ್ರಕಾಶ್ ತೋಳಾರ್, ಕೋಟ ಗ್ರಾಮ ಪಂಚಾಯತ್ ಸದಸ್ಯ ಭುಜಂಗ ಗುರಿಕಾರ ಉಪಸ್ಥಿತರಿದ್ದರು.
ರಿಕ್ಷಾ ಚಾಲಕರ ಸಂಘದ ಅಬುಬ್ಬಕ್ಕರ್ ಸ್ವಾಗತಿಸಿದರು. ಪ್ರಭಾಕರ್ ಮಣೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here