ಕುಂದಾಪುರ :ಮೂಡ್ಲಕಟ್ಟೆ ಎಮ್.ಐ.ಟಿ. ಕಾಲೇಜಿನಲ್ಲಿ(ಐ.ಎಂ.ಜೆ. ಇನ್ಸಿಟ್ಯೂಷನ್ಸ್) “ನವೋನ್ಮೇಶ್ – 2026” ಪಿಯುಸಿ. ವಿದ್ಯಾರ್ಥಿಗಳ ರಾಜ್ಯ ಮಟ್ಟದ ಫೆಸ್ಟ್ ಉದ್ಘಾಟನೆ

0
15

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here


ಕುಂದಾಪುರ : ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯವಾಗಿದೆ. ಶಿಕ್ಷಣದೊಂದಿಗೆ ನಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಅದರಲ್ಲಿ ತೊಡಗಿಸಿಕೊಳ್ಳಬೇಕು. ವೃತ್ತಿ ಜೀವನದ ದಾರಿ ಕಂಡುಕೊಳ್ಳಲು ಇದು ಸೂಕ್ತ ಸಮಯ. ಹೀಗಾಗಿ ಸರಿಯಾಗಿ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ಯಾವುದೇ ಸ್ಪರ್ಧೆಯಲ್ಲಿ ಗೆಲುವು ಮಾತ್ರ ಮುಖ್ಯವಲ್ಲ. ಸ್ಪರ್ಧಾತ್ಮಕ ಮನೋಭಾವದಿಂದ ಸ್ಪರ್ಧಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಆ ಸ್ಪರ್ಧೆಯಲ್ಲಿನ ಉತ್ತಮ ಅಂಶಗಳನ್ನು ಪಡೆದು ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆಸಿದಾಗ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಕುಂದಾಪುರದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಹೇಳಿದರು.
ಕುಂದಾಪುರ ಮೂಡ್ಲಕಟ್ಟೆಯ ಐ.ಎಂ.ಜೆ ಇನ್ಸಿಟ್ಯೂಷನ್ಸ್ ಇದರ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಕುಂದಾಪುರದ ಮೂಡ್ಲಕಟ್ಟೆಯ ಐ.ಎಂ.ಜೆ. ಇನ್ಸಿಟ್ಯೂಷನ್ಸ್ ವಠಾರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ನವೋನೇಶ್ -2026’ ರಾಜ್ಯ ಮಟ್ಟದ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಅತಿಥಿಯಾಗಿದ್ದ ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಿಜವಾದ ಪ್ರತಿಭೆಗಳಿಗೆ ವೇದಿಕೆ ಕೊನೆಗೆ ಸಿಗುತ್ತದೆ. ನಿಜವಾದ ಪ್ರತಿಭೆಯ ಹಿಂದೆ ನೂರಾರು ದಾರಿಗಳಿದ್ದು ಅದೇ ಸಾಧನೆಯ ಹಾದಿಯಾಗುತ್ತದೆ. ಆಲಸ್ಯ, ನಿದ್ರೆ ಮತ್ತು ನಾಳೆ ಎಂಬುದು ನಮ್ಮ ಸಾಧನೆಯ ಹಾದಿಗೆ ದೊಡ್ಡ ಶತ್ರುವಾಗಿದ್ದು, ಇದನ್ನು ಗೆದ್ದರೆ ಜೀವನದಲ್ಲಿ ಗೆಲ್ಲುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಂಜಿ ವಿದ್ಯಾ ಸಂಸ್ಥೆಯ ಅಕಾಡೆಮಿಕ್ ಡೈರೆಕ್ಟರ್ ಡಾ. ಎಸ್.ಎನ್. ಭಟ್ ವಹಿಸಿದ್ದರು. ಇದೇ ಸಂದರ್ಭ ಬೆಂಗಳೂರಿಗೆ ವರ್ಗಾವಣೆಯಾದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್. ಅವರನ್ನು ಗೌರವಿಸಲಾಯಿತು. ಐ.ಎಂ.ಜೆ ಇನ್ಸಿಟ್ಯೂಷನ್ಸ್‍ನ ಪ್ರಾಂಶುಪಾಲರಾದ ಡಾ. ಪ್ರತಿಭಾ ಪಾಟೀಲ್, ಜೆನ್ನಿಫರ್ ಫ್ರೀಡಾ ಮೆನೇಜಸ್, ಪ್ರೊ. ಹೇಮಲತಾ ಉಪಸ್ಥಿತರಿದ್ದರು.
ಎಂಐಟಿಕೆ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಧ್ಯಾಪಕರಾದ ಸೂಕ್ಷ್ಮ ಅಡಿಗ ಮತ್ತು ರಾಜೇಶ್ವರಿ ಆರ್. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಮೋಕ್ಷ ಮತ್ತು ಸಮೃದ್ಧಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧೆಡೆಯಿಂದ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Click Here

LEAVE A REPLY

Please enter your comment!
Please enter your name here