ಬಿಟಿಆರ್ ರಸ್ತೆ ರಿಪೇರಿಗೆ ಆಗ್ರಹಿಸಿ ಡಿವೈಎಫ್ ಐ ಪ್ರತಿಭಟನೆ

0
29

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಡೇರ್ ಹೋಬಳಿ ಪ್ರದೇಶದ ಬಿಟಿಆರ್ ರಸ್ತೆ ಕಳೆದ ಹಲವು ವರ್ಷಗಳಿಂದ ರಿಪೇರಿ ಕಾಣದೆ ಹೊಂಡ ಗುಂಡಿಗಳಿಂದ ತುಂಬಿದೆ. ಜನಸಾಮಾನ್ಯರು ನಡೆದಾಡುವುದು ಕಷ್ಟವಾಗಿದೆ. ಪುರಸಭೆ ಶೀಘ್ರವೇ ರಸ್ತೆಯನ್ನು ರಿಪೇರಿ ಮಾಡಬೇಕೆಂದು ಒತ್ತಾಯಿಸಿ ಡಿವೈಎಫ್ ಐ ವಡೆರ್ ಹೋಬಳಿ ಘಟಕದ ವತಿಯಿಂದ ಸಾರ್ವಜನಿಕವಾಗಿ ರಸ್ತೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ ಐ ಮಾಜಿ ಮುಖಂಡರಾದ ಚಂದ್ರಶೇಖರ್ ವಿ. ಪುರಸಭೆ ನಾಗರೀಕರಿಂದ ಹಲವು ವಿಧದ ತೆರಿಗೆ ಇಲಾಖೆ ವಸೂಲಿ ಮಾಡುತ್ತಿದ್ದರು ಆ ಹಣವನ್ನು ರಸ್ತೆ ಅಭಿವೃದ್ಧಿಗಾಗಿ ಖರ್ಚು ಮಾಡಾದಿರುವುದನ್ನು ಖಂಡಿಸಿದರು. ರಸ್ತೆ ಪ್ರಾರಂಭದ ತಿರುವು ಅಗಲಗೊಳಿಸಲು ಹಾಗೂ ರಸ್ತೆಗೆ ತಾಗಿಕೊಂಡಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಿಸಲು ಒತ್ತಾಯಿಸಿದರು. ತಕ್ಷಣವೇ ರಸ್ತೆ ರಿಪೇರಿ ಆಗದಿದ್ದಲ್ಲಿ ಮುಂದಿನ ದಿನದಲ್ಲಿ ಪುರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಅನ್ನಿ ಡಯಾಸ್ ಸೇರಿದಂತೆ ಸ್ಥಳೀಯ ನಾಗರೀಕರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ತಾಲೂಕು ಅಧ್ಯಕ್ಷರಾದ ವಿಶ್ವನಾಥ್, ಕಾರ್ಯದರ್ಶಿ ಗಣೇಶ್ ದಾಸ್, ಘಟಕದ ಕಾರ್ಯದರ್ಶಿ ರಾಜ ಬಿಟಿಆರ್, ಸಂತೋಷ್ ಬಿಟಿಆರ್, ರಾಜು ದೇವಾಡಿಗ ಹಾಗೂ ಗೋಲ್ಡನ್ ಮಿಲ್ಲರ್ ಕ್ಲಬ್ ಮುಖಂಡರು ಸ್ಥಳೀಯ ಹಿರಿಯರು ವಹಿಸಿದ್ದರು.

Click Here

ಗಣೇಶದಾಸ್ ಸ್ವಾಗತಿಸಿ, ರಮೇಶ್ ವಿ. ವಂದಿಸಿದರು.

Click Here

LEAVE A REPLY

Please enter your comment!
Please enter your name here