ಅಗಲಿದ ಅಜೇಂದ್ರ ಶೆಟ್ಟಿ ಅವರಿಗೆ ಡಾ. ರಾಜ್ ಸಂಘಟನೆಯಿಂದ ಶ್ರದ್ಧಾಂಜಲಿ ಸಭೆ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ
:ಡಾ.ರಾಜ್ ಸಂಘಟನೆ ಕುಂದಾಪುರದ ವತಿಯಿಂದ ಇತ್ತೀಚೆಗೆ ಹತ್ಯೆಯಾದ ಸಂಘಟನೆಯ ಸದಸ್ಯ ಕೂಡಾಲು ಅಜೇಂದ್ರ ಶೆಟ್ಟಿಯವರಿಗೆ ನುಡಿನಮನ ಸಲ್ಲಿಸುವ, ಶ್ರದ್ದಾಂಜಲಿ ಸಭೆ ಇತ್ತೀಚೆಗೆ ನಡೆಯಿತು.


ಡಾ. ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ ನುಡಿನಮನ ಸಲ್ಲಿಸಿ ಮಾತನಾಡಿ, ಕೂಡಾಲು ಅಜೇಂದ್ರ ಶೆಟ್ಟಿಯವರ ಅಕಾಲಿಕ ನಿರ್ಗಮನ ಊಹಿಸಲೂ ಅಸಾಧ್ಯ. ವಿಶಾಲ ಹೃದಯಿಯಾಗಿದ್ದ ಅವರಿಂದ ಸಮಾಜ ಬಹಳಷ್ಟು ನಿರೀಕ್ಷಿಸುತ್ತಿತ್ತು. ಅವರ ಸೇಚಾ ಚಟುವಟಿಕೆಗಳು ನೆನಪಿನಲ್ಲಿ ಉಳಿಯುವಂತಹವು. ಆಆಕಸ್ಮಿಕವಾಗಿ ಅಗಲಿದÀ ಅವರ ದಿವ್ಯಾತ್ಮಕ್ಕೆ ಶಾಂತಿ ಲಭಿಸಲಿ, ಅವರ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದರು.

ಅಜೇಂದ್ರ ಅವರ ನಿಕಟ ಸಂಬಂಧಿ ಅಜಿತ್ ಶೆಟ್ಟಿ ಅವರು ಮಾತನಾಡುತ್ತಾ ಶಿಕ್ಷಣಕ್ಕೆ, ಸಹನೆಗೆ ಹೆಸರಾದ ಕರಾವಳಿ ಜಿಲ್ಲೆಗಳು ಹತ್ಯೆ ಗಳಿಗೆ ಕುಖ್ಯಾತಿಗೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ, ಅಜೇಂದ್ರ ಶೆಟ್ಟಿ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೆÇಲೀಸ್ ಪಡೆ 24 ಗಂಟೆಯೊಳಕ್ಕೆ ಹತ್ಯಾ ಆರೋಪಿಯನ್ನು ವಶಕ್ಕೆ ಪಡೆದಿರುವುದು ಶ್ಲಾಘನೀಯ, ಮುಂದೆ ಇಂತಹ ಪ್ರಕರಣಗಳನ್ನು ತಡೆ ಹಾಕುವ ನಿಟ್ಟಿನಲ್ಲೂ ಇಲಾಖೆಯು ಗಮನ ಹರಿಸಬೇಕಿದೆ ಎಂದು ಹೇಳಿದರು.

ಶಿಕ್ಷಕಿ ಜಸ್ಸಿ ಎಲಿಜಬೆತ್ ನುಡಿ ನಮನಗಳನ್ನು ವಾಚಿಸಿದರು, ಸಭೆಯಲ್ಲಿ ಅಜೇಂದ್ರ ಶೆಟ್ಟಿ ಅವರ ಸಹೋದರ ಕೂಡಾಲ್ ಮಹೇಂದ್ರ ಶೆಟ್ಟಿ, ಸಂಬಂಧಿಗಳಾದ ಬೆನಕ ಎಂಟರ್‍ಪ್ರೈಸಸ್‍ನ ಪ್ರಭಾಕರ ಶೆಟ್ಟಿ, ಅಮಿತ್ ಶೆಟ್ಟಿ, ಹಾಗೂ ಡಾ. ರಾಜ್ ಕುಮಾರ್ ಕನ್ನಡಾಭಿಮಾನಿ ಸಂಘದ ಸದಸ್ಯರು, ಅಜೇಂದ್ರ ಶೆಟ್ಟಿ ಅವರ ಅಭಿಮಾನಿ ಗಳು ಉಪಸ್ಥಿತರಿದ್ದರು.

ಅಗಸ್ಟಿನ್ ಸ್ವಾಗತಿಸಿ, ಹುಸೇನ್ ಹೈಕಾಡಿ ಕಾರ್ಯಕ್ರಮವನ್ನು ನಿರೂಪಿಸಿದ್ದರು, ಸುನೀಲ್ ಖಾರ್ವಿ ತಲ್ಲೂರು ವಂದಿಸಿದರು.

Comments

Leave a Reply

Your email address will not be published. Required fields are marked *

More posts