Category: ಸುದ್ದಿ

  • ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜು: ‘ಇಂಗ್ಲೀಷ್ ಡೇ’ ಆಚರಣೆ

    ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜು: ‘ಇಂಗ್ಲೀಷ್ ಡೇ’ ಆಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಇಂಗ್ಲೀಷ್ ಸುಂದರವಾದ ಸಂವಹನ ಭಾಷೆ. ನಮ್ಮ ಭಾವನೆಗಳನ್ನು ಸಮರ್ಪಕವಾಗಿ ಇನ್ನೊಬ್ಬರಿಗೆ ತಲುಪಿಸುವ ಭಾಷೆ. ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗದೇ ವಿಶ್ವವ್ಯಾಪಿಯಾಗಿ ಬದುಕುವ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆ ಅನಿವಾರ್ಯ. ಜಾಗತಿಕ ಭಾಷೆಯಾದ ಇಂಗ್ಲೀಷ್ ಕಲಿತು ಸಂದರ್ಭಕ್ಕೆ ತಕ್ಕಂತೆ ಬಳಸಿ, ಅದರೊಂದಿಗೆ ಮಾತೃಭಾಷೆಯನ್ನು ಪ್ರೀತಿಸಿ ಎಂದು ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಶ್ರೀ ಸೂರಜ್ ಭಟ್ ಹೇಳಿದರು. ಇವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗ ಮತ್ತು ಇಂಗ್ಲೀಷ್ ಸಂಘ ಆಯೋಜಿಸಿದ ‘ಇಂಗ್ಲೀಷ್ ಡೇ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ಆಲಿಸುವ ಮತ್ತು ಓದುವ ಮುಖೇನ ಇಂಗ್ಲೀಷ್ ಮಾತನಾಡುವ ಇಚ್ಛಾಶಕ್ತಿ ಇದ್ದಾಗ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು ಸಾಧ್ಯ. ಭಾಷೆಯ ಬಳಕೆ ನಮ್ಮನ್ನು ಜ್ಞಾನವಂತರನ್ನಾಗಿಸುತ್ತದೆ ಎಂದರು.

    ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿದರು. ಇಂಗ್ಲೀಷ್ ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ ಉಪಸ್ಥಿತರಿದ್ದರು. ಸ್ಟಾಲಿನ್ ಡಿ’ಸೋಜಾ ಬಹುಮಾನಿತರ ಪಟ್ಟಿ ವಾಚಿಸಿ, ಸ್ವಾತಿ ರಾವ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೀನಾಭ ಉಪಾಧ್ಯಾಯ ಅತಿಥಿಗಳನ್ನು ಪರಿಚಯಿಸಿ, ಶ್ರೇಯಾ ಖಾರ್ವಿ ಪ್ರಾರ್ಥಿಸಿ, ಶ್ರದ್ಧಾ ಆರ್. ನಿರೂಪಿಸಿದರು.

    ಈ ಸಂದರ್ಭ ಇಂಗ್ಲೀಷ್ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ವಿನೂತನ ಸ್ಪರ್ಧೆಗಳಾದ ಪುಸ್ತಕ ವಿಮರ್ಶೆಯ ವಿಡಿಯೋ ಚಿತ್ರೀಕರಣ, ಜಾಹೀರಾತು ಮತ್ತು ಬುಕ್ ಮಾರ್ಕ್ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

  • ಬೈಂದೂರು :ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ ಖಂಡಿಸಿ ಬೈಂದೂರು ಮಂಡಲದಿಂದ ಬಿಜೆಪಿ ಬೃಹತ್ ಪ್ರತಿಭಟನೆ

    ಬೈಂದೂರು :ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ ಖಂಡಿಸಿ ಬೈಂದೂರು ಮಂಡಲದಿಂದ ಬಿಜೆಪಿ ಬೃಹತ್ ಪ್ರತಿಭಟನೆ

    ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿಂದೂಗಳು ತಕ್ಕಪಾಠ ಕಲಿಸಲಿದ್ದಾರೆ : ಸಂಸದ ಬಿ.ವೈ. ರಾಘವೇಂದ್ರ

    ಬೈಂದೂರು: ಹುಬ್ಬಳ್ಳಿಯಲ್ಲಿ ಅಮಾಯಕ ಹಿಂದೂ ಯುವತಿ ನೇಹಾಳನ್ನು ಮತಾಂಧ ಕ್ರೂರವಾಗಿ ಕೊಲೆ ಗೈದಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ಕರೆಯಂತೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಬೈಂದೂರು ಮಂಡಲ ಬಿಜೆಪಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನೆ ಉದ್ದೇಶಿಸಿ ಮಾತ‌ನಾಡಿದ ಸಂಸದರೂ ಆದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು, ತನ್ನ ಪ್ರೀತಿಯನ್ನು ಒಪ್ಪಿಲ್ಲ ಎನ್ನುವ ಕಾರಣಕ್ಕೆ ನೇಹಗಳನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಇದು ಲವ್ ಜಿಹಾದ್ ನ ಒಂದು ಭಾಗ. ಈ ಸರ್ಕಾರ ಕೊಲೆಯಾದ ನೇಹಳ ಕುಟುಂಬಕ್ಕೆ ರಕ್ಷಣೆ ನೀಡುವುದನ್ನು ಬಿಟ್ಟು ಕೊಲೆ ಮಾಡಿದವನ ಮನೆಗೆ ರಕ್ಷಣೆ ನೀಡಿದೆ. ರಾಮ ನವಮಿ ಪಾನಕ ಹಂಚಿದವರ ವಿರುದ್ಧ ಕೇಸ್ ದಾಖಲಿಸುತ್ತಾರೆ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಾಡು ಬರೆದರೆ ಹಲ್ಲೆ ಮಾಡುತ್ತಾರೆ. ಮಡಿಕೇರಿಯ ಕುಟ್ಟಪ್ಪ, ಶಿವಮೊಗ್ಗದ ಹರ್ಷ, ಭಟ್ಕಳ ಸಮೀಪದ ಪರೇಶ್ ಮೆಸ್ತಾ ಹೀಗೆ ನಮ್ಮ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದ್ದೇವೆ. ಇದೆಲ್ಲದಕ್ಕೂ ಉತ್ತರ ನೀಡಲೇ ಬೇಕು. ವೋಟಿನ ತುಷ್ಠೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಹಿಂದೂಗಳ ಒಳ್ಳೆತನದ ನಡವಳಿಕೆ ದೌರ್ಬಲ್ಯ ಅಲ್ಲ. ಈ ಘಟನೆಗೆ ಹಿಂದೂ ಸಮಾಜ ಸರಿಯಾದ ಉತ್ತರ ನೀಡಲಿದೆ. ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಮತದಾರರು ಚೊಂಬು ಕೊಟ್ಟು ಮನೆಗೆ ಕಳುಹಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

    ಬುಲ್ಡೇಜರ್ ಸರ್ಕಾರವೇ ಬೇಕು
    ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕರಾದ ಗುರುರಾಜ ಗಂಟಿಹೊಳೆಯವರು, ನಾವು ಮೇರಾ ನಯಾಜ್, ಮೇರಾ ಫಾಯಜ್, ಮೇರಾ ಅಬ್ದುಲ್ಲಾ ಐಸಾ ನಹಿ ಹೇ ಎನ್ನುತ್ತಲೇ ಇದ್ದೇವೆ. ಆದರೆ, ನಯಾಜ್, ಫಯಾಜ್, ಅಬ್ದುಲ್ಲಾರಿಗೆ ತಾವು ಏನೆಂಬುದು ಗೊತ್ತಿದೆ. ಆದರೆ ಹಿಂದೂ ಸಮಾಜಕ್ಕೆ ಇದು ತಿಳಿಯುತ್ತಿಲ್ಲ. ಪ್ರೀತಿ ಒಪ್ಪಿಕೊಂಡಿಲ್ಲ ಎಂದರೆ ಚಾಕು ಹಾಕುತ್ತಾರೆ, ಪ್ರೀತಿ ಒಪ್ಪಿಕೊಂಡರೆ ಸೂಟ್ ಕೇಸ್ ಗೆ ಹಾಕುತ್ತಾರೆ.‌ ಇದು ಯಾವಾಗ ನಿಲ್ಲುತ್ತದೆ ಎಂಬುದೇ ತಿಳಿಯದಾಗಿದೆ ಎಂದರು.
    ಇದೆಲ್ಲಕ್ಕಿಂತ ದುರಂತ ಏನೆಂದರೆ, ಫಯಾಜ್, ನಯಾಜ್ , ಅಬ್ದುಲ್ಲಾ ಮೊದಲಾದವರು ಕಾಂಗ್ರೆಸ್ ಸರ್ಕಾರ ಬಂದಾಗ ಆಕ್ಟೀವ್ ಆಗುತ್ತಾರೆ. ಇದೇ ಕೃತ್ಯ ಉತ್ತರ ಪ್ರದೇಶದಲ್ಲಿ ಆಗಿದ್ದರೆ ಬುಲ್ಡೇಜರ್ ಏನ್ ಕೆಲಸ ಮಾಡಬೇಕೋ ಅದನ್ನು 24 ಗಂಟೆಯ ಒಳಗೆ ಮಾಡುತಿತ್ತು. ನಮ್ಮಲ್ಲಿ ಸರ್ಕಾರ ಆ ಬುಲ್ಡೇಜರ್ ಅನ್ನು ಫಯಾಜ್ ನ ಮನೆ ಕಾಯಲು ನಿಲ್ಲಿಸಿದೆ. ಹಿಂದೂ ಸಮಾಜ ಎಚ್ಚೆತ್ತುಕೊಂಡಾಗ ಮಾತ್ರ ಇದಕ್ಕೆಲ್ಲ ಉತ್ತರ ಸಿಗಲಿದೆ. ಬಿಜೆಪಿಯವರು ಯಾರನ್ನು ಟಾರ್ಗೆಟ್ ಮಾಡ್ತಾ ಇಲ್ಲ ಎಂದು ಹೇಳಿದರು.

    ಹಿಂದೂಗಳನ್ನು ರಕ್ಷಣೆ ಮಾಡುವುದು ಅವಶ್ಯಕ. ನಮ್ಮಲ್ಲಿಯೇ ಈ ಜಾಗೃತಿ ಬಾರದೇ ಇದ್ದರೆ ಮುಂದೆ ನಮ್ಮ ಮಕ್ಕಳನ್ನು, ಸಮಾಜ, ಸಂಸ್ಕೃತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹಿಂದೂಗಳು ಒಟ್ಟಾಗಿ ಕಾಂಗ್ರೆಸ್ ಗೆ ಬುದ್ದಿ ಕಲಿಸುವವರೆಗೂ ಇದು ಬದಲಾಗುವುದಿಲ್ಲ. ನಯಾಜ್, ಫಯಾಜ್ ಗೆ ಬುದ್ದಿ ಕಲಿಸದೇ ಒದ್ದರೆ, ಬುಲ್ಡೇಜರ್ ಓಡಿಸದೇ ಇದ್ದರೆ ಹಿಂದೂ ಸಮಾಜಕ್ಕೆ ಕಷ್ಟ ಇದೇ ಎಂಬ ಎಚ್ಚರಿಕೆ ಸಂದೇಶ ನೀಡಿದರು.
    ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
    ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

  • ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ‘ವಿ-ಗ್ರೋ’ ಬ್ಯುಸಿನೆಸ್ ಡೇ: ವ್ಯವಹಾರ ಮೇಳ

    ಕುಂದಾಪುರ :ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ‘ವಿ-ಗ್ರೋ’ ಬ್ಯುಸಿನೆಸ್ ಡೇ: ವ್ಯವಹಾರ ಮೇಳ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿರುವ ‘ವಿ-ಗ್ರೋ ಬ್ಯುಸಿನೆಸ್ ಡೇ’ ಮೂರು ಹಂತದಲ್ಲಿ ಆಯೋಜನೆಗೊಂಡು, ಈ ವಿನೂತನ ಕಾರ್ಯಕ್ರಮದ ಮೊದಲ ಹಂತದದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಹೊಸ-ಹೊಸ ವ್ಯವಹಾರಿಕ ಜ್ಞಾನವನ್ನು ಪ್ರಸ್ತುತ ಪಡಿಸಿದ್ದು, ಎರಡನೇ ಹಂತದಲ್ಲಿ ತಾವೇ ತಯಾರಿಸಿದ ಉತ್ಪನ್ನದೊಂದಿಗೆ ಬೇರೆ ಬೇರೆ ವಸ್ತುಗಳ ಮಳಿಗೆಯನ್ನಿಟ್ಟು, ವ್ಯವಹಾರ ಮೇಳವನ್ನು ಸೃಷ್ಟಿಸಿ, ವಿದ್ಯಾರ್ಥಿಗಳಿಗೆ ವಾಣಿಜ್ಯ ಸಂಬಂಧಿ ವಿಷಯಗಳನ್ನು ಪ್ರಾಯೋಗಿಕವಾಗಿ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದಿದೆ.

    ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಸೀತಾರಾಮ್ ನಕ್ಕತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೇಷ್ಟ ನ್ಯೂಟ್ರಿಷಿಯನ್ಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಸುನೀಲ್ ಕೆ. ಶೆಟ್ಟಿ ಮಾತನಾಡಿ ಗೆಲುವು ಸುಲಭದ ಸಾಧನವಲ್ಲ, ಅದಕ್ಕೆ ನಿರಂತರ ಪ್ರಯತ್ನ ಅತ್ಯಗತ್ಯ. ಕೆಲವೊಂದು ಸಂದರ್ಭದಲ್ಲಿ ಪ್ರಯತ್ನಗಳು ಸೋಲಬಹುದು ಆದರೆ ನಿಮ್ಮ ಪ್ರಯತ್ನ ಗೆಲುವಿನೆಡೆಗೆ ನಿರಂತರವಾಗಿರಬೇಕು ಎಂದರು.

    ಉಡುಪಿಯ ಮಹಿಳಾ ಉದ್ಯಮಿಯಾದ ಸ್ವಪ್ನಾ ಸುರೇಶ್ ವ್ಯವಹಾರ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮನದಟ್ಟು ಮಾಡಿದರು. ಅಂ-ಲೆಕ್ಕ ಪರಿಶೋದಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಾಕ್ತನ ವಿದ್ಯಾರ್ಥಿ ರಕ್ಷಿತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಶುಭಶಂಸನೆ ಮಾತುಗಳನ್ನಾಡಿದರು.

    ಉಪಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ಉಪನ್ಯಾಸಕರಾದ ಸುಧೀರ್ ಕುಮಾರ್ ಸ್ವಾಗತಿಸಿದರು.

    ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಪ್ರೀತಿ ಹೆಗ್ಡೆ ಮತ್ತು ಪೂಜಾ ಕುಂದರ್ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ವೀಣಾ ವಿ. ಭಟ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸತೀಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

  • ಕೊಲ್ಲೂರು :ಬೈಂದೂರು ಯುವಮೋರ್ಚ ವತಿಯಿಂದ ಸಾಮೂಹಿಕ ಪ್ರಾರ್ಥನೆ

    ಕೊಲ್ಲೂರು :ಬೈಂದೂರು ಯುವಮೋರ್ಚ ವತಿಯಿಂದ ಸಾಮೂಹಿಕ ಪ್ರಾರ್ಥನೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಬಿಜೆಪಿ ಯುವಮೋರ್ಚ ಬೈಂದೂರು ವತಿಯಿಂದ ಬಿ. ವೈ ರಾಘವೇಂದ್ರರವರಿಗೆ ಬೈಂದೂರು ಕ್ಷೇತ್ರದಲ್ಲಿ 1 ಲಕ್ಷ ಲೀಡ್ ಕೊಡಿಸುವ ಶಾಸಕ ಗುರುರಾಜ್ ಗಂಟಿಹೊಳೆಯವರ ಸಂಕಲ್ಪಕ್ಕೆ ಶಕ್ತಿ ತುಂಬಲು ಕೊಲ್ಲೂರು ತಾಯಿ ಮೂಕಾಂಬಿಕೆಯಲ್ಲಿ ಯುವಮೋರ್ಚ ತಂಡದಿಂದ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.

    ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಯುವಮೋರ್ಚ ಅಧ್ಯಕ್ಷ ಗಜೇಂದ್ರ ಬೇಲೆಮನೆ ಪ್ರಧಾನಕಾರ್ಯದರ್ಶಿ ಪ್ರಸಾದ್ ಪಿ ಬೈಂದೂರ್ ಹಾಗೂ ಅನುರ ಮೆಂಡನ್ ಮತ್ತು ಯುವಮೋರ್ಚ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೋಮಯ್ಯ ಮತ್ತು ಯುವಮೋರ್ಚ ಪದಾಧಿಕಾರಿಗಳೆಲ್ಲರೂ ಭಾಗಿಯಾಗಿದ್ದರು.

  • ಕುಂದಾಪುರ :ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್: ‘ಕಲ್ಪವೃಕ್ಷ’ ನೆರವು, ಸಾಧಕರಿಗೆ ಪ್ರಶಸ್ತಿ ಪ್ರದಾನ

    ಕುಂದಾಪುರ :ಎಂ.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್: ‘ಕಲ್ಪವೃಕ್ಷ’ ನೆರವು, ಸಾಧಕರಿಗೆ ಪ್ರಶಸ್ತಿ ಪ್ರದಾನ

    ಉತ್ತಮ ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಬೇಕು – ಎಂ.ಕೃಷ್ಣಮೂರ್ತಿ ಮಂಜ

    ಕುಂದಾಪುರ ಮಿರರ್ ಸುದ್ದಿ…

     

    ಕುಂದಾಪುರ: ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ರಿ., ಮಾರಣಕಟ್ಟೆ, ಚಿತ್ತೂರು, ವತಿಯಿಂದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರವರ ಸಂಸ್ಮರಣಾ ಕಾರ್ಯಕ್ರಮ ‘ಕಲ್ಪವೃಕ್ಷ’ ಕಾರ್ಯಕ್ರಮದಡಿ ನೆರವು, ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ ಎಪ್ರಿಲ್ 16 ಮಂಗಳವಾರ ಸಂಜೆ ಮಾರಣಕಟ್ಟೆ ‘ಅನುಗ್ರಹ’ದ ವಠಾರದಲ್ಲಿ ನಡೆಯಿತು.

    ಟ್ರಸ್ಟ್‌ನ ಗೌರವಾಧ್ಯಕ್ಷರಾದ ಶ್ರೀಧರ ಮಂಜರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಮಾತನಾಡಿ, ಒಬ್ಬ ಮನುಷ್ಯ ಹಿಂದಿನ ಕಷ್ಟಗಳನ್ನು ಮರೆಯದೇ ತನ್ನ ಸಂಪಾದನೆಯನ್ನು ಸದ್ವಿನಿಯೋಗ ಮಾಡಿದಾಗ ಆ ಮನುಷ್ಯ ಶ್ರೇಷ್ಠ ಎನಿಸಿಕೊಳ್ಳುತ್ತಾನೆ. ಅದಕ್ಕೆ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಸೂಕ್ತ ನಿರ್ದಶನ. ಅವರ ಸೇವಾ ಕೈಂಕರ್ಯಗಳು ಹೀಗೆ ಮುಂದುವರಿಯಲಿ, ಅವರ ಉದ್ಯಮದಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.

    ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಮಂಜರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುವ ಕೆಲಸ ಟ್ರಸ್ಟ್ ಮಾಡುತ್ತಿದೆ. ಇದನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಮಹತ್ವಕಾಂಕ್ಷಿಯ ಯೋಜನೆಯನ್ನು ಹಾಕಿಕೊಂಡಿದೆ. ಊಟ ಕೊಟ್ಟರೆ ಆವತ್ತಿಗೆ ಆಗುತ್ತದೆ. ಊಟದ ಸಮಸ್ಯೆ ಇವತ್ತು ಯಾರಿಗೂ ಇಲ್ಲ, ಈಗ ಅಗತ್ಯವಿರುವುದು ಬದುಕನ್ನು ರೂಪಿಸುವ ಶಿಕ್ಷಣ, ಮಗುವಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಆತ ಏನೂ ಆಗಬಲ್ಲ, ಭವಿಷ್ಯ ರೂಪಿಸುವ ಶಿಕ್ಷಣಕ್ಕೆ ನಾವಿಂದು ಒತ್ತು ನೀಡಬೇಕಾಗಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಸದಾಶಿವ ಶೆಟ್ಟಿ, ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್, ಪಾಂಡೇಶ್ವರದ ಅಷ್ಟಾಂಗ ಯೋಗ ಗುರುಕುಲದ ವಿದ್ವಾನ್ ಡಾ.ವಿಜಯ ಮಂಜರು, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವಿಘ್ನೇಶ್ವರ ಮಂಜರು, ಟ್ರಸ್ಟಿನ ಕಾರ್ಯಾಧ್ಯಕ್ಷರಾದ ನಾಗರಾಜ ಮಂಜರು, ಟ್ರಸ್ಟಿನ ಸದಸ್ಯ ಸುಬ್ರಹ್ಮಣ್ಯ ಉಡುಪ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ವೈದಿಕ ರತ್ನ ಪ್ರಶಸ್ತಿಯನ್ನು ಇಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ವೇ.ಮೂ.ಸೀತಾರಾಮ ಅಡಿಗ ಅವರಿಗೆ, ಅಮೂಲ್ಯ ರತ್ನ ಪ್ರಶಸ್ತಿಯನ್ನು ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಬೆಂಗಳೂರು ಇವರಿಗೆ, ಸೇವಾರತ್ನ ಪ್ರಶಸ್ತಿಯನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗೇಶ್ ಅವರಿಗೆ, ಕಲಾ ರತ್ನ ಪ್ರಶಸ್ತಿಯನ್ನು ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರು, ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಎಚ್.ಶ್ರೀಧರ್ ಹಂದೆಯವರಿಗೆ ಪ್ರದಾನ ಮಾಡಲಾಯಿತು. ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕ ಡಾ.ವೆಂಕಟರಮಣ ಭಟ್ ನೆಂಪು ಇವರನ್ನು ವಿಶೇಷವಾಗಿ ಗೌರವಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಧರ ಹಂದೆಯವರು ಮಂಜರು ನಿಜವಾಗಿ ಕಲ್ಪವೃಕ್ಷ. ಅವರು ಮಾರಣಕಟ್ಟೆಯ ಧರ್ಮಾಧಿಕಾರಿ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ನೆರವು, ಶಿಕ್ಷಣ, ಗೃಹ ನಿರ್ಮಾಣ, ವಿವಾಹಕ್ಕೆ ನೆರವು ವಿತರಿಸಲಾಯಿತು.

    ಟ್ರಸ್ಟಿನ ಗೌರವಾಧ್ಯಕ್ಷ ಶ್ರೀಧರ ಮಂಜರು ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ ವಂಡ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉದಯ ಕುಮಾರ್ ಶೆಟ್ಟಿ ವಂಡ್ಸೆ, ಶಿಕ್ಷಕ ಚಂದ್ರ ಶೆಟ್ಟಿ, ರವಿರಾಜ ಶೆಟ್ಟಿ, ರಾಘವೇಂದ್ರ ಶೆಟ್ಟಿ ಸನ್ಮಾನಿತರ ಪರಿಚಯಿಸಿದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರ್ವಹಿಸಿದರು. ಚಿತ್ತೂರು ಪ್ರಭಾಕರ ಆಚಾರ್ಯ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ರೂಪಕ ‘ಪರಶುರಾಮನ ಪಿತೃಭಕ್ತಿ’ ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಇವರ ನಿರ್ದೇಶನದಲ್ಲಿ ಬೈಂದೂರಿನ ಸುರಭಿ ಕಲಾವಿದರು ಪ್ರಸ್ತುತಗೊಂಡಿತು. .ರಾತ್ರಿ 9.30ರಿಂದ ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ವಾಲಿ ಸುಗ್ರೀವ ಹಾಗೂ ಕನಕಾಂಗಿ ಕಲ್ಯಾಣ ಪ್ರದರ್ಶನಗೊಂಡಿತು.

  • ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ

    ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ವಿಶ್ವ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

    ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶ್ವದ ಮಹಾನ್ ನಾಯಕನ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡೆಯುವಂತೆ ಕರೆ ನೀಡಿದರು.

    ಪಂಚಾಯತ್ ಕಾರ್ಯದರ್ಶಿ ಚಂದ್ರ,ಸಿಬ್ಬಂದಿಗಳಾದ ಭಾರತಿ, ಶ್ರೀನಿವಾಸ ಪೂಜಾರಿ ಮೊದಲಾದವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ‌ ಸಲ್ಲಿಸಿದರು.

    ತೆಕ್ಕಟ್ಟೆ ಪಂಚಾಯತ್ ಕಾರ್ಯದರ್ಶಿ ಚಂದ್ರ ಸ್ವಾಗತಿಸಿ ಭಾರತಿ ಶೆಟ್ಟಿ ವಂದಿಸಿದರು.

  • ಬಗ್ವಾಡಿಯಲ್ಲಿ ಏ.14ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ

    ಬಗ್ವಾಡಿಯಲ್ಲಿ ಏ.14ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಮೊಗವೀರ ಯುವ ಸಂಘಟನೆ ತಿ ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ರಕ್ತನಿಧಿ ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಮಹಿಷಾಮರ್ದಿನಿ ಯುವಕ ಮಂಡಲ ರಿ., ಬಗ್ವಾಡಿ ಹಾಗೂ ಬಗ್ವಾಡಿ ಫ್ರೆಂಡ್ಸ್ ಬಗ್ವಾಡಿ ಇವರ ಸಹಭಾಗಿತ್ವದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏಪ್ರಿಲ್ 14 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ ಬಗ್ವಾಡಿ ಇಲ್ಲಿ ನಡೆಯಲಿದೆ.

    ಈ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವಂತೆ ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ ಘಟಕದ ಅಧ್ಯಕ್ಷ ದಿನೇಶ ಕಾಂಚನ್ ಬಾಳಿಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕುಂದಾಪುರ :ದ್ವಿತೀಯ ಪಿ.ಯು.ಸಿ ಫಲಿತಾಂಶ – ಎಕ್ಸಲೆಂಟ್ ವಿದ್ಯಾರ್ಥಿಗಳ ಗರಿಷ್ಠ ಸಾಧನೆ

    ಕುಂದಾಪುರ :ದ್ವಿತೀಯ ಪಿ.ಯು.ಸಿ ಫಲಿತಾಂಶ – ಎಕ್ಸಲೆಂಟ್ ವಿದ್ಯಾರ್ಥಿಗಳ ಗರಿಷ್ಠ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : 2023 -24 ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರದ ಎಕ್ಸಲೆಂಟ್ ಪ. ಪೂ ಕಾಲೇಜಿಗೆ ರಾಜ್ಯಮಟ್ಟದಲ್ಲಿ 13 ಸ್ಥಾನಗಳು ಬಂದಿದ್ದು, ಶೇ.100 ಫಲಿತಾಂಶ ಲಭಿಸಿದೆ. ಅತೀ ಹೆಚ್ಚು ರ್ಯಾಂಕ್‍ಗಳನ್ನು ಪಡೆದ ಕುಂದಾಪುರದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 86 ವಿದ್ಯಾಥಿಗಳು 570 ಕ್ಕಿಂತ ಅಧಿಕ ಅಂಕಗಳನ್ನು ಪಡೆಯುದರ ಮೂಲಕ ಸಂಸ್ಥೆಗೆ ಇನ್ನಷ್ಟು ಕೀರ್ತಿ ತಂದಿದ್ದಾರೆ.

    ಸಂಸ್ಥೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಿರಾಗ್ 592, ಅನನ್ಯ ಉಡುಪ 590, ನಾಗರಾಜ ಉಪ್ಪಾರ್ 590, ರಕ್ಷಾ ಆರ್ ಪೂಜಾರಿ 590, ನಿಶಾ 589, ನಿರ್ಮಿತಾ ಎನ್. ಡಿ 588, ವಿನುತಾ 588, ಸನ್ನಿದಿ ಕುಲಾಲ್ 588, ಅಮೋಘ ಶೆಟ್ಟಿ 587, ಅನಿರುದ್ದ ಹತ್‍ವಾರ್ 586, ಆಶೀತಾ 586, ರಿತೀಕಾ ಶೆಟ್ಟಿ 586, ಸನ್‍ಮನ್ 586, ಶ್ರಾವ್ಯ 585, ಈಶಾ ಶೆಟ್ಟಿ 583, ಸಾನ್ವಿ ಪಿ ಶೆಟ್ಟಿ 583, ಶಶಾಂಕ ಶೆಟ್ಟಿ 583, ಸ್ವಾರ್ಣ 583, ರೀಶಿತಾ ಎಂ ಹೆಗ್ಡೆ 582, ಸಾಕ್ಷಿ 582, ಸಾಕ್ಷಿ ಹೆಗ್ಡೆ 582, ವರುಣ ಕೆ ಪಿ 582, ಇಂಚರಾ 581, ಸೃಜನ್ 581, ರಾಜಲಕ್ಷ್ಮಿ ಪೂಜಾರಿ 581, ರುಮಿಜ್ 581, ತಶ್ಯ ಶೆಟ್ಟಿ 581, ಸಾಕ್ಷಿ ಆರ್ ಶೆಟ್ಟಿ 580, ಸಂಜನಾ ವಿ ಶೆಟ್ಟಿ 580, ವಿಶಾಲ್ ಕಾಮತ್ 580, ಅನಿಶ್ 579, ಅರ್ಪಿತಾ ಎನ್ 579, ದಿಕ್ಷೀತಾ ಎಂ ಜಿ 579, ಪ್ರಜ್ವಲ್ ಪೂಜರಿ 579, ವಿಘ್ನೇಶ್ 579, ಸುಮುಖ ರಾವ್ 578, ಸಿಂಧೂ 578, ಸುಮುಖ ಪೂಜಾರಿ 578, ಅದ್ವಿತಾ ಡಿ ಶೆಟ್ಟಿ 577, ಅನ್ನಪೂರ್ಣ ಎ 577, ಧನುಷ್ 577, ಆಕಾಶ್ ಶೆಟ್ಟಿ 576, ಛಾಯಾ 576, ಶೇರು 576, ಯು ತನುಶ್ರೀ 576, ದೀಪ್ತಿ 575, ಹರ್ಪಿತಾ ಶೆಟ್ಟಿ 575, ವಂದನಾ 575, ದೀಕ್ಷಿತಾ 574, ನಿಧಿ 574, ರಾಯಿದ್ 574, ಸ್ನೇಹ ಆರ್ 574, ಭೂಮಿಕಾ 573, ಧನ್ಯಾ ಪ್ರಭು 573, ಸೃಜನ್ 573, ಪ್ರದ್ಯುಮ್ನಾ 572, ಪ್ರೀತಮ್ 572, ರಕ್ಷಾ 572, ಸಾಹಿಲ್ 572, ಸಂಜನ್ ಕೆ 572, ಸನ್ನಿಧಿ 571, ಈಶಾನ್ಯ 570, ಜಸ್ನಾ ಜೊಸೆಪ್ 570, ಜೀವನ್ 570, ನಿಧಿ ಶೆಟ್ಟಿ 570, ಪಾವನಿ 570, ಸಂಮೃಧ್ಧಿ 570.
    ಹಾಗೇ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರಿತನ್ಯ ನಾಯ್ಕ 591, ಹರ್ಷಿತಾ ಡಿ. ಎಸ್ 591, ಸಿಂಚನಾ ಎಸ್ ಬಸ್ರೂರು 589, ಸಿಂಚನಾ ಎಸ್ ಶೆಟ್ಟಿ 589, ಭೂಮಿಕಾ 588, ರಕ್ಷಿತಾ 586, ಪ್ರಣಾವ್ 585, ಅಭಿóಷೆಕ್ ಅಡಿಗಾ 582, ಸಂಮೃಧ್ಧಿ 581, ದೃಷ್ಠಿ 580, ಮಾನ್ಯ 580, ಅಪೇಕ್ಷ 578, ಪ್ರಜ್ವಲ್ 578, ಸ್ಪೂರ್ತಿ 578, ಮಾನಸ್ವಿ ಭಟ್ 577, ಶರಾಧಿ 575, ಅರ್ನಾಗ್ಯ 574, ಪ್ರಶಾಂತ್ 571, ಸಮೀಕ್ಷ ಶೆಟ್ಟಿ 570 ಅಂಕಗಳನ್ನು ಪಡೆದು ಅತ್ಯುತ್ಕೃಷ್ಟ ಸಾಧನೆ ಮಾಡಿ ಸಂಸ್ಥೆಯ ಪ್ರತಿಷ್ಟೆಗೆ ಇನ್ನೂ ಮೆರುಗು ನೀಡಿದ್ದಾರೆ.

    ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಂ .ಎಂ ಹೆಗ್ಡೆ ಎಜುಕೇಶನಲ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಎಂ ಮಹೇಶ್ ಹೆಗ್ಡೆಯವರು ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ ರಮೇಶ್ ಶೆಟ್ಟಿಯವರು, ಕಾರ್ಯದರ್ಶಿ ಪ್ರತಾಪ್‍ಚಂದ್ರ ಶೆಟ್ಟಿಯವರು, ಖಜಾಂಚಿ ಭರತ್ ಶೆಟ್ಟಿಯವರು, ಹಾಗೂ ಉಪನ್ಯಾಸಕರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಹೆಮ್ಮಾಡಿ :ದ್ವಿತೀಯ ಪಿಯುಸಿ ಫಲಿತಾಂಶ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ

    ಹೆಮ್ಮಾಡಿ :ದ್ವಿತೀಯ ಪಿಯುಸಿ ಫಲಿತಾಂಶ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದ್ದಾರೆ.

    386 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,226 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ,(ಡಿಸ್ಟ್ರಿಂಕ್ಷನ್) ಉತ್ತೀರ್ಣರಾಗಿದ್ದು, ಈ ವಿದ್ಯಾರ್ಥಿಗಳು ಅತ್ಯದಿಕ ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.

    ಪ್ರತೀಕ್ಷಾ 589 (ವಾಣಿಜ್ಯ ವಿಭಾಗ), ಪ್ರಜ್ವಲ್ ಪೂಜಾರಿ 588 (ವಿಜ್ಞಾನ ವಿಭಾಗ), ಪವಿತ್ರಾ 588(ವಿಜ್ಞಾನ ವಿಭಾಗ),
    ಲಾವಣ್ಯ 588(ವಾಣಿಜ್ಯ ವಿಭಾಗ) ಐಶ್ವರ್ಯ ವೈದ್ಯ 587(ವಿಜ್ಞಾನ ವಿಭಾಗ).

    155 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

    ಕಾಲೇಜು ಪ್ರಾರಂಭಗೊಂಡ 2ನೇ ವರ್ಷದಲ್ಲಿಯೂ ಅತ್ಯುತ್ತಮ ಫಲಿತಾಂಶವನ್ನು ಪಡೆಯುವುದರ ಮೂಲಕ ಕರಾವಳಿ ಭಾಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ.

    ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡೆ, ಕಲೆ, ಸಾಹಿತ್ಯ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುವುದು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದ್ದು,ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

  • ಬ್ರಹ್ಮಾವರ: ಚುನಾವಣಾ ಬಾಂಡ್ ಮೂಲಕ ಬಿಜೆಪಿ ಯಿಂದ ಅತಿ ದೊಡ್ಡ ಹಗರಣ: ಸುಧೀರ್ ಕುಮಾರ್ ಮೊರೊಳ್ಳಿ

    ಬ್ರಹ್ಮಾವರ: ಚುನಾವಣಾ ಬಾಂಡ್ ಮೂಲಕ ಬಿಜೆಪಿ ಯಿಂದ ಅತಿ ದೊಡ್ಡ ಹಗರಣ: ಸುಧೀರ್ ಕುಮಾರ್ ಮೊರೊಳ್ಳಿ

    ಕುಂದಾಪುರ ಮಿರರ್ ಸುದ್ದಿ…

    ಬ್ರಹ್ಮಾವರ: ಚುನಾವಣಾ ಬಾಂಡ್ ಮೂಲಕ ದೇಶದಲ್ಲಿ ಅತಿ ಹೆಚ್ಚು ದೇಣಿಗೆ ಪಡೆಯುವ ಮೂಲಕ ಬಿಜೆಪಿ ದೊಡ್ಡ ಹಗರಣ ಮಾಡಿದೆ ಎಂದು ಕಾಂಗ್ರೆಸ್ ಕೆ.ಪಿ.ಸಿ.ಸಿ. ರಾಜ್ಯ ವಕ್ತಾರರಾದ ಸುಧೀರ್ ಕುಮಾರ್ ಮೊರೊಳ್ಳಿ ಆಪಾದಿಸಿದ್ದಾರೆ.

    ಬ್ರಹ್ಮಾವರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಯಾವುದೇ ಖಾಸಗಿ ಸಂಸ್ಥೆಗಳು ಧೇಣಿಗೆ ಕೊಡಬೇಕಾದರೆ ಈ ಹಿಂದೆ ಇದ್ದ ಪಾರದರ್ಶಕತೆಯನ್ನು ಗಾಳಿಗೆ ತೂರಿ ವಿರೋಧ ಪಕ್ಷಗಳ ವಿರೋಧಗಳನ್ನು ನಿರ್ಲಕ್ಷಿಸಿ ಗುಪ್ತವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್ ಎನ್ನುವ ಹಗರಣವನ್ನು ಬಿಜೆಪಿ ಸರ್ಕಾರ ಮಾಡಿದೆ ಈ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹವಾಗಿದೆ ಎಂದು ಸುಧೀರ್ ಹೇಳಿದರು.

    ಸುಪ್ರೀಂ ಕೋರ್ಟದ ಆದೇಶವನ್ನು ಉಲ್ಲಂಗಿಸಿ ಎಸ್‌ಬಿಐ ಮೂಲಕ ಕೇಂದ್ರ ಸರಕಾರ ಜೂನ್ 30ರವರೆಗೆ ಕಾಲಾವಕಾಶ ಕೋರಿರುವುದು ಕೂಡ ಚುನಾವಣಾ ಹಗರಣವನ್ನು ಚುನಾವಣೆಯ ಸಂದರ್ಭದಲ್ಲಿ ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದರು. ಅಲ್ಲದೆ ಬಿಜೆಪಿ ಈ ದೇಶದ ಅತ್ಯಂತ ಹೆಚ್ಚು ಪ್ರಮಾಣದ ಅಂದರೆ ಶೇಕಡ 80% ರಷ್ಟು ಚುನಾವಣೆ ಪಡೆಯುವ ಮೂಲಕ ಹಗರಣ ನಡೆಸಿರುವುದು ಎಸ್‌ಬಿಐ ಮಾಹಿತಿ ಗಳಿಂದ ಸ್ಪಷ್ಟವಾಗಿದೆ ವಿಶೇಷವೆಂದರೆ ತನ್ನ ಶತ್ರುದೇಶ ಎಂದು ಪರಿಗಣಿಸಿದ ಪಾಕಿಸ್ತಾನದಿಂದಲೂ ಚುನಾವಣಾ ಬಾಂಡ್ ಮೂಲಕ ಬಿಜೆಪಿ ದೇಣಿಗೆ ಪಡೆದಿರುವುದು ಬಿಜೆಪಿಯ ಸೋಗಲಾಡಿತನವನ್ನು ಬಯಲು ಮಾಡಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಪಕ್ಷ ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿದ್ದು ಇಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಹೇಳಿದ ಸುಧೀರ್ ಚುನಾವಣೆಗೆ ಅಭ್ಯರ್ಥಿಯ ಘೋಷಣೆಯ ಮುಂಚೆ ನಾವೆಲ್ಲರೂ ಆಕಾಂಕ್ಷಿಗಳಾಗಿದ್ದೆವು ಆದರೆ ಪಕ್ಷದ ಹೈಕಮಾಂಡ್ ಅಭ್ಯರ್ಥಿಯ ಘೋಷಣೆ ಮಾಡಿದ ಬಳಿಕ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರಂತೆ ಅಭ್ಯರ್ಥಿಗೆ ಬೆಂಬಲವನ್ನ ಸೂಚಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು