ಬ್ರಹ್ಮಾವರ: ಚುನಾವಣಾ ಬಾಂಡ್ ಮೂಲಕ ಬಿಜೆಪಿ ಯಿಂದ ಅತಿ ದೊಡ್ಡ ಹಗರಣ: ಸುಧೀರ್ ಕುಮಾರ್ ಮೊರೊಳ್ಳಿ

0
237

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬ್ರಹ್ಮಾವರ: ಚುನಾವಣಾ ಬಾಂಡ್ ಮೂಲಕ ದೇಶದಲ್ಲಿ ಅತಿ ಹೆಚ್ಚು ದೇಣಿಗೆ ಪಡೆಯುವ ಮೂಲಕ ಬಿಜೆಪಿ ದೊಡ್ಡ ಹಗರಣ ಮಾಡಿದೆ ಎಂದು ಕಾಂಗ್ರೆಸ್ ಕೆ.ಪಿ.ಸಿ.ಸಿ. ರಾಜ್ಯ ವಕ್ತಾರರಾದ ಸುಧೀರ್ ಕುಮಾರ್ ಮೊರೊಳ್ಳಿ ಆಪಾದಿಸಿದ್ದಾರೆ.

Click Here

ಬ್ರಹ್ಮಾವರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಯಾವುದೇ ಖಾಸಗಿ ಸಂಸ್ಥೆಗಳು ಧೇಣಿಗೆ ಕೊಡಬೇಕಾದರೆ ಈ ಹಿಂದೆ ಇದ್ದ ಪಾರದರ್ಶಕತೆಯನ್ನು ಗಾಳಿಗೆ ತೂರಿ ವಿರೋಧ ಪಕ್ಷಗಳ ವಿರೋಧಗಳನ್ನು ನಿರ್ಲಕ್ಷಿಸಿ ಗುಪ್ತವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್ ಎನ್ನುವ ಹಗರಣವನ್ನು ಬಿಜೆಪಿ ಸರ್ಕಾರ ಮಾಡಿದೆ ಈ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಸ್ವಾಗತಾರ್ಹವಾಗಿದೆ ಎಂದು ಸುಧೀರ್ ಹೇಳಿದರು.

ಸುಪ್ರೀಂ ಕೋರ್ಟದ ಆದೇಶವನ್ನು ಉಲ್ಲಂಗಿಸಿ ಎಸ್‌ಬಿಐ ಮೂಲಕ ಕೇಂದ್ರ ಸರಕಾರ ಜೂನ್ 30ರವರೆಗೆ ಕಾಲಾವಕಾಶ ಕೋರಿರುವುದು ಕೂಡ ಚುನಾವಣಾ ಹಗರಣವನ್ನು ಚುನಾವಣೆಯ ಸಂದರ್ಭದಲ್ಲಿ ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದರು. ಅಲ್ಲದೆ ಬಿಜೆಪಿ ಈ ದೇಶದ ಅತ್ಯಂತ ಹೆಚ್ಚು ಪ್ರಮಾಣದ ಅಂದರೆ ಶೇಕಡ 80% ರಷ್ಟು ಚುನಾವಣೆ ಪಡೆಯುವ ಮೂಲಕ ಹಗರಣ ನಡೆಸಿರುವುದು ಎಸ್‌ಬಿಐ ಮಾಹಿತಿ ಗಳಿಂದ ಸ್ಪಷ್ಟವಾಗಿದೆ ವಿಶೇಷವೆಂದರೆ ತನ್ನ ಶತ್ರುದೇಶ ಎಂದು ಪರಿಗಣಿಸಿದ ಪಾಕಿಸ್ತಾನದಿಂದಲೂ ಚುನಾವಣಾ ಬಾಂಡ್ ಮೂಲಕ ಬಿಜೆಪಿ ದೇಣಿಗೆ ಪಡೆದಿರುವುದು ಬಿಜೆಪಿಯ ಸೋಗಲಾಡಿತನವನ್ನು ಬಯಲು ಮಾಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿದ್ದು ಇಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಹೇಳಿದ ಸುಧೀರ್ ಚುನಾವಣೆಗೆ ಅಭ್ಯರ್ಥಿಯ ಘೋಷಣೆಯ ಮುಂಚೆ ನಾವೆಲ್ಲರೂ ಆಕಾಂಕ್ಷಿಗಳಾಗಿದ್ದೆವು ಆದರೆ ಪಕ್ಷದ ಹೈಕಮಾಂಡ್ ಅಭ್ಯರ್ಥಿಯ ಘೋಷಣೆ ಮಾಡಿದ ಬಳಿಕ ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರಂತೆ ಅಭ್ಯರ್ಥಿಗೆ ಬೆಂಬಲವನ್ನ ಸೂಚಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು

Click Here

LEAVE A REPLY

Please enter your comment!
Please enter your name here