Category: ಸುದ್ದಿ

  • ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಣದಲ್ಲಿ 10 ಮಂದಿ ಅಭ್ಯರ್ಥಿಗಳು

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಣದಲ್ಲಿ 10 ಮಂದಿ ಅಭ್ಯರ್ಥಿಗಳು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಉಡುಪಿ -ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಇಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದ್ದು ಯಾವುದೇ ಒಬ್ಬ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುದಿಲ್ಲ. 10 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇರುತ್ತಾರೆ.

    ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ. ಜಯಪ್ರಕಾಶ್ ಹೆಗ್ಡೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಕೋಟ ಶ್ರೀನಿವಾಸ ಪೂಜಾರಿ, ಬಹುಜನ ಸಮಾಜ ಪಾರ್ಟಿಯ ಕೆ.ಟಿ ರಾಧಾಕೃಷ್ಣ, ಜನಹಿತ ಪಕ್ಷದ ಅಭ್ಯರ್ಥಿಯಾದ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡ ಸೇವಕರ ಪಕ್ಷದ ಅಭ್ಯರ್ಥಿಯಾದ ಶಬರೀಶ್ ಆರ್, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಭ್ಯರ್ಥಿಯಾದ ಎಲ್ ರಂಗನಾಥ್ ಗೌಡ, ಪ್ರೌಟಿಸ್ಟ್ ಸರ್ವ ಸಮಾಜ ಪಕ್ಷದ ಅಭ್ಯರ್ಥಿಯಾದ ಎಂ.ಕೆ ದಯಾನಂದ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾದ ಸಚಿನ್ ಬಿ.ಕೆ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಸುಧೀರ್ ಕಾಂಚನ್ ಹಾಗೂ ವಿಜಯಕುಮಾರ್ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು.

  • ಕುಂದಾಪುರ :ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ – ನಟ ಪ್ರಮೋದ್ ಶೆಟ್ಟಿ

    ಕುಂದಾಪುರ :ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ – ನಟ ಪ್ರಮೋದ್ ಶೆಟ್ಟಿ

    Video :

    ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ “ಮಂಥನ” ಉದ್ಘಾಟನೆ

    ಕುಂದಾಪುರ :ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ, ಪಠ್ಯೇತರ ಚಟುವಟಿಕೆಗಳಿಗೊಂದು ಉತ್ತಮ ವೇದಿಕೆ. ಈ ನಿಟ್ಟಿನಲ್ಲಿ ಎಲ್ಲಾ ಶಿಬಿರಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ಖ್ಯಾತ ಚಲನ ಚಿತ್ರ ನಟರಾದ ಪ್ರಮೋದ್ ಶೆಟ್ಟಿಯವರು ಶಿಬಿರಾರ್ಥಿಗಳಿಗೆ ಮನವಿ ಮಾಡಿದರು.

    ಸುಣ್ಣಾರಿಯ ಎಕ್ಸಲೆಂಟ್ ಹಾಗೂ ಯಡಾಡಿ ಮತ್ಯಾಡಿಯ ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಸಂಸ್ಥೆಗಳ ಸಹಯೋಗದಲ್ಲಿ ಲಿಟಲ್ ಸ್ಟಾರ್ ಸಂಸ್ಥೆಯ ಆವರಣದಲ್ಲಿ ಮಕ್ಕಳಿಗೆ ಆಯೋಜಿಸಲಾದ ಬೇಸಿಗೆ ಶಿಬಿರ ಮಂಥನವನ್ನು ಉದ್ಘಾಟಿಸಿ ಮಾತನಾಡಿ ರಜಾದ ದಿನಗಳನ್ನು ಮಕ್ಕಳು ಉತ್ಸಾಹ ಹಾಗೂ ಉತ್ಪಾದಕವಾಗಿ ಬಳಸಿಕೊಳ್ಳಬೇಕು. ಇಂತಹ ಶಿಬಿರಗಳಲ್ಲಿ ವೈವಿಧ್ಯಮಯ ಚಟುವಟಿಕೆಗಳಿರುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವುದು ಎಂದು ಹೇಳಿದರು.

    ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಯವರು, ಮಕ್ಕಳಿಗೆ ಪಠ್ಯದ ಜೊತೆ, ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ಮಕ್ಕಳ ಸುಪ್ತ ಪ್ರತಿಭೆಗಳಿಗೆ ಉತ್ತಮ ಹೊಳಪನ್ನು ನೀಡಿ, ಕ್ರಿಯಾಶೀಲ ಹಾಗೂ ಸೃಜನಾತ್ಮಕ ಮನೋಭಾವಗಳನ್ನು ಉತ್ತೇಜಿಸುವಲ್ಲಿ ಇಂತಹ ಶಿಬಿರಗಳು ಸಹಕರಿಸುತ್ತವೆ. ಸದೃಢ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಬಿರಗಳ ಕೊಡುಗೆ ಮಹತ್ತರವಾದುದು ಎಂದರು.

    ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ ನ ಕಾರ್ಯದರ್ಶಿಗಳಾದ ಪ್ರತಾಪ್ ಚಂದ್ರ ಶೆಟ್ಟಿಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ದಾಸರಾಗುತ್ತಿದ್ದು, ಅದನ್ನು ತಪ್ಪಿಸಲು ಈ ರೀತಿಯ ಬೇಸಿಗೆ ಶಿಬಿರಗಳಿಂದ ಸಾಧ್ಯ. ಮಕ್ಕಳು ಇಂತಹ ಉಪಕರಣಗಳ ದಾಸರಾಗದೇ ಉತ್ತಮ ಜೀವನ ಕೌಶಲ್ಯಗಳನ್ನು ಗಳಿಸಿಕೊಳ್ಳಬೇಕು ಎಂದು ಪೋಷಕರಿಗೆ ಹಾಗೂ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿ ಭರತ್ ಶೆಟ್ಟಿಯವರು ಶಿಬಿರದ ರೂಪರೇಷೆಗಳು, ಉದ್ದೇಶ ಹಾಗೂ ಉಪಯೋಗಗಳ ಬಗ್ಗೆ ಪ್ರಾಸ್ತವಿಕ ಮಾತನಾಡಿದರು.

    ಬೇಸಿಗೆ ಶಿಬಿರ ಮಂಥನದ ಉದ್ಘಾಟನಾ ವೇದಿಕೆಯಲ್ಲಿ ಭ್ರಮಾಲೋಕ ಸೃಷ್ಟಿ ಮಾಡುವುದರ ಮೂಲಕ ಶಿಬಿರದ ಎಲ್ಲಾ ಚಟುವಟಿಕೆಗಳನ್ನು ಜಾದೂಪ್ರದರ್ಶನದಿಂದ ಅರ್ಥಪೂರ್ಣವಾಗಿ ಖ್ಯಾತ ಜಾದುಗಾರರಾಗಿರುವ ಸತೀಶ್ ಹೆಮ್ಮಾಡಿಯವರು ಚಾಲನೆ ಕೊಟ್ಟರು.

    ಬೇಸಿಗೆ ಶಿಬಿರದಲ್ಲಿ 400 ಶಿಬಿರಾರ್ಥಿಗಳಿದ್ದು ಶಿಬಿರವು ಏ.8 ರಿಂದ 12ರವರೆಗೆ ನಡೆಯಲಿರುವುದು.

    ಲಿಟಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಪ್ರದೀಪ್ ವಂದಿಸಿದರು. ಅರ್ಥಶಾಸ್ತ್ರದ ಉಪನ್ಯಾಸಕ ಶ್ರೀನಿವಾಸ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಭರದಿಂದ ನವೀಕರಣಗೊಳ್ಳುತ್ತಿರುವ ಶ್ರೀ ನಂದಿಕೇಶ್ವರ ದೇವಸ್ಥಾನ

    ಕುಂದಾಪುರ :ಭರದಿಂದ ನವೀಕರಣಗೊಳ್ಳುತ್ತಿರುವ ಶ್ರೀ ನಂದಿಕೇಶ್ವರ ದೇವಸ್ಥಾನ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ : ನಗರದ ಮುಖ್ಯರಸ್ತೆಯ ಸರಕಾರಿ ಆಸ್ಪತ್ರೆಯ ಸಮೀಪದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನವು ಸಂಪೂರ್ಣ ಶಿಲಾಮಯವಾಗಿ ಪುನರ್‌ ನಿರ್ಮಾಣಗೊಳ್ಳುತ್ತಿದ್ದು ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದೆ.

    ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ನಾಗೇಶ್ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಯು.ರಾಧಕೃಷ್ಣರವರ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯವು ವೇಗ ಪಡೆದುಕೊಂಡಿದ್ದು ಸುಮಾರು 70 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನವು ಪುನರ್ ನವೀಕರಣಗೊಳ್ಳುತ್ತಿದೆ.

    ಶ್ರೀ ನಂದಿಕೇಶ್ವರ ದೇವಸ್ಥಾನಕ್ಕೆ 400 ವರ್ಷಗಳ ಇತಿಹಾಸವಿದ್ದು ನಗರದ ಚಿಕ್ಕಮ್ಮನಸಾಲು ರಸ್ತೆಯಲ್ಲಿರುವ ಶ್ರೀ ಮೈಲಾರೇಶ್ವರ ದೇವಸ್ಥಾನದ ಮುಂದೆ ಪ್ರತಿಷ್ಠಾಪನೆಗೊಂಡಿದ್ದ ನಂದಿಯನ್ನು ಯಾರೋ ಅಮಾಯಕರು ಅಪಹರಿಸಿ ಸರಕಾರಿ ಆಸ್ಪತ್ರೆಯ ಸಮೀಪದಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದ್ದು ಮುಂದೆ ಶಿವಲಿಂಗದ ಪ್ರತಿಷ್ಠಾಪನೆಯೊಂದಿಗೆ ಭಕ್ತರಿಂದ ನಂದಿಕೇಶ್ವರನಾಗಿ ಆರಾಧಿಸಲ್ಪಟ್ಟಿತು. ಶ್ರೀ ನಂದಿಕೇಶ್ವರ ದೇವಸ್ಥಾನಕ್ಕೆ ಬ್ರಿಟಿಷರ ಆಡಳಿತ ಅವಧಿಯಲ್ಲಿ 4.00 ಸೆಂಟ್ಸ್ ಜಾಗ ಕೂಡ ಮಂಜೂರಾಗಿತ್ತು.

    ಸ್ವರ್ಣಾರೂಢ ಪ್ರಶ್ನೆಯಲ್ಲಿ ತಿಳಿಸಿದಂತೆ ಜೀರ್ಣೋದ್ಧಾರ ಕಾರ್ಯದ ಪೂರ್ವಭಾವಿಯಾಗಿ ಈಗಾಗಲೇ ಅನೇಕ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದ್ದು ಶ್ರೀ ಮೈಲಾರೇಶ್ವರನ ಸನ್ನಿಧಾನದಲ್ಲಿ ಶತ ರುದ್ರಾಭಿಷೇಕ ಹಾಗೂ ಶ್ರೀದೇವರಿಗೆ ಬೆಳ್ಳಿಯ ರುದ್ರಾಕ್ಷಿ ಮಾಲೆಯನ್ನು ಸಮರ್ಪಿಸಲಾಗಿದೆ ಶ್ರೀ ನಂದಿಕೇಶ್ವರ ದೇವಸ್ಥಾನದ ಸಮಿತಿಯ ಸರ್ವ ಸದಸ್ಯರು ಈ ಜೀರ್ಣೋದ್ಧಾರ ಪುಣ್ಯ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಿದ್ದು ಇದೇ ತಿಂಗಳ ಎಪ್ರಿಲ್‌ 14 ರಿಂದ 16ರವರೆಗೆ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಯು.ರಾಧಾಕೃಷ್ಣರವರು ತಿಳಿಸಿದ್ದಾರೆ.

  • ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಛಾತ್ರರಿಗೆ ಸನ್ಮಾನ

    ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಛಾತ್ರರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ದೇವಾಲಯದ ಹಿರಿಮೆ ಹೆಚ್ಚಿಸಿದ ಕೃಷ್ಣಾನಂದ ಚಾತ್ರ ಅವರನ್ನು ವ್ಯವಸ್ಥಾಪನ ಸಮಿತಿ ಪರವಾಗಿ ಅಭಿನಂದಿಸಲಾಯಿತು.

    ಸಮಿತಿಯ ಮೂರು ವರುಷದ ಅವಧಿಯಲ್ಲಿ ಸಹಕಾರ ನೀಡಿದ ಭಕ್ತಾಭಿನಿಗಳಿಗೆ, ದಾನಿಗಳಿಗೆ ಅಧ್ಯಕ್ಷರು ಧನ್ಯವಾದ ಅರ್ಪಿಸಿದರು.

    ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ,ಜಯಾನಂದ ಖಾರ್ವಿ, ವಿಶ್ವನಾಥ್ ಗರಡಿ ಮನೆ, ಸವಿತ ಜಗದೀಶ್, ವೀಣಾ ಪ್ರಕಾಶ್, ಸತೀಶ್, ನಾಗರಾಜ್ ರಾಯಪ್ಪನ ಮಠ, ದೇವಸ್ಥಾನದ ಗುರುರಾಜ್ ಹತ್ವಾರ್, ರಮೇಶ್ ಮೈಪಾಡಿ, ರಾಧಾಕೃಷ್ಣ, ದೀಕ್ಷಿತಾ ಸಾರಂಗ್, ನಿವೇದಿತಾ, ರಾಮ ರಾವ್ ಕನ್ನಂತ ಉಪಸ್ಥಿತರಿದ್ದರು.

  • ಕುಂದಾಪುರ :ವಂಡ್ಸೆಯಲ್ಲಿ ಎ.10ರಿಂದ ದಿನಗಳ ಕರಾಟೆ ಬೇಸಿಗೆ ಶಿಬಿರ

    ಕುಂದಾಪುರ :ವಂಡ್ಸೆಯಲ್ಲಿ ಎ.10ರಿಂದ ದಿನಗಳ ಕರಾಟೆ ಬೇಸಿಗೆ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಅಕಾಡೆಮಿ ಆಫ್ ಮಾರ್ಷಲ್ ಆಟ್ರ್ಸ್ ವತಿಯಿಂದ ಸ್ತ್ರೀ ಸ್ವರಕ್ಷಣೆ, ಮಕ್ಕಳ ಅಭ್ಯುದಯ, ಸಾಮಾನ್ಯ ಪ್ರಜೆಯಿಂದ ಎಲ್ಲಾ ವರ್ಗದವರೆಗೂ 20 ದಿನದ ಕರಾಟೆ ಬೇಸಿಗೆ ಶಿಬಿರ ವಂಡ್ಸೆಯಲ್ಲಿ ಎಪ್ರಿಲ್ 10ರಿಂದ ಎಪ್ರಿಲ್ 29ರ ತನಕ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯ ತನಕ ವಂಡ್ಸೆ ಸಬ್ಲಾಡಿ ಕಾಂಪ್ಲೆಕ್ಸ್, (ಕೆನರಾ ಬ್ಯಾಂಕ್ ಹಿಂಭಾಗ) ಇಲ್ಲಿ ನಡೆಯಲಿದೆ ಎಂದು ಸಂಸ್ಥೆಯ ತಾಂತ್ರಿಕ ನಿರ್ದೇಶಕರಾದ ರೆನ್ಸಿ ಹೆಚ್.ಚಂದ್ರಶೇಖರ ಹೇಳಿದರು.

    ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಈ ತರಬೇತಿಯಲ್ಲಿ ಸ್ತ್ರೀ ಸ್ವರಕ್ಷಣೆ, ಮಕ್ಕಳ ಅಭ್ಯುದಯ ಹಾಗೂ 6 ವರ್ಷದಿಂದ 60 ವರ್ಷದವರೆಗಿನ ಎಲ್ಲರಿಗೂ ಅವಕಾಶ ಒದಗಿಸಲಾಗಿದೆ. ತರಬೇತಿ ಸಮಯ ಬೆಳಿಗ್ಗೆ 7 ರಿಂದ 8 ಗಂಟೆಯ ತನಕ ನಡೆಯಲಿದೆ. ಎಪ್ರಿಲ್ 10ರ ಸಂಜೆ ಉದ್ಘಾಟನೆಗೊಳ್ಳಲಿದೆ ಎಂದರು.

    1986ರಲ್ಲಿ ಕುಂದಾಪುರದ ಭಂಡಾರ್ಕಾಸ್ ಕಾಲೇಜು ಕೊಯಕುಟ್ಟಿ ಹಾಲಿನಿಂದ ಪ್ರಾರಂಭವಾದ ನಮ್ಮ ಸಂಸ್ಥೆಯ ತರಬೇತಿ ಇಲ್ಲಿಯವರೆಗೆ ದೇಶದಾದ್ಯಂತ 20 ಸಾವಿರಕ್ಕೂ ಹೆಚ್ಚು ಜನಸಾಮಾನ್ಯರು, 10 ಸಾವಿರಕ್ಕೂ ಹೆಚ್ಚು ಪೆÇಲೀಸ್ ಸಿಬ್ಬಂದಿ, ಅಬಲೆಯರು, ಸ್ತ್ರೀಯರು, ಮಕ್ಕಳು, ಸಂರಕ್ಷಣಾ ಕಲೆ, (ಸೆಲ್ಫ್ ಡಿಪೆನ್ಸ್) ನಲ್ಲಿ ತರಬೇತಿ ಕೊಡುತ್ತಾ ಹಲವಾರು ಪ್ರತಿಷ್ಟಿತ ಕರಾಟೆ ಪಂದ್ಯಾವಳಿಗಳಲ್ಲಿ ಪದಕ, ಪಡೆದುಕೊಂಡಿದೆ. ಪುರಸ್ಕಾರಗಳನ್ನು ಪಡೆದುಕೊಂಡಿದೆ ಎಂದರು.

    ಹೆಚ್ಚಿನ ಮಾಹಿತಿಗೆ ಈ 7259321123 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು.

    ಸುದ್ಧಿಗೋಷ್ಠಿಯಲ್ಲಿ ಸದಾಶಿವ ಮಯ್ಯ ಉಪಸ್ಥಿತರಿದ್ದರು.

  • ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ: 3 ನಾಮಪತ್ರ ತಿರಸ್ಕೃತ – 10 ನಾಮಪತ್ರಗಳು ಕ್ರಮಬದ್ಧ

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ: 3 ನಾಮಪತ್ರ ತಿರಸ್ಕೃತ – 10 ನಾಮಪತ್ರಗಳು ಕ್ರಮಬದ್ಧ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ನಾಮಪತ್ರಗಳ ಪರಿಶೀಲನೆಯು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ನಡೆಯಿತು.

    13 ಅಭ್ಯರ್ಥಿಗಳು ಒಟ್ಟು 19 ನಾಮಪತ್ರಗಳನ್ನು ಸಲ್ಲಿಸಿದ್ದು, ಅವುಗಳಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡು, 10 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರು ಘೋಷಿಸಿದರು.

    ಪಕ್ಷೇತರ ಅಭ್ಯರ್ಥಿಗಳಾದ ಕೆ.ಆರ್ ಕುಸುಮ, ರಾಜ್ ಬಲ್ಲಾಳ್ ಹಾಗೂ ಹೆಚ್ ಸುರೇಶ್ ಪೂಜಾರಿ ಅವರ ನಾಮಪತ್ರಗಳು ತಿರಸ್ಕಾರಗೊಂಡಿವೆ.

    ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ. ಜಯಪ್ರಕಾಶ್ ಹೆಗ್ಡೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಕೋಟ ಶ್ರೀನಿವಾಸ ಪೂಜಾರಿ, ಬಹುಜನ ಸಮಾಜ ಪಾರ್ಟಿಯ ಕೆ.ಟಿ ರಾಧಾಕೃಷ್ಣ, ಜನಹಿತ ಪಕ್ಷದ ಅಭ್ಯರ್ಥಿಯಾದ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡ ಸೇವಕರ ಪಕ್ಷದ ಅಭ್ಯರ್ಥಿಯಾದ ಶಬರೀಶ್ ಆರ್, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಭ್ಯರ್ಥಿಯಾದ ಎಲ್ ರಂಗನಾಥ್ ಗೌಡ, ಪ್ರೌಟಿಸ್ಟ್ ಸರ್ವ ಸಮಾಜ ಪಕ್ಷದ ಅಭ್ಯರ್ಥಿಯಾದ ಎಂ.ಕೆ ದಯಾನಂದ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾದ ಸಚಿನ್ ಬಿ.ಕೆ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಸುಧೀರ್ ಕಾಂಚನ್ ಹಾಗೂ ವಿಜಯಕುಮಾರ್ ಅವರ ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ.

    ಪರಿಶೀಲನಾ ಸಭೆಯಲ್ಲಿ ಚುನಾವಣಾ ವೀಕ್ಷಕ ಹಿತೇಶ್ ಕೆ. ಕೋಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳು ಉಪಸ್ಥಿತರಿದ್ದರು.

     

  • ಕುಂದಾಪುರ :ಸರ್ಕಾರಿ ಪ್ರೌಢ ಶಾಲೆ ಕಾಳಾವರ – 8 ಮತ್ತು 9ನೆಯ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಂತರದ ವಿಶೇಷ ಚಟುವಟಿಕೆಗಳು

    ಕುಂದಾಪುರ :ಸರ್ಕಾರಿ ಪ್ರೌಢ ಶಾಲೆ ಕಾಳಾವರ – 8 ಮತ್ತು 9ನೆಯ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಂತರದ ವಿಶೇಷ ಚಟುವಟಿಕೆಗಳು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸರ್ಕಾರಿ ಪ್ರೌಢ ಶಾಲೆ ಕಾಳಾವರದಲ್ಲಿ 8 ಮತ್ತು 9ನೆಯ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಂತರದ ವಿಶೇಷ ಚಟುವಟಿಕೆಗಳು ನಡೆಯಿತು.

    ಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ಪೂರ್ವದಲ್ಲಿ ಮಕ್ಕಳು ಆಸಕ್ತಿಯಿಂದ ಭಾಗವಹಿಸಲು ಪಠ್ಯೇತರ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕ ರಾಮರವರು ಹೊಸ ಆಟಗಳ ಪರಿಚಯ ಮಾಡುತ್ತಿದ್ದು ವಿದ್ಯಾರ್ಥಿಗಳು ಬಲು ಆಸಕ್ತಿಯಿಂದ ಭಾಗವಹಿಸಿದರು.

    ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ, ಸರಳ ಗಣಿತ,‌ ತಾರ್ಕಿಕ ಗಣಿತ, ವ್ಯವಹಾರಿಕ ವಿಜ್ಞಾನ, ಕಂಪ್ಯೂಟರ್,‌ ಪೌರಾಣಿಕ, ಕ್ರೀಡೆ ಹೀಗೆ ನಿರ್ಧಿಷ್ಟ ಕ್ಷೇತ್ರಗಳ ಬಗ್ಗೆ ಮೊದಲೇ ತಯಾರಿ ನಡೆಸಲು ತಿಳಿಸಿ, ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ರೋಟರಿ ಮಿಡ್ ಟೌನ್ ಕುಂದಾಪುರದ ಸಹಯೋಗದಲ್ಲಿ ಶಾಲಾ ಇಂಟ್ರ್ಯಾಕ್ಟ್ ಕ್ಲಬ್ ವತಿಯಿಂದ ಕಾರ್ಯಕ್ರಮ ನಡೆಸಲಾಯಿತು.

    ಇಂಟ್ರಾಕ್ಟ್ ಅಧ್ಯಕ್ಷ 9ನೆಯ ತರಗತಿಯ ರಶ್ವಿನ್ ಕಾರ್ಯಕ್ರಮಕ್ಕೆ ಸರ್ವ ತಯಾರಿ ಮಾಡಿದರು. ಕ್ಲಬ್ ನ ಮಾರ್ಗದರ್ಶಿ ಶಿಕ್ಷಕ ದಿನೇಶ್ ಪ್ರಭು ರಸಪ್ರಶ್ನೆ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮದ ವಿಶೇಷ ಸುತ್ತುಗಳನ್ನು ಶಿಕ್ಷಕ ರವಿರಾಜ್ ಶೆಟ್ಟಿ, ಹಾಗೂ ಶಿಕ್ಷಕಿ ಹೇಮಾ ಅವರು ನಿರ್ವಹಿಸಿ ಬಹುಮಾನ ವಿತರಿಸಿದರು.

    8 ಮತ್ತು 9ನೆಯ ತರಗತಿಯವರೆಗೆ ಪ್ರತ್ಯೇಕ ಎರಡು ಸ್ಥರಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರತಿ ತಂಡದಲ್ಲಿ ಈರ್ವರಿದ್ದು, ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ವಿತರಿಸಲಾಯಿತು.

  • ಕುಂದಾಪುರ :ಪ್ರತಿಷ್ಠಿತ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸಂದೀಪ್ ಗಾಣಿಗ ನೇಮಕ

    ಕುಂದಾಪುರ :ಪ್ರತಿಷ್ಠಿತ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸಂದೀಪ್ ಗಾಣಿಗ ನೇಮಕ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸಂದೀಪ್ ಗಾಣಿಗ ನೇಮಕಗೊಂಡಿದ್ದಾರೆ.

    CET, NEET, JEE ಯ ತರಬೇತುದಾರರಾಗಿರುವ ಸಂದೀಪ್ ಗಾಣಿಗ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 10 ವರ್ಷಗಳಿಂದ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ವಿಶಿಷ್ಟ ಬೋಧನಾ ಶೈಲಿಯಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಛಾಪು ಮೂಡಿಸಿದ ಇವರು ಪ್ರಸ್ತುತ ವರ್ಷದಿಂದ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಗೊಂಡಿದ್ದಾರೆ.

    CET, JEE ತರಬೇತುದಾರ ಹಾಗೂ ಗಣಿತ ಶಾಸ್ತ್ರ ವನ್ನು ಸರಳ ತಂತ್ರ ಗಳ ಮೂಲಕ ಬೋಧಿಸಿ ವಿದ್ಯಾರ್ಥಿಗಳ ಮನಗೆದ್ದಿರುವ ಉಪನ್ಯಾಸಕ ಸುಜಯ್ ಕೋಟೆಗಾರ್ ಉಪಪ್ರಾಂಶುಪಾಲರಾಗಿ ನೇಮಕ ಗೊಂಡಿದ್ದಾರೆ.

    ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.

  • ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಅಗತ್ಯ ಕ್ರಮವಹಿಸಿ : ಸಿ.ಇ.ಓ ಪ್ರತೀಕ್ ಬಾಯಲ್

    ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಅಗತ್ಯ ಕ್ರಮವಹಿಸಿ : ಸಿ.ಇ.ಓ ಪ್ರತೀಕ್ ಬಾಯಲ್

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಲು ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನದಲ್ಲಿ ಭಾಗವಹಿಸಿ, ಮತದಾನ ಮಾಡಲು ಉತ್ತೇಜಿಸುವ ಸಲುವಾಗಿ ವಿವಿಧ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ನ ಡಾ.ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಜಿಲ್ಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ರಂದು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯಲಿದೆ. ಮತದಾರರು ಅಂದು ಮತದಾನ ಕೇಂದ್ರಗಳಿಗೆ ತೆರಳಿ ಯಾವುದೇ ಆಸೆ – ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಾಗೃತಿ ಮೂಡಿಸುವುದು ಸ್ವೀಪ್ ಸಮಿತಿಯ ಮುಖ್ಯ ಧ್ಯೇಯವಾಗಿದೆ. ಪ್ರತಿಯೊಬ್ಬ ಅಧಿಕಾರಿಗಳು ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದರು.

    ವಿವಿಧೆಡೆಯಿಂದ ಕೆಲಸ ಅರಸಿ ಜಿಲ್ಲೆಗೆ ವಲಸೆ ಬಂದಿರುವ ಕೂಲಿ ಕಾರ್ಮಿಕರುಗಳ ಮನವೊಲಿಸಿ, ಅವರುಗಳ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಕಡ್ಡಾಯವಾಗಿ ಮತದಾನದ ದಿನದಂದು ಮತ ಚಲಾಯಿಸಲು ಅವರುಗಳಲ್ಲಿ ಅರಿವು ಮೂಡಿಸಬೇಕು ಎಂದರು.

    ಮತದಾನ ಕೇಂದ್ರಗಳಿಗೆ ಮತದಾನಕ್ಕೆ ಬಂದಾಗ ಅವರುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ವಿಶೇಷ ಗಮನ ಹರಿಸಬೇಕು ಎಂದ ಅವರು, ಬಿ.ಎಲ್.ಓ ಗಳು ಪ್ರತಿಯೊಬ್ಬ ಮತದಾರರಿಗೂ ಮತದಾನ ಮಾಡಲು ಅನುಕೂಲವಾಗುವ ರೀತಿಯಲ್ಲಿ ಮತದಾನ ಕ್ರಮ ಸಂಖ್ಯೆಯ ಚೀಟಿಯನ್ನು ಮನೆಮನೆಗೂ ವಿತರಿಸಬೇಕು ಜೊತೆಗೆ ಮತದಾನ ಯಂತ್ರದ ಬಳಕೆಯ ಬಗ್ಗೆಯೂ ಅರಿವು ಮೂಡಿಸಬೇಕು ಎಂದರು.

    ಜಿಲ್ಲೆಯಲ್ಲಿ ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಸ್ಥಳಗಳನ್ನು ಸಮೀಕ್ಷೆ ಮಾಡಿ, ಕಡಿಮೆ ಮತದಾನ ಆಗಿರುವ ಕಾರಣ ಗುರುತಿಸುವುದರೊಂದಿಗೆ, ಮತದಾನ ಪ್ರಮಾಣ ಹೆಚ್ಚಿಸಲು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮತ ಚಲಾಯಿಸುವವರ ಸಂಖ್ಯೆ ಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿ.ಪಂ. ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಯೋಜನಾ ನಿರ್ದೇಶಕ ಕರೀಂ ಆಸಾದಿ, ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಶ್ರೀ ಶನೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ರಾಮ ಮಾರ್ಗೋಳಿ ಆಯ್ಕೆ

    ಕುಂದಾಪುರ :ಶ್ರೀ ಶನೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾಗಿ ರಾಮ ಮಾರ್ಗೋಳಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶ್ರೀ ಶನೇಶ್ವರ ದೇವಸ್ಥಾನ ಟ್ರಸ್ಟ್ ಮಾರ್ಗೋಳಿ, ಬಸ್ರೂರು ಇದರ ನೂತನ ಅಧ್ಯಕ್ಷರಾಗಿ ರಾಮ ಮಾರ್ಗೋಳಿ ಆಯ್ಕೆಯಾಗಿದ್ದಾರೆ. ಮಾ.24ರಂದು ಶ್ರೀ ಅನ್ನಪೂರ್ಣೇಶ್ವರಿ ಭವನದಲ್ಲಿ ನಡೆದ 12ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

    ಮಹಾಸಭೆಯ ಅಧ್ಯಕ್ಷತೆಯನ್ನು ಟ್ರಸ್ಟಿನ ಉಪಾಧ್ಯಕ್ಷರಾದ ವೆಂಕಟೇಶ್ ಕಳಂಜಿ ಅಧ್ಯಕ್ಷತೆ ವಹಿಸಿದ್ದರು. ಮಹಾಸಭೆಯಲ್ಲಿ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರಾದ ಮಹಾಲಿಂಗ ಮಾರ್ಗೋಳಿ ಅವರು ನಿಧನ ಹೊಂದಿದ್ದು ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.

    ನೂತನ ಜೊತೆ ಕಾರ್ಯದರ್ಶಿಯಾಗಿ ರವಿರಾಜ್ ಮಾರ್ಗೋಳಿ, ಆಂತರಿಕ ಲೆಕ್ಕಪರಿಶೋಧಕರಾಗಿ ಸಂದೀಪ್ ಮಾರ್ಗೋಳಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಟ್ರಸ್ಟಿನ ಕಾನೂನು ಸಲಹೆಗಾರರಾಗಿ ಸುಕೇಶ ಶೆಟ್ಟಿ ನ್ಯಾಯವಾದಿ ಆರೂರು ಇವರನ್ನು ನೇಮಕ ಮಾಡಲಾಯಿತು.

    ವೆಂಕಟೇಶ್ ಕಳಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನೂತನ ಅಧ್ಯಕ್ಷನ್ನು ಅಭಿನಂದಿಸಿದರು. ಟ್ರಸ್ಟಿನ ಕೋಶಾಧಿಕಾರಿ ರಂಜಿತ ಲೆಕ್ಕಪತ್ರ ಮಂಡಿಸಿದರು. ಮುಂದಿನ ವರ್ಷದ ಬಜೆಟ್ ಮಂಡಿಸಲಾಯಿತು. 12ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವವನ್ನು ಮೇ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು. ಕಾರ್ಯದರ್ಶಿ ಗೋವಿಂದ ಮಾರ್ಗೋಳಿ ಸ್ವಾಗತಿಸಿ, ವಂದಿಸಿದರು.