Category: ಸುದ್ದಿ

  • ಕುಂದಾಪುರ :ಮಾಜಿ ಶಾಸಕ ಹಾಲಾಡಿಯವರನ್ನು ಭೇಟಿಯಾದ ಕೆ. ಜಯಪ್ರಕಾಶ್ ಹೆಗ್ಡೆ

    ಕುಂದಾಪುರ :ಮಾಜಿ ಶಾಸಕ ಹಾಲಾಡಿಯವರನ್ನು ಭೇಟಿಯಾದ ಕೆ. ಜಯಪ್ರಕಾಶ್ ಹೆಗ್ಡೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭವ್ಯ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ ಅವರು ಗುರುವಾರದಂದು ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ. ಜಯಪ್ರಕಾಶ್ ಹೆಗ್ಡೆಯವರು, ಮಾಜಿ ಶಾಸಕರನ್ನು ಸೌಜನ್ಯಯುತವಾಗಿ ಭೇಟಿಯಾಗಿ ಮಾತನಾಡಿದ್ದು ಎಂದಿದ್ದಾರೆ.

  • ಕುಂದಾಪುರ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಕೆಡಿಪಿ ಸದಸ್ಯ ಗಂಗಾಧರ್ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಕೆಡಿಪಿ ಸದಸ್ಯ ಗಂಗಾಧರ್ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಮಾಜ ಸೇವೆ ಮುಲಕ ತನ್ನದೇ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ ಪ್ರಮಾಣಿಕ ವ್ಯಕ್ತಿ ಹೇರಿಕುದ್ರು ಗಂಗಾಧರ ಶೆಟ್ಟಿ ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.

    ಅವರು ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಅಗಲಿದ ಕಾಂಗ್ರೆಸ್ ನಾಯಕ, ಜಿಲ್ಲಾ ಕೆಡಿಪಿ ಸದಸ್ಯ ಗಂಗಾಧರ ಶೆಟ್ಟಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

    ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿರುವ ಪಕ್ಷಾತೀತ , ಬಡ ಜನರ ಮನಸ್ಸು ಗೆದ್ದ ಗಂಗಾಧರ ಶೆಟ್ಟಿ ಅವರ ಅಗಲಿಕೆ ಕುಂದಾಪುರದ ನಾಗರಿಕರಿಗೆ ತುಂಬಲಾರದ ನಷ್ಟವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ತಿಳಿಸಿದರು.

    ಕಾಂಗ್ರೆಸ್ ಮುಖಂಡರುಗಳಾದ ಮೊಳಹಳ್ಳಿ ದಿನೇಶ ಹೆಗ್ಡೆ , ಬೆಳ್ವೆ ಸತೀಶ ಕಿಣಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಪಂಚಾಯತ್ ಸದಸ್ಯ ಪ್ರಭಾಕರ ಮತ್ತು ಗ್ರಾಮಸ್ಥರಾದ ಆನಂದ ಮಾಸ್ಟರ್, ಹನೀಫ್, ಜುಲಿಯಾನ ವಿನೇಜಸ್, ಜ್ಯೋತಿ ನಾಯ್ಕ್ ನುಡಿ ನಮನ ಸಲ್ಲಿಸಿದರು. ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ಸ್ವಾಗತಿಸಿ, ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ , ಜೊಸ್ಪಿನ್ ಡಿಸೋಜಾ ವಂದಿಸಿದರು.

  • ಸದೃಢ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಮಾಡಬೇಕು : ಜಿ.ಪಂ ಸಿ.ಇ.ಓ ಪ್ರತೀಕ್ ಬಾಯಲ್

    ಸದೃಢ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ಅರ್ಹ ಮತದಾರರು ಮತದಾನ ಮಾಡಬೇಕು : ಜಿ.ಪಂ ಸಿ.ಇ.ಓ ಪ್ರತೀಕ್ ಬಾಯಲ್

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬ ಅರ್ಹ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದರೊಂದಿಗೆ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ.ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಏಪ್ರಿಲ್ 26 ರಂದು ನಡೆಯಲಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಅರ್ಹ ಪ್ರತಿಯೊಬ್ಬ ಮತದಾರರು ಮತದಾನ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಪ್ರತಿಶತ 100 ರಷ್ಟು ಮತದಾನ ಮಾಡಬೇಕು. ಮತದಾರರಲ್ಲಿ ಮತದಾನ ಕುರಿತು ವ್ಯವಸ್ಥಿತ ಶಿಕ್ಷಣದ ಅರಿವನ್ನು ಅಧಿಕಾರಿಗಳು ಪ್ರತಿಯೊಬ್ಬರಿಗೂ ಮೂಡಿಸಬೇಕು ಎಂದರು.

    ಮತದಾನ ಕೇಂದ್ರಗಳಿಗೆ ಮತದಾನಕ್ಕೆ ಬಂದಾಗ ಅವರುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಕುರಿತು ವಿಶೇಷ ಗಮನ ಹರಿಸಬೇಕು. ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಮಹಿಳೆಯರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು. ಈ ಬಾರಿ 85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಬೇಕಾಗಿದೆ. 85 ವರ್ಷ ಮೇಲ್ಪಟ್ಟ ಮತದಾರರು ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದೆ ಇರುವ ಪ್ರತಿಯೊಬ್ಬರಿಗೂ ಅವರ ವಾಸ್ತವ್ಯ ಸ್ಥಳದಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು ಎಂದರು.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇಕಡವಾರು ಮತದಾನ ಕಡಿಮೆ ಆಗಿರುವ ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಶೇಕಡವಾರು ಮತದಾನ ಹೆಚ್ಚಿಸಲು ಹಲವಾರು ಸ್ವೀಪ್ ಚಟುವಟಿಕೆ ಕಾರ್ಯಕ್ರಮಗಳನ್ನು ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮವಹಿಸಲು ವಿಶೇಷ ಕಾಳಜಿ ವಹಿಸಬೇಕು ಎಂದರು.

    ಮತದಾರರು ಯಾವುದೇ ಆಮೀಷಕ್ಕೆ ಒಳಗಾಗದೇ ನಿರ್ಭೀತರಾಗಿ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಬಿ.ಎಲ್.ಓ ಗಳು ಪ್ರತಿಯೊಬ್ಬ ಮತದಾರರಿಗೂ ಮತದಾನ ಮಾಡಲು ಅನುಕೂಲವಾಗುವ ರೀತಿಯಲ್ಲಿ ಮತದಾನ ಕ್ರಮ ಸಂಖ್ಯೆಯ ಚೀಟಿಯನ್ನು ಮನೆಮನೆಗೂ ವಿತರಿಸಬೇಕು ಎಂದ ಅವರು, ಮತದಾನ ಯಂತ್ರದ ಬಳಕೆಯ ಬಗ್ಗೆಯೂ ಅರಿವು ಮೂಡಿಸಬೇಕು ಎಂದರು.

    ಯುವ ಮತದಾರರನ್ನು ಗುರುತಿಸಿ ಅವರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಮತದಾನದ ಮಹತ್ವ ವನ್ನು ಪ್ರತಿಯೊಬ್ಬರು ತಿಳಿದುಕೊಂಡು ಮತದಾನದಲ್ಲಿ ಪಾಲ್ಗೊಳುವಂತೆ ಮಾಡಬೇಕು ಎಂದರು.

    ಜಿಲ್ಲೆಯ ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ವೆಬ್‌ಸೈಟ್ https://electoralsearch.eci.gov.in/ ಅನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿದ್ದಲ್ಲಿ ವೆಬ್‌ಸೈಟ್ https://voterportal.eci.gov.in/ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಣಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉನಿರ್ದೇಶಕಿ ಶ್ಯಾಮಲಾ ಸಿ.ಕೆ, ಕಾರ್ಮಿಕ ಇಲಾಖೆಯ ಅಧಿಕಾರಿ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಡಿ.ಡಿ.ಪಿ.ಯು ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ಜಿಲ್ಲಾಮಟ್ಟದ ಅರೇಬಿಕ್ ಧಾರ್ಮಿಕ ಪಠಣ ವಿಜೇತೆಗೆ ಗೌರವ

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ಜಿಲ್ಲಾಮಟ್ಟದ ಅರೇಬಿಕ್ ಧಾರ್ಮಿಕ ಪಠಣ ವಿಜೇತೆಗೆ ಗೌರವ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ :ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ ಇಲ್ಲಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಶುಭಶಂಸನಾ ಕಾರ್ಯಕ್ರಮ ಏರ್ಪಡಿಸಾಗಿತ್ತು.

    ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಅರೇಬಿಕ್ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ೭ನೆಯ ತರಗತಿಯ ವಿದ್ಯಾರ್ಥಿನಿ ನಿಫಾ ಅಫ್ಶಿನ್ ಅವರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೆಣೈಯವರು ಬೆಳ್ಳಿ ನಾಣ್ಯ ನೀಡಿ ಪುರಸ್ಕರಿಸಿದರು. ಈ ಸಮಾರಂಭದಲ್ಲಿ ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ರಾಗಿಣಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ, ಪ್ರಾಥಮಿಕ ಹಾಗೂ ಪೂರ್ವಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿಯರಾದ ರೇಷ್ಮಾ ಡಿಸೋಜಾ, ಶ್ರೀಮತಿ ಪ್ರಮೀಳಾ ಡಿಸೋಜಾರವರು ಉಪಸ್ಥಿತರಿದ್ದರು.

     

  • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ರಾಜ್ಯಮಟ್ಟದ ಭಾವಗೀತೆ ವಿಜೇತೆಗೆ ಗೌರವ

    ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ರಾಜ್ಯಮಟ್ಟದ ಭಾವಗೀತೆ ವಿಜೇತೆಗೆ ಗೌರವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ ಇಲ್ಲಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಶುಭಶಂಸನಾ ಕಾರ್ಯಕ್ರಮ ಏರ್ಪಡಿಸಾಗಿತ್ತು. ಈ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯ ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನ ಗಳಿಸಿದ ೯ನೆಯ ತರಗತಿಯ ವಿದ್ಯಾರ್ಥಿನಿ ಕೆ. ನವಮಿ ಭಟ್ ಅವರಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಕೆ. ರಾಧಾಕೃಷ್ಣ ಶೆಣೈಯವರು ಬೆಳ್ಳಿ ನಾಣ್ಯ ನೀಡಿ ಗೌರವಿಸಿದರು.

    ಈ ಸಮಾರಂಭದಲ್ಲಿ ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ರಾಗಿಣಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ, ಪ್ರಾಥಮಿಕ ಹಾಗೂ ಪೂರ್ವಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿಯರಾದ ರೇಷ್ಮಾ ಡಿಸೋಜಾ, ಪ್ರಮೀಳಾ ಡಿಸೋಜಾರವರು ಉಪಸ್ಥಿತರಿದ್ದರು.

  • ಕೋಟ :ಸ್ವಚ್ಛತೆಯ ಬಗ್ಗೆ ಜಾಗೃತಗೊಳ್ಳದಿದ್ದರೆ ಮುಂದಿದೆ ಆಪತ್ತು – ಹ.ರಾ.ವಿನಯಚಂದ್ರ ಸಾಸ್ತಾನ

    ಕೋಟ :ಸ್ವಚ್ಛತೆಯ ಬಗ್ಗೆ ಜಾಗೃತಗೊಳ್ಳದಿದ್ದರೆ ಮುಂದಿದೆ ಆಪತ್ತು – ಹ.ರಾ.ವಿನಯಚಂದ್ರ ಸಾಸ್ತಾನ

    ಪಂಚವರ್ಣ 200ನೇ ಭಾನುವಾರದ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ – 5ಕಿ.ಮೀ. ಬೀಚ್ ರಸ್ತೆ ಸ್ವಚ್ಛತೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪರಿಸರದ ಬಗ್ಗೆ ಈಗಲೇ ಜಾಗೃತಿಗೊಳ್ಳದಿದ್ದರೆ ಮುಂದಿದೆ ಬಹುದೊಡ್ಡ ಆಪತ್ತು ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಪರಿಸರವಾದಿ ಸಮಾಜಸೇವಕ ಹ.ರಾ ವಿನಯಚಂದ್ರ ಸಾಸ್ತಾನ ನುಡಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಸ್ತಾನ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ,ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ, ಆಶ್ರೀತ್ ಶಿಕ್ಷಣ ಸಂಸ್ಥೆಗಳು ಕೋಟ,ಲ.ಸೋ.ಬ.ಸ.ಪ್ರ ಕಾಲೇಜು ಪಡುಕರೆ, ಕೋಟ ,ಕೋಟತಟ್ಟು, ಕೋಡಿ ಗ್ರಾ.ಪಂ. ಸಾಲಿಗ್ರಾಮ ಪ.ಪಂ ಇವರುಗಳ ಸಹಯೋಗದೊಂದಿಗೆ ಪ್ರತಿ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಭಾಗವಾಗಿ 200 ವಾರಗಳ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ ಕೋಡಿ ಗ್ರಾ.ಪಂ ನಿಂದ ಕೋಟ ಗ್ರಾ.ಪಂ ವರೆಗಿನ ಬೀಚ್ ರಸ್ತೆ ತ್ಯಾಜ್ಯ ಮುಕ್ತವಾಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ ಇಂದು ಈ ನಿರ್ಲಕ್ಷ್ಯ ಮುಂದಿನ ಪೀಳಿಗೆಗೆ ಕ್ಲಿಷ್ಟಕರ ಸಮಸ್ಯೆಯಾಗಿ ಪರಿಣಮಿಸಲಿದೆ. ಪ್ರತಿ ಮನೆಮನೆಗಳಲ್ಲಿ ವಿವಿಧ ಉದ್ಯಮಗಳಲ್ಲಿ ಪ್ಲಾಸ್ಟಿಕ್ ಅತಿ ಹೆಚ್ಚು ಬಳಕೆ ಕಾಣುತ್ತಿದೆ ಈ ಮೂಲಕವೇ ಕ್ಯಾನ್ಸರ್ ನಂತಹ ಮಹಾ ಖಾಯಿಲೆಗಳು ಮನುಷ್ಯನ ಜೀವಕ್ಕೆ ಸಂಚಕಾರ ತಂದಿಡುತ್ತಿದೆ. ತಾಪಮಾನ ಹೆಚ್ಚಾಗುತ್ತಿದೆ. ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಅಳಿವಿನಂಚಿಗೆ ತಲುಪುತ್ತಿದೆ. ಇದರಿಂದ ಪರಿಸರವನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮವನ್ನು ಸಮಾಜಸೇವಕ ಗೀತಾನಂದ ಟ್ರಸ್ಟ್ ಮುಖ್ಯಸ್ಥ ಆನಂದ್ ಸಿ ಕುಂದರ್ ಉದ್ಘಾಟಿಸಿ ಪ್ಲಾಸ್ಟಿಕ್ ಮುಕ್ತ ಸಮಾಜದ ಪರಿಕಲ್ಪನೆ ಬರೇ ಸಂಘಟನೆಗಳಿಗೆ ಸಿಮೀತಗೊಳ್ಳಬಾರದು, ಅದು ಪ್ರತಿಯೊಬ್ಬರಲ್ಲೂ ಕಾಣಬೇಕು , ಪರಿಸರ ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲದರು ಆಗಬೇಕು. ಪಂಚವರ್ಣದವರ ನಿತ್ಯ ನಿರಂತರ ಪರಿಸರ ಕಾಳಜಿ ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ ಎಂದರು.

    ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಇದೇ ವೇಳೆ 75ರ ಇಳಿ ವಯಸ್ಸಿನ ಸ್ವಚ್ಛಬ್ರಿಗೇಡ್ ಕಾರ್ಕಳದ ಫಿಲಿಪ್ಸ್ ವಾಜ್ ಇವರನ್ನು ಗುರುತಿಸಿ ಗೌರವಿಸಲಾಯಿತು.

    ಮುಖ್ಯ ಅಭ್ಯಾಗತರಾಗಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ಆಶ್ರೀತ್ ಶಿಕ್ಷಣ ಸಂಸ್ಥೆ ಯ ಪ್ರಾಂಶುಪಾಲ ಮೋಹನ್ , ಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ಶಿಕ್ಷಕ, ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ದಿನೇಶ್ ಗಾಣಿಗ, ಸ್ವಚ್ಛ ಬ್ರಿಗೇಡ್ ಕಾರ್ಕಳದ ಸುನಿತಾ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸುಧಾಕರ್ ಪೂಜಾರಿ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟಗಾರ್, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಂಚಾಲಕಿ ವನೀತಾ ಉಪಾಧ್ಯ, ಪಾಂಚಜನ್ಯ ಸಂಘ ಹಂದಟ್ಟು ಪಾರಂಪಳ್ಳಿ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಜನತಾ ಸಂಸ್ಥೆ ವ್ಯವಸ್ಥಾಪಕ ಶ್ರೀನಿವಾಸ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಹಂದಟ್ಟು ಮಹಿಳಾ ಬಳಗದ ರತ್ನ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

    ಕೋಡಿ ಗ್ರಾಮಪಂಚಾಯತ್ ಪಿ.ಡಿ.ಒ ರವೀಂದ್ರ ರಾವ್ ಸ್ವಾಗತಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವನೆ ಸಲ್ಲಿಸಿ‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

    ಇದೇ ಮೊದಲ ಬಾರಿ 5 ಕೀಲೋಮಿಟರ್ ಸ್ವಚ್ಛತೆ

    ಇದೇ ಮೊದಲ ಬಾರಿ ಬೃಹತ್ ಮಟ್ಟದ ಸ್ವಚ್ಛತಾ ಅಭಿಯಾನ ಸುಮಾರು 5ಕಿಮೀ ದೂರ ಬೀಚ್ ರಸ್ತೆ ಪ್ಲಾಸ್ಟಿಕ್ ಮುಕ್ತಗೊಳಿಸುವ ಅಭಿಯಾನ ತಂಡೋಪ ತಂಡವಾಗಿ ವಿವಿಧ ಪಂಚಾಯತ್ ಪಟ್ಟಣಪಂಚಾಯತ್ ವ್ಯಾಪ್ತಿಯ ರಸ್ತೆಯಲ್ಲಿ ಸಂಚರಿಸಿ ಸ್ವಚ್ಛಗೊಳಿಸಲಾಯಿತು.

    ದಾರಿಯೂದ್ದಕ್ಕೂ ಪಾನಕ ವ್ಯವಸ್ಥೆ
    ಕೋಡಿ ಗ್ರಾ.ಪಂ ನಿಂದ ಕೋಟ ಗ್ರಾ.ಪಂ ವರೆಗಿನ ಬೀಚ್ ರಸ್ತೆಯಲ್ಲಿ ಅಲ್ಲಿನ ಸ್ಥಳೀಯರು ಆಯಾ ವ್ಯಾಪ್ತಿಯ ಪ್ರಮುಖರಾದ ಕೋಡಿ ಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ, ಗೆಳೆಯರ ಬಳಗ ಕಾರ್ಕಡ, ಕೋಟತಟ್ಟು ಶಿವಮೂರ್ತಿ ಉಪಾಧ್ಯ ಮತ್ತವರ ತಂಡದಿಂದ ಪಾನಕ ವ್ಯವಸ್ಥೆ ಕಲ್ಪಿಸಿದರು. ಕೋಡಿ ಗ್ರಾಮ ಪಂಚಾಯತ್ ಉಪಹಾರದ ವ್ಯವಸ್ಥೆ, ಗೀತಾನಂದ ಫೌಂಡೇಶನ್, ಜನತಾ ಸಂಸ್ಥೆ ಚೀಲ ಹಾಗೂ ವಾಹನದ ವ್ಯವಸ್ಥೆ ಕಲ್ಪಿಸಿತು.

  • ಕುಂದಾಪುರ :ಪಡುಕೋಣೆ ಶ್ರೀರಾಮ ದೇವಸ್ಥಾನದಲ್ಲಿ ಸೀತಾರಾಮ ಕಲ್ಯಾಣೋತ್ಸವ

    ಕುಂದಾಪುರ :ಪಡುಕೋಣೆ ಶ್ರೀರಾಮ ದೇವಸ್ಥಾನದಲ್ಲಿ ಸೀತಾರಾಮ ಕಲ್ಯಾಣೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಭಕ್ತಿಯೋಗದ ಮೂಲಕ ಸುಲಭವಾಗಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿದೆ. ಭಜನೆ, ಧ್ಯಾನ ಇವೇ ಮೊದಲಾದ ಸುಲಭ ಮಾರ್ಗಗಳ ಅನುಸರಿಸಿ ಭಗವದ್ಭಕ್ತರು ಶ್ರೀರಾಮನ ಕೃಪೆಗೆ ಪಾತ್ರರಾಗಬಹುದು. ಭಕ್ತಿಯೋಗದಿಂದ ಮನಸ್ಸಿನ ಭಾರ ದೂರವಾಗುತ್ತದೆ. ಕಷ್ಟದ ಭಾರ ಕಡಿಮೆಯಾಗುತ್ತದೆ. ದುಃಖವು ಕ್ಷಿಣಿಸುತ್ತದೆ. ಮನಸ್ಸಿನ ನಿಯಂತ್ರಣ ಸಾಧ್ಯವಾಗುತ್ತದೆ. ಭಕ್ತಿಗೆ ಇರುವ ಶಕ್ತಿ ಅಸಾಧಾರಣವಾದುದು ಎಂದು ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ಧರ್ಮಸ್ಥಳ ಇಲ್ಲಿನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

    ಪಡುಕೋಣೆ ಶ್ರೀರಾಮ ದೇವಸ್ಥಾನದಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಅವರು ಆಶಿರ್ವಚನ ನೀಡಿದರು.

    ಶ್ರದ್ಧಾಕೇಂದ್ರಗಳು ಭಕ್ತಿಯನ್ನು ಉದ್ದೀಪನಾಗೊಳಿಸುತ್ತವೆ. ಭಗವಂತನಿಗೆ ಯಾವುದೇ ಜಾತಿ, ಮತ, ಲಿಂಗಬೇಧವಿಲ್ಲ. ಆತನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಂತೆ ನಾವೆಲ್ಲರೂ ಸಮಾನತೆಯಿಂದ ಬಾಳಬೇಕು ಎಂದರು.

    ರಾಮನ ನಾಮ ನೆನೆಯುವುದರಿಂದ ಕಷ್ಟಗಳು ದೂರಾಗುತ್ತವೆ. ಭಕ್ತಿಯಿಂದ ಭಗವಂತನ ನೆನೆಪಿಸಿಕೊಂಡಾಗ ಮನಸ್ಸು, ಶರೀರಕ್ಕೆ ವಿಶೇಷ ಶಕ್ತಿ ಬರುತ್ತದೆ. ಭಕ್ತಿಯಲ್ಲಿ ಇರುವ ಶಕ್ತಿ ಅಗಾಧವಾದುದು ಎಂದು ಹೇಳಿದ ಅವರು ಅಯೋಧ್ಯೆಯಲ್ಲಿ ನಮ್ಮ ಮಠದ ಶಾಖಾ ಮಠ ತೆರೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿದ್ದೇವೆ. ಇವತ್ತು ಅಯೋಧ್ಯೆ ಸ್ವರ್ಗದಂತೆ ರಾರಾಜಿಸುತ್ತಿದೆ. ಶ್ರೀರಾಮ ಸರ್ವರಿಗೂ ಶುಭವನ್ನುಂಟು ಮಾಡಲಿ ಎಂದರು.

    ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನಂ ಧರ್ಮಸ್ಥಳ ಇಲ್ಲಿನ ಆಸ್ಥಾನ ಪುರೋಹಿತರಾದ ವೇ.ಮೂ.ಶ್ರೀ ಲಕ್ಷ್ಮೀಪತಿ ಗೋವಿಂದಾಚಾರ್ಯ ಅವರ ನೇತೃತ್ವದಲ್ಲಿ ಬೆಳಿಗ್ಗೆ 9.30ಕ್ಕೆ ಲೋಕ ಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ನಡೆಯಿತು. ಗುರುವಂದನಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

    ಈ ಸಂದರ್ಭದಲ್ಲಿ ಶ್ರೀರಾಮ ದೇವಸ್ಥಾನ ಪಡುಕೋಣೆ ಇದರ ಅಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಕಾರ್ಯದರ್ಶಿ ಕೆ.ರಾಮಚಂದ್ರ ಹೆಬ್ಬಾರ್, ಸೀತಾರಾಮ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರಾದ ಅರವಿಂದ ಪೂಜಾರಿ, ಕಾರ್ಯದರ್ಶಿ ಕಿರಣ್ ಗಾಣಿಗ ಮೊದಲಾದವರು ಉಪಸ್ತಿತರಿದ್ದರು.

  • ಕುಂದಾಪುರ :ಜಿಲ್ಲಾ ಕೆಡಿಪಿ ಸದಸ್ಯ ಗಂಗಾಧರ ಹೆಗ್ಡೆ ಆನಗಳ್ಳಿ ನಿಧನ

    ಕುಂದಾಪುರ :ಜಿಲ್ಲಾ ಕೆಡಿಪಿ ಸದಸ್ಯ ಗಂಗಾಧರ ಹೆಗ್ಡೆ ಆನಗಳ್ಳಿ ನಿಧನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕುಂದಾಪುರ ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ, ಉಡುಪಿ ಜಿಲ್ಲಾ ಕೆಡಿಪಿ ಸದಸ್ಯ, ಹೇರಿಕುದ್ರು ಗಂಗಾಧರ ಶೆಟ್ಟಿ ಅವರು ಶುಕ್ರವಾರ ರಾತ್ರಿ ನಿಧನರಾದರು.

    ಕೆಲವು ದಿನಗಳ ಹಿಂದೆ ಗಂಗಾಧರ ಶೆಟ್ಟಿಯವರಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ 9:57 ಸುಮಾರಿಗೆ ಚಿಕಿತ್ಸೆ ಪದಕಾರಿಯಾಗದೆ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಶನಿವಾರ ಬೆಳಿಗ್ಗೆ ಅವರ ಹೇರಿಕುದ್ರು ಸ್ವಗೃಹದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುವುದು ಇಂದು ಕುಟುಂಬ ಮೂಲಗಳು ತಿಳಿಸಿವೆ.

  • ಕುಂದಾಪುರ :ಕೆಪಿಎಸ್ ಕೊಟೇಶ್ವರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಅಣುಕು ಪರೀಕ್ಷೆ

    ಕುಂದಾಪುರ :ಕೆಪಿಎಸ್ ಕೊಟೇಶ್ವರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಅಣುಕು ಪರೀಕ್ಷೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಟೇಶ್ವರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಅಣಕು ವಾರ್ಷಿಕ ಪರೀಕ್ಷೆ ನಡೆಸಲಾಯಿತು. ಸುಮಾರು 10 ಶಾಲೆಗಳಿಂದ 464 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು, ವಿಜ್ಞಾನ ವಿಷಯದ ಪರೀಕ್ಷೆಯನ್ನು ನಡೆಸಲಾಯಿತು. ಉಪನಿರ್ದೇಶಕರ ವಿಶೇಷ ಕಾಳಜಿಯೊಂದಿಗೆ ಈ ಬಾರಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಭಯ ಮುಕ್ತ ಪರೀಕ್ಷೆ ಯ ವಾತಾವರಣವನ್ನು ನಿರ್ಮಿಸುವ ಮತ್ತು ಪರೀಕ್ಷಾ ಕೇಂದ್ರದ ಪರಿಚಯ ಈ ಎರಡು ಮೂಲ ಮುಖ್ಯ ಉದ್ದೇಶದಿಂದ ಈ ಪರೀಕ್ಷೆಯನ್ನು ನಡೆಸಲಾಯಿತು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ಮತ್ತು ಶಿಕ್ಷಕ ವೃಂದದವರು ಯಶಸ್ವಿಯಾಗಿ ಅಣುಕು ಪರೀಕ್ಷೆಯನ್ನು ನಡೆಸಿಕೊಟ್ಟರು.

  • ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕನಿಗೆ ಬೆಳ್ಳಿರಥ ಅರ್ಪಣೆ

    ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕನಿಗೆ ಬೆಳ್ಳಿರಥ ಅರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬ್ರಹ್ಮರಥ, ಬೆಳ್ಳಿರಥದಂತಹ ಸಮರ್ಪಣೆ ಮೂಲಕ ನಾವು ದೇವರನ್ನು ಆರಾಧಿಸಲು ಸಾಧ್ಯವಾಗುತ್ತದೆ. ಮೂಲಕ ಭಕ್ತಿಯನ್ನು ಪ್ರಕಟಿಸುತ್ತೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

    ಬುಧವಾರ ಹಟ್ಟಿಯಂಗಡಿಯ ಶ್ರೀ ಸಿದ್ದಿ ವಿನಾಯಕ ದೇವರ ನೂತನ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ ಸಂದರ್ಭ ಬೆಳ್ಳಿರಥ ಸಮರ್ಪಣೆ ಮಾಡಿ ಮಾತನಾಡಿದರು.

    ಶ್ರೀ ಶೃಂಗೇರಿ ಶಾರದಾ ಪೀಠದ ಕಿರಿಯ ಯತಿಗಳಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರಿಂದ ನೂತನ ದೇಗುಲ ಲೋಕಾರ್ಪಣೆ ನಡೆಯಿತು.

    ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿ, ಭಕ್ತ ಮತ್ತು ಭಗವಂತನ ನಡುವಿನ ಅನುಸಂಧಾನವೇ ಆರಾಧನೆ. ಆರಾಧನೆಯ ಪರಾಕಾಷ್ಠೆಯಲ್ಲಿ ದೇವರ ಅನುಭವವಾಗುತ್ತದೆ ಎಂದರು.

    ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪ ಸಾಗರ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಉದ್ಯಮಿಗಳಾದ ಆನಂದ ಸಿ. ಕುಂದರ್ ಕೋಟ, ಸುಬ್ಬ ರಾವ್ ಬೆಂಗಳೂರು, ಬಗ್ವಾಡಿ ಮಹಿಷಮರ್ದಿನಿ ದೇಗುಲದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಮೊಗವೀರ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ರಮಾದೇವಿ ರಾಮಚಂದ್ರ ಭಟ್, ವಿಶ್ರಾಂತ ಉಪನ್ಯಾಸಕ ಡಾ| ವಿ. ರಾಮಕೃಷ್ಣ ಭಟ್ ಕಾಲಟಿ, ಶ್ರೀ ಸಿದ್ದಿ ಶೈಕ್ಷಣಿಕ ಟ್ರಸ್ಟ್ ಕಾರ್ಯದರ್ಶಿ ಶರಣಕುಮಾರ ಉಪಸ್ಥಿತರಿದ್ದರು. ಹಟ್ಟಿಯಂಗಡಿ ದೇಗುಲದ ಧರ್ಮದರ್ಶಿ ಎಚ್. ಬಾಲಚಂದ್ರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಹೇಶ್ ದೇವಾಡಿಗ ಹಟ್ಟಿಯಂಗಡಿ ವಂದಿಸಿದರು. ರಜತರಥ ಶಿಲ್ಪಿ ಸುಧಾಕರ ಡೋಂಗ್ರೆ ಮಾಳ, ಜೀರ್ಣೋದ್ದಾರದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ ನಾಗರಾಜ ತಂತ್ರಿ, ಸತೀಶ್, ಸತೀಶ್ ಪೂಜಾರಿ, ಉಮೇಶ ಮೇಸ್ತ, ನರಸಿಂಹ ಆಚಾರ್ಯ, ಚಂದ್ರಯ್ಯ ಆಚಾರ್ಯ ಕಳಿ, ಸುಬ್ರಾಯ ಆಚಾರ್ಯ ಅವರನ್ನು ಗೌರವಿಸಲಾಯಿತು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಜನ ಪರಿಷತ್, ಜನಜಾಗೃತಿ ವೇದಿಕೆ, ಸ್ವಸಹಾಯ ಸಂಘಗಳ ಒಕ್ಕೂಟ, ಕೆಂಚನೂರು ರಾಮೇಶ್ವರ ದೇವಸ್ಥಾನ, ಹರ್ಕೂರು ಮಹಾಗಣಪತಿ ದೇವಸ್ಥಾನ, ಕೊಠಾರಿ ಸಮಾಜ ಸಂಘ ಮೊದಲಾದವರು ಡಾ। ಹೆಗ್ಗಡೆಯವರನ್ನು ಸನ್ಮಾನಿಸಿದರು.