ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಮಾಜ ಸೇವೆ ಮುಲಕ ತನ್ನದೇ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ ಪ್ರಮಾಣಿಕ ವ್ಯಕ್ತಿ ಹೇರಿಕುದ್ರು ಗಂಗಾಧರ ಶೆಟ್ಟಿ ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.
ಅವರು ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಅಗಲಿದ ಕಾಂಗ್ರೆಸ್ ನಾಯಕ, ಜಿಲ್ಲಾ ಕೆಡಿಪಿ ಸದಸ್ಯ ಗಂಗಾಧರ ಶೆಟ್ಟಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿರುವ ಪಕ್ಷಾತೀತ , ಬಡ ಜನರ ಮನಸ್ಸು ಗೆದ್ದ ಗಂಗಾಧರ ಶೆಟ್ಟಿ ಅವರ ಅಗಲಿಕೆ ಕುಂದಾಪುರದ ನಾಗರಿಕರಿಗೆ ತುಂಬಲಾರದ ನಷ್ಟವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡರುಗಳಾದ ಮೊಳಹಳ್ಳಿ ದಿನೇಶ ಹೆಗ್ಡೆ , ಬೆಳ್ವೆ ಸತೀಶ ಕಿಣಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಪಂಚಾಯತ್ ಸದಸ್ಯ ಪ್ರಭಾಕರ ಮತ್ತು ಗ್ರಾಮಸ್ಥರಾದ ಆನಂದ ಮಾಸ್ಟರ್, ಹನೀಫ್, ಜುಲಿಯಾನ ವಿನೇಜಸ್, ಜ್ಯೋತಿ ನಾಯ್ಕ್ ನುಡಿ ನಮನ ಸಲ್ಲಿಸಿದರು. ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ಸ್ವಾಗತಿಸಿ, ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ , ಜೊಸ್ಪಿನ್ ಡಿಸೋಜಾ ವಂದಿಸಿದರು.











