ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬ್ರಹ್ಮರಥ, ಬೆಳ್ಳಿರಥದಂತಹ ಸಮರ್ಪಣೆ ಮೂಲಕ ನಾವು ದೇವರನ್ನು ಆರಾಧಿಸಲು ಸಾಧ್ಯವಾಗುತ್ತದೆ. ಮೂಲಕ ಭಕ್ತಿಯನ್ನು ಪ್ರಕಟಿಸುತ್ತೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ। ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಬುಧವಾರ ಹಟ್ಟಿಯಂಗಡಿಯ ಶ್ರೀ ಸಿದ್ದಿ ವಿನಾಯಕ ದೇವರ ನೂತನ ಶಿಲಾಮಯ ದೇವಸ್ಥಾನದ ಲೋಕಾರ್ಪಣೆ ಸಂದರ್ಭ ಬೆಳ್ಳಿರಥ ಸಮರ್ಪಣೆ ಮಾಡಿ ಮಾತನಾಡಿದರು.
ಶ್ರೀ ಶೃಂಗೇರಿ ಶಾರದಾ ಪೀಠದ ಕಿರಿಯ ಯತಿಗಳಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರಿಂದ ನೂತನ ದೇಗುಲ ಲೋಕಾರ್ಪಣೆ ನಡೆಯಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿ, ಭಕ್ತ ಮತ್ತು ಭಗವಂತನ ನಡುವಿನ ಅನುಸಂಧಾನವೇ ಆರಾಧನೆ. ಆರಾಧನೆಯ ಪರಾಕಾಷ್ಠೆಯಲ್ಲಿ ದೇವರ ಅನುಭವವಾಗುತ್ತದೆ ಎಂದರು.
ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪ ಸಾಗರ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಉದ್ಯಮಿಗಳಾದ ಆನಂದ ಸಿ. ಕುಂದರ್ ಕೋಟ, ಸುಬ್ಬ ರಾವ್ ಬೆಂಗಳೂರು, ಬಗ್ವಾಡಿ ಮಹಿಷಮರ್ದಿನಿ ದೇಗುಲದ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಮೊಗವೀರ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷೆ ರಮಾದೇವಿ ರಾಮಚಂದ್ರ ಭಟ್, ವಿಶ್ರಾಂತ ಉಪನ್ಯಾಸಕ ಡಾ| ವಿ. ರಾಮಕೃಷ್ಣ ಭಟ್ ಕಾಲಟಿ, ಶ್ರೀ ಸಿದ್ದಿ ಶೈಕ್ಷಣಿಕ ಟ್ರಸ್ಟ್ ಕಾರ್ಯದರ್ಶಿ ಶರಣಕುಮಾರ ಉಪಸ್ಥಿತರಿದ್ದರು. ಹಟ್ಟಿಯಂಗಡಿ ದೇಗುಲದ ಧರ್ಮದರ್ಶಿ ಎಚ್. ಬಾಲಚಂದ್ರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಮಹೇಶ್ ದೇವಾಡಿಗ ಹಟ್ಟಿಯಂಗಡಿ ವಂದಿಸಿದರು. ರಜತರಥ ಶಿಲ್ಪಿ ಸುಧಾಕರ ಡೋಂಗ್ರೆ ಮಾಳ, ಜೀರ್ಣೋದ್ದಾರದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದ ನಾಗರಾಜ ತಂತ್ರಿ, ಸತೀಶ್, ಸತೀಶ್ ಪೂಜಾರಿ, ಉಮೇಶ ಮೇಸ್ತ, ನರಸಿಂಹ ಆಚಾರ್ಯ, ಚಂದ್ರಯ್ಯ ಆಚಾರ್ಯ ಕಳಿ, ಸುಬ್ರಾಯ ಆಚಾರ್ಯ ಅವರನ್ನು ಗೌರವಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಜನ ಪರಿಷತ್, ಜನಜಾಗೃತಿ ವೇದಿಕೆ, ಸ್ವಸಹಾಯ ಸಂಘಗಳ ಒಕ್ಕೂಟ, ಕೆಂಚನೂರು ರಾಮೇಶ್ವರ ದೇವಸ್ಥಾನ, ಹರ್ಕೂರು ಮಹಾಗಣಪತಿ ದೇವಸ್ಥಾನ, ಕೊಠಾರಿ ಸಮಾಜ ಸಂಘ ಮೊದಲಾದವರು ಡಾ। ಹೆಗ್ಗಡೆಯವರನ್ನು ಸನ್ಮಾನಿಸಿದರು.











