Category: ಸುದ್ದಿ

  • ಕುಂದಾಪುರ :ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿ – ಆಂಟೊನಿ ಎಸ್ ಮರಿಯಪ್ಪ ಐಎಫ್.ಎಸ್.

    ಕುಂದಾಪುರ :ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿ – ಆಂಟೊನಿ ಎಸ್ ಮರಿಯಪ್ಪ ಐಎಫ್.ಎಸ್.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ವಿದ್ಯಾರ್ಥಿಗಳು ಯಾವ ರೀತಿಯ ಪ್ರತಿಭೆಗಳನ್ನು ಹೊಂದಿದ್ದಾರೆಯೋ ಅದಕ್ಕೆ ಪೂರಕವಾದ ಚಟುವಟಿಕೆಗಳ ಮೂಲಕ ಬೆಳೆಯುವುದಕ್ಕೆ ಪೋಷಕರು ಮತ್ತು ಶಿಕ್ಷಕರು ಹುರಿದುಂಬಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಡೆಪ್ಯುಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ ಆಂಟೊನಿ ಎಸ್ ಮರಿಯಪ್ಪ ಐಎಫ್.ಎಸ್.ಹೇಳಿದರು.

    ಕುಂದಾಪುರದ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸುಜ್ಜಾನ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಎಜ್ಯುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಭರತ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಲಿಟ್ಲ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ವರದಿ ವಾಚಿಸಿದರು. ಬಳಿಕ ಬಹುಮಾನ ವಿತರಣೆ ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿ ದೀಕ್ಷಾ ಸ್ವಾಗತಿಸಿ, ರಶ್ಮೀತಾ ವಂದಿಸಿದರು.

  • ಕುಂದಾಪುರ ಬೆಸೆಯಲಿ ಅಯೋಧ್ಯೆ ಜೊತೆಗೆ – ಗಣೇಶ್ ಪುತ್ರನ್ ಮನವಿ

    ಕುಂದಾಪುರ ಬೆಸೆಯಲಿ ಅಯೋಧ್ಯೆ ಜೊತೆಗೆ – ಗಣೇಶ್ ಪುತ್ರನ್ ಮನವಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಶತಕೋಟಿ ಭಾರತೀಯರ ಶತಮಾನಗಳ ಕನಸು ಅಯೋಧ್ಯೆಯ ಶ್ರೀ ರಾಮ ಮಂದಿರ ಇದೀಗ ರಾಷ್ಟ್ರಕ್ಕೆ ಸಮರ್ಪಣೆಯಾಗುತ್ತಿರುವ ಈ ಸಂದರ್ಭದಲ್ಲಿ ನೇರ ರೈಲು ಸಂಪರ್ಕದ ಮೂಲಕ ಕುಂದಾಪುರವನ್ನು ಅಯೋಧ್ಯೆ ಜೊತೆಗೆ ಬೆಸೆಯುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಕ್ರಮ ವಹಿಸಬೇಕು ಎಂದು ಕುಮದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗಣೇಶ್ ಪುತ್ರನ್ ಹೇಳಿದ್ದಾರೆ.

    ಅಯೋಧ್ಯೆಯನ್ನು ದೇಶದ ಮೂಲೆ ಮೇಲೆಗಳ ಜೊತೆಗೆ ನೇರವಾಗಿ ಬೆಸೆಯಲು ಇರುವ ಸಾಧ್ಯತೆಗಳೆಂದರೆ ರೈಲು ಮತ್ತು ವಿಮಾನ. ಅದರಲ್ಲಿಯೂ ರೈಲ್ವೇ ಸಂಪರ್ಕದ ಮೂಲಕ ಸಂಪರ್ಕಿಸಲು ಕಾರ್ಯಾರಂಭವಾಗಿದೆ. ಇತ್ತ ಈ ಹಿಂದಿನಿಂದಲೂ ಪವಿತ್ರ ತಾಣಗಳಾದ ಪ್ರಯಾಗ, ಕಾಶಿ, ಅಯೋದ್ಯೆ , ಹರಿದ್ವಾರ ಸೇರಿದಂತೆ ಎಲ್ಲಾ ತಾಣಗಳಿಗೂ ಕುಂದಾಪುರ ಮೂಲಕ ರೈಲು ಆರಂಭಿಸಿ ಎನ್ನುವ ಕುಂದಾಪುರ ರೈಲ್ವೇ ಸಮಿತಿಯ ಹೋರಾಟ ನಡೆಯುತ್ತಿದೆ.

    ಇದೀಗ ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗುವ ಹೊತ್ತಲ್ಲೇ ಮಂಗಳೂರು ಉಡುಪಿ ಕುಂದಾಪುರ ಮೂಲಕ ನೇರ ರೈಲು ಸೇವೆ ಆರಂಭಿಸಿ ಎಂದು ಕುಂದಾಪುರ ರೈಲ್ವೇ ಸಮಿತಿಯು ಕೊಂಕಣ ರೈಲ್ವೇ, ಉಡುಪಿ ಸಂಸದರು ಹಾಗು ರೈಲ್ವೇ ಸಚಿವರಿಗೆ ಮನವಿ ನೀಡಿದೆ. ಮಂಗಳೂರು ರೈಲು ನಿಲ್ದಾಣ ಮೇಲ್ದರ್ಜೆಗೆ ಏರುತಿದ್ದು ಹೊಸ ರೈಲುಗಳನ್ನು ಆರಂಭಿಸಲು ಸರ್ವ ಸನ್ನದ್ದವಾಗಿದೆ. ಕೊಂಕಣ ರೈಲ್ವೆ ಇದುವರೆಗೂ ಹೊಸ ರೈಲು ಆರಂಭಿಸಿ ಎನ್ನುವ ಮನವಿ ಈಡೇರಿಸದೇ ಇರಲು ಪ್ಲಾಟ್ ಪಾರಂ ಸಮಸ್ಯೆ ಹೇಳುತಿದ್ದು ಈ ಸಮಸ್ಯೆ ಈಗ ಪರಿಹಾರಗೊಂಡಿದೆ. ಹೀಗಾಗಿ ರೈಲು ಆರಂಭಿಸಿ ಭಾರತೀಯರ ಭಾವನೆಗಳನ್ನು ಗೌರವಿಸುವಂತೆ ಸಮಿತಿ ಕೋರಿದೆ. ಒಂದೊಮ್ಮೆ ಅಯೊದ್ಯೆ ಮಂಗಳೂರು ರೈಲು ಆರಂಭವಾದರೆ ಹಿಂದೂಗಳ ಪವಿತ್ರ ಸ್ಥಳಗಳಾದ ಕಾಶಿ, ಪ್ರಯಾಗ್ ಕೂಡಾ ಕುಂದಾಪುರದ ಜತೆ ಸಂಪರ್ಕಿಸಲ್ಪಡುತ್ತದೆ ಎಂದು ಗಣೇಶ್ ಪುತ್ರನ್ ಮನವಿ ಮಾಡಿದ್ದಾರೆ.

  • ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ಪೂರ್ವಿ ಟೆನ್ನಿಕೋಯಿಟ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

    ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ಪೂರ್ವಿ ಟೆನ್ನಿಕೋಯಿಟ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೊಡಗು ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಕೋಯಿಟ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೂರ್ವಿ ಉಡುಪಿ ಜಿಲ್ಲೆಯ ತಂಡವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

  • ಕುಂದಾಪುರ :ಕೆ ಪಿ ಎಸ್ ಕೋಟೇಶ್ವರ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ವೈಭವ

    ಕುಂದಾಪುರ :ಕೆ ಪಿ ಎಸ್ ಕೋಟೇಶ್ವರ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ವೈಭವ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಕೊಟೇಶ್ವರ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಗದೀಶ್ ಮೊಗವೀರ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡು ಸಾಗಬೇಕು ಬದುಕಿಗೆ ಮೂರೇ ದಿನ ಇಂದು-ನಿನ್ನೆ-ನಾಳೆ, ನಾವು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸಬೇಕು. ನಿರಂತರ ಕಲಿಕಾ ಪ್ರಕ್ರಿಯೆಯು ಜೀವನದ ಸಾರ್ಥಕ್ಯವನ್ನು ಕಂಡುಕೊಳ್ಳುತ್ತದೆ ಎಂದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾರದ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ರಾಧಾಕೃಷ್ಣ ಶೆಟ್ಟಿ ವಿವಿಧ ವಿಭಾಗಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನವು ಅಮೂಲ್ಯವಾಗಿದ್ದು, ನಿತ್ಯ ಪರಿಶ್ರಮ, ಶ್ರದ್ದೆಯಿಂದ ವಿದ್ಯಾಭ್ಯಾಸ ಮಾಡಿದಾಗ ವಿಶಿಷ್ಟ ಸಾಧನೆ ಮಾಡಲು ಸಾಧ್ಯ. ಅನೇಕ ಸಾಧಕರ ಜೀವನಕ್ರಮ ನಮಗೆ ಮಾದರಿಯಾಗಬೇಕು. ಹೆತ್ತವರು ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಗೆ ಪ್ರೋತ್ಸಾಹ ನೀಡಬೇಕು ಎಂದರು.

    ಕಾರ್ಯಕ್ರಮದ ಅಧ್ಯಕ್ಷೆಯನ್ನು ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ವಹಿಸಿದ್ದು, ವರ್ಷದ ಶಾಲಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು ಪ್ರಾಂಶುಪಾಲರಾದ ಸುಶೀಲ ಹೊಳ್ಳ ಮತ್ತು ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ವಿಶ್ವನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ಅಟಲ್ ಮ್ಯಾರಥಾನ್ 2022-23 ರಾಷ್ಟ್ರಮಟ್ಟದ ಮಾಡೆಲ್ ತಯಾರಿ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಆರನೇ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ವಿಭಾಗದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಸಾಕೆತ್ ರಂಜನ್ ಪೈ ಹಾಗೂ ಗಗನ್ ಇವರನ್ನು ಗುರುತಿಸಿ ಗೌರವಿಸಲಾಯಿತು.

    ಸಾಂಸ್ಕೃತಿಕ ಸ್ಪರ್ಧಾ ವಿಜೇತರ ಪಟ್ಟಿಯನ್ನು ಅನುರಾಧ ಮತ್ತು ಸುಧಾಭಾಯಿ ಭಾಷಾ ಹಸನ್ ಸಾಬ್ ಕ್ರೀಡಾ ವಿಭಾಗದ ವಿಜೇತರ ಪಟ್ಟಿಯನ್ನು ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ ಹಾಗೆ ದತ್ತಿನಿಧಿ ಹಾಗೂ ವಿದ್ಯಾರ್ಥಿ ಕ್ಷೇಮ ನಿಧಿ ಬಹುಮಾನಗಳ ಪಟ್ಟಿಯನ್ನು ಜಯಶ್ರೀ ಗಣೇಶ್ ಭಟ್ ಮತ್ತು ಸಂಧ್ಯಾ ವಾಚಿಸಿದರು.

    ದಿವ್ಯ ಪ್ರಭಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ಬಾಬು ಶೆಟ್ಟಿ ಸ್ವಾಗತಿಸಿ ಶ್ರೀಕಾಂತ್ ವಂದಿಸಿದರು.

  • ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳು ಕಲೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :2023ರ ಕಲೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಇನ್ವಿತಾ ಖಾರ್ವಿ ಚಿತ್ರ ಕಲೆಯಲ್ಲಿ, ಧಾರಿಣಿ ಕೆ. ಎಸ್ ಶಾಸ್ತ್ರೀಯ ಸಂಗೀತದಲ್ಲಿ, ಸೃಜನ್ ಎಸ್ ದೇವಾಡಿಗ ಜಾನಪದ ಗೀತೆ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

  • ಕುಂದಾಪುರ :ಮೂರು ಮುತ್ತು ಖ್ಯಾತಿಯ ನಟ ಅಶೋಕ್ ಶ್ಯಾನುಭಾಗ್ ನಿಧನ

    ಕುಂದಾಪುರ :ಮೂರು ಮುತ್ತು ಖ್ಯಾತಿಯ ನಟ ಅಶೋಕ್ ಶ್ಯಾನುಭಾಗ್ ನಿಧನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಹಿರಿಯ ರಂಗಭೂಮಿ ಕಲಾವಿದ, ರೂಪಕಲಾ ಕುಂದಾಪುರ ಸಂಸ್ಥೆಯ ಮೂರು ಮುತ್ತು ಖ್ಯಾತಿಯ ನಟ ಅಶೋಕ್ ಶ್ಯಾನುಭಾಗ್ (54ವರ್ಷ) ಅಲ್ಪಕಾಲದ ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ.

    ಕುಂದಾಪುರದ ಪಟ್ಟಣ್ ಶೇಟ್, ಹುಲಿಮನೆ ದಿ.ನಾರಾಯಣ ಶ್ಯಾನುಭೋಗ್ ಹಾಗೂ ದಿ. ಕಸ್ತೂರಿ ಶ್ಯಾನುಭಾಗ್ ಅವರ ಪುತ್ರ ಅಶೋಕ್ ಶ್ಯಾನುಭೋಗ್ ಅವರು 1979ರಲ್ಲಿ ರೂಪಕಲಾ ಸಂಸ್ಥೆಯಲ್ಲಿ ಬಾಲ ಕಲಾವಿದರಾಗಿ ಸತ್ಯ ಹರಿಶ್ಚಂದ್ರ, ಟಿಪ್ಪು ಸುಲ್ತಾನ್ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಓದಿನ ಬಳಿಕ ನಿರಂತರವಾಗಿ ರಂಗಭೂಮಿ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು.

    ಸ್ವ ಉದ್ಯೋಗ ಮಾಡಿಕೊಂಡಿದ್ದ ಅಶೋಕ್ ಅವರು ನಾಟಕವನ್ನೇ ಬದುಕಿನ ಭಾಗವಾಗಿಸಿಕೊಂಡಿದ್ದರು. ರೂಪಕಲಾ ಸಂಸ್ಥೆಯ ದಿ. ಬಾಲಕೃಷ್ಣ ಪೈ (ಕುಳ್ಳಪ್ಪು) ಅವರ ನೆಚ್ಚಿನ ಶಿಷ್ಯರಾಗಿದ್ದ ಅವರು ಕುಳ್ಳಪ್ಪು ಅವರ 53 ನಾಟಕಗಳಲ್ಲಿ ಹಾಗೂ ಸತೀಶ್ ಪೈ ಅವರ 11 ನಾಟಕ ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೂಪಕಲಾ ಸಂಸ್ಥೆಯ ನಾಟಕಗಳು ಕನ್ನಡ ಮತ್ತು ಕೊಂಕಣಿಯಲ್ಲಿ ಏಳು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದ್ದವು.

  • ಡಿ.9ರಂದು ಕೋಟ ಗ್ರಾ.ಪಂನಲ್ಲಿ ಬಂಜೆತನದ ಬಗ್ಗೆ ಉಚಿತ ಮಾಹಿತಿ ,ತಪಾಸಣಾ ಶಿಬಿರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಮತ್ತು ಕೋಟ ಗ್ರಾಮಪಂಚಾಯತ್ ನೇತ್ರತ್ವದಲ್ಲಿ ಸ್ನೇಹಕೂಟ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಹಯೋಗದೊಂದಿಗೆ ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಸಾದರ ಪಡಿಸುವ ಬಂಜೆತನದ ಬಗ್ಗೆ ಉಚಿತ ಮಾಹಿತಿ, ತಪಾಸಣಾ ಶಿಬಿರ ಕಾರ್ಯಕ್ರಮ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಶನಿವಾರ ಡಿ.9ರಂದು ಪೂರ್ವಾಹ್ನ 10 ಕ್ಕೆ ಪ್ರಸಿದ್ಧ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಅಗತ್ಯವಾಗಿ ಇದರ ಪ್ರಯೋಜನ ಪಡೆಯಲು ಈ ಮೂಲಕ ಸಂಘಟಕರು ತಿಳಿಸಿದ್ದಾರೆ.

  • ಕೋಟ :ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ವಿಶ್ವೇಶ್ವರ ಭಟ್ ಆಯ್ಕೆ

    ಕೋಟ :ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ವಿಶ್ವೇಶ್ವರ ಭಟ್ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ, ಹಿರಿಯ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿಯವ ಹೆಸರಿನಲ್ಲಿ ಕೊಡಮಾಡುವ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಆಯ್ಕೆ ಮಾಡಿದ್ದಾರೆ.

    ಡಿ.17ರಂದು ಬೆಳಗ್ಗೆ 10ಗಂಟೆಗೆ ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಬಿ.ಸಿ.ಹೊಳ್ಳ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದ್ದು, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾತನಾಡಲಿದ್ದಾರೆ. ಪತ್ರಕರ್ತ ಜೋಗಿ ಅಭಿನಂದನಾ ಮಾತನಾಡಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

  • ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮ

    ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ಒಂದು ಲೋಡು ಒಣಹುಲ್ಲನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಅರವಿಂದ ಶರ್ಮರ ಮನೆಯಿಂದ ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.

    ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಅರವಿಂದ ಶರ್ಮ ಗೋವಿಗಾಗಿ ಮೇವು ವಿಷಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಬಾಲಕೃಷ್ಣ ಪೂಜಾರಿ, ರತ್ನ ಜೆ.ರಾಜ್, ಕೃಷ್ಣ ಆಚಾರ್ , ಮಹಾದೇವ ಸುವರ್ಣ ಉಪಸ್ಥಿತರಿದ್ದರು.

     

  • ಕೋಟ – ಅಂಚೆ ಜನಸಂಪರ್ಕ ಅಭಿಯಾನ ಬೃಹತ್ ಆಧಾರ್ ಮೇಳ

    ಕೋಟ – ಅಂಚೆ ಜನಸಂಪರ್ಕ ಅಭಿಯಾನ ಬೃಹತ್ ಆಧಾರ್ ಮೇಳ

    ಸಂಘಟನೆಗಳು ಸಾಮಾಜಿಕ ಕಾರ್ಯಕ್ಕೆ ತುಡಿಯಬೇಕು – ಆನಂದ್ ಸಿ ಕುಂದರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಸಂಘಸಂಸ್ಥೆಗಳು ಸದಾ ಸಾಮಾಜಿಕ ಕಾರ್ಯದಲ್ಲಿ ತುಡಿಯಬೇಕು ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.

    ಬುಧವಾರ ಭಾರತೀಯ ಅಂಚೆ ಇಲಾಖೆ ಉಡುಪಿ, ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ಕೋಟ ಗ್ರಾಮಪಂಚಾಯತ್ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಸಹಯೋಗದೊಂದಿಗೆ ಅಂಚೆ ಜನಸಂಪರ್ಕ ಅಭಿಯಾನ ಬೃಹತ್ ಆಧಾರ್ ಮೇಳ, ಮತದಾರರ ಗುರುತಿಚೀಟಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಮಸ್ಯೆಗಳ ತಿದ್ದುಪಡಿ ಅಭಿಯಾನಕಾರ್ಯಕ್ರಮದಲ್ಲಿ ಮಾತನಾಡಿ ಪಂಚವರ್ಣ ಸಂಸ್ಥೆ ಕ್ರೀಯಾಶೀಲ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ, ಗ್ರಾಮ ಆಡಳಿತವನ್ನು ವಿಶ್ವಾಸಕ್ಕೆ ಪಡೆದು ಅದರಂತೆ ಸಾಮಾಜಮುಖಿ ಕಾರ್ಯದಲ್ಲಿ ನಿರತರಾಗುತ್ತಿರುವುದನ್ನು ಪ್ರಶಂಸಿದರು.

    ಭಾರತೀಯ ಅಂಚೆ ಇಲಾಖೆ ಉಡುಪಿ ಇದರ ಅಧೀಕ್ಷಕ ರಮೇಶ್ ಪ್ರಭು ಮಾತನಾಡಿ ಅಂಚೆ ಇಲಾಖೆ ಹಿಂದೆ ಇದ್ದ ವ್ಯವಸ್ಥೆಗೂ ಇಂದು ನೀಡುತ್ತಿರುವ ಸೇವೆ ಜನಮಾನದಲ್ಲಿ ಉಳಿದುಕೊಂಡಿದೆ, ಪ್ರತಿ ಸೌಲಭ್ಯಗಳನ್ನು ಮನೆ ಮನೆಗೆತಲುಪಿಸುವ ಕಾರ್ಯದಲ್ಲಿ ನಿರತರಾಗಿದೆ, ಜನಸಾಮಾನ್ಯ ಬಹುಮುಖ್ಯವಾದ ಆಧಾರ ತಿದ್ದುಪಡಿ ಇನ್ನಿತರ ಯೋಜನೆಗಳಿಗೆ ಸದಾ ಸ್ಪಂದಿಸುವ ಅಂಚೆ ಇಲಾಖೆ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

    ಸಭೆಯ ಅಧ್ಯಕ್ಷತೆಯನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕುಂದಾಪುರ ಅಂಚೆ ಇಲಾಖೆಯ ದಕ್ಷಿಣ ವಿಭಾಗದ ರಾಮಚಂದ್ರ, ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ದೇವಾಡಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ ಪೈ, ಕೋಟ ಗ್ರಾಮಲೆಕ್ಕಿಗ ರಾಘವೇಂದ್ರ ಹಕ್ಲಾಡಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಕೋಟ ಅಂಚೆ ಕಛೇರಿಯ ಪೋಸ್ಟಮಾಸ್ಟರ್ ಜಯಪ್ರಕಾಶ್ , ಸಿಬ್ಬಂದಿವರ್ಗ ಮತ್ತಿತರ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಭಿಯಾನದಲ್ಲಿ 200ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದರು.