Category: ಸುದ್ದಿ

  • ಕುಂದಾಪುರ :ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.

    ಕುಂದಾಪುರ :ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ; ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ,ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಕೇದಾರ್ ಮರವಂತೆ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಶ್ರುತಿಕಾ ಶೆಟ್ಟಿ ಕನ್ನಡ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ರಕ್ಷಿತಾ ಭಟ್ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ಶ್ರದ್ಧಾ ಮೊಗವೀರ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

    ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಸಾಲಿಗ್ರಾಮ ದೇಗುಲದಲ್ಲಿ ಮಹಾ ಮೂಡುಗಣಪತಿ ಸೇವೆ

    ಸಾಲಿಗ್ರಾಮ ದೇಗುಲದಲ್ಲಿ ಮಹಾ ಮೂಡುಗಣಪತಿ ಸೇವೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದಲ್ಲಿ ನ. 27ರ ಸೋಮವಾರ ಸಂಜೆ ಪಾರಂಪರಿಕ ಮಹಾ ಮೂಡು ಗಣಪತಿ ಸೇವೆಯನ್ನು ಕೋಟ ಮಾಗಣೆಯ ಹದಿನಾಲ್ಕು ಗ್ರಾಮಗಳ ಮೊಕ್ತೇಸರರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.

    ಶ್ರೀ ಗುರುನರಸಿಂಹ ದೇವರಿಗೆ ಸಹಸ್ರ ನಾರಿಕೇಳ ಮತ್ತು ಪರಿವಾರ ದೇವತೆಗಳಾದ ಮಹಾ ಗಣಪತಿ, ದುರ್ಗಾಪರಮೇಶ್ವರಿ ಮತ್ತು ನಾಗದೇವರಿಗೆ ಕಟ್ಟು ಕಟ್ಟಳೆಯಂತೆ ನಾರಿಕೇಳ ಸಹಿತ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಆಂಜನೇಯ ದೇವರ ಸನ್ನಿಧಿಯಲ್ಲಿಯೂ ನಾರಿಕೇಳ ಸಮರ್ಪಣಾ ಸೇವೆಯನ್ನು ಮಾಡಲಾಯಿತು. ಸಾಮೂಹಿಕ ಫಲ ಪ್ರಾರ್ಥನೆಯ ನಂತರ ಅರ್ಚಕ ಜನಾರ್ದನ ಅಡಿಗ ಮತ್ತವರ ಸಹಾಯಕರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಂಗಳ ವಾದ್ಯದೊಂದಿಗೆ ಸಂಪನ್ನಗೊಂಡ ಮೂಡು ಗಣಪತಿಯ ಸೇವೆಯ ನಂತರ ವಾಡಿಕೆಯಂತೆ ಗ್ರಾಮಸ್ಥರಿಗೆ ಮತ್ತು ಪರವೂರ ಭಕ್ತಾದಿಗಳಿಗೆ ಮೊಕ್ತೇಸರರ ಸಮಕ್ಷಮ ಪ್ರಸಾದ ರೂಪದಲ್ಲಿ ತೆಂಗಿನ ಕಾಯಿಕಡಿಗಳನ್ನು ವಿತರಿಸಲಾಯಿತು. ಈ ವೇಳೆ ಶ್ರೀ ಗುರುನರಸಿಂಹ ದೇವಳದ ಅಧ್ಯಕ್ಷ ಡಾ. ಕೆ ಎಸ್ ಕಾರಂತ್ ಮತ್ತಿತರರು ಇದ್ದರು.

  • ಗುಂಡ್ಮಿ- ನಶಿಸಿ ಹೋಗುವ ಕೃಷಿ ಕಾಯಕಕ್ಕೆ ಪುಷ್ಠಿ ನೀಡುವ ಕಾರ್ಯ ಶ್ಲಾಘನೀಯ- ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ

    ಗುಂಡ್ಮಿ- ನಶಿಸಿ ಹೋಗುವ ಕೃಷಿ ಕಾಯಕಕ್ಕೆ ಪುಷ್ಠಿ ನೀಡುವ ಕಾರ್ಯ ಶ್ಲಾಘನೀಯ- ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ

    ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ದೇಶದ ಬೆನ್ನೆಲುಬು ರೈತ, ಸೈನಿಕ, ಶಿಕ್ಷಕ ಆದರೆ ಅಂತಹ ರೈತ ಸಮುದಾಯಕ್ಕೆ ಪುಷ್ಠಿ ನೀಡುವ ಪಂಚವರ್ಣದ ಕಾರ್ಯ ನಿಜಕ್ಕೂ ಅಭಿನಂದಾರ್ಹ ಎಂದು ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ ಹೇಳಿದರು.

    ಮಂಗಳವಾರ ಗುಂಡ್ಮಿ ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ರೈತ ಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ 30ನೇ ಸರಣಿ ಮಾಲಿಕೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುವ ವಿದ್ಯಾಮಾನದಲ್ಲಿ ನಶಿಸಿಹೋಗುತ್ತಿರುವ ಕೃಷಿ ಕಾಯಕಕ್ಕೆ ವೇಗ ನೀಡುವ ಅಗತ್ಯತೆಯನ್ನು ಒತ್ತಿಹೇಳಿದರಲ್ಲದೆ, ಮನೆ ಮನೆಗೆ ತೆರಳಿ ಸಾಧಕ ರೈತರ ಗುರುತಿಸುವ ಮಹಾತ್ಕಾರ್ಯ ನಿಜಕ್ಕೂ ಶ್ಲಾಘನೀಯ, ಯಶೋಧ ಭಂಢಾರಿ ಒರ್ವ ಮಹಿಳೆ ಎನ್ನದೆ ಪುರುಷನಂತೆ ಸಮಾನವಾಗಿ ರೈತಕಾಯಕ ನಡೆಸುವ ಜತೆಗೆ ಇತರರಿಗೆ ಪ್ರೇರೇಪಿಸುವ ಕಾರ್ಯ ಕೃಷಿ ಉಳಿವಿಗೆ ಮುನ್ನಡಿ ಬರೆಯುವುದರಲ್ಲಿ ಅನುಮಾನವೇವಿಲ್ಲ ಎಂದರಲ್ಲದೆ ಕೃಷಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ತನ್ಮೂಲಕ ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಯುವ ಸಮುದಾಯ ತೊಡಗಿಕೊಳ್ಳುವಂತೆ ಮಾಡಬೇಕು ಎಂದು ಕರೆ ಇತ್ತರು.

    ಈ ಸಂದರ್ಭದಲ್ಲಿ 30ನೇ ರೈತ ಸಾಧಕಿ ಗುಂಡ್ಮಿ ಯಶೋಧ ಭಂಡಾರಿ ಇವರನ್ನು ಕೃಷಿ ಪರಿಕರವನ್ನಿತ್ತು, ಗಿಡ ನೀಡಿ ಗೌರವಿಸಲಾಯಿತು.

    ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪ.ಪಂ ಸದಸ್ಯ ರವೀಂದ್ರ ಕಾಮತ್, ಮಾಜಿ ಅಧ್ಯಕ್ಷ ರಫೀಕ್, ನಿವೃತ್ತ ಬ್ಯಾಂಕ್ ಅಧಿಕಾರಿ ಗಣಪಯ್ಯ ನಾವಡ,ಕೋಟದ ಜನತಾ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ ಕುಂದರ್, ರೈತಧ್ವನಿ ಸಂಘ ಅಧ್ಯಕ್ಷ ಎಂ ಜಯರಾಮ್ ಶೆಟ್ಟಿ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಅರವಿಂದ ಶರ್ಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ದೇವಪ್ಪ ಪಟೆಗಾರ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು.

    ಪಂಚವರ್ಣ ಮಹಿಳಾ ಮಂಡದ ಉಪಾಧ್ಯಕ್ಷೆ ವಸಂತಿ ಹಂದಟ್ಟು ಸ್ವಾಗತಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಲಲಿತಾ ಪೂಜಾರಿ ಸನ್ಮಾನಪತ್ರ ವಾಚಿಸಿದರು. ಕಾರ್ಯಕ್ರವನ್ನುಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು. ಸದಸ್ಯ ಕೇಶವ ಆಚಾರ್ ವಂದಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

  • ಕುಂದಾಪುರ :ಜನರ ಸೇವೆ ಮಾಡಿದರೆ ದೇವರು ಮೆಚ್ಚುತ್ತಾನೆ – ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್

    ಕುಂದಾಪುರ :ಜನರ ಸೇವೆ ಮಾಡಿದರೆ ದೇವರು ಮೆಚ್ಚುತ್ತಾನೆ – ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಮಾಜದ ಜನರ ಸೇವೆ ಮಾಡಿದಾಗ ದೇವರು ನಮ್ಮ ಕಷ್ಟದ ಕಾಲಕ್ಕೆ ಕೈ ಹಿಡಿಯುತ್ತಾನೆ. ನಾವು ಜನರೊಂದಿಗೆ ಬೆರೆಯುವುದರ ಜೊತೆಗೆ ಅವರಿಗೆ ಸಹಾಯ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ರ ಆಯೋಗದ ಅಧ್ಯಕ್ಷ ಅಬ್ದುಲ್ ಅಜಿಮ್ ಹೇಳಿದ್ದಾರೆ. ಅವರು ಇಲ್ಲಿನ ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ಗೆ ಅವರು ಭೇಟಿ ನೀಡಿದ ಸಂದರ್ಭ ಮಾತನಾಡಿದರು.

    ಅಲ್ಪಸಂಖ್ಯಾತ ರಿಗೆ ಹಲವಾರು ಸವಲತ್ತು ಗಳು ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಸಿಗುತ್ತದೆ. ಅದಕ್ಕೆ ಪೂರಕವಾಗಿ ನಾವು ಆಯಾ ತಾಲೂಕಿನಲ್ಲಿ ಕಮ್ಯುನಿಟಿ ಸೆಂಟರ್ ಮೂಲಕ ಜನರಿಗೆ ಮಾಹಿತಿ ನೀಡಬೇಕು. ಇದರಿಂದ ಜನರಿಗೆ ಅನುಕೂಲ ವಾಗುತ್ತದೆ ಎಂದು ಹೇಳಿದರು. ಸೇವೆಯಿಂದ ನಮಗೆ ತೃಪ್ತಿ ಸಿಗುತ್ತದೆ. ಆಗ ದೇವರು ಸಹ ನಮಗೆ ನಮ್ಮ ಕಷ್ಟದ ಸಂದರ್ಭದಲ್ಲಿ ಇನ್ನೊಬ್ಬರ ಮೂಲಕ ಸಹಾಯ ಮಾಡುತ್ತಾನೆ ಎಂದರು.

    ಏನ್ ಏನ್ ಒ ಕಮ್ಯುನಿಟಿ ಸೆಂಟರ್ ಅಯುಷ್ಮಾನ್ ಕಾರ್ಡ್ ಶಿಕ್ಷಣದಲ್ಲಿ ವಂಚಿತರಾ ದವರನ್ನು ಮತ್ತೆ ಕರೆದು ಶಿಕ್ಷಣ ನೀಡುವಲ್ಲಿ ಸಹಕಾರ ಮಾಡಿದೆ. ಸರ್ಕಾರಿ ಉದ್ಯೋಗ ಆರೋಗ್ಯ ತಪಾಸಣಾ ಕಾರ್ಯಕ್ರಮ ಸ್ಕೋಲರ್ಷಿಪ್ ಮಾಡುವಲ್ಲಿ ಸಹಕಾರ ಹೀಗೆ ಹತ್ತು ಹಲವು ಕಾರ್ಯಕ್ರಮ ಮಾಡುದರ ಮೂಲಕ ಈ ಸಂಸ್ಥೆ ಜನರಿಗೆ ಹತ್ತಿರವಾಗಿದೆ. ಈ ಸಂಸ್ಥೆಗೆ ನನ್ನಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

    ಈ ಸಂದರ್ಭ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ. ಗೌರವ ಅಧ್ಯಕ್ಷ ಮೊಹಮ್ಮದ್ ರಫೀಕ್ ಗಂಗೊಳ್ಳಿ. ಟ್ರಸ್ಟ್ ಸದ್ಯಸ್ಯರಾದ ಪಿರ್ ಸಾಹೇಬ್ ಉಡುಪಿ. ಮಾಜಿ ಉಪಾಧ್ಯಕ್ಷ ರಾದ ಎಮ್ ಪಿ ಮೊಹಿದಿನಬ್ಬ ಕಾಪು, ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಝಹಿರ್ ಅಹ್ಮದ್, ಜಿಲ್ಲಾ ಸದ್ಯಸ್ಯರಾದ ಶಾಬಾನ್ ಹಂಗಳೂರ್, ನಿಹಾರ್ ಅಹ್ಮದ್ ಕುಂದಾಪುರ, ಅಬ್ದುಲ್ ಖಾದರ್ ಮೂಡ್ ಗೋಪಾಡಿ, ಮೊಹಮ್ಮದ್ ಗುಲ್ವಾಡಿ, ಉಸ್ಮಾನ್ ಪಳ್ಳಿ, ಅಕ್ರಮ್ ಉಡುಪಿ, ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ನ ಉಪಾಧ್ಯಕ್ಷ ಜಮಾಲ್ ಗುಲ್ವಾಡಿ ಇನ್ನಿತರರು ಉಪಸ್ಥಿತರಿದ್ದರು.

  • ಕಲ್ಲಟ್ಟು ಹರ್ತಟ್ಟು ಮಹಾಲಿಂಗೇಶ್ವರ ದೇಗುಲದಲ್ಲಿ ವಾರ್ಷಿಕ ದೀಪೋತ್ಸವ

    ಕಲ್ಲಟ್ಟು ಹರ್ತಟ್ಟು ಮಹಾಲಿಂಗೇಶ್ವರ ದೇಗುಲದಲ್ಲಿ ವಾರ್ಷಿಕ ದೀಪೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟ ಹರ್ತಟ್ಟು ಶ್ರೀಮಹಾಲಿಂಗೇಶ್ಚರ ದೇಗುಲ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಸೋಮವಾರ ಸಂಪನ್ನಗೊಂಡಿತು.

    ಶ್ರೀ ದೇಗುಲದ ಅರ್ಚಕ ಸುಧೀರ್ ಐತಾಳ್ ನೇತ್ರತ್ವದಲ್ಲಿ ದೀಪೋತ್ಸವದ ಧಾರ್ಮಿಕ ಕಾರ್ಯಗಳು ನೆರವೆರಿತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾಧಿಗಳು ದೇವಳದ ಒಳ ಹಾಗೂ ಹೊರ ಪ್ರಾಂಗಣದಲ್ಲಿ ಹಣತೆ ಸಾಲುಗಳಿಗೆ ಜ್ಯೋತಿ ಪ್ರಜ್ವಲಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ದೇಗುಲದ ವತಿಯಿಂದ ಪನಿವಾರ ಪ್ರಸಾದ ವಿತರಿಸಲಾಯಿತು. ಕೋಟ ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡ, ಭಗತ್ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

    ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕಾರ್ಯದರ್ಶಿ ಹರೀಷ್ ದೇವಾಡಿಗ, ಸದಸ್ಯರಾದ ಸಂತೋಷ ಪೂಜಾರಿ, ಬಾಬು ಶೆಟ್ಟಿ, ಚಂದ್ರ ನಾಯ್ಕ್, ಸಿದ್ಧ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ಶಟಲ್ ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ :ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ಶಟಲ್ ಬ್ಯಾಡ್ಮಿಂಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ಇವರ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಶಟಲ್ ಬ್ಯಾಡ್ಮಿಂಟನ್ ನಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧಾರಿಣಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

  • ಪಂಚವರ್ಣ ಸಂಸ್ಥೆಯಿಂದ 185ನೇ ಭಾನುವಾರ ಪರಿಸರಸ್ನೇಹಿ ಅಭಿಯಾನ

    ಪಂಚವರ್ಣ ಸಂಸ್ಥೆಯಿಂದ 185ನೇ ಭಾನುವಾರ ಪರಿಸರಸ್ನೇಹಿ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಅದರ ಸಿಂಧೂರ ಸಂಜೀವಿನಿ ಒಕ್ಕೂಟ ಇದರ ಸಹಯೋಗದೊಂದಿಗೆ 185ನೇ ಭಾನುವಾರ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನ ಕೋಟತಟ್ಟು ಪಡುಕರೆ ಬೀಚ್ ಸ್ವಚ್ಛತಾ ಕಾರ್ಯಕ್ರಮ ಜರಗಿತು.
    ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ, ಉಪಾಧ್ಯಕ್ಷೆ ವಸಂತಿ ಹಂದಟ್ಟು, ಹಂದಟ್ಟು ಮಹಿಳಾ ಬಳಗದ ಸ್ಥಾಪಾಕಾಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಸಂಯುಕ್ತ ಸಂಘಗಳ ಒಕ್ಕೂಟದ ಸಂಚಾಲಕ ಸತ್ಯನಾರಾಯಣ ಆಚಾರ್, ಸಿಂಧೂರ ಸಂಜೀವಿನಿ ಒಕ್ಕೂಟದ ಸುಜಾತ ಉದಯ್ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 35ಅಧಿಕ ಚೀಲ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.

  • ಕುಂದಾಪುರ: ಎಲ್ಲಾದರೂ ಇರಿ ಸಮಾಜದ ಬಗ್ಗೆ ಅಭಿಮಾನ ಗೌರವ ಹೊಂದಿರಿ – ಅಶೋಕ ಪೂಜಾರಿ ಬೀಜಾಡಿ

    ಕುಂದಾಪುರ: ಎಲ್ಲಾದರೂ ಇರಿ ಸಮಾಜದ ಬಗ್ಗೆ ಅಭಿಮಾನ ಗೌರವ ಹೊಂದಿರಿ – ಅಶೋಕ ಪೂಜಾರಿ ಬೀಜಾಡಿ

    31ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಸಾಧಕರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಹೆಚ್ಚಿನ ಶಿಕ್ಷಣ ಪಡೆದವರು ಉದ್ಯೋಗಿಗಳಾಗಿ ಹೊರಹೋದರೆ ಎಸ್.ಎಸ್.ಎಲ್.ಸಿ, ಪಿಯುಸಿ ಫೇಲ್ ಆದವರು ಸಮಾಜದ ಏಳಿಗೆಗೆ ಸಂಘಟನೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲೇ ಇರಿ ಸಮಾಜದ ಬಗ್ಗೆ ಅಭಿಮಾನ, ಗೌರವ ಹೊಂದಿರಿ. ಸಮಾಜದ ಅಭಿವೃದ್ಧಿಗೆ ನಿಮ್ಮ ಕಾಣಿಕೆ ಇರಲಿ ಎಂದು ಅವಿಭಜಿತ ಕುಂದಾಪುರ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಹೇಳಿದರು.

    ಅವರು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ (ರಿ.) ಇವರ ವತಿಯಿಂದ ಸಂಘದ ಸಭಾಂಗಣದಲ್ಲಿ ಭಾನುವಾರ ಕುಂದಾಪುರ – ಬೈಂದೂರು ತಾಲೂಕಿನ ವಿದ್ಯಾರ್ಥಿಗಳಿಗೆ ಕೊಡಮಾಡುವ 31ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಮತ್ತು ವಿಶೇಷ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸಿಗಂಧೂರು ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ಇದರ ಕಾರ್ಯದರ್ಶಿ ರವಿಕುಮಾರ್ ಹೆಚ್.ಆರ್ ಅವರು ಬಿಲ್ಲವ ಸಮಾಜ 26 ಉಪ ಪಂಗಡಗಳನ್ನು ಹೊಂದಿದ್ದು ಹರಿದು ಹಂಚಿಹೋಗಿದೆ. ಈ ಎಲ್ಲ ಉಪಪಂಗಡಗಳು ಒಂದಾದರೆ ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆಯಲು ಸಾಧ್ಯವಿದೆ. ರಾಜಕೀಯವಾಗಿ ಸಮಾಜದ ಪ್ರಾಬಲ್ಯತೆ ಕಾಣಬೇಕು. ವೈಷಮ್ಯಗಳ ಮರೆತು ಸಮಾಜದ ಪರವಾಗಿ ನಿಲ್ಲಬೇಕು. ಯಾವುದೇ ಅಧಿಕಾರ, ಹುದ್ದೆಗಳು ಬಂದರೂ ಕೂಡಾ ಸಮಾಜದ ಬಗ್ಗೆ ಕಳಕಳಿಯನ್ನು ಮರೆಯಬಾರದು. ಸಮಾಜದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ನಂತಹ ಉನ್ನತ ವ್ಯಾಸಂಗದ ಗುರಿ ಹೊಂದಿರಬೇಕು. ಗುರುಗಳ ತತ್ವ ಸಿದ್ಧಾಂತವನ್ನು ಪಾಲಿಸಿಕೊಂಡು ಸಮಾಜ ಐಕ್ಯತೆಯಿಂದ ಸಮಗ್ರ ಅಭಿವೃದ್ಧಿಯ ಕಡೆಗೆ ಹೆಜ್ಜೆ ಇಡಬೇಕಾಗಿದೆ ಎಂದರು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪ್ರೇಮಾನಂದ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ ಬಸ್ರೂರು, ಶ್ರೀ ನಾರಾಯಣ ಗುರು ಮಹಿಳಾ ಕೋ-ಆಪರೇಟಿವ್ ಸೊಸೈಟಿ ನಿ., ಕುಂದಾಪುರ ಇದರ ಅಧ್ಯಕ್ಷೆ ಗುಣರತ್ನ ರಾಮ ಪೂಜಾರಿ, ಶ್ರೀ ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೀಶ್ ಪೂಜಾರಿ ಕೋಡಿ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲ್‍ಕಟ್ಟೆ ಭಾಗವಹಿಸಿದ್ದರು.

    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ, ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ, ಪೊಲೀಸ್ ಶಂಕರ ಪೂಜಾರಿ ಕಾಡಿನತಾರು, ದೇಹದಾಡ್ರ್ಯ ಪಟು ಸುರೇಶ ಬಿ.ಪಾಂಡೇಶ್ವರ, ಪಿಎಚ್‍ಡಿ ಪದವಿಧರರಾದ ಡಾ.ಸೌಮ್ಯ ಕುಮಾರಿ ಉಪ್ಲಾಡಿ, ಡಾ.ಸಚಿನ್ ಉಪ್ಲಾಡಿ,ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕøತ ಚೆನ್ನಯ್ಯ ಪೂಜಾರಿ ಬೈಂದೂರು, ನ್ಯಾಯವಾದಿ ನಯನ ಅಸೋಡು, ಸಮಾಜಸೇವಕ ರಾಜು ಪೂಜಾರಿ ಜಡ್ಕಲ್, ಮಹಿಳಾ ಪ್ರಸಂಗಕರ್ತೆ ಶಾಂತಾ ವಾಸುದೇವ ಪೂಜಾರಿ ಅನಗಳ್ಳಿ ಅವರನ್ನು ಸನ್ಮಾನಿಸಲಾಯಿತು.

    ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೀಕ್ಷಾ, ಛಾಯಾ ಸಿ ಪೂಜಾರಿ, ಅಮೂಲ್ಯ ಹಟ್ಟಿಯಂಗಡಿ, ಅಮೂಲ್ಯ ಮಾವಿನಕೊಂಬೆ, ಶ್ರಾವ್ಯ ಕಂಡ್ಲೂರು, ನಿರೀಕ್ಷಾ, ಧನ್ಯ ಮಾವಿನಕೊಂಬೆ, ಚಂದ್ರ ಎಸ್.ಕೆ ಸಿದ್ಧಾಪುರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ ವಿಠಲವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

    ಮಹಿಳಾ ಘಟಕದ ಕಾರ್ಯದರ್ಶಿ ಗುಲಾಬಿ ಜಯಸೂರ್ಯ ಪೂಜಾರಿ ಪ್ರಾರ್ಥನೆ ನೆರವೇರಿಸಿದರು. ಸತೀಶ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಪ್ರದಾನ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ವಂದಿಸಿದರು.

    ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

  • ಕುಂದಾಪುರ :ಜಿಲ್ಲಾ ಕೆಡಿಪಿ ಸಭೆಯಲ್ಲಿ ಸುನಿಲ್ ಕುಮಾರ ನಡವಳಿಕೆ ಖಂಡನೀಯ – ಹರಿಪ್ರಸಾದ್ ಶೆಟ್ಟಿ

    ಕುಂದಾಪುರ :ಜಿಲ್ಲಾ ಕೆಡಿಪಿ ಸಭೆಯಲ್ಲಿ ಸುನಿಲ್ ಕುಮಾರ ನಡವಳಿಕೆ ಖಂಡನೀಯ – ಹರಿಪ್ರಸಾದ್ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನ.24 ರಂದು ನಡೆದ ಉಡುಪಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರವರು ಜಿಲ್ಲೆಯ ದಕ್ಷ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರರವರಿಗೆ ಕಾನೂನುಬದ್ದವಾಗಿ ಕರ್ತವ್ಯನಿರ್ವಹಿಸಿದಕ್ಕೆ ಜಿಲ್ಲೆಯ ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ಎದುರು ಆತ್ಮ ಸ್ಥೈರ್ಯ ಕುಸಿಯುವಂತೆ ತರಾಟೆಗೆ ತೆಗೆದುಕೊಂಡಿರುವುದನ್ನು ಮತ್ತು ಈ ಕುರಿತು ಸಭೆಯಲ್ಲಿ ಅಧಿಕಾರಿಗೆ ಮಾತನಾಡಲು ಬಿಡದೆ ಇರುವುದನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಡಿ ತೀವ್ರವಾಗಿ ಖಂಡಿಸಿದ್ದಾರೆ.

    ಬಿಜೆಪಿ ಆಡಳಿತದ 3 ವರ್ಷದ ಅವಧಿಯಲ್ಲಿ ಸುನೀಲ್ ಕುಮಾರವರು ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ತನಗೆ ಬೇಕಾದ ಅಧಿಕಾರಿಗನ್ನು ಹಾಕಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿರುಮವನ್ನು ಜಿಲ್ಲೆಯ ಜನತೆ ಮರೆತಿಲ್ಲ. ಸುನೀಲ್ ಕುಮಾರ ಸಚಿವರಾಗಿದ್ದಾಗ ಪೋಲಿಸ್ ಠಾಣೆಗಳು ಮಟ್ಕಾ ಬಿಡ್ಡರ್, ಕ್ಲಬ್ ಮಾಲಿಕರ ಮತ್ತು ಸಮಾಜಘಾತಕ ಶಕ್ತಿಗಳ ಹತೋಟಿಯಲ್ಲಿದ್ದು , ಸಜ್ಜನರು ಮತ್ತು ಬಡವರಿಗೆ ನ್ಯಾಯ ಸಿಗುತ್ತಿರಲಿಲ್ಲಾ .

    ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಖುದ್ದು ದಕ್ಷ ಪೋಲಿಸ್ ಅಧಿಕಾರಿಯನ್ನು ಜಿಲ್ಲೆಗೆ ನೇಮಿಸುವ ಮೂಲಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದ್ದುಬಸ್ತಿನಲ್ಲಿಡಲು ಮತ್ತು ಪೋಲಿಸ್ ಇಲಾಖೆಯಲ್ಲಿ ಸಾಮಾಜಿಕ ನ್ಯಾಯ ಸಿಗುವಂತಾಗಲು ಕಾರಣಿ ಭೂತರಾದರು .

    ಸಿಮೆಂಟ್ ಹಗರಣ , ಗಣಿ ಹಗರಣ , ಪರಶುರಾಮ ಹಗರಣ , ಕಾರ್ಕಳ ಉತ್ಸವ ಹಗರಣ ಮತ್ತು ಅನೇಕ ಹಗರಣಗಳ ಮೂಲಕ ಉಡುಪಿ ಜಿಲ್ಲೆಯ 25 ವರ್ಷದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಶಾಸಕ ಹಾಗೂ ಸಚಿವ ಎನಿಸಿಕೊಂಡ ಸುನೀಲ್ ಕುಮಾರರವರು ಓರ್ವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನುಕೆಡಿಪಿ ಸಭೆಯಲ್ಲಿ ಮಾತನಾಡಲು ಮತ್ತು ಸಮಜಾಯಿಷಿಕೆ ನೀಡಲು ಬಿಡದೇ ಇರುವುದು ತೀವ್ರ ಖಂಡನೀಯ ವಿಚಾರ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕೋಟ :ವಿದ್ಯಾರ್ಥಿಗಳ ಚೈತನ್ಯಕ್ಕೆ ಚೈತನ್ಯ ತರಬೇತಿ ಸಂಸ್ಥೆ ಸಹಕಾರಿ – ಆನಂದ್ ಸಿ ಕುಂದರ್

    ಕೋಟ :ವಿದ್ಯಾರ್ಥಿಗಳ ಚೈತನ್ಯಕ್ಕೆ ಚೈತನ್ಯ ತರಬೇತಿ ಸಂಸ್ಥೆ ಸಹಕಾರಿ – ಆನಂದ್ ಸಿ ಕುಂದರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಚೈತನ್ಯ ತರಬೇತಿ ಸಂಸ್ಥೆ ಸಹಕಾರಿಯಾಗಲಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.

    ಕೋಟ ಮಣೂರು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೈತನ್ಯ ತರಬೇತಿ ಕೇಂದ್ರ ಕೋಟ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ಬುದ್ಧಿ ಬೆಳವಣಿಗೆ ಹಾಗೂ ಸಾಹಿತಿಕ ವಿಚಾರಧಾರೆಯನ್ನು ವಿಕಸನಗಳ ಕಾರ್ಯಕ್ರಮಗಳು ಮಹತ್ತರವಾಗಿ ಕಾರ್ಯನಿರ್ವಹಿಸುತ್ತವೆ.ಅದರಂತೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಿದೆ ಎಂದರು.

    ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕ.ಸಾ.ಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ಜಿ.ರಾಮಚಂದ್ರ ಐತಾಳ್ ಭಾಗವಹಿಸಿ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಬಲ ತುಂಬಿದರು.

    ಮುಖ್ಯ ಅತಿಥಿಗಳಾಗಿ ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ್ ಪಡುಕರೆ, ಶಾಲಾ ಮುಖ್ಯ ಶಿಕ್ಷಕಿ ಸೇಸು ಟೀಚರ್, ಸಹಶಿಕ್ಷಕಿ ನಾಗರತ್ನ ಇದ್ದರು. ಕಾರ್ಯಕ್ರಮ ಸಂಯೋಜಕ ಸಂತೋಷ್ ಕುಮಾರ್ ಕೋಟ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.