ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟ ಹರ್ತಟ್ಟು ಶ್ರೀಮಹಾಲಿಂಗೇಶ್ಚರ ದೇಗುಲ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಸೋಮವಾರ ಸಂಪನ್ನಗೊಂಡಿತು.
ಶ್ರೀ ದೇಗುಲದ ಅರ್ಚಕ ಸುಧೀರ್ ಐತಾಳ್ ನೇತ್ರತ್ವದಲ್ಲಿ ದೀಪೋತ್ಸವದ ಧಾರ್ಮಿಕ ಕಾರ್ಯಗಳು ನೆರವೆರಿತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾಧಿಗಳು ದೇವಳದ ಒಳ ಹಾಗೂ ಹೊರ ಪ್ರಾಂಗಣದಲ್ಲಿ ಹಣತೆ ಸಾಲುಗಳಿಗೆ ಜ್ಯೋತಿ ಪ್ರಜ್ವಲಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ದೇಗುಲದ ವತಿಯಿಂದ ಪನಿವಾರ ಪ್ರಸಾದ ವಿತರಿಸಲಾಯಿತು. ಕೋಟ ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡ, ಭಗತ್ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕಾರ್ಯದರ್ಶಿ ಹರೀಷ್ ದೇವಾಡಿಗ, ಸದಸ್ಯರಾದ ಸಂತೋಷ ಪೂಜಾರಿ, ಬಾಬು ಶೆಟ್ಟಿ, ಚಂದ್ರ ನಾಯ್ಕ್, ಸಿದ್ಧ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.











