Category: ಸುದ್ದಿ

  • ಕುಂದಾಪುರ: ಅನಧೀಕೃತ ಜಿಮ್ ಮಾಲೀಕನಿಂದ ಸ್ಪೋರ್ಟ್ಸ್ ಕ್ಲಬ್ ಪೋರ್ಜರಿ – ಜಿಮ್ ಕ್ಲಾಸ್ ತೆರವುಗೊಳಿಸಿ, ಕ್ಲಬ್ ನೋಂದಣಿ ಅಮಾನ್ಯಗೊಳಿಸುವಂತೆ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನಿಂದ ತಹಸೀಲ್ದಾರ್ ಗೆ ಮನವಿ

    ಕುಂದಾಪುರ: ಅನಧೀಕೃತ ಜಿಮ್ ಮಾಲೀಕನಿಂದ ಸ್ಪೋರ್ಟ್ಸ್ ಕ್ಲಬ್ ಪೋರ್ಜರಿ – ಜಿಮ್ ಕ್ಲಾಸ್ ತೆರವುಗೊಳಿಸಿ, ಕ್ಲಬ್ ನೋಂದಣಿ ಅಮಾನ್ಯಗೊಳಿಸುವಂತೆ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನಿಂದ ತಹಸೀಲ್ದಾರ್ ಗೆ ಮನವಿ

    Video:

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಪುರಸಭಾ ವ್ಯಾಪ್ತಿಯ ಭಂಡಾರ್ಕಾರ್ಸ್ ಕಾಲೇಜಿನ ಅಕ್ರಮ ಕಟ್ಟಡದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಜಿಮ್ ತರಗತಿಯನ್ನು ತೆರವುಗೊಳಿಸುವಂತೆ ಹಾಗೂ ಜಿಮ್ ಮಾಲೀಕನಿಂದ ಸ್ಪೋರ್ಟ್ ಕ್ಲಬ್ ಒಂದನ್ನು ಹೈಜಾಕ್ ಮಾಡಿ ನೋಂದಣಿ ಮಾಡಿಸಿರವುದನ್ನು ಅಮಾನ್ಯ ಮಾಡುವಂತೆ ಆಗ್ರಹಿಸಿ ಕುಂದಾಪುರದ ತಹಸೀಲ್ದಾರರಿಗೆ ಖಾರ್ವಿಕೇರಿ ಕಿಂಗ್ಫಿಶರ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಮನವಿ ಮಾಡಿದ್ದಾರೆ.

    ಬುಧವಾರ ಬೆಳಿಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ನೀಡಲಾಗಿದ್ದು, ಖಾರ್ವಿಕೇರಿಯ ಸತೀಶ್ ಖಾರ್ವಿ ಎಂಬುವರು ಭಂಡಾರ್ಕಾರ್ಸ್ ಕಾಲೇಜಿನ ಅಕ್ರಮ ಕಟ್ಟಡದ ಕಟ್ಟಡ ಸಂಖ್ಯೆ 393-13 8ನೇ ವಾರ್ಡ್ರಲ್ಲಿ ‘ನ್ಯೂ ಹರ್ಕ್ಯೂಲಸ್ ಜಿಮ್’ನ್ನು ನಡೆಸುತ್ತಿದ್ದು, ಈಗಾಗಲೇ ಇದನ್ನು ತೆರವು ಮಾಡಲು ಭಂಡಾರ್ಕಾರ್ಸ್ ಕಾಲೇಜಿನ ಮುಖ್ಯಸ್ಥರು ಪುರಸಭೆಯ ಮುಖ್ಯಾಧಿಕಾರಿಗಳಿಗೆ ನೋಟಿಸು ನೀಡಿರುತ್ತಾರೆ. ಆದರೂ ಇಲ್ಲಿ ಉದ್ಯಮ ಪರವಾನಿಗೆ ಇಲ್ಲದೆ ನ್ಯೂ ಹರ್ಕ್ಯೂಲಸ್ ಜಿಮ್ನ್ನು ನಡೆಸಲಾಗುತ್ತಿದ್ದು, ತಕ್ಷಣ ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶೋಭಾಲಕ್ಷ್ಮೀ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಂದರು.

    ಇಲ್ಲಿ ತರಬೇತಿ ಪಡೆಯಲು ಬರುವ ಶಿಕ್ಷಣಾರ್ಥಿಗಳಿಗೆ ಯಾವುದೇ ರೀತಿಯ ಭದ್ರತೆ ಇಲ್ಲ. ಮಹಿಳೆಯರಿಗೂ ಕೂಡ ತರಬೇತಿ ನೀಡಲಾಗುತ್ತಿದ್ದು, ಮಹಿಳೆಯರಿಗೆ ನೀಡಬೇಕಾದ ಮೂಲಭೂತ ಸೌಕರ್ಯದ ಕೊರತೆ ಇದೆ. ಅನಧೀಕೃತವಾಗಿ ಪರವಾನಿಗೆ ಇಲ್ಲದೆ ನಡೆಸುವ ತರಬೇತಿ ಕೇಂದ್ರವಾಗಿದೆ ಎಂದು ಆರೋಪಿಸಲಾಗಿದೆ.

    ಅಲ್ಲದೇ ಖಾರ್ವಿಕೇರಿಯಲ್ಲಿ ಸುಮಾರು 45 ವರ್ಷಗಳಿಂದ ನಮ್ಮ ಹಿರಿಯರು “ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್” ಎಂಬ ನಾಮಾಂಕಿತದಿಂದ ಕ್ರೀಡಾ ಚಟುವಟಿಕೆಯೊಂದಿಗೆ, ಸಾಮಾಜಿಕ ಕಾರ್ಯ ನೆರವೇರಿಸಿಕೊಂಡು ಬಂದಿರುತ್ತೇವೆ. ಆದರೆ ನಾವು ನಮ್ಮ ಕ್ಲಬ್ನು ನೋಂದಣಿ ಮಾಡಿರುವುದಿಲ್ಲ. ಇದನ್ನೇ ಮುಂದಿಟ್ಟುಕೊಂಡು ಕಿಂಗ್ಫಿಶರ್ ಸ್ಪೋಟ್ಸ್ ಕ್ಲಬ್ ನಮ್ಮ ಸಂಸ್ಥೆಯನ್ನು ಸತೀಶ ಖಾರ್ವಿ ನೋಂದಣಿ ಮಾಡಿಕೊಂಡಿದ್ದು, ಸ) ಎನ್ by 31 JUL 201 ನೋಂದಣಿಯನ್ನು ಅಮಾನ್ಯಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ರಂಜಿತ್ ಖಾರ್ವಿ, ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ಹಾಗೂ ಸದಸ್ಯರು ಹಾಜರಿದ್ದರು.

  • ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಶೋಭಾ ಕರಂದ್ಲಾಜೆ

    ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಶೋಭಾ ಕರಂದ್ಲಾಜೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ತ್ವರಿತವಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ 66 ಮತ್ತು 169, 169ಎ ಗೆ ಸಂಬಂಧಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾ. ಹೆದ್ದಾರಿ 169 ಎ ರ ರಸ್ತೆ ಕಾಮಗಾರಿಗಳು ಪ್ರಗತಿಯಲಿದ್ದು, ಮುಂಗಾರು ಮಳೆಯ ಹಿನ್ನೆಲೆ, ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಮಳೆ ಕಡಿಮೆ ಇರುವ ಹಿನ್ನೆಲೆ, ಕಾಮಗಾರಿಗಳನ್ನು ಪುನರಾರಂಭಿಸಿ, ತ್ವರಿತ ಗತಿಯಲ್ಲಿ ಕೈಗೊಳ್ಳುವುದರೊಂದಿಗೆ ಗುಣಮಟ್ಟದಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾ. ಹೆ. 66 ಸಂತೆಕಟ್ಟೆ ಜಂಕ್ಷನ್‌ನಲ್ಲಿನ ಅಂಡರ್‌ಪಾಸ್ ಕಾಮಗಾರಿಯನ್ನು ಕೈಗೊಳ್ಳುವಾಗ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಮಣ್ಣು ಕುಸಿಯದ ಹಾಗೆ ರೀಟೈನಿಂಗ್ ವಾಲ್‌ಗಳನ್ನು ಹೆಚ್ಚು ಕಾರ್ಮಿಕರುಗಳನ್ನು ನಿಯೋಜಿಸುವುದರೊಂದಿಗೆ 24*7 ಕಾಲಾವಧಿಯ ಶಿಫ್ಟ್ನಲ್ಲಿ ನಿರ್ಮಿಸಬೇಕೆಂದು ಸೂಚನೆ ನೀಡಿದರು.

    ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಬಂದರು ವರೆಗಿನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಕಾಮಗಾರಿಯನ್ನು ಪ್ರಾರಂಭಿಸಬೇಕು, ಈ ರಸ್ತೆಯಲ್ಲಿ ಹೆಚ್ಚು ಪ್ರವಾಸಿಗರು ಹಾಗೂ ಮೀನುಗಾರಿಕಾ ಚಟುವಟಿಕೆ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆ, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಬದಲಿ ರಸ್ತೆ ಮಾರ್ಗದ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಬೇಕು ಎಂದರು.

    ರಾ.ಹೆ 169 ನ ಇಂದ್ರಾಳಿ ರೈಲ್ವೆ ಸೇತುವೆಯ ಕಾಮಗಾರಿಯನ್ನು ನವೆಂಬರ್‌ನ ಒಳಗಾಗಿ ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುವುದರೊಂದಿಗೆ ಕೈಗೊಳ್ಳಬೇಕು, ಈಗಾಗಲೇ ಸೇತುವೆಯ ಮೇಲೆ ಸಂಚರಿಸುತ್ತಿರುವ ವಾಹನಗಳ ಸಂಚಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಪೊಲೀಸ್ ಅಧೀಕ್ಷಕರ ಸೂಚನೆ ಯನ್ವಯ ಕೈಗೊಳ್ಳಬೇಕೆಂದು ತಿಳಿಸಿದರು.

    ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಯಾವುದೇ ಕೊರತೆಗಳು ಆಗದಂತೆ ನೋಡಿಕೊಳ್ಳಬೇಕು ಎಂದ ಅವರು, ಗ್ರಾಮೀಣ ಭಾಗದಲ್ಲಿ ರೈಲ್ವೆ ಹಳಿಗಳ ದಾಟುವ ರಸ್ತೆಗಳ ನಿರ್ಮಾಣಕ್ಕೆ ಅನುಮತಿ ಪತ್ರವನ್ನು ನೀಡಬೇಕೆಂದು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕೇಳೀ ಬರುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಜನಸಾಮಾನ್ಯರಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಅವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ರಾ.ಹೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಕೈಗೊಂಡಾಗ ಮಾತ್ರ ಅಪಘಾತಗಳು ಆಗುವುದನ್ನು ತಪ್ಪಿಸಲು ಸಾಧ್ಯ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು ಸಲಹೆ ನೀಡಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ ಹಾಕೆ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮದ್ ಅಜ್ಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಬಳ್ಕೂರು ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ಪೂಜಾರಿ, ಉಪಾಧ್ಯಕ್ಷರಾಗಿ ಅಶೋಕ ಮೊಗವೀರ ಕಳ್ಳಿಗುಡ್ಡೆ ಆಯ್ಕೆ

    ಕುಂದಾಪುರ :ಬಳ್ಕೂರು ಗ್ರಾ.ಪಂ. ಅಧ್ಯಕ್ಷರಾಗಿ ಗಿರಿಜಾ ಪೂಜಾರಿ, ಉಪಾಧ್ಯಕ್ಷರಾಗಿ ಅಶೋಕ ಮೊಗವೀರ ಕಳ್ಳಿಗುಡ್ಡೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬಳ್ಕೂರು ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಗಿರಿಜಾ ಪೂಜಾರಿ ಉಪಾಧ್ಯಕ್ಷರಾಗಿ ಅಶೋಕ ಮೊಗವೀರ ಕಳ್ಳಿಗುಡ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು.

    ಚುನಾವಣಾಧಿಕಾರಿಯಾಗಿ ಕುಂದಾಪುರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತ ಎಮ್. ಕರ್ತವ್ಯ ನಿರ್ವಹಿಸಿದರು.

    ಒಟ್ಟು 8 ಸದಸ್ಯ ಸ್ಥಾನ ಹೊಂದಿರುವ ಇಲ್ಲಿ 8 ಬಿಜೆಪಿ ಬೆಂಬಲಿತರು ಇದ್ದಾರೆ.

  • ಕುಂದಾಪುರ : ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಉಪಾಧ್ಯಕ್ಷರಾಗಿ ಚೈತ್ರ ಅಡಪ ಆಯ್ಕೆ

    ಕುಂದಾಪುರ : ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಉಪಾಧ್ಯಕ್ಷರಾಗಿ ಚೈತ್ರ ಅಡಪ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಮೊಳಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಚಂದ್ರಶೇಖರ ಶೆಟ್ಟಿ ಉಪಾಧ್ಯಕ್ಷರಾಗಿ ಚೈತ್ರ ಅಡಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು.

    ಚುನಾವಣಾಧಿಕಾರಿಯಾಗಿ ಪ್ರಸನ್ನ ಶೆಟ್ಟಿ ಭಾಗವಹಿಸಿದ್ದರು. ಒಟ್ಟು 11 ಸದಸ್ಯ ಸ್ಥಾನ ಹೊಂದಿರುವ ಇಲ್ಲಿ 7 ಕಾಂಗ್ರೆಸ್ ಬೆಂಬಲಿತರು, 4 ಬಿಜೆಪಿ ಬೆಂಬಲಿತರು ಇದ್ದಾರೆ.

    ಅಧ್ಯಕ್ಷರಾಗಿ ಅಯ್ಕೆಯಾಗಿರುವ ಚಂದ್ರಶೇಖರ ಶೆಟ್ಟಿಯವರು ಮೂರನೇ ಬಾರಿಗೆ ಸದಸ್ಯರಾಗಿದ್ದಾರೆ. ಉಪಾದ್ಯಕ್ಷರಾಗಿರುವ ಚೈತ್ರ ಅಡಪ ಯಶಸ್ವಿ ಹೈನುಗಾರರು. ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

  • ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಜಡ್ಡು ಆಯ್ಕೆ

    ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಜಡ್ಡು ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ವಂಡ್ಸೆಯ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಜಡ್ಡು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಅಭಿಷೇಕ್ ಮೇಲ್ಮನೆ ವಂಡ್ಸೆ ಆಯ್ಕೆಯಾಗಿದ್ದಾರೆ.

    ಗೌರವಾಧ್ಯಕ್ಷರಾಗಿ ಉದಯ ಕೆ.ನಾಯ್ಕ್, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪೂಜಾರಿ ‘ನಾಗಶ್ರೀ’ ವಂಡ್ಸೆ, ಖಜಾಂಚಿಯಾಗಿ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಉಪಾಧ್ಯಕ್ಷರಾಗಿ ಶಶಿಧರ ಶೆಟ್ಟಿ ಪಠೇಲರಮನೆ, ಗೋವರ್ದನ್ ಜೋಗಿ ಹರವರಿ, ಶಶಿಧರ ಶೆಟ್ಟಿ ಕೊರಾಡಿಮನೆ, ಆನಂದ ನಾಯ್ಕ ನ್ಯಾಗಳಮನೆ, ಶ್ರೀನಿವಾಸ ಪೂಜಾರಿ ಕಲ್ಮಾಡಿ, ವಸಂತರಾಜ ಶೆಟ್ಟಿ ವಂಡ್ಸೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಣಿಕಂಠ ಪೂಜಾರಿ ವಂಡ್ಸೆ, ಸಹಾಯಕರಾಗಿ ಉಮೇಶ ನಾಯ್ಕ್ ಭಟ್ರಬೆಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಮಹೇಶ ಗಾಣಿಗ ಅಬ್ಬಿ, ಸಹಾಯಕರಾಗಿ ಶಿವಪ್ರಸಾದ್ ಜಡ್ಡು, ಸಂಘಟನಾ ಕಾರ್ಯದರ್ಶಿಯಾಗಿ ಶಂಕರ ಆಚಾರ್ಯ ಆತ್ರಾಡಿ, ಸಂದೇಶ ಶೆಟ್ಟಿ ಅಡಿಕೆಕೊಡ್ಲು, ವಿಠ್ಠಲ ಆಚಾರ್ಯ ಆತ್ರಾಡಿ, ವಿಜಯ ಪೂಜಾರಿ ಅಬ್ಬಿ, ಲೆಕ್ಕಪರಿಶೋಧಕರು-ಗಣೇಶ ದೇವಾಡಿಗ ನೂಜಿನಮನೆ, ಗೌರವ ಸಲಹೆಗಾರರು: ರುದ್ರಯ್ಯ ಆಚಾರ್ಯ ಆತ್ರಾಡಿ, ಸಂಜೀವ ಪೂಜಾರಿ ವಂಡ್ಸೆ, ಗೋಪಾಲಕೃಷ್ಣ ಉಪಾಧ್ಯಾಯ ವಂಡ್ಸೆ, ರಾಜಶೇಖರ ಉಪಾಧ್ಯಾಯ ವಂಡ್ಸೆ, ವಿ.ಎಮ್.ಸುಧಾಕರ ಮೇಲ್ಮನೆ ವಂಡ್ಸೆ, ಪ್ರಭಾಕರ ಗಾಣಿಗ ಅಬ್ಬಿ, ಸತೀಶ್ ಆರ್.ಚಂದನ್ ಶಾರ್ಕೆ, ಪ್ರತಾಪಕುಮಾರ್ ಶೆಟ್ಟಿ ಪಠೇಲರಮನೆ, ವಾಸು ಜಿ.ನಾಯ್ಕ್ ವಂಡ್ಸೆ, ಪ್ರೇಮಾನಂದ ಆಚಾರ್ಯ ಆಯ್ಕೆಯಾಗಿದ್ದಾರೆ.

    ಸಮಿತಿ ಸದಸ್ಯರಾಗಿ ಮಧುಕರ ಗಾಣಿಗ ಅಬ್ಬಿ, ದಿನೇಶ ಬಿಲ್ಲಾ ವಂಡ್ಸೆ, ಎಲ್.ಎನ್ ಆಚಾರ್ಯ ಆತ್ರಾಡಿ, ಮಂಜುನಾಥ ಗಾಣಿಗ, ದಾಮೋದರ ವಂಡ್ಸೆ, ದೀಪಕಕುಮಾರ್ ಶೆಟ್ಟಿ ಕಟ್ಟೆಮನೆ, ಮಣಿಂಧರ್ ಗಾಣಿಗ ಅಬ್ಬಿ, ನಿಲೇಶ್ ಪೂಜಾರಿ ವಂಡ್ಸೆ, ಗುರುರಾಜ ಗಾಣಿಗ ಅಬ್ಬಿ, ದಿವಾಕರ ಸುಜಿ ವಂಡ್ಸೆ, ರಾಜು ಸೀತಾಗೀತಾ, ರಂಜಿತ್ ಗಾಣಿಗ, ಶಂಕರ ಆಚಾರ್ಯ ನಾಡಗಡಿ, ಸಂದೀಪ ಪೂಜಾರಿ ಹರವರಿ, ಸುಶಾಂತ್ ಎನ್ ವಂಡ್ಸೆ, ಅಶ್ವಿನ್ ಮೇಲ್ಮನೆ ವಂಡ್ಸೆ, ಸುಧೀಂದ್ರ ಆಚಾರ್ಯ ವಂಡ್ಸೆ, ಗಿರೀಶ್ ಎನ್.ನಾಯ್ಕ್ ಭಟ್ರಬೆಟ್ಟು, ಅವಿನಾಶ ಶಾರ್ಕೆ, ಅಕ್ಷಯ ಮೊಗವೀರ, ಕೀರ್ತನ್ ಪೂಜಾರಿ, ಮಂಜುನಾಥ ಕೊಡಕುಳಿ, ರಮೇಶ ಬಳಿಹಿತ್ಲು, ಅನಿಲ್ ಗಾಣಿಗ ವಂಡ್ಸೆ, ಉದಯ ಕೊಡಕುಳಿ, ಸಚಿನ್ ಪೂಜಾರಿ, ಸಕರಾಮ್, ಸತ್ಪಾಲ್ ಶೆಟ್ಟಿ, ಅಕ್ಷಯ ಪೂಜಾರಿ ವಂಡ್ಸೆ, ಪ್ರಜ್ವಲ್ ಮೊಗವೀರ, ಅಭಿಜಿತ್ ಶಾರ್ಕೆ, ಶಶಿಧರ ಆಚಾರ್ಯ ಆತ್ರಾಡಿ ಆಯ್ಕೆಯಾಗಿದ್ದಾರೆ.

  • ಕುಂದಾಪುರ :ಮಾಜೀ ಶಾಸಕರ ಬರ್ತ್ ಡೇ – ವಿಶೇಷಚೇತನ ಮಕ್ಕಳಿಗೆ ಹ್ಯಾಪೀ ಡೇ!

    ಕುಂದಾಪುರ :ಮಾಜೀ ಶಾಸಕರ ಬರ್ತ್ ಡೇ – ವಿಶೇಷಚೇತನ ಮಕ್ಕಳಿಗೆ ಹ್ಯಾಪೀ ಡೇ!

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜೀ ಶಾಸಕ, ಕಾಂಗ್ರೆಸ್ ನಾಯಕ ಕೆ. ಗೋಪಾಲ ಪೂಜಾರಿಯವರು ತನ್ನ ಹುಟ್ಟುಹಬ್ಬವನ್ನು ಸೋಮವಾರ ವಿಶೇಷವಾಗಿ ಆಚರಿಸಿಕೊಂಡರು.

    ನಾಗರಪಂಚಮಿಯಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಕೋಣಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಮಾನಸ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ ಕೆ. ಗೋಪಾಲ ಪೂಜಾರಿ ಅಲ್ಲಿನ ಮಕ್ಕಳೊಂದಿಗೆ ಕೆಲಹೊತ್ತು ಕಳೆದರು. ಬಳಿಕ ತಾವು ತಂದಿದ್ದ ಸಿಹಿತಿಂಡಿ, ಹಣ್ಣು ಹಂಪಲುಗಳನ್ನು ಮಕ್ಕಳಿಗೆ ನೀಡುವ ಮೂಲಕ ಹುಟ್ಟುಹಬ್ವ ಆಚರಿಸಿಕೊಂಡರು. ಮಾಜೀ ಶಾಸಕರಿಗೆ ಬರ್ತ್ ಡೇ ಆದರೆ ಮಕ್ಕಳಿಗೆ ಹ್ಯಾಪೀ ಡೇ ಆಯ್ತು. ಈ ಸಂದರ್ಭ ಕೋಣಿ ಗ್ರಾ.ಪಂ.ಆಧ್ಯಕ್ಷ ಅಶೋಕ್ ಭಂಡಾರಿ, ಮಾನಸ ಜ್ಯೋತಿ ಟ್ರಸ್ಟ್ ಇದರ ಆಡಳಿತಾಧಿಕಾರಿ ಶೋಭಾ ಮಧ್ಯಸ್ಥ, ಅಶೋಕ್ ಪೂಜಾರಿ, ಅರವಿಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

  • ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘಕ್ಕೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ

    ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘಕ್ಕೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘವು 2022-23 ನೇ ಸಾಲಿನ ವ್ಯವಹಾರಿಕ ಕಾರ್ಯ ಸಾಧನೆಗಾಗಿ ಡಿಸಿಸಿ ಬ್ಯಾಂಕ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿ ಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ರವರಿಂದ ಸಂಘದ ಅಧ್ಯಕ್ಷ ಬಿ.ಸುರೇಶ ಅಡಿಗ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಪೂಜಾರಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಗೋವಿಂದ ಪೂಜಾರಿ, ನಿರ್ದೇಶಕರಾದ ಶ್ರೀಧರ ಪಿ.ಎಸ್. ರಮೇಶ್ ಕಾರಂತ, ಕಮಲಾ ಆಚಾರ್ , ಲೀಲಾವತಿ ಗಂಗಾಧರ್ ರವರು ಉಪಸ್ಥಿತರಿದ್ದರು.

    ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘವು 2022-23 ನೇ ಸಾಲಿನ ವ್ಯವಹಾರಿಕ ಕಾರ್ಯ ಸಾಧನೆಗಾಗಿ ಡಿಸಿಸಿ ಬ್ಯಾಂಕ್ ಪ್ರಶಸ್ತಿಯನ್ನುಸಂಘದ ಅಧ್ಯಕ್ಷ ಬಿ.ಸುರೇಶ ಅಡಿಗ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಪೂಜಾರಿ ಪ್ರಶಸ್ತಿಯನ್ನು ಸ್ವೀಕರಿಸಿದರು.

  • ಆನಗಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಎಚ್.ಕೆ.ಸವಿತಾ ಉಪಾಧ್ಯಕ್ಷರಾಗಿ ಉದಯ ಪೂಜಾರಿ ಆಯ್ಕೆ

    ಆನಗಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಎಚ್.ಕೆ.ಸವಿತಾ ಉಪಾಧ್ಯಕ್ಷರಾಗಿ ಉದಯ ಪೂಜಾರಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಅನಗಳ್ಳಿ ಗ್ರಾಮ ಪಂಚಾಯತ್‍ನ 2ನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಚ್. ಕೆ.ಸವಿತಾ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಉದಯ ಪೂಜಾರಿ ಇವರು ಆಯ್ಕೆಯಾದರು.

    ಈ ಗ್ರಾಮ ಪಂಚಾಯತ್‍ನಲ್ಲಿ ಒಟ್ಟು 8 ಸ್ಥಾನಗಳಿದ್ದು. 3 ಕಾಂಗ್ರೆಸ್ , 3 ಬಿಜೆಪಿ, 2 ಪಕ್ಷೇತರ. ಸೋಮವಾರ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಕಾಂಗ್ರೆಸ್ ಆಭ್ಯರ್ಥಿಗೆ 4ಮತ ಮತ್ತು ಬಿಜೆಪಿ ಬೆಂಬಲಿತ ಆಭ್ಯರ್ಥಿ 4 ಮತಗಳನ್ನು ಸಮಬಲವಾಗಿ ಪಡೆದುಕೊಂಡಿದ್ದರು. ಇಬ್ಬರು ಆಭ್ಯರ್ಥಿಗಳಿಗೂ ಸಮಬಲವಾಗಿ ಮತ ಚಲಾವಣೆಯಾದ್ದರಿಂದ ಚುನಾವಣಾಧಿಕಾರಿಗಳು ಚೀಟಿ ಎತ್ತುವ ಮೂಲಕ ಪ್ರಕ್ರಿಯೆ ಕೈಗೊಂಡಾಗ ಅಧ್ಯಕ್ಷ ಸ್ಥಾನ ಎನ್ನುವುದು ಕಾಂಗ್ರೆಸ್ ಬೆಂಬಲಿತ ಆಭ್ಯರ್ಥಿ ಎಚ್ ಕೆ ಸವಿತಾ ಇವರ ಪಾಲಾಯಿತು. ಉಪಾಧ್ಯಕ್ಷರಾಗಿ ಉದಯ ಪೂಜಾರಿ ಇವರು ಅವಿರೋಧವಾಗಿ ಆಯ್ಕೆಯಾದರು.

    ಆನಗಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಹಿಂ.ವ.ಅ(ಮ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಚುನಾವನಾಧಿಕಾರಿಯಾಗಿ ಕುಂದಾಪುರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತ ಎಮ್, ಕರ್ತವ್ಯ ನಿರ್ವಹಿಸಿದರು.

  • ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸ್ ಅವರ ಜನ್ಮದಿನಾಚರಣೆ

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸ್ ಅವರ ಜನ್ಮದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತೇ ಭಾರತವನ್ನು ಅವಲಂಬಿಸುವಂತೆ ಸನ್ನಿವೇಶ ಬಂದಿರುವುದು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಆಡಳಿತದ ದೂರದೃಷ್ಟಿಯ ನಿರ್ಣಯಗಳು ಮತ್ತು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭೂ ಸುಧಾರಣೆಗೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯದಲ್ಲಿ ದಿಟ್ಟವಾಗಿ ಜಾರಿಗೊಳಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಇಂದು ದೇಶಕ್ಕೆ ಮಾದರಿ ಎಂದು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಅವರು ತಿಳಿಸಿದರು.

    ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ ಸಭೆಯಲ್ಲಿ ಅವರು ಮಾತನಾಡಿದರು.

    ಆನಗಳ್ಳಿ ಪಂಚಾಯಿತನ ಮಾಜಿ ಅಧ್ಯಕ್ಷರಾದ ಗಂಗಾಧರ್ ಶೆಟ್ಟಿ ಅವರು ಅಗಲಿದ ನಾಯಕರನ್ನು ನೆನಪಿಸಿಕೊಂಡು ಮಾತನಾಡಿದರು.

    ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ , ಪುರಸಭಾ ಸದಸ್ಯರಾದ ಚಂದ್ರಶೇಖರ್ ಖಾರ್ವಿಯವರು ವಹಿಸಿದ್ದರು.

    ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಉಪ ಸಮಿತಿಗಳ ಅಧ್ಯಕ್ಷರಾದ ಅಶ್ವಥ್ ಕುಮಾರ್ ,ಧರ್ಮಪ್ರಕಾಶ್ , ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಷನ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಸುನಿಲ್ ಪೂಜಾರಿ, ಕೇಶವ್ ಭಟ್, ಅಭಿಜಿತ್ ಪೂಜಾರಿ , ಅಶೋಕ್ ಸುವರ್ಣ, ಜ್ಯೋತಿ ನಾಯ್ಕ್ ,ಆಲ್ಡ್ರಿನ್ ಡಿಸೋಜಾ, ಆನಂದ ಪೂಜಾರಿ, ಸದಾನಂದ ಖಾರ್ವಿ, ಮಧುಕರ, ನಾಗರಾಜ್ ನಾಯ್ಕ, ಸೀಮಾ ಚಂದ್ರ ಪೂಜಾರಿ , ದಿನೇಶ್ ಬೆಟ್ಟ, ಕೆ ಪಿ ಅರುಣ್ ಪಟೇಲ್, ಜ್ಯೋತಿ ಎನ್ , ಪ್ರೀತಮ್ ಕರ್ವಾಲ್ಲೊ, ಮೆಬಲ್ ಡಿಸೋಜಾ , ಕೆ ಸುರೇಶ್, ನಿತಿನ್ ಡಿಸೋಜಾ, ವಿವೇಕಾನಂದ, ಪ್ರೇಮ ಕೋತ, ಸುಧೀಂದ್ರ ಇನ್ನಿತರರು ಉಪಸ್ಥಿತರಿದ್ದರು.

    ಮಹಿಳಾ ಅಧ್ಯಕ್ಷೆ ದೇವಕಿ ಸಣ್ಣಯ್ಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ವಂದಿಸಿದರು.

  • ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಬ್ಯಾಂಕ್ ಪ್ರಶಸ್ತಿಯ ಗರಿ

    ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಬ್ಯಾಂಕ್ ಪ್ರಶಸ್ತಿಯ ಗರಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘವು ಪ್ರಾರಂಭಗೊಂಡು 65 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ, 66ನೇ ವರ್ಷದಲ್ಲಿ ಯಶಪ್ರದವಾಗಿ ಮುನ್ನೆಡೆಯುತ್ತಿರುವ ಸುಸಂದರ್ಭ ಸಂಘವು 208 ಕೋಟಿಗೂ ಮಿಕ್ಕಿ ಠೇವಣಾತಿ ಹೊಂದಿ, 167 ಕೋಟಿಗೂ ಮಿಕ್ಕಿ ಸಾಲ ನೀಡಿದ್ದು, ಸತತ 13 ವರ್ಷಗಳಿಂದ `ಅ’ ತರಗತಿ ಆಡಿಟ್ ವರ್ಗೀಕರಣ ಹೊಂದಿದೆ ,2022-2023ನೇ ಸಾಲಿನಲ್ಲಿ ಶೇ.98.08ರಷ್ಟು ಸಾಲ ವಸೂಲಾತಿಯೊಂದಿಗೆ 5.17ಕೋಟಿ ಲಾಭವನ್ನು ಗಳಿಸಿ ಇನ್ನಿತರ ಸಹಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಂಘವು ಮುಂಚೂಣಿಯಲ್ಲಿದೆ.

    ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ರಾಜ್ಯದಲ್ಲೇ ಪ್ರಪ್ರಥಮವಾಗಿ ಸಹಕಾರಿ ಸಂಸ್ಥೆಯು ಅನುಷ್ಠಾನಕ್ಕೆ ತಂದಿರುವ ಬಗ್ಗೆ ಹಾಗೂ ತನ್ನದೇ ವಿಶಿಷ್ಟ ಯೋಜನೆಯಾದ ರೈತ ಸಂಜೀವಿನಿ ಕ್ರೆಡಿಟ್ ಕಾರ್ಡ್ ವಿತರಿಸಿದ ಬಗ್ಗೆ ಹಾಗೂ ಸಕಲ ಮಾರಾಟ ಮಳಿಗೆಯ ಮೂಲಕ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಕೃಷಿ ಉಪಕರಣ ಮತ್ತು ದಿನಬಳಕೆಯ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ವಿತರಿಸಿ ಯಶಸ್ವಿಯಾದ ಬಗ್ಗೆಮೆಚ್ಚುಗೆ ವ್ಯಕ್ತಪಡಿಸಿ ಸಂಘದ ಅತ್ಯುತ್ತಮ ಕಾರ್ಯ ವೈಖರಿಯನ್ನು ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿ. ಬೆಂಗಳೂರು ಇವರು 2021-2022ನೇ ಸಾಲಿನಲ್ಲಿ “ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ”ವೆಂದು, ಪ್ರಶಸ್ತಿಗೆ ಆಯ್ಕೆ ಮಾಡಿ ಆ. 19 ರಂದು ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್‍ರವರು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ಶರತ ಕುಮಾರ್ ಶೆಟ್ಟಿ ಇವರಿಗೆ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

    ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರವೀಂದ್ರ ಕಾಮತ್ ಮತ್ತು ಭಾಸ್ಕರ ಶೆಟ್ಟಿ ಇವರು ಉಪಸ್ಥಿತರಿದ್ದರು.