ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜೀ ಶಾಸಕ, ಕಾಂಗ್ರೆಸ್ ನಾಯಕ ಕೆ. ಗೋಪಾಲ ಪೂಜಾರಿಯವರು ತನ್ನ ಹುಟ್ಟುಹಬ್ಬವನ್ನು ಸೋಮವಾರ ವಿಶೇಷವಾಗಿ ಆಚರಿಸಿಕೊಂಡರು.
ನಾಗರಪಂಚಮಿಯಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಕೋಣಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಮಾನಸ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ ಕೆ. ಗೋಪಾಲ ಪೂಜಾರಿ ಅಲ್ಲಿನ ಮಕ್ಕಳೊಂದಿಗೆ ಕೆಲಹೊತ್ತು ಕಳೆದರು. ಬಳಿಕ ತಾವು ತಂದಿದ್ದ ಸಿಹಿತಿಂಡಿ, ಹಣ್ಣು ಹಂಪಲುಗಳನ್ನು ಮಕ್ಕಳಿಗೆ ನೀಡುವ ಮೂಲಕ ಹುಟ್ಟುಹಬ್ವ ಆಚರಿಸಿಕೊಂಡರು. ಮಾಜೀ ಶಾಸಕರಿಗೆ ಬರ್ತ್ ಡೇ ಆದರೆ ಮಕ್ಕಳಿಗೆ ಹ್ಯಾಪೀ ಡೇ ಆಯ್ತು. ಈ ಸಂದರ್ಭ ಕೋಣಿ ಗ್ರಾ.ಪಂ.ಆಧ್ಯಕ್ಷ ಅಶೋಕ್ ಭಂಡಾರಿ, ಮಾನಸ ಜ್ಯೋತಿ ಟ್ರಸ್ಟ್ ಇದರ ಆಡಳಿತಾಧಿಕಾರಿ ಶೋಭಾ ಮಧ್ಯಸ್ಥ, ಅಶೋಕ್ ಪೂಜಾರಿ, ಅರವಿಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.











