Category: ಸುದ್ದಿ

  • ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ದುಬೈ ಮೂಲದ ಕಫೆಟೋಜ್ ಶಾಖೆ ಕುಂದಾಪುರದಲ್ಲಿ ಶುಭಾರಂಭ

    ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ದುಬೈ ಮೂಲದ ಕಫೆಟೋಜ್ ಶಾಖೆ ಕುಂದಾಪುರದಲ್ಲಿ ಶುಭಾರಂಭ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಜಗತ್ತಿನ ವಿವಿಧೆಡೆಗಳಲ್ಲಿ ತನ್ನ ಶಾಖೆಯನ್ನು ಹೊಂದಿರುವ ಪ್ರಸಿದ್ಧ ಕಫೆಟೋಜ್ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ತನ್ನ ಶಾಖೆಯನ್ನು ಕುಂದಾಪುರದಲ್ಲಿ ಸೋಮವಾರ ಲೋಕಾರ್ಪಣೆಗೊಳಿಸಿದೆ.

    ಕುಂದಾಪುರದ ಶಾಸ್ತ್ರೀ ವೃತ್ತದ ಸಮೀಪ ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿರುವ ಯುವಜನ ಕ್ರೀಡಾ ಇಲಾಖೆಯ ಕಟ್ಟಡದಲ್ಲಿ ಸೋಮವಾರ ಸಂಜೆ ತಹಸೀಲ್ದಾರ್ ಶೋಭಾಲಕ್ಷ್ಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದೇಶಗಳಲ್ಲಿ ತಮ್ಮ ಪ್ರಖ್ಯಾತಿಯನ್ನು ಗಳಿಸಿರುವ ಕಫೆಟೋಜ್ ಸಂಸ್ಥೆ ಕುಂದಾಪುರದಲ್ಲಿ ಆರಂಭಗೊಂಡಿರುವುದು ಕುಂದಾಪುರಿಗರಿಗೆ ಹೆಮ್ಮೆಯ ವಿಷಯ ಎಂದರು. ಗ್ರಾಹಕರು ವೆಜ್ ಹಾಗೂ ನಾನ್ ವೆಜ್ ಎರಡನ್ನೂ ಒಂದೇ ಸೂರಿನಡಿಯಲ್ಲಿ ಪಡೆಯುವ ಉತ್ತಮ ಅವಕಾಶ ಕಫೆಟೋಜ್ ನಲ್ಲಿದೆ. ಶುದ್ಧತೆ ಮತ್ತು ಸ್ವಚ್ಛತೆಯ ಜೊತೆಗೆ ಕೈಗೆಟುಕುವ ಬೆಲೆ ಇದರ ವಿಶೇಷ ಎಂದ ಅವರು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

    ಕಫೆಟೋಜ್ ಕುಂದಾಪುರ ಶಾಖೆಯ ಮಾಲಕರಾದ ಅಬೂಬಕ್ಕರ್ ಹಾಗೂ ನೌಫೀಝ್ ಗ್ರಾಹಕರನ್ನು ಸ್ವಾಗತಿಸಿ ಉಪಚರಿಸಿದರು.

    ಪ್ರಾಂಚೈಸಿ ಪಡೆಯುವ ಆಸಕ್ತರಿದ್ದರೆ 9743 780 880 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದರು.

  • ಪಂಚವರ್ಣ ಸಂಸ್ಥೆಯ 171ನೇ ಪರಿಸರಸ್ನೇಹಿ ಅಭಿಯಾನ ರಾಷ್ಟ್ರೀಯ ಹೆದ್ದಾರಿ ಬ್ಯ್ಲಾಕ್ ಸ್ಪಾಟ್ ಸ್ಥಳ ಸೇರಿದಂತೆ ವಿವಿಧ ಕಡೆಗಳಲ್ಲಿ ವನಮಹೋತ್ಸವ

    ಪಂಚವರ್ಣ ಸಂಸ್ಥೆಯ 171ನೇ ಪರಿಸರಸ್ನೇಹಿ ಅಭಿಯಾನ ರಾಷ್ಟ್ರೀಯ ಹೆದ್ದಾರಿ ಬ್ಯ್ಲಾಕ್ ಸ್ಪಾಟ್ ಸ್ಥಳ ಸೇರಿದಂತೆ ವಿವಿಧ ಕಡೆಗಳಲ್ಲಿ ವನಮಹೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಸಂಯುಕ್ತ ಆಶ್ರಯದಲ್ಲಿ ಪರಿಸರಸ್ನೇಹಿ ಅಭಿಯಾನಕ್ಕೆ 171ನೇ ವಾರದ ಸಂಭ್ರಮ ಆ ಪ್ರಯುಕ್ತ ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು ಕೊಡಮಾಡಿದ ಗಿಡಗಳನ್ನು ಕೋಟ ಹರ್ತಟ್ಟು ,ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯ್ಲಾಕ್ ಸ್ಪಾಟ್ ಸ್ಥಳದಲ್ಲಿ ಗಿಡ ನೆಟ್ಟು ತಮ್ಮ ಪರಿಸರ ಸಂರಕ್ಷಿಸುವ ಮಹತ್ಕಾರ್ಯವನ್ನು ಆಯೋಜಿಸಿಕೊಂಡಿತು.

    ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಚಾಲನೆ ನೀಡಿದರು.ಸ್ಥಳೀಯ ಹಿರಿಯ ನಾಗರಿಕರಾದ ವಿಠ್ಠಲ್ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಸಂಚಾಲಕ ಅಮೃತ್ ಜೋಗಿ,ಕಾರ್ಯದರ್ಶಿ ಸುಧೀಂದ್ರ ಜೋಗಿ,ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್,ಸದಸ್ಯರಾದ ಭಾಸ್ಕರ್ ದೇವಾಡಿಗ,ಶಶಿಧರ ತಿಂಗಳಾಯ,ಕೃಷ್ಣ ಕಾಂಚನ್,ಕಾರ್ತಿಕ್ ಎನ್,ಅಶ್ವಿನ್ ಮಟಪಾಡಿ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಸದಸ್ಯೆ ಸಾನಿಕಾ,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಗಿಳಿಯಾರು ಮತ್ತಿತರರು ಉಪಸ್ಥಿತರಿದ್ದರು.ಪಂಚವರ್ಣ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

  • ಕೋಟ -ಲಕ್ಷ್ಮೀಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

    ಕೋಟ -ಲಕ್ಷ್ಮೀಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ವಿದ್ಯಾರ್ಥಿಗಳಲ್ಲಿ ತಾಳ್ಮೆ ಮತ್ತು ತಮ್ಮ ಜೀವನದ ಗುರಿಯನ್ನು ತಲುಪಲು ಪೂರಕವಾದ ವರ್ತನೆಗಳನ್ನು ರೂಢಿಸಿಕೊಂಡಾಗ ಉತ್ತಮ ಸಾಧನೆಗಳನ್ನು ಮಾಡಲು ಸಾಧ್ಯವಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಹೆಗ್ಡೆ ಹೇಳಿದರು.

    ಲಕ್ಷ್ಮೀಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಇಲ್ಲಿ ಜರುಗಿದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

    ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಆನಂದ ಸಿ ಕುಂದರ್ ಶುಭಶಂಸನೆಗೈದು ಮಾತನಾಡಿ ಈ ಸರ್ಕಾರಿ ಕಾಲೇಜಿನ ಸೌಲಭ್ಯಗಳ ಪ್ರಯೋಜನವನ್ನು ಸ್ಥಳೀಯ ಮಕ್ಕಳು ಹೆಚ್ಚಿನ ರೀತಿಯಲ್ಲಿ ಪಡೆಯುವಂತಾಗಲಿ ಎಂದು ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಸುನೀತ ವಿಕಾಲೇಜಿನ ಚಟುವಟಿಕೆಗಳ ವರದಿ ಮಂಡನೆ ಮಾಡು ಕಾಲೇಜಿನ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿದರು.

    ಕಾರ್ಯಕ್ರಮದಲ್ಲಿ ಕಾಲೇಜಿನ ನ್ಯಾಕ್ ಪ್ರಕ್ರಿಯೆಯಲ್ಲಿ ಸಹಕರಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆನಂದಸಿ ಕುಂದರ್,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಹೆಚ್ ಕುಂದರ್,ಕಾಲೇಜು ಶಿಕ್ಷಕ ರಕ್ಷಕರ ಸಂಘದ ಅಧ್ಯಕ್ಷ ಜನಾರ್ಧನ ಆಚಾರ್ಯ, ಗೀತಾನಂದ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಹಾಗೂ ಉಪನ್ಯಾಸಕ ಅನಂತ ಕುಮಾರ ಸಿ.ಎಸ್, ಇವರಿಗೆ ಗೌರವಿಸಲಾಯಿತು. ಕಾಲೇಜು ಮತ್ತುಇತರ ಕಾಲೇಜುಗಳಲ್ಲಿ ಜರುಗಿದ ಸಾಂಸ್ಕೃತಿಕ ಸ್ಪರ್ಧೆ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ ವಿದ್ಯಾರ್ಥಿಗಳನ್ನು ಈ ವೇಳೆ ಸನ್ಮಾನಿಸಲಾಯಿತು.

    ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದಿನ, ಡಾ. ಸುಬ್ರಮಣ್ಯ ಎ, ಡಾ.ಮನೋಜ್ ಕುಮಾರ್ ಎಂ, ಮನೋಹರ್ ಬಿ, ರಾಜಣ್ಣಎಂ, ಡಾ. ಲೀಲಾವತಿಎನ್, ಮುರಳಿ ಎಂ.ಜಿ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಪ್ರಥಮ,ದ್ವಿತೀಯ ಹಾಗೂ ತೃತೀಯ ಪದವಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ 2021-22ರಲ್ಲಿ ತೇರ್ಗಡೆಯಾಗಿ ವಿಶಿಷ್ಟ ಶ್ರೇಣಿಯಲ್ಲಿ ಅಂಕ ಪಡೆದ ಒಟ್ಟು 76 ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ವತಿಯಿಂದ ನಗದು ಬಹುಮಾನವನ್ನು ನೀಡಲಾಯಿತು.

    ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಂಕರನಾಯ್ಕ ಬಿ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದನ್, ತೃತೀಯ ಬಿ.ಕಾಂವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ವಾಣಿಜ್ಯ ಶಾಸ್ತ್ರವಿಭಾಗ ಸಹಾಯಕ ಪ್ರಾಧ್ಯಾಪಕ ಪುರುಷೋತ್ತಮ ನಿರೂಪಿಸಿದರು.

  • ಕೋಟದ ಸಕಡ್ ಫೌಂಡೇಶನ್ ವತಿಯಿಂದ ಅಡುಗೆ ಪರಿಕರ ಹಸ್ತಾಂತರ

    ಕೋಟದ ಸಕಡ್ ಫೌಂಡೇಶನ್ ವತಿಯಿಂದ ಅಡುಗೆ ಪರಿಕರ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕೋಟ:ಇಲ್ಲಿನ ಕೋಟದ ಪಡುಕರೆ ಸಂಯುಕ್ತ ಪ್ರೌಢಶಾಲೆಗೆ ಅಡುಗೆ ಪಾತ್ರೆಗಳ ಪರಿಕರವನ್ನು ಇತ್ತೀಚಿಗೆ ಕೋಟದ ಸಕಡ್ ಫೌಂಡೇಶನ್ ಹಸ್ತಾಂತರಿಸಿತು.

    ಸಕಡ್ ಫೌಂಡೇಶನ್ ನಿರ್ದೇಶಕ ಸಾಮಾಜಿಕ ಕಾರ್ಯಕರ್ತ ಕೋಟ ಶ್ರೀಕಾಂತ್ ಶೆಣೈ ಅಭಿಲಾಷೆಯಂತೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ಕೊಡುಗೆಯಾಗಿ ನೀಡಿತು.

    ಸಕಡ್ ಫೌಂಡೇಶನ್ ಪ್ರವರ್ತಕ ಅನಿಕೇತ್ ಶೆಣೈ ಹಾಗೂ ನಿರ್ದೇಶಕ ಶ್ರೀಕಾಂತ್ ಶೆಣೈ ಇವರುಗಳನ್ನು ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಗೌರವಿಸಲಾಯಿತು.

    ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸೇಸು ಟೀಚರ್ ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಾಗರಾಜ್ ,ದೈಹಿಕ ಶಿಕ್ಷಕ ನಾರಾಯಣ ಮರಕಾಲ,ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ,ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ಆದಿವಾಸಿಗಳಿಗೆ ಬಜೆಟ್ ನಲ್ಲಿ ಅವಕಾಶ: ಆದಿವಾಸಿಗಳ ಸಂಘಟನೆ ಸ್ವಾಗತ

    ಕುಂದಾಪುರ :ಆದಿವಾಸಿಗಳಿಗೆ ಬಜೆಟ್ ನಲ್ಲಿ ಅವಕಾಶ: ಆದಿವಾಸಿಗಳ ಸಂಘಟನೆ ಸ್ವಾಗತ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಆದಿವಾಸಿಗಳಿಗೆ ನೀಡಲಾದ ಪ್ರಾದಾನ್ಯತೆ ಕುರಿತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ವಿಮರ್ಶಾತ್ಮಕವಾಗಿ ಸ್ವಾಗತಿಸಿದೆ.

    ಆದಿವಾಸಿಗಳ ಮುಖ್ಯ ಬೇಡಿಕೆಯಾದ ಎಸ್.ಸಿ.ಪಿ ಮತ್ತು ಟಿ.ಎಸ್. ಪಿ.ಉಪಯೋಜನೆಗೆ ಸಂಬಂಧಿಸಿದ ಕಾಯ್ದೆಯ 7- ಡಿ ಪರಿಚ್ಛೇದವನ್ನು ಕೈ ಬಿಟ್ಟಿರುವುದು ಸ್ವಾಗತಾರ್ಹ ಎಂದಿರುವ ಸಂಘಟನೆ, ದಲಿತ-ಬುಡಕಟ್ಟು ಉಪ ಯೋಜನೆ-ಎಸ್. ಸಿ.ಪಿ ಮತ್ತು ಟಿ.ಎಸ್. ಪಿ.ಗೆ 34,294 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು ಅದರ ಸದುಪಯೋಗವಾಗುವಂತೆ ಸರ್ಕಾರವು ಸಮುದಾಯಗಳ ಪ್ರತಿನಿಧಿಗಳು, ಸಂಘಟನೆಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಸಂಘಟನೆಯ ಅಧ್ಯಕ್ಷ ಶ್ರೀಧರ ನಾಡಾ ಹೇಳಿದ್ದಾರೆ. ಆದಿವಾಸಿಗಳಿಗೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರವನ್ನು 6 ತಿಂಗಳಿನಿಂದ 12 ತಿಂಗಳಿಗೆ ವಿಸ್ತರಿಸಲಾಗಿದೆ. ಆಹಾರ ಗುಣಮಟ್ಟ‌ ಮತ್ತು ಲಭ್ಯತೆಯ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

    ಅರಣ್ಯ ಹಕ್ಕುಗಳ ಕಾಯ್ದೆ 2006ರಂತೆ ಭೂಮಿ, ಅರಣ್ಯ, ಸಮುದಾಯ ಹಕ್ಕುಗಳು ದಕ್ಕುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭೂಮಿ ಖರೀದಿ, ನಿವೇಶನ, ಮನೆ ನಿರ್ಮಾಣಕ್ಕೆ ಅನುದಾನವನ್ನು ಹೆಚ್ಚಿಸಬೇಕು.

    ಜಿಲ್ಲೆಯಲ್ಲಿ ಸುಮಾರು 210 ಕ್ಕೂ ಕಡಿಮೆ ಕುಟುಂಬಗಳು ಇರುವ ಹಸಲ ಸಮುದಾಯದ ಅಭಿವೃದ್ಧಿಗೆ ಕ್ರಮವಹಿಸಬೇಕು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರಿಗೆ ಹಸಲರು ಪರಿಶಿಷ್ಟ ಪಂಗಡ ST ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಹಸಲ ಪರಿಶಿಷ್ಟ ಜಾತಿ SC ಪ್ರಮಾಣ ಪತ್ರ ನೀಡಲಾಗಿದೆ. ಇದರಿಂದ ಅವರಿಗೆ ಅರಣ್ಯ ಹಕ್ಕು, ಪೌಷ್ಟಿಕ ಆಹಾರ, ಸೂಕ್ಷ್ಮ ಬುಡಕಟ್ಟು ಸಮುದಾಯಗಳಿಗೆ ಸಿಗುವ ವಸತಿ, ಸ್ವಯಂ ಉದ್ಯೋಗ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಗುಡ್ಡಾಗಾಡು ಪ್ರದೇಶದಲ್ಲಿ ವಾಸಿಸುವ ಅವರು ನೈಸರ್ಗಿಕವಾಗಿ ದೈಹಿಕ ಕುಬ್ಜತೆಗಳು ಉದ್ಯೋಗ ಸಂದರ್ಭದಲ್ಲಿ ಅವರಿಗೆ ಸಿಗಬೇಕಾದ ರಿಯಾಯಿತಿಗಳು ಸಿಗುತ್ತಿಲ್ಲ. ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಹಸಲರು ಮತ್ತು ಮರಾಠಿ ಸಮುದಾಯಗಳಿಗೆ ಅವರ ಭೂಮಿಯ ಹಕ್ಕುಗಳು ಸಿಕ್ಕಿಲ್ಲ. ಅವರು ವಾಸಿಸುವ ಭೂಮಿ ಕಂದಾಯವೋ, ಅರಣ್ಯಭೂಮಿಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರಿಂದ ಭೂಮಿ ಹಕ್ಕುಗಳು ಪಡೆಯಲು ಸಾಧ್ಯವಾಗುತ್ತಿಲ್ಲ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಾಸಿಸುವ ಆದಿವಾಸಿಗಳ ಪ್ರದೇಶದಲ್ಲಿ ಜಿಲ್ಲೆಯ ಗಡಿ ಗುರುತುಗಳ ಸಮಸ್ಯೆಗಳಿವೆ. ಹಳ್ಳಿಹೊಳೆ ಕಟ್ಟಿನಾಡಿ ಪ್ರದೇಶ ಶಿವಮೊಗ್ಗ, ಉಡುಪಿ ಜಿಲ್ಲೆಯ ಗಡಿಯ ಕುರಿತು ನಿಖರತೆ ಇಲ್ಲದೆ ಎರಡು ಜಿಲ್ಲೆಯ ಜಿಲ್ಲಾಡಳಿತ ಇವರನ್ನು ಭೂಮಿ ಹಕ್ಕಿನಿಂದ ವಂಚಿತರಾಗಿ ಮಾಡಿದೆ. ಮಹಮ್ಮದ್ ಪೀರ್ ವರದಿ ಪ್ರಕಾರ ಜಿಲ್ಲೆಯ ಕೊರಗ ಸಮುದಾಯದ ಕುಟುಂಬಗಳಿಗೆ ಭೂಮಿಯನ್ನು ನೀಡಲು ಕ್ರಮ ವಹಿಸಬೇಕು. ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಹಾಸ್ಟೆಲ್ ಗಳ ಅವ್ಯವಸ್ಥೆ ಸರಿಪಡಿಸಬೇಕು. ನಿರ್ಮಾಣ ಹಂತದಲ್ಲಿರುವ ಹೊಸ ಹಾಸ್ಟೆಲ್ ಗಳು ಕೂಡಲೇ ವಿದ್ಯಾರ್ಥಿಗಳ ಉಪಯೋಗಕ್ಕೆ ಸಿಗುವಂತೆ ಆಗಬೇಕು.

    ಈದೆಸೆಯಲ್ಲಿ ಸರಕಾರವು ಸಮುದಾಯಗಳು, ಸಂಘಟನೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೂಡಲೇ ಕರೆಯ ಬೇಕೆಂದು ಆಗ್ರಹಿಸಿದ್ದಾರೆ.

  • ತೆಕ್ಕಟ್ಟೆ ಪಂಚಾಯತಿಯಲ್ಲಿ ದಲಿತ ವಿರೋಧಿ ನೀತಿ : ದಲಿತ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ

    ತೆಕ್ಕಟ್ಟೆ ಪಂಚಾಯತಿಯಲ್ಲಿ ದಲಿತ ವಿರೋಧಿ ನೀತಿ : ದಲಿತ ಸಂಘಟನೆಗಳಿಂದ ಪ್ರತಿಭಟನೆಯ ಎಚ್ಚರಿಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ದಲಿತ ಮೀಸಲಾತಿಯ ಬಿಲ್ ಕಲೆಕ್ಟರ್ ಹುದ್ದೆ ಮೂರು ವರ್ಷದಿಂದ ಖಾಲಿ ಇದ್ದರೂ ಭರ್ತಿ ಮಾಡದೇ ಈಗ ಸಾಮಾನ್ಯ ಮೀಸಲಾತಿಯಲ್ಲಿ ನೇಮಕ ಮಾಡುವ ಹುನ್ನಾರ ನಡೆದಿದ್ದು, ಇದು ದಲಿತ ವಿರೋಧಿ ನೀತಿಯಾಗಿದೆ ಎಂದು ದಲಿತ ಮುಖಂಡ ಸತೀಶ್ ಕುಮಾರ್ ತೆಕ್ಕಟ್ಟೆ ಆರೋಪಿಸಿದ್ದಾರೆ.

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಲ್ ಆಪರೇಟರ್ ದಲಿತ ಮೀಸಲಾತಿಯಡಿಯಲ್ಲಿ ಅರ್ಹ ಫಲಾನುಭವಿಗಳಿದ್ದರೂ ಆಯ್ಕೆ ಮಾಡಿಲ್ಲ. ಈಗ ಇದ್ದಕ್ಕಿದ್ದಂತೆ ಸಾಮಾನ್ಯ ಮೀಸಲಾತಿಯಡಿ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆ ನಡೆಸಿ ನಿರ್ಣಯಿಸಿರುವುದು ಕಾನೂನು ಬಾಹಿರ ಎಂದು ಆಕ್ರೋಶ ಹೊರ ಹಾಕಿರುವ ಅವರು ಸೋಮವಾರ ಗ್ರಾಮ ಪಂಚಾಯತ್ ಎದುರು ದಲಿತ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನೆಡೆಸುವುದಾಗಿ ಎಚ್ಚರಿಸಿದ್ದಾರೆ.

    ಸಭೆಯಲ್ಲಿ ದಲಿತ ಮುಖಂಡರಾದ ಶ್ರೀನಿವಾಸ ಮಲ್ಯಾಡಿ, ಮಹೇಶ್ ಕುಮಾರ್, ನರಸಿಂಹ ತೆಕ್ಕಟ್ಟೆ, ಶರತ ಕುಮಾರ್, ಗಾಯತ್ರಿ ತೆಕ್ಕಟ್ಟೆ, ವೈಕುಂಠ ಕೊಮೆ ಮೊದಲಾದವರು ಉಪಸ್ಥಿತರಿದ್ದರು.

  • ಕೋಟ ಪಂಚವರ್ಣ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 27ನೇ ಸಾಧಕ ಕೃಷಿಕರ ಗುರುತಿಸುವ ಕಾರ್ಯಕ್ರಮ

    ಕೋಟ ಪಂಚವರ್ಣ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 27ನೇ ಸಾಧಕ ಕೃಷಿಕರ ಗುರುತಿಸುವ ಕಾರ್ಯಕ್ರಮ

    ರೈತರನ್ನು ಗುರುತಿಸುವ ಕಾರ್ಯ ಶ್ರೇಷ್ಠವಾದದ್ದು- ಪ್ರತಾಪ್ ಶೆಟ್ಟಿ ಸಾಸ್ತಾನ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ರೈತರನ್ನು ಗುರುತಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೈತಧ್ಚನಿ ಸಂಘ ಕೋಟ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 27ನೇ ಸರಣಿ ಕಾರ್ಯಕ್ತಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಕೃಷಿ ಕ್ಷೇತೃದಲ್ಲಿ ಸಾಂಪ್ರದಾಯಿಕ ಕೃಷಿ ಕಾಯಕಕ್ಕೆ ಹೆಚ್ಚು ಒತ್ತು ನೀಡಿದವರಲ್ಲಿ ಮೋಹನ್ ಪೂಜಾರಿ ಓರ್ವರು ,ಆಧುನಿಕತೆ ನಡುವೆ ಸಾಂಪ್ರದಾಯಿಕ ಕೃಷಿಯನ್ನು ಜಗತ್ತಿಗೆ ಪಸರಿಸುವ ಕಾರ್ಯ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತದೆ. ಒಂದು ಸಂಘಟನೆ ಮನೆ ಮನೆಗೆ ತೆರಳಿ ರೈತರನ್ನು ಹುಡುಕಿ ಅರ್ಥಪೂರ್ಣವಾಗಿ ಗೌರವುಸುವ ಮಹತ್ಕಾರ್ಯಯನ್ನು ಕೊಂಡಾಡಿದರು. ರೈತನೆ ಈ ದೇಶದ ಬೆನ್ನೆಲುಬು ಎನ್ನುವ ಪರಿಪಾಠದ ಜಗತ್ತಿನಲ್ಲಿ ನಾವುಗಳಿದ್ದೇವೆ, ಆದರೆ ಅವರ ಆತ್ಮಸ್ಥೈರ್ಯ ತುಂಬುವ ಕೆಲಸ ಸರಕಾರದಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

    ಈ ವೇಳೆ ಸಾಧಕ ಕೃಷಿಕ ಪಾಂಡೇಶ್ವರ ಮೂಡಹಡು ಮೋಹನ್ ಪೂಜಾರಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ರಂಗಕರ್ಮಿ ಅಲ್ವಿನ್ ಅಂದ್ರಾದೆ, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್, ಸದಸ್ಯರಾದ ಸುಜಾತ ವೆಂಕಟೇಶ್ ,ಪಾಂಡೇಶ್ವರ ಗ್ರಾಮಪಂಚಾಯತ್ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಂಡೇಶ್ವರ ಒಕ್ಕೂಟದ ಅಧ್ಯಕ್ಷೆ ಸೀಮಾ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಪಾಂಡೇಶ್ವರ ಶಾಲೆಯ ಮುಖ್ಯಶಿಕ್ಷಕ ಶೇಖರ್ ಪೂಜಾರಿ, ಪಾಂಡೇಶ್ವರ ಮೂಡಹಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ಆಚಾರ್, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ಯಾಮಲ ವಿಜಯ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಸ್ಥಳೀಯ ಕೃಷಿಕರಾದ ಬಲರಾಮ ಸೋಮಯಾಜಿ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ನಿರೂಪಕ ಅಭಿಜಿತ್ ಪಾಂಡೇಶ್ವರ,ಸ್ಥಳೀಯರಾದ ಉಷಾ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

    ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಶಕೀಲ ನಾಗರಾಜ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಲಲಿತಾ ಗಿಳಿಯಾರು ಸನ್ಮಾನಪತ್ರ ವಾಚಿಸಿದರು. ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

    ನಂತರ ಗಿಡ ವಿತರಿಸಿ ವನಮಹೋತ್ಸವದ ಮೂಲಕ ಗಿಡನೆಡಲಾಯಿತು.

  • ಕುಂದಾಪುರದಲ್ಲಿ ರಾಜ್ಯದ ಮೊದಲ ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಸೊಸೈಟಿ ಲೋಕಾರ್ಪಣೆ

    ಕುಂದಾಪುರದಲ್ಲಿ ರಾಜ್ಯದ ಮೊದಲ ಜಿಲ್ಲಾ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಸೊಸೈಟಿ ಲೋಕಾರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮವಾಗಿ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಉಡುಪಿ ಜಿಲ್ಲಾ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಜುಲೈ ೯ರಂದು ಉದ್ಘಾಟನೆಗೊಂಡಿತು.

    ನೂತನ ಕಛೇರಿಯನ್ನು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ರಾಜ್ಯದ ೩೧ ಜಿಲ್ಲೆಗಳಲ್ಲಿಯೇ ಪ್ರಥಮವಾಗಿ ಈ ಸೊಸೈಟಿ ಆರಂಭವಾಗಿದೆ. ಇದು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ನೌಕರರ ಆರ್ಥಿಕ ಸದೃಢತೆ, ಒಗ್ಗಟ್ಟನ್ನು ವೃದ್ದಿಸಲಿ ಎಂದರು.

    ಉಡುಪಿ ಜಿಲ್ಲೆಯ ಧಾರ್ಮಿಕ ಮುಖಂಡರಾದ ಬಿ.ಅಪ್ಪಣ್ಣ ಹೆಗ್ಡೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಷೇರುಪತ್ರ, ಠೇವಣಿ ಪತ್ರ, ಸಂಘದ ಗುರುತು ಪತ್ರವನ್ನು ವಿತರಿಸಲಾಯಿತು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ., ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್., ಬ್ರಹ್ಮಾವರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹೀಂಪುರ್, ಪಂಚಾಯಿತಿ ನೌಕರರ ಶ್ರೇಯೋಭಿವೃದ್ದಿ ಸಂಘದ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿಕಾಸ್ ಹೆಗ್ಡೆ ಉಪಸ್ಥಿತರಿದ್ದರು.

    ಉಡುಪಿ ಜಿಲ್ಲಾ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕುಂದಾಪುರ ಇದರ ಅಧ್ಯಕ್ಷರಾದ ಸಂತೋಷ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಸಂಸ್ಥೆಯ ನಿರ್ದೇಶಕರಾದ ಜಯರಾಮ ಶೆಟ್ಟಿ, ಉಮೇಶ್, ಗುರುಮೂರ್ತಿ, ಶೇಖರ್, ಶ್ರೀಮತಿ ದೀಪಾ, ಶ್ರೀಮತಿ ರೂಪಾ ಗೋಪಿ, ಉದಯ ಕುಮಾರ್, ಉದಯ ಮಡಿವಾಳ, ವಿಜೇಂದ್ರ ಎಂ., ವಾಸು ನಾಯ್ಕ ಉಪಸ್ಥಿತರಿದ್ದರು.

    ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ ನೂತನ ಕಛೇರಿಗೆ ಆಗಮಿಸಿ ಶುಭಹಾರೈಸಿದರು.

    ಉಪಾಧ್ಯಕ್ಷರಾದ ಚಂದ್ರಕಾಂತ್ ಬಿಲ್ಲವ ಸ್ವಾಗತಿಸಿದರು. ನಾಗೇಂದ್ರ ಕುಮಾರ್ ಪ್ರಾರ್ಥನೆ ನೆರವೇರಿಸಿದರು. ಮಹೇಶ್ ಮತ್ತು ರೂಪಾ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ನಾಗೇಂದ್ರ ವಂದಿಸಿದರು.

  • ಕುಂದಾಪುರ :ಸಮಾಜಕ್ಕೆ ಕೊಡುಗೆ ನೀಡಿದಾಗ ಸಂಘಟನೆಯ ಉದ್ಧೇಶ ಸಾರ್ಥಕ : ಲ. ಅರುಣ್ ಕುಮಾರ್ ಹೆಗ್ಡೆ

    ಕುಂದಾಪುರ :ಸಮಾಜಕ್ಕೆ ಕೊಡುಗೆ ನೀಡಿದಾಗ ಸಂಘಟನೆಯ ಉದ್ಧೇಶ ಸಾರ್ಥಕ : ಲ. ಅರುಣ್ ಕುಮಾರ್ ಹೆಗ್ಡೆ

    ಹಂಗಳೂರು ಲಯನ್ಸ್ ಕ್ಲಬ್-ನ 27ನೇ ಪದಗ್ರಹಣ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:ಯಾವುದೇ ಸಂಘಟನೆಯ ಸ್ಥಾಪನೆಯ ಹಿಂದೆ ಸಮಾಜದ ಅಭಿವೃದ್ಧಿಯ ದೃಷ್ಟಿಕೋನ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಪಾಲಿಸಿದರೆ ಸಂಘಟನೆಯ ಉದ್ಧೇಶ ಸಾರ್ಥಕವಾಗುತ್ತದೆ ಎಂದು ಉದ್ಯಮಿ, ಜಿ.ಎಂ.ಟಿ. ಮುಖ್ಯ ಸಂಯೋಜಕ ಬಿ. ಅರುಣ್ ಕುಮಾರ್ ಹೆಗ್ಡೆ ಹೇಳಿದರು.

    ಅವರು ಶನಿವಾರ ಸಂಜೆ ಕುಂದಾಫುರದ ಶೆರೋನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಂಗಳೂರು ಲಯನ್ಸ್ ಕ್ಲಬ್-ನ 27ನೇ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

    ಪದಗ್ರಹಣ ಸಂದರ್ಭ ನಿಕಟ ಪೂರ್ವ ಅಧ್ಯಕ್ಷರಾದ ಉದ್ಯಮಿ, ಗುತ್ತಿಗೆದಾರ ರಜತ್ ಹೆಗ್ಡೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಲ್ಪ್ರೆಡ್ ಮಿನೇಜಸ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ನೂತನ ಕಾರ್ಯದರ್ಶಿಗಳಾದ ಜಿ.ಎಂ.ಹನೀಫ್, ಕೋಶಾಧಿಕಾರಿ ಕೆ. ರಮೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾಗಿ ನಿಕಟಪೂರ್ವ ಕೋಶಾಧಿಕಾರಿ ರೋವನ್ ಡಿಕೋಸ್ತಾ, ರೀಟಾ ಕ್ವಾಡ್ರಸ್ ಇದ್ದರು.

    ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಕೋಣಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ದೃಶ್ಯ, ವಡೇರಹೋಬಳಿ ಹೈಸ್ಕೂಲಿನ ವಿಶ್ವಾಸ, ಮಣೂರಿನ ಪ್ರಥಮೇಶ್ ಆಚಾರ್, ಕುಂದಾಪುರ ಬೋರ್ಡ್ ಹೈಸ್ಕೂಲಿನ ಭೂಮಿಕಾ, ಸರ್ಕಾರೀ ಪದವಿ ಪೂರ್ವ ಕಾಲೇಜಿನ ರಾಹುಲ್, ನಿಸರ್ಗ ಪೂಜಾರಿ, ಶಾರಿಕಾ, ಬಿ.ಇ. ಓದುತ್ತಿರುವ ಪನ್ನಗ ಮಯ್ಯ ಮೊದಲಾದವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶ್ರೀಲಹರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲ ಹೆಚ್. ಬಾಲಕೃಷ್ಣ ಶೆಟ್ಟಿ ಹೊಸಮನೆ ವಿದ್ಯಾರ್ಥಿಗಳ ಹೆಸರು ಓದಿದರು.

  • ಕೋಟ : ಕೃತಕ ನೆರೆ – ತೋಡ್ಕಟ್ಟು ಸೇತುವೆಗೆ ಶಾಸಕ ಕಿರಣ್ ಕೊಡ್ಗಿ ಭೇಟಿ

    ಕೋಟ : ಕೃತಕ ನೆರೆ – ತೋಡ್ಕಟ್ಟು ಸೇತುವೆಗೆ ಶಾಸಕ ಕಿರಣ್ ಕೊಡ್ಗಿ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕಳೆದೊಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆಗೆ ಕೋಟ ಗ್ರಾಮಪಂಚಾಯತ್ ಸೇರಿದಂತೆ ಸುತ್ತಮುತ್ತಲಿನ ಕರಾವಳಿ ಪ್ರದೇಶದಲ್ಲಿ ಕೃತಕ ನೆರೆ ಸೃಷ್ಠಿಯಾಗಿದೆ. ಇದಕ್ಕೆ ಸಾಲಿಗ್ರಾಮ ಪ.ಪಂ ವ್ಯಾಪ್ತಿಯ ಪಾರಂಪಳ್ಳಿ ತೋಡ್ಕಟ್ಟು ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಅಡ್ಡಲಾಗಿ ಹಾಕಲಾದ ಮಣ್ಣು ಕಾರಣ ಈ ಹಿನ್ನಲೆಯಲ್ಲಿ ಸ್ಥಳೀಯ ಪಂಚಾಯತ್‍ಗಳ ಮನವಿಯ ಮೇರೆಗೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಪ್ರಸ್ತುತ ಅರೆಬರೆ ತೆರವುಗೊಳಿಸಿದ ಮಣ್ಣು ಹಾಗೂ ಅಲ್ಲಿ ಅಳವಡಿಸಲಾದ ತಾತ್ಕಾಲಿಕ ಕಾಂಕ್ರೀಟ್ ತೆರವುಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕೃಷಿಕರು ಮತ್ತು ಸ್ಥಳೀಯಾಡಳಿ ಜನಪ್ರತಿನಿಧಿಯ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟು ಶಾಸಕರ ಮಧ್ಯಸ್ಥಿಕೆಯಲ್ಲಿ ಶಮನಗೊಂಡಿತು.

    ಈ ವೇಳೆ ಮಾತನಾಡಿದ ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಕಳೆದ ವರ್ಷ ಇದೇ ಸ್ಥಿತಿ ನಿರ್ಮಾಣಗೊಂಡಿದೆ ಮಳೆಗಾಲ ನೀರು ಸರಾಗವಾಗಿ ಹರಿಯಲ್ಪಡಬೇಕೆ ವಿನಹ ಸೇತುವೆ ನೆಪದಲ್ಲಿ ಮಣ್ಣು ತೆರವುಗೊಳಿಸದ ಹಿನ್ನಲೆಯಲ್ಲಿ ಈ ಕೃತಕ ನೆರೆ ಸೃಷ್ಠಯಾಗಿದೆ,ಮಣ್ಣು ಹಾಗೂ ತಾತ್ಕಾಲಿಕ ಕಾಂಕ್ರೀಟ್ ಸ್ಲಾಬ್ ತೆರವುಗೊಳಿಸಬೇಕು. ಈ ದಿಸೆಯಲ್ಲಿ ಉಂಟಾದ ನೆರೆಯಿಂದ ಸಾಕಷ್ಟು ಭತ್ತದ ಕೃಷಿ ಭೂಮಿ ಹಾನಿಗೊಂಡಿದೆ ಇದಕ್ಕೆ ಸೂಕ್ತ ಪರಿಹಾರ ಒದಗಿಸಲು ಶಾಸಕರ ಬಳಿ ಮನವಿಮಾಡಿದರು.

    ಕಾಂಡ್ಲ ವನ ತೆರವುಗೊಳಿಸಿ ಆಗ್ರಹ
    ಉಪ್ಪು ನೀರಿನ ಹೊಳೆಯಲ್ಲಿ ಕಾಂಡ್ಲ ಸಸಿಗಳು ಬಾರಿ ಪ್ರಮಾಣದಲ್ಲಿ ನೀರಿನಲ್ಲಿ ಹರಡಿಕೊಂಡಿದೆ ಇದರಿಂದ ಹೊಳೆಯಲ್ಲಿ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿದೆ. ಅಲ್ಲದೆ ನೀರು ಸರಾಗವಾಗಿ ಹರಿಯಲಾಗದೆ ಸಮಸ್ಯೆ ಸೃಷ್ಠಿಸುತ್ತಿದೆ ನೀರಿನಲ್ಲಿ ಹರಡಿಕೊಂಡಿರುವ ಕಾಂಡ್ಲ ಸಸಿಗಳನ್ನು ತೆರವುಗೊಳಿಸದರೆ ಯಾವುದೇ ರೀತಿಯ ಸಮಸ್ಯೆ ಎದುರಾಗದು ಶೀಘ್ರಗತಿಯಲ್ಲಿ ಇದಕ್ಕೆ ಪರಿಹಾರಕಂಡುಕೊಳ್ಳಲು ಶಾಸಕರಲ್ಲಿ ರೈತ ಸಮುದಾಯ ಮನವಿ ಮಾಡಿತು.

    ಕಾಮಗಾರಿ ವೇಗಗೊಳಿಸಿ ಶಾಸಕರ ಸೂಚನೆ
    ಕೃಷಿಕರಿಗೆ ಸಮಸ್ಯೆ ನೀಡಿ ಕಾಮಗಾರಿ ನಿಧಾನಗೊಳಿಸುವುದು ಸಮಂಜಸವಲ್ಲ ಸೇತುವೆ ಕಾಮಗಾರಿಗೆ ವೇಗ ನೀಡಿ ಮುಂದಿನ ದಿನಗಳಲ್ಲಿಈ ರೀತಿಯ ಪ್ರಸಂಗ ಎದುರಾಗದಂತೆ ಗುತ್ತಿಗೆದಾರರಿಗೆ ಸೂಚಿಸಿದರು.

    ಈ ವೇಳೆ ಸಾಲಿಗ್ರಾಮ ಪ.ಪಂ ಸದಸ್ಯ ರಾಜು ಪೂಜಾರಿ ಕಾರ್ಕಡ, ನಾಮನಿರ್ದೇಶಿತ ಸದಸ್ಯ ಕರುಣಾಕರ ಪೂಜಾರಿ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಸದಸ್ಯರಾದ ಸಂತೋಷ ಪ್ರಭು,ಶಿವರಾಮ ಶೆಟ್ಟಿ, ಸ್ಥಳೀಯ ಮುಖಂಡರಾದ ಜಯೇಂದ್ರ ಪೂಜಾರಿ, ಕೇಶವ ಕರ್ಕೇರ, ರೈತ ಮುಖಂಡರಾದ ಭಾಸ್ಕರ್ ಶೆಟ್ಟಿ ಮಣೂರು, ರವೀಂದ್ರ ಐತಾಳ್ ಪಾರಂಪಳ್ಳಿ, ರಮೇಶ್ ಪೂಜಾರಿ ಪಡುಕರೆ, ಮಹಾಬಲ ಶೆಟ್ಟಿ,ಗೋಪಾಲ ಕಾಸನಗುಂದು ಮತ್ತಿತರರು ಇದ್ದರು.