ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ದಲಿತ ಮೀಸಲಾತಿಯ ಬಿಲ್ ಕಲೆಕ್ಟರ್ ಹುದ್ದೆ ಮೂರು ವರ್ಷದಿಂದ ಖಾಲಿ ಇದ್ದರೂ ಭರ್ತಿ ಮಾಡದೇ ಈಗ ಸಾಮಾನ್ಯ ಮೀಸಲಾತಿಯಲ್ಲಿ ನೇಮಕ ಮಾಡುವ ಹುನ್ನಾರ ನಡೆದಿದ್ದು, ಇದು ದಲಿತ ವಿರೋಧಿ ನೀತಿಯಾಗಿದೆ ಎಂದು ದಲಿತ ಮುಖಂಡ ಸತೀಶ್ ಕುಮಾರ್ ತೆಕ್ಕಟ್ಟೆ ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಲ್ ಆಪರೇಟರ್ ದಲಿತ ಮೀಸಲಾತಿಯಡಿಯಲ್ಲಿ ಅರ್ಹ ಫಲಾನುಭವಿಗಳಿದ್ದರೂ ಆಯ್ಕೆ ಮಾಡಿಲ್ಲ. ಈಗ ಇದ್ದಕ್ಕಿದ್ದಂತೆ ಸಾಮಾನ್ಯ ಮೀಸಲಾತಿಯಡಿ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆ ನಡೆಸಿ ನಿರ್ಣಯಿಸಿರುವುದು ಕಾನೂನು ಬಾಹಿರ ಎಂದು ಆಕ್ರೋಶ ಹೊರ ಹಾಕಿರುವ ಅವರು ಸೋಮವಾರ ಗ್ರಾಮ ಪಂಚಾಯತ್ ಎದುರು ದಲಿತ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನೆಡೆಸುವುದಾಗಿ ಎಚ್ಚರಿಸಿದ್ದಾರೆ.
ಸಭೆಯಲ್ಲಿ ದಲಿತ ಮುಖಂಡರಾದ ಶ್ರೀನಿವಾಸ ಮಲ್ಯಾಡಿ, ಮಹೇಶ್ ಕುಮಾರ್, ನರಸಿಂಹ ತೆಕ್ಕಟ್ಟೆ, ಶರತ ಕುಮಾರ್, ಗಾಯತ್ರಿ ತೆಕ್ಕಟ್ಟೆ, ವೈಕುಂಠ ಕೊಮೆ ಮೊದಲಾದವರು ಉಪಸ್ಥಿತರಿದ್ದರು.











