Category: ಸುದ್ದಿ

  • ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ಸತತ 5ನೇ ಬಾರಿ ಶೇ 100 ಫಲಿತಾಂಶ

    ಕುಂದಾಪುರ :ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯಲ್ಲಿ ಸತತ 5ನೇ ಬಾರಿ ಶೇ 100 ಫಲಿತಾಂಶ

    ಕುಂದಾಪುರ ಮಿರರ್ ಸುದ್ದಿ..

    ಕುಂದಾಪುರ : 2022 – 23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಶೇ 100 ಫಲಿತಾಂಶ ದಾಖಲಾಗುವುದರ ಜೊತೆಗೆ ರಾಜ್ಯ ಮಟ್ಟದಲ್ಲಿ ತೃತೀಯ ರ‌್ಯಾಂಕ್ ನೊಂದಿಗೆ ಒಟ್ಟು 11 ರ‌್ಯಾಂಕ್ ಪಡೆದುಕೊಂಡಿದೆ. ಯಾವುದೇ ಅಂಕದ ಷರತ್ತುಗಳು ಇಲ್ಲದೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ದಾಖಲಿಸಿಕೊಂಡು ಸತತವಾಗಿ 5 ವರ್ಷಗಳಿಂದ ಶೇ 100 ಫಲಿತಾಂಶ ದಾಖಲಿಸುತ್ತಿರುವ ಕುಂದಾಪುರದ ಏಕೈಕ ಕಾಲೇಜು ಆಗಿ ಹೊರಹೊಮ್ಮಿರುವುದು ಶ್ಲಾಘನೀಯ.

  • ಕುಂದಾಪುರ :ಜೆಇಇ ಮೈನ್ ಪರೀಕ್ಷೆ – ಶ್ರೀ ವೆಂಕಟರಮಣ ಕಾಲೇಜು ವಿದ್ಯಾರ್ಥಿಗಳ ಸಾಧನೆ

    ಕುಂದಾಪುರ :ಜೆಇಇ ಮೈನ್ ಪರೀಕ್ಷೆ – ಶ್ರೀ ವೆಂಕಟರಮಣ ಕಾಲೇಜು ವಿದ್ಯಾರ್ಥಿಗಳ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ರಾಷ್ಟ್ರಮಟ್ಟದಲ್ಲಿ ಜರುಗಿದ 2023 ನೇ ಸಾಲಿನ ಜೆ ಇಇ ಮೈನ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

    ನಿತೇಶ್ 94.58 ಪರ್ಸೆಂಟೈಲ್, ಪ್ರಣಮ್ಯ 91.82
    ಪರ್ಸೆಂಟೈಲ್, ಸನತ್ 90.60 ಪರ್ಸೆಂಟೈಲ್, ಕಾರ್ತಿಕ್ 88.46 ಪರ್ಸೆಂಟೈಲ್, ರಿಷಿ 87.58 ಪರ್ಸೆಂಟೈಲ್, ನಾಗರಾಜ್ 85.93 ಪರ್ಸೆಂಟೈಲ್ ಗಳಿಸಿರುತ್ತಾರೆ.

    ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಗಳು ಅಭಿನಂದನೆ ಸಲ್ಲಿಸಿದ್ದಾರೆ.

  • ಜೆಇಇ ಮೈನ್ ಫಲಿತಾಂಶ-2023: ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

    ಜೆಇಇ ಮೈನ್ ಫಲಿತಾಂಶ-2023: ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ರಾಷ್ಟ್ರ ಮಟ್ಟದಲ್ಲಿ ನಡೆಯುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಆಯುಷ್ ಭೌತಶಾಸ್ತ್ರದಲ್ಲಿ 97
    ಪರ್ಸನ್ಟೈಲ್ ಪಡೆದು ಒಟ್ಟು96 ಪರ್ಸನ್ಟೈಲ್ ಪಡೆದಿರುತ್ತಾನೆ ಹಾಗೂ ಸುಮಂತ್ ರಸಾಯನಶಾಸ್ತ್ರದಲ್ಲಿ 99.12ಪರ್ಸಂಟೈಲ್ ಪಡೆಯುವುದರ ಜೊತೆಗೆ ಒಟ್ಟು 96ಪರ್ಸನ್ಟೈಲ್ ಪಡೆದಿರುತ್ತಾನೆ.
    ಹಾಗೆಯೇ ಓಂಕಾರ್ ಪ್ರಭು ಒಟ್ಟು 90.04 ,ಪರ್ಸನ್ಟೈಲ್,
    ಹರ್ಷಿತ್ ಖಾರ್ವಿ 88.17,ಪರ್ಸನ್ಟೈಲ್, ತನಿಷಾ 83.5 ಪರ್ಸನ್ಟೈಲ್ ಪಡೆದಿರುತ್ತಾರೆ .ಪರೀಕ್ಷೆಗೆ ಕುಳಿತ ಕಾಲೇಜಿನ 5 ವಿದ್ಯಾರ್ಥಿಗಳು ಶೇಕಡಾ 100 ಶೇಕಡಾ ಫಲಿತಾಂಶವನ್ನು ದಾಖಲಿಸುವುದರ ಮೂಲಕ ಐಐಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಹೊಂದಿರುತ್ತಾರೆ.

    ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಕೋಟ – ಪಂಚವರ್ಣ ರಜತ ಗೌರವಕ್ಕೆ ಸಾಲಿಗ್ರಾಮದ ಹಿರಿಯ ವೈದ್ಯ ಡಾ.ವಿಶ್ವೇಶ್ವರ ತುಂಗ ಆಯ್ಕೆ

    ಕೋಟ – ಪಂಚವರ್ಣ ರಜತ ಗೌರವಕ್ಕೆ ಸಾಲಿಗ್ರಾಮದ ಹಿರಿಯ ವೈದ್ಯ ಡಾ.ವಿಶ್ವೇಶ್ವರ ತುಂಗ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ತಿಂಗಳು ಸಾಲಿಗ್ರಾಮ ಪರಿಸರದ ಜನಸಾಮಾನ್ಯ ವೈದ್ಯ ಎಂದೆ ಪ್ರಸಿದ್ಧರಾಗಿರುವ ಹಿರಿಯ ವೈದ್ಯ ಡಾ. ಡಾ.ವಿಶ್ವೇಶ್ವರ ತುಂಗ ಇವರನ್ನು ಆಯ್ಕೆಗೊಳಿಸಲಾಗಿದೆ.

    ಪಂಚವರ್ಣ ಸಂಸ್ಥೆ ನೀಡುತ್ತಿರುವ ಐದನೇ ಸಾಧಕ ಶಕ್ತಿಯಾಗಿದ್ದು ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಕ್ಷೇತ್ರದ ಸಾಧಕ ಜಿ.ತಿಮ್ಮ ಪೂಜಾರಿ,ಸಮಾಜಸೇವಕ ಈಶ್ವರ್ ಮಲ್ಪೆ,ಅನಾಥರ ಬದುಕಿನ ಆಶಾಕಿರಣ ಹೊಸಬೆಳಕು ವಿನಯಚಂದ್ರ ಸಾಸ್ತಾನ,ವಿಶೇಷಚೇತನ ಸಾಧಕಿ ಲಲಿತಾ ಪೂಜಾರಿ ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.ಇದೇ ಏ.28ರಂದು ಸಾಲಿಗ್ರಾಮದ ಅವರ ಸ್ವಗೃಹದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.

     

  • ಕೋಟ – ಆನಂದ್ ಸಿ. ಕುಂದರ್ 75ರ ಹುಟ್ಟುಹಬ್ಬದ ಅಮೃತಮಹೋತ್ಸವ ಆನಂದಾಮೃತ’ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

    ಕೋಟ – ಆನಂದ್ ಸಿ. ಕುಂದರ್ 75ರ ಹುಟ್ಟುಹಬ್ಬದ ಅಮೃತಮಹೋತ್ಸವ ಆನಂದಾಮೃತ’ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಕೋಟದ ಸಮಾಜ ಸೇವಕ ಆನಂದ ಸಿ ಕುಂದರ್ ಅವರ 75ನೇ ಹುಟ್ಟುಹಬ್ಬದ ಅಮೃತಮಹೋತ್ಸವ ಆನಂದಾಮೃತ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಬುಧವಾರ ಕೋಟತಟ್ಟು ಜನತಾ ಪ್ರಾಂಗಣದಲ್ಲಿ ಜರಗಿತು.

    ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಆನಂದ ಕುಂದರ್ ಜನರ ಮಧ್ಯದಲ್ಲಿ ಇದ್ದುಕೊಂಡು ಜನಸೇವೆಗೆ ನಿಂತ ಅಜಾತಶತ್ರು , ಅವರ ಸಮಾಜಮುಖಿ ವ್ಯಕ್ತಿತ್ವ ಎಲ್ಲರಿಗೂ ಆದರ್ಶವಾದದ್ದು,ಮಾತು ಕಡಿಮೆ ಕೃತಿಯಲ್ಲಿ ಅವರ ಕಾರ್ಯ ಸಾಧನೆ, ಅವರ ಸಮಾಜ ಮುಖಿ ಸೇವೆ ಹೀಗೆ ಮುಂದುವಯಲಿ ಎಂದು ಆಶಿಸಿ ಶುಭಹಾರೈಕೆ ಸಲ್ಲಿಸಿದರು.

    ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಕುಂದರ್ ಅವರು , ಸಮಾಜದ ಆಸ್ತಿ ಇವರ ಸೇವೆಗೆ ಬೆಲೆ ಕಟ್ಟಲಾಗದು, ಸಮಾಜದ ಬಗ್ಗೆ ಅವರಿಗಿರುವ ಕಾಳಜಿ ಬಹಳ ಅದ್ಭುತ ,ಮಗುವಿನಂತ ಮನಸ್ಸಿನ ಕುಂದರ್ ಸಮಾಜದಿಂದ ಪಡೆದದ್ದು ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ.ಅವರ ಶೈಕ್ಷಣಿಕ ಸಾಮಾಜಿಕ ,ಧಾರ್ಮಿಕ ಕ್ಷೇತ್ರದ ಕಾರ್ಯಗಳನ್ನು ಕೊಂಡಾಡಿದರು.

    ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ವೇ.ಮೂ ಮದುಸೂದನ ಬಾಯರಿ, ವೇಮೂ ಜಿ ರಾಮ ಪ್ರಸಾದ್, ಅಡಿಗ, ಧಾರ್ಮಿಕ ಚಿಂತಕ ಕಟ್ಕೇರೆ ಪ್ರೇಮಾನಂದ ಶೆಟ್ಡಿ,ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಾಮಾಜಿಕ ಚಿಂತಕ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ,ಉದ್ಯಮಿ ಆನಂದ್ ಸುವರ್ಣ, ಕುಂದರ್ ಪುತ್ರರಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಪುತ್ರಿ ರಚನಾ ಕುಂದರ್, ಸೊಸೆಯಂದಿರರಾದ ವೈಷ್ಣವಿ ಆರ್ ಕುಂದರ್,ದಿವ್ಯಲಕ್ಷ್ಮೀ ಪಿ ಕುಂದರ್,ಅವರ ಕುಟುಂಬಿಕರು ಮತ್ತಿತರರು ಉಪಸ್ಥಿತರಿದ್ದರು. ಕೋಟದ ಸಮುದ್ಯತಾ ಇವೆಂಟ್ ವ್ಯವಸ್ಥೆ ಕಲ್ಪಿಸಿತು

    ಕಾರ್ಯಕ್ರಮದಲ್ಲಿ ವಿಶೇಷ
    ಜನತಾ ಸಂಸ್ಥೆ ಆವರದಿಂದ ಬ್ಯಾಂಡ್ ಸೆಟ್ ಸಂಗೀತದೊಂದಿಗೆ ವಾಹನದ ಮೂಲಕ ಮೆರವಣಿಗೆಯಲ್ಲಿ ಗೀತಾ ಆನಂದ್ ಕುಂದರ್ ಕರೆತರಲಾಯಿತು.
    ಯಕ್ಷ ನಾಟ್ಯ ಗಾನ ವೈಭವ,ಕುಂದಾಪುರ ಕನ್ನಡದ ಹೆಂಗ್ಸ್ರ್ ಪಂಚೇತಿ,ಪ್ರಸಿದ್ಧ ಗಾಯಕರನ್ನೊಳಗೊಂಡ ಸಂಗೀತ ರಸಮಂಜರಿ ಜರಗಿತು.

    ಗಮನ ಸೆಳೆದ ಕುಂದರ್ ಭಾವಯಾನ
    ಇಡೀ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿರೂಪಕ ರಾಘವೇಂದ್ರ ಕಾಂಚನ್ ಪಡುಕರೆ ಇವರ ಮೂಲಕ ಕುಂದರ್ ಬದುಕಿನ ಭಾವಯಾನ ಸಂದರ್ಶನದ ಮೂಲಕ ಅಭಿಮಾನಿಗಳಿಗೆ ಒಂದು ವರೆ ತಾಸು ಉಣ ಬಡಿಸಲಾಯಿತು.ಸುಮಾರು 80 ಕ್ಕೂ ಅಧಿಕ ಸ್ಥಳೀಯ ಸಂಘಸಂಸ್ಥೆಗಳು,ದೇವಸ್ಥಾನದ ಆಡಳಿತ ಮಂಡಳಿಗಳು,ವಿವಿಧ ಉದ್ಯಮಿಗಳು ಕುಂದರ್‍ರವರಿಗೆ ಅಭಿನಂದನೆ ಸಲ್ಲಿಸಿ ಶುಭಹಾರೈಕೆ ಸಲ್ಲಿಸಿದರು.

    ಪತ್ರಕರ್ತ ಕೆ.ಸಿ, ರಾಜೇಶ್, ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಹೆಚ್ ಕುಂದರ್, ಉದಯ್ ಶೆಟ್ಟಿ ಮಣೂರು ,ರವಿಕಿರಣ್ ಕೋಟ ಕಾರ್ಯಕ್ರಮ ಸಂಯೋಜಿಸಿದರು.

  • ಕೋಟದಲ್ಲಿ ಸವಿತಾ ಸಮಾಜ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ

    ಕೋಟದಲ್ಲಿ ಸವಿತಾ ಸಮಾಜ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ವಲಯ ಸವಿತಾ ಸಮಾಜ ಆಶ್ರಯದಲ್ಲಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ಸವಿತಾ ಸಮಾಜದವರಿಗಾಗಿ ಕ್ರೀಡಾಕೂಟ ಕಾರ್ಯಕ್ರಮ ಎ.25ರಂದು ಮಣೂರು ಪಡುಕರೆ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಜರಗಿತು.

    ಅಂತರರಾಷ್ಟ್ರೀಯ ಕೇಶ ವಿನ್ಯಾಸಗಾರ ಪ್ರಶಸ್ತಿ ಪುರಸ್ಕೃತ ಶಿವರಾಮ ಭಂಡಾರಿ ಮುಂಬೈ ಕ್ರೀಡಾಕೂಟ ಉದ್ಘಾಟಿಸಿ, ಇಂತಹ ಕ್ರೀಡಾಕೂಟಗಳು ಹೆಚ್ಚು-ಹೆಚ್ಚು ನಡೆದಾಗ ಸಮಾಜದ ನಡುವೆ ಉತ್ತಮ ಸಂಬಂಧ ಹಾಗೂ ಸಂಘಟನೆ ಸಾಧ್ಯವಾಗುತ್ತದೆ ಎಂದರು.

    ಉದ್ಯಮಿ ರಮೇಶ್ ಭಂಡಾರಿ ಕಾರ್ಕಡ ಕ್ರೀಡಾಜ್ಯೋತಿ ಬೆಳಗಿದರು.

    ಸಂಘಟನೆಯ ಅಧ್ಯಕ್ಷ ಮಂಜುನಾಥ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವಿಶ್ವನಾಥ ಭಂಡಾರಿ ನಿಂಜೂರು, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ, ತಾಲೂಕು ಘಟಕಗಳ ಅಧ್ಯಕ್ಷರಾದ ಶಿವರಾಮ ಭಂಡಾರಿ ಹಂದಾಡಿ, ನಾಗೇಶ್ ಭಂಡಾರಿ ಬಜಗೋಳಿ, ಸುರೇಶ್ ಭಂಡಾರಿ ಹೆಬ್ರಿ, ಸಂತೋಷ್ ಭಂಡಾರಿ ಉಪ್ಪುಂದ, ರಾಜು ಸಿ. ಭಂಡಾರಿ, ವಿನಯ್ ಡಿ. ಭಂಡಾರಿ ಪಡುಬಿದ್ರೆ, ಕೋಟ ವಲಯ ಸವಿತಾ ಸಮಾಜದ ಗೌರವಾಧ್ಯಕ್ಷ ಪ್ರಶಾಂತ್ ಭಂಡಾರಿ, ಹಿರಿಯರಾದ ವಿಟ್ಠಲ ಭಂಡಾರಿ ಸಾಲಿಗ್ರಾಮ, ಕೇಶವ ಭಂಡಾರಿ ಕಟಪಾಡಿ, ಸವಿತಾ ಸಮಾಜದ ಸಹಕಾರಿ ಸಂಘದ ಅಧ್ಯಕ್ಷ ನವೀನ್‍ಚಂದ್ರ ಭಂಡಾರಿ ಮಣಿಪಾಲ, ಜಿಲ್ಲಾ ಪರಿಯಾಳ ಸಂಘದ ಅಧ್ಯಕ್ಷ ಶಂಕರ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

    ಹರೀಶ್ ಭಂಡಾರಿ ಗಿಳಿಯಾರು ಸ್ವಾಗತಿಸಿ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ದೈ.ಶಿಕ್ಷಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

  • ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಅಂತರಾಷ್ಟ್ರೀಯ ಇಂಗ್ಲೀಷ್ ದಿನಾಚರಣೆ

    ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಅಂತರಾಷ್ಟ್ರೀಯ ಇಂಗ್ಲೀಷ್ ದಿನಾಚರಣೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ಜಾಗತೀಕರಣದ ಕಾಲಘಟ್ಟದಲ್ಲಿ ಇಂಗ್ಲೀಷ್ ಭಾಷೆ ಅತೀ ಮುಖ್ಯವಾಗಿದ್ದು, ಭಾಷಾ ಕೌಶಲ್ಯಗಳು ಸಂವಹನದ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾಷೆಯ ಬಳಕೆಯಿಂದ ಪ್ರಭುದ್ಧತೆ ಪಡೆದುಕೊಳ್ಳುತ್ತದೆ. ವಿಲಿಯಂ ಶೇಕ್ಸ್‍ಫಿಯರ್‍ನ ಜನನ ದಿನ ಹಾಗೂ ಮರಣ ದಿನವಾದ ಏಪ್ರಿಲ್ 23ರಂದು ಆಚರಿಸುವ ಈ ಇಂಗ್ಲೀಷ್ ದಿನಾಚರಣೆ ಆಂಗ್ಲ ಕವಿಯೊಬ್ಬರನ್ನು ಪರಿಚಯಿಸುವುದರೊಂದಿಗೆ ಇಂಗ್ಲೀಷ್ ಭಾಷೆಯ ಬಗೆಗೆ ವಿದ್ಯಾರ್ಥಿಗಳಿಗೆ ಆತ್ಮೀಯತೆ ಬೆಳೆಯುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು, ನೆಂಪು ಇಲ್ಲಿನ ಪ್ರಾಂಶುಪಾಲರಾದ ಶ್ರೀ ರಾಜೀವ್ ನಾಯಕ್ ಹೇಳಿದರು.

    ಅವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಇಂಗ್ಲೀಷ್ ಸಂಘದ ಆಶ್ರಯದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಇಂಗ್ಲೀಷ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

    ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಭವಿಷ್ಯದ ಬದುಕಿನಲ್ಲಿ ಆಂಗ್ಲ ಭಾಷಾ ಬಳಕೆಯ ಅನಿವಾರ್ಯತೆಯನ್ನು ತಿಳಿಸಿದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ದೀಪಿಕಾ ಜಿ. ಸ್ವಾಗತಿಸಿ, ಉಪನಾಸಕಿ ಮೋನಿಕಾ ಡಿ’ಸೋಜಾ ವಂದಿಸಿದರು. ವಿದ್ಯಾರ್ಥಿಗಳಾದ ಉತ್ಸವ್ ವಿಲಿಯಂ ಶೇಕ್ಸ್‍ಫಿಯರ್ ಕುರಿತು ಮಾಹಿತಿ ನೀಡಿದರು. ಯಶವಂತ್ ಅತಿಥಿಗಳನ್ನು ಪರಿಚಯಿಸಿ, ನಯನಾ ನಿರೂಪಿಸಿದರು.

  • ಕುಂದಾಪುರ :ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ

    ಕುಂದಾಪುರ :ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ

    Video:

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ ಎಪ್ರಿಲ್ 25 ಮಂಗಳವಾರ ನಡೆಯಿತು.

    ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ರಂಗಮಂಟಪ ಉದ್ಘಾಟನೆಯನ್ನು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಿದರು.

    ಆಶೀರ್ವಚನ ಮಾತುಗಳನ್ನಾಡಿದ ಅವರು, ಸಂಸ್ಕಾರ, ಆಚಾರ, ವಿಚಾರಗಳಿಂದ ಉತ್ತಮ ವ್ಯಕ್ತಿತ್ವದಿಂದ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆ ಹಿನ್ನೆಲೆಯಲ್ಲಿ ದೇಗುಲಗಳು ಭಕ್ತಿಯ ಜಾಗೃತಿ ಕೇಂದ್ರಗಳು. ಭಕ್ತರು ಇಲ್ಲಿ ಶುದ್ಧ ಮನಸ್ಸಿನಿಂದ ಭಗವಂತನ ಪ್ರಾರ್ಥಿಸಿ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದರು.

    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಶುಭ ಹಾರೈಸಿದರು.
    ಆಯುರ್ವೇದ ವೈದ್ಯರಾದ ಡಾ. ವಿಜಯ ಮಂಜ ಧಾರ್ಮಿಕ ಪ್ರವಚನ ನೀಡಿದರು. ಅನುವಂಶಿಕ ಮೊಕ್ತೇಸರರಾದ ವಿ. ಲಕ್ಷ್ಮಿ ನಾರಾಯಣ ಹೊಳ್ಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ನಾರಾಯಣ ಪಾಲನ್, ವೇದಮೂರ್ತಿಗಳಾದ ಸುಬ್ರಹ್ಮಣ್ಯ ಐತಾಳ್, ಕೃಷ್ಣ ಐತಾಳ್ ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ, ವೇದಮೂರ್ತಿ ಸುಬ್ರಹ್ಮಣ್ಯ ಐತಾಳ್, ಗುತ್ತಿಗೆದಾರ ಸತ್ಯನಾರಾಯಣ ಶೆಟ್ಟಿ, ದ್ಯಾಗಳ ಮನೆ ದಿನಕರ ಶೆಟ್ಟಿ, ಲೆಕ್ಕ ಪರಿಶೋಧಕ ಚಂದ್ರಶೇಖರ್ ಶೆಟ್ಟಿ, ಗುತ್ತಿಗೆದಾರ ರಂಜಿತ್ ಕುಮಾರ್ ಶೆಟ್ಟಿ ಮೊದಲಾದ ದಾನಿಗಳನ್ನು ಸಮ್ಮಾನಿಸಲಾಯಿತು.

    ನಿವೃತ್ತ ಮುಖ್ಯ ಶಿಕ್ಷಕ ವೇಣುಗೋಪಾಲ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಗಿರೀಶ್ ಐತಾಳ್ ಮತ್ತು ಶಿಕ್ಷಕ ಸದಾನಂದ ಶೆಟ್ಟಿ ನಿರೂಪಿಸಿದರು. ಅರ್ಚಕ ಗಿರೀಶ್ ಐತಾಳ್ ವಂದಿಸಿದರು.

    ಬೆಳಿಗ್ಗೆಯಿಂದ ಶ್ರೀ ದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ಕಲಾ ಹೋಮ, ಶತರುದ್ರಾಭೀಷೇಕ ಹಾಗೂ ನಾಗದೇವರಿಗೆ ಕಲಾಶಾಭಿಷೇಕ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ 2 ಗಂಟೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ಐತಾಳ್ ಸಹೋದರಿಯರು ಕೋಟೇಶ್ವರ ಇವರಿಂದ ನಡೆಯಿತು.

    ಸಂಜೆ ವಿಜಯಕುಮಾರ್ ಕೊಡಿಯಾಲ್ ಬೈಲು ನಿರ್ದೇಶನದ ಕಲಾಸಂಗಮ ಕಲಾವಿದರಿಂದ ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯದ ಶಿವಧೂತ ಗುಳಿಗ ನಾಟಕ ಪ್ರದರ್ಶನಗೊಂಡಿತು. ರಾತ್ರಿ 8 ಗಂಟೆಗೆ ರಂಗಪೂಜೆ, ಬಲಿ ಉತ್ಸವ ನಡೆಯಿತು.

  • ಕೋಟ :ಜೀವನದಲ್ಲಿ ದಾನ ಧರ್ಮವೇ ಶ್ರೇಷ್ಠತೆ ಪಡೆದುಕೊಂಡಿದೆ – ಆನಂದ್ ಸಿ ಕುಂದರ್

    ಕೋಟ :ಜೀವನದಲ್ಲಿ ದಾನ ಧರ್ಮವೇ ಶ್ರೇಷ್ಠತೆ ಪಡೆದುಕೊಂಡಿದೆ – ಆನಂದ್ ಸಿ ಕುಂದರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಜೀವನಲ್ಲಿ ದಾನಧರ್ಮವೇ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಅಂತಹ ಕಾರ್ಯದಿಂದ ಸಂತೃಪ್ತ ಜೀವನ ಪಡೆಯಲು ಸಾಧ್ಯ ಎಂದು ಕೋಟದ ಸಮಾಜಸೇವಕ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು.

    ಕೋಟದ ಜನತಾ ಸಂಸ್ಥೆಯ ನೌಕರರ ವೃಂದದ ವತಿಯಿಂದ ಸಮಾಜಸೇವಕ ಆನಂದ್ ಸಿ ಕುಂದರ್ 75ನೇ ಹುಟ್ಟುಹಬ್ಬದ ಅಮೃತಮಹೋತ್ಸವ ಆನಂದಾಮೃತದಲ್ಲಿ ಅಭಿನಂದನೆ ಸ್ವೀಕರಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಾನ ಮಾಡದರೆ ದೇವರು ಸದಾ ಹರಸುತ್ತಾನೆ, ದೇವರು ನೀಡುವ ಕಾಣಿಕೆ ಬಡವರ ಕಲ್ಯಾಣಕ್ಕೆ ಮಿಸಲಿರಿಸಬೇಕು ಆ ಕಾರ್ಯದಿಂದ ನಾನು ಕೂಡಾ ತೃಪ್ತನಾಗಿದ್ದೇನೆ. ಸಂಸ್ಥೆ ನೌಕರರ ವೃಂದ ನೀಡಿದ ಈ ಅಭಿನಂದನೆ ನೀರಿಕ್ಷಿಸಿರಲಿಲ್ಲ ಇದೊಂದು ಜೀವನದ ಒಳ್ಳೆದ ಸುದಿನವಾಗಿದೆ ಮನಸ್ಸಿಗೆ ಮುದ ನೀಡಿದೆ.ಮುಂದೆ ಕೂಡಾ ಇನ್ನಷ್ಟು ಸಮಾಜಕ್ಕೆ ಸೇವೆ ಸಲ್ಲಿಸುತ್ತೇನೆ ಹುಟ್ಟುಹಬ್ಬಕ್ಕೆ ಹಾರೈಕೆ ಸಲ್ಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಜನತಾ ನೌರಕರರ ವತಿಯಿಂದ ನೀಡಿದ ಅದ್ಧೂರಿ ಅಭಿನಂದನೆ ಆನಂದ್ ಸಿ ಕುಂದರ್ ಪತ್ನಿ ಗೀತಾ ಎ ಕುಂದರ್ ಅರ್ಪಿಸಿಕೊಂಡರು.

    ಕಾರ್ಯಕ್ರಮವನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿ ಶುಭಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಸಂಸ್ಥೆ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಮತ್ಯೋದ್ಯಮಿ ರಾಮ ಕುಂದರ್, ಸಾಲಿಗ್ರಾಮ ಮಕ್ಕಳ ಮೇಳದ ಯಜಮಾನ ಎಚ್ ಶ್ರೀಧರ ಹಂದೆ ಇದ್ದರು. ಕಾರ್ಯದ ಕುರಿತು ಜನತಾ ಉತ್ಪಾದನಾ ಕೇಂದ್ರದ ಪ್ರಸನ್ನ ಸ್ವಾಗತಿಸಿ ಪ್ರಾಸ್ತಾನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಕೆ.ಸಿ ರಾಜೇಶ್ ನಿರೂಪಿಸಿದರು. ಕುಂದರ್ ಕುಟುಂಬದ ಛಾರ್ವಿ, ಮಾನ್ಯ ನೃತ್ಯದ ಮೂಲಕ ಸ್ವಾಗತಿಸಿದರು.ಸಭಾಕಾರ್ಯಕ್ರಮ ಸಂಯೋಜನೆಯನ್ನು ರಮೇಶ್ ಹೆಚ್ ಕುಂದರ್,ಉದಯ್ ಶೆಟ್ಟಿ , ರವಿಕಿರಣ್ ಕೋಟ ಗೈದರು.

    ವಿಶೇಷತೆ
    ಕಾರ್ಯಕ್ರಮದಲ್ಲಿ ಆರಂಭಕ್ಕೂ ಮುನ್ನ ಪೂರ್ವಾಹ್ನ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ 130 ಎಳನೀರ ಅಭಿಷೇಕ ಅವರ ಅಭಿಮಾನಿಗಳು ನೆರವೆರಿಸಿಕೊಂಡು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿಕೊಂಡರು.ನಂತರ ಆನಂದ್ ಸಿ ಕುಂದರ್‍ವರರನ್ನು ಜನತಾ ಸಂಸ್ಥೆಯ ಮುಖ್ಯದ್ವಾರದಿಂದ ಜೀಪ್ ಮೂಲಕ ಮೆರವಣಿಯೊಂದಿಗೆ ಕರೆತರಲಾಯಿತು.ಜನತಾ ಸಿಬ್ಬಂದಿಗಳು ಒಂದೇ ಬಣ್ಣ ಉಡುಗೆ ತೊಟ್ಟು ಸಾಲು ಸಾಲಾಗಿ ಪುಷ್ರ್ಭಾಚನೆ ಸಲ್ಲಿಸಿದರು. ಇತ್ತ ಅದರ ಮಹಿಳಾ ಸಿಬ್ಬಂದಿಗಳು ಕಳಶ ಹಿಡಿದು ಸ್ವಾಗತಿಸಿದರು.ಚಂಡೆಯ ಕರತಾಳನ ಮೇಳೈಸಿತ್ತು.
    ಅಭಿನಂದನಾ ಸಮಾರಂಭದಲ್ಲಿ ಆನಂದ್ ಸಿ ಕುಂದರ್ ಐದು ತರಹದ ಗಿಡ ನೆಟ್ಟು ತಮ್ಮ ಹುಟ್ಟುಹಬ್ಬಕ್ಕೆ ಚಾಲನೆ ನೀಡಿದರು.ಶ್ರೀಯುತರ ಕುರಿತು ಬಗ್ಗೆ ಅವರ ಪುತ್ರ ಪ್ರಶಾಂತ್ ಕುಂದರ್,ರಕ್ಷಿತ್ ಕುಂದರ್,,ಪುತ್ರಿ ರಚನಾ ಕುಂದರ್ ಸೊಸೆಯಂದಿರರಾದ ದಿವ್ಯಲಕ್ಷ್ಮೀ,ವೈಷ್ಣವಿ ತಮ್ಮ ಮಾತಿನ ಮೂಲಕ ಗುಣಗಾನಗೈದರು.ಯಕ್ಷಗಾನದ ಶೈಲಿಯಲ್ಲಿ ಯಕ್ಷಗುರು ಎಚ್ ಶ್ರೀಧರ ಹಂದೆ ಕುಂದರವರನ್ನು ಪರಿಚಯಿಸಿದರು.ಭಜನಾ ನಾರಾಯಣ ಮರಕಾಲ,ಎಚ್ ಜನಾರ್ದನ ಹಂದೆಯವರಿಂದ ಶೋಭಾನೆ ಹಾಡಿನ ಮೂಲಕ ಜನತಾ ಸಿಬ್ಬಂದಿಗಳು ಆರತಿ ಬೆಳಗಿದರು.

    ಸಹಾಯ ಹಸ್ತ,ಗೌರವಾರ್ಪಣೆ
    ಕಾರ್ಯಕ್ರಮದಲ್ಲಿ ತಮ್ಮ ಸಂಸ್ಥೆಯಲ್ಲಿ ಸಾಕಷ್ಟು ವರ್ಷಗಳ ಹಿಂದೆ ಕಾರ್ಮಿಕರಾಗಿ ದುಡಿದ ಹಿರಿಯ ಜೀವಿಗಳಿಗೆ ಗೌರರ್ವಾಪಣೆ ಸಲ್ಲಿಸಲಾಯಿತು.ಅದೇ ರೀತಿ ತಾವು ಕಲಿತ ಶಾಲೆಗಳಾದ ಕೋಟದ ಶಾಂಭವೀ ಶಾಲೆ,ವಿವೇಕ ವಿದ್ಯಾಸಂಸ್ಥೆಗಳಿಗೆ ದತ್ತಿನಿಧಿಯನ್ನು ವಿತರಿಸಿದರು.ಅಲ್ಲದೆ ಕಾರ್ಕಳದ ಹೊಸಬೆಳಕು ಹಾಗೂ ಕಾರುಣ್ಯ ಅನಾಥಾಶ್ರಮ,ಕಪಿಲಾ ,ಹಾಗೂ ಕಾಮಧೇನು ಗೋ ಶಾಲೆಗಳಿಗೆ,ಪ್ರಾಣಿದಯಾ ಸಂಸ್ಥೆಯಾದ ಮಧ್ವರಾಜ್‍ಎನಿಮಲ್ ಆಶ್ರಯತಾಣಕ್ಕೆ ಆರ್ಥಿಕ ಸಹಾಯಹಸ್ತ ನೀಡಲಾಯಿತು.ವಿಕಲಚೇತನ ಕೋಣಿ ಮಾನಸಜ್ಯೋತಿ ,ಚೈತನ್ಯ ವಿಕಲಚೇತನ ,ಕಂಡ್ಲೂರು ರಾಮ ಮೊಗವೀರ ಕೃತಕ ಕಾಲು ,ಶರತ್ ದೇವಾಡಿಗ ಇವರ ಜೀವನಾಂಶದ ಚಕ್ ಹಸ್ತಾಂತರಿಸಿದರು.
    ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಕುಂದರ್ ಕುಟುಂಬ ಸಂಭ್ರಮಿಸಿತು.

  • ಕೋಟತಟ್ಟು ಪಡುಕರೆ – ಮತದಾನ ಜಾಗೃತಿ, ಪ್ರತಿಜ್ಞೆ

    ಕೋಟತಟ್ಟು ಪಡುಕರೆ – ಮತದಾನ ಜಾಗೃತಿ, ಪ್ರತಿಜ್ಞೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪ್ರತಿಯೊಬ್ಬರು ಮತದಾನ ಮಾಡಬೇಕು ಮತದಾನದ ಹಕ್ಕಿನಿಂದ ವಿಮುಖರಾಗಬಾರದು ಆಗಮಾತ್ರ ನಾವು ನಮ್ಮ ದೇಶದಲ್ಲಿ ಹುಟ್ಟು ಸಾರ್ಥಕ್ಯ ಕಾಣಬಹುದು ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಹೇಳಿದರು.

    ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ಸಂಯುಕ್ತ ಸಹಯೋಗದೊಂದಿಗೆ ಕೋಟತಟ್ಟು ಪಡುಕರೆಯಲ್ಲಿ ಹಮ್ಮಿಕೊಂಡ ಮತದಾನದ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ನೆರವೆರಿಸಿ ಮಾತನಾಡಿ ನಿಮ್ಮ ಒಂದೊಂದು ಮತಗಳು ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಅದನ್ನು ಹಣಕ್ಕಾಗಿ ಮಾರಾಟ ಮಾಡದೆ ಸಭ್ಯ ಅಭ್ಯರ್ಥಿಗೆ ಚಲಾಯಿಸಿ ಸದೃಢ ದೇಶ ಕಟುವ ಕಾರ್ಯಕ್ಕೆ ಮುನ್ನುಡಿ ಬರೆಯಿರಿ ಎಂದು ಆಶಿಸಿ ಪ್ರತಿಜ್ಞಾ ವಿಧಿ ನೆರವೆರಿಸಿದರು.

    ಈ ಸಂದರ್ಭದಲ್ಲಿ ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್,ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕೋಟ ಪಡುಕರೆ ಲ.ಸೋ ಬಂ.ಸ.ಪ್ರ.ಕಾಲೇಜಿನ ಪ್ರಾಂಶುಪಾಲ ಡಾ.ಸುನೀತಾ,ಕೋಟ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ ನಾವಡ,ಕೋಟತಟ್ಟು ಗ್ರಾ.ಪಂ ಕಾರ್ಯದರ್ಶಿ ಸುಮತಿ ಅಂಚನ್,ಜನತಾ ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಎ ಕುಂದರ್,ಸಂಜೀವಿ ಒಕ್ಕೂಟದ ಸುಜಾತ ಯು ತಿಂಗಳಾಯ,ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ಮತ್ತಿತರರು ಉಪಸ್ಥಿತರಿದ್ದರು.