ಕುಂದಾಪುರ ಮಿರರ್ ಸುದ್ದಿ…

ಕೋಟ: ಜೀವನಲ್ಲಿ ದಾನಧರ್ಮವೇ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಅಂತಹ ಕಾರ್ಯದಿಂದ ಸಂತೃಪ್ತ ಜೀವನ ಪಡೆಯಲು ಸಾಧ್ಯ ಎಂದು ಕೋಟದ ಸಮಾಜಸೇವಕ ಆನಂದ್ ಸಿ ಕುಂದರ್ ಅಭಿಪ್ರಾಯಪಟ್ಟರು.
ಕೋಟದ ಜನತಾ ಸಂಸ್ಥೆಯ ನೌಕರರ ವೃಂದದ ವತಿಯಿಂದ ಸಮಾಜಸೇವಕ ಆನಂದ್ ಸಿ ಕುಂದರ್ 75ನೇ ಹುಟ್ಟುಹಬ್ಬದ ಅಮೃತಮಹೋತ್ಸವ ಆನಂದಾಮೃತದಲ್ಲಿ ಅಭಿನಂದನೆ ಸ್ವೀಕರಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ದಾನ ಮಾಡದರೆ ದೇವರು ಸದಾ ಹರಸುತ್ತಾನೆ, ದೇವರು ನೀಡುವ ಕಾಣಿಕೆ ಬಡವರ ಕಲ್ಯಾಣಕ್ಕೆ ಮಿಸಲಿರಿಸಬೇಕು ಆ ಕಾರ್ಯದಿಂದ ನಾನು ಕೂಡಾ ತೃಪ್ತನಾಗಿದ್ದೇನೆ. ಸಂಸ್ಥೆ ನೌಕರರ ವೃಂದ ನೀಡಿದ ಈ ಅಭಿನಂದನೆ ನೀರಿಕ್ಷಿಸಿರಲಿಲ್ಲ ಇದೊಂದು ಜೀವನದ ಒಳ್ಳೆದ ಸುದಿನವಾಗಿದೆ ಮನಸ್ಸಿಗೆ ಮುದ ನೀಡಿದೆ.ಮುಂದೆ ಕೂಡಾ ಇನ್ನಷ್ಟು ಸಮಾಜಕ್ಕೆ ಸೇವೆ ಸಲ್ಲಿಸುತ್ತೇನೆ ಹುಟ್ಟುಹಬ್ಬಕ್ಕೆ ಹಾರೈಕೆ ಸಲ್ಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜನತಾ ನೌರಕರರ ವತಿಯಿಂದ ನೀಡಿದ ಅದ್ಧೂರಿ ಅಭಿನಂದನೆ ಆನಂದ್ ಸಿ ಕುಂದರ್ ಪತ್ನಿ ಗೀತಾ ಎ ಕುಂದರ್ ಅರ್ಪಿಸಿಕೊಂಡರು.
ಕಾರ್ಯಕ್ರಮವನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ಸಂಸ್ಥೆ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಮತ್ಯೋದ್ಯಮಿ ರಾಮ ಕುಂದರ್, ಸಾಲಿಗ್ರಾಮ ಮಕ್ಕಳ ಮೇಳದ ಯಜಮಾನ ಎಚ್ ಶ್ರೀಧರ ಹಂದೆ ಇದ್ದರು. ಕಾರ್ಯದ ಕುರಿತು ಜನತಾ ಉತ್ಪಾದನಾ ಕೇಂದ್ರದ ಪ್ರಸನ್ನ ಸ್ವಾಗತಿಸಿ ಪ್ರಾಸ್ತಾನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಕೆ.ಸಿ ರಾಜೇಶ್ ನಿರೂಪಿಸಿದರು. ಕುಂದರ್ ಕುಟುಂಬದ ಛಾರ್ವಿ, ಮಾನ್ಯ ನೃತ್ಯದ ಮೂಲಕ ಸ್ವಾಗತಿಸಿದರು.ಸಭಾಕಾರ್ಯಕ್ರಮ ಸಂಯೋಜನೆಯನ್ನು ರಮೇಶ್ ಹೆಚ್ ಕುಂದರ್,ಉದಯ್ ಶೆಟ್ಟಿ , ರವಿಕಿರಣ್ ಕೋಟ ಗೈದರು.
ವಿಶೇಷತೆ
ಕಾರ್ಯಕ್ರಮದಲ್ಲಿ ಆರಂಭಕ್ಕೂ ಮುನ್ನ ಪೂರ್ವಾಹ್ನ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ 130 ಎಳನೀರ ಅಭಿಷೇಕ ಅವರ ಅಭಿಮಾನಿಗಳು ನೆರವೆರಿಸಿಕೊಂಡು ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿಕೊಂಡರು.ನಂತರ ಆನಂದ್ ಸಿ ಕುಂದರ್‍ವರರನ್ನು ಜನತಾ ಸಂಸ್ಥೆಯ ಮುಖ್ಯದ್ವಾರದಿಂದ ಜೀಪ್ ಮೂಲಕ ಮೆರವಣಿಯೊಂದಿಗೆ ಕರೆತರಲಾಯಿತು.ಜನತಾ ಸಿಬ್ಬಂದಿಗಳು ಒಂದೇ ಬಣ್ಣ ಉಡುಗೆ ತೊಟ್ಟು ಸಾಲು ಸಾಲಾಗಿ ಪುಷ್ರ್ಭಾಚನೆ ಸಲ್ಲಿಸಿದರು. ಇತ್ತ ಅದರ ಮಹಿಳಾ ಸಿಬ್ಬಂದಿಗಳು ಕಳಶ ಹಿಡಿದು ಸ್ವಾಗತಿಸಿದರು.ಚಂಡೆಯ ಕರತಾಳನ ಮೇಳೈಸಿತ್ತು.
ಅಭಿನಂದನಾ ಸಮಾರಂಭದಲ್ಲಿ ಆನಂದ್ ಸಿ ಕುಂದರ್ ಐದು ತರಹದ ಗಿಡ ನೆಟ್ಟು ತಮ್ಮ ಹುಟ್ಟುಹಬ್ಬಕ್ಕೆ ಚಾಲನೆ ನೀಡಿದರು.ಶ್ರೀಯುತರ ಕುರಿತು ಬಗ್ಗೆ ಅವರ ಪುತ್ರ ಪ್ರಶಾಂತ್ ಕುಂದರ್,ರಕ್ಷಿತ್ ಕುಂದರ್,,ಪುತ್ರಿ ರಚನಾ ಕುಂದರ್ ಸೊಸೆಯಂದಿರರಾದ ದಿವ್ಯಲಕ್ಷ್ಮೀ,ವೈಷ್ಣವಿ ತಮ್ಮ ಮಾತಿನ ಮೂಲಕ ಗುಣಗಾನಗೈದರು.ಯಕ್ಷಗಾನದ ಶೈಲಿಯಲ್ಲಿ ಯಕ್ಷಗುರು ಎಚ್ ಶ್ರೀಧರ ಹಂದೆ ಕುಂದರವರನ್ನು ಪರಿಚಯಿಸಿದರು.ಭಜನಾ ನಾರಾಯಣ ಮರಕಾಲ,ಎಚ್ ಜನಾರ್ದನ ಹಂದೆಯವರಿಂದ ಶೋಭಾನೆ ಹಾಡಿನ ಮೂಲಕ ಜನತಾ ಸಿಬ್ಬಂದಿಗಳು ಆರತಿ ಬೆಳಗಿದರು.
ಸಹಾಯ ಹಸ್ತ,ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ತಮ್ಮ ಸಂಸ್ಥೆಯಲ್ಲಿ ಸಾಕಷ್ಟು ವರ್ಷಗಳ ಹಿಂದೆ ಕಾರ್ಮಿಕರಾಗಿ ದುಡಿದ ಹಿರಿಯ ಜೀವಿಗಳಿಗೆ ಗೌರರ್ವಾಪಣೆ ಸಲ್ಲಿಸಲಾಯಿತು.ಅದೇ ರೀತಿ ತಾವು ಕಲಿತ ಶಾಲೆಗಳಾದ ಕೋಟದ ಶಾಂಭವೀ ಶಾಲೆ,ವಿವೇಕ ವಿದ್ಯಾಸಂಸ್ಥೆಗಳಿಗೆ ದತ್ತಿನಿಧಿಯನ್ನು ವಿತರಿಸಿದರು.ಅಲ್ಲದೆ ಕಾರ್ಕಳದ ಹೊಸಬೆಳಕು ಹಾಗೂ ಕಾರುಣ್ಯ ಅನಾಥಾಶ್ರಮ,ಕಪಿಲಾ ,ಹಾಗೂ ಕಾಮಧೇನು ಗೋ ಶಾಲೆಗಳಿಗೆ,ಪ್ರಾಣಿದಯಾ ಸಂಸ್ಥೆಯಾದ ಮಧ್ವರಾಜ್‍ಎನಿಮಲ್ ಆಶ್ರಯತಾಣಕ್ಕೆ ಆರ್ಥಿಕ ಸಹಾಯಹಸ್ತ ನೀಡಲಾಯಿತು.ವಿಕಲಚೇತನ ಕೋಣಿ ಮಾನಸಜ್ಯೋತಿ ,ಚೈತನ್ಯ ವಿಕಲಚೇತನ ,ಕಂಡ್ಲೂರು ರಾಮ ಮೊಗವೀರ ಕೃತಕ ಕಾಲು ,ಶರತ್ ದೇವಾಡಿಗ ಇವರ ಜೀವನಾಂಶದ ಚಕ್ ಹಸ್ತಾಂತರಿಸಿದರು.
ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಕುಂದರ್ ಕುಟುಂಬ ಸಂಭ್ರಮಿಸಿತು.











