Category: ಸಿನೆಮಾ

  • “ಕಾದಿರುವೆ ನಾನು” ಆಲ್ಬಮ್ ಸಾಂಗ್ ಬಿಡುಗಡೆ

    “ಕಾದಿರುವೆ ನಾನು” ಆಲ್ಬಮ್ ಸಾಂಗ್ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಅಕ್ಷಯ್ ಗುಲ್ವಾಡಿ ನಿರ್ದೇಶನದ “ಕಾದಿರುವೆ ನಾನು” ಆಲ್ಬಮ್ ಸಾಂಗ್ ಅನ್ನು ಗುಲ್ವಾಡಿ ಗ್ರಾಮಸ್ಥರ ಹಿತರಕ್ಷಣಾ ವೇದಿಕೆಯಲ್ಲಿ ‌ಖ್ಯಾತ ವಕೀಲರಾದ ರವಿಕಿರಣ್ ಮುರುಡೇಶ್ವರ ಅವರು ಹಾಡಿನ ಧ್ವನಿ ಮುದ್ರಣವನ್ನು ಬಿಡುಗಡೆಗೊಳಿಸಿದರು.


    ನಂತರ ಮಾತನಾಡಿದ ಅವರು ಪ್ರಕಾಶ್ ಪಡುಕೋಣೆ, ಮಂಜು ಗಂಗೊಳ್ಳಿ, ರವಿ ಬಸ್ರೂರು, ಯಾಖೂಬ್ ಖಾದರ್ ಗುಲ್ವಾಡಿಯಿಂದಾಗಿ ಕುಂದಾಪುರದ ಪಡುಕೋಣೆ, ಗಂಗೊಳ್ಳಿ, ಬಸ್ರೂರು ಹಾಗೂ ಗುಲ್ವಾಡಿ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಮುಂದೆಯೂ ಕೂಡ ಇವರಿಂದ ಹೆಚ್ಚಿನ ಕೆಲಸ ಕಾರ್ಯಗಳು ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ನೀಲಾವರ ಸುರೇಂದ್ರ ಅಡಿಗ, ಸುಬ್ರಹ್ಮಣ್ಯ ಶೆಟ್ಟಿ, ಪರ್ತಕರ್ತರಾದ ಜಾನ್ ಡಿಸೋಜ, ಮೊದಲಾದವರು ಉಪಸ್ಥಿತರಿದ್ದರು. ಯಾಕುಬ್ ಖಾದರ್ ಗುಲ್ವಾಡಿಯವರು ಕಾರ್ಯಕ್ರಮ ನಿರೂಪಿಸಿದರು.

    Watch:-

  • ಕುಂಭಾಶಿ- ಕಾಂತಾರ  ಚಲನಚಿತ್ರ ಮೂಹೂರ್ತ

    ಕುಂಭಾಶಿ- ಕಾಂತಾರ ಚಲನಚಿತ್ರ ಮೂಹೂರ್ತ

    ಕುಂದಾಪುರ ಮಿರರ್ ಸುದ್ದಿ…
    ಕೋಟ:
    ಕಾಂತಾರ ಚಲನಚಿತ್ರ ಮೂಹೂರ್ತ ಇತ್ತೀಚಿಗೆ ಆನೆಗುಡ್ಡೆ ವಿನಾಯಕ ದೇವಸ್ಥಾನಯದಲ್ಲಿ ಜರುಗಿತು. ಹೊಂಬಾಳೆ ಪಿಲಂ ಪ್ರೊಡಕ್ಷನ್ನಲ್ಲಿ ತಯಾರಾಗುವ ಈ ಚಿತ್ರದ ನಾಯಕ ರಿಷಭ್ ಶೆಟ್ಟಿ ಹಾಗೂ ತಂತ್ರಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು. ಪೂಜೆಯ ನಂತರ ಚಿತ್ರ ನಿರ್ಮಾಪಕ ಹಾಗೂ ರಿಷಬ್ ಶೆಟ್ಟಿಯವರನ್ನು ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ದೇವಳದ ವತಿಯಿಂದ ಗೌರವಿಸಿದರು.

    ಹಿರಿಯ ಧರ್ಮದರ್ಶಿ ಕೆ ಸೂರ್ಯನಾರಾಯಣ ಉಪಾಧ್ಯಾಯ, ಪಯಾ9ಯ ಅರ್ಚಕ ಕೆ ವೆಂಕಟನಾರಾಯಣ ಉಪಾಧ್ಯಾಯ ಹಾಗೂ ಸಹೋದರರು, ಅರ್ಚಕ ಮಂಡಳಿಯ ಸದಸ್ಯರು, ಮ್ಯಾನೇಜರ್ ಮತ್ತು ದೇವಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಕೋಟೇಶ್ವರದಲ್ಲಿ ಭಾರತ್ ಸಿನೆಮಾಸ್ ಉದ್ಘಾಟನೆ

    ಕೋಟೇಶ್ವರದಲ್ಲಿ ಭಾರತ್ ಸಿನೆಮಾಸ್ ಉದ್ಘಾಟನೆ

    ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ನಿರ್ಮಾಣಗೊಂಡ ಕೋಸ್ಟಲ್ ಕ್ರೌನ್ ಮಾಲ್ ನಲ್ಲಿ ಭಾರತ್ ಸಿನೆಮಾಸ್ ಶಾಖೆಯನ್ನು ಖ್ಯಾತ ಸಂಗೀತ ನಿರ್ದೇಶಕ ರವಿಬಸ್ರೂರು ಉದ್ಘಾಟಿಸಿದರು.
    ಬಳಿಕ ಮಾತನಾಡಿದ ಅವರು, ಕುಂದಾಪುರಕ್ಕೊಂದು ಗುಣಮಟ್ಟದ ಚಿತ್ರಮಂದಿರ ಬೇಕೆನ್ನುವ ಜನರ ಕನಸು ಈಡೇರಿದೆ‌. ಉತ್ತಮ ಸಿನೆಮಾ ಮಾಡಿದಾಗ ಅದರ ಪ್ರದರ್ಶನಕ್ಕೆ ಚಿತ್ರಮಂದಿರದ ಅವಶ್ಯಕತೆಯೂ ಇದ್ದು ಈ ಹಿಂದೆ ಕುಂದಾಪುರದಲ್ಲಿ ಕೊರತೆಯಿತ್ತು‌. ಭಾರತ್ ಸಿನೆಮಾಸ್ ಶಾಖೆಗಳು ಹಳ್ಳಿಹಳ್ಳಿಯಲ್ಲೂ ನಿರ್ಮಾಣಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು‌.
    ಭಾರತ್ ಗ್ರೂಫ್ ನಿರ್ದೇಶಕರಾದ ಸುಧೀರ್ ಎಂ ಪೈ ದೀಪ ಬೆಳಗಿಸಿ ಮಾತನಾಡಿ, ಭಾರತ್ ಸಿನೆಮಾಸ್ ಅನ್ನು ದಕ್ಷಿಣ ಭಾರತದಲ್ಲಿ ಪ್ರಥಮವಾಗಿ 2006ರಲ್ಲಿ ಮಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಕೋಟೇಶ್ವರದಲ್ಲಿ ನಾಲ್ಕನೇ ಶಾಖೆ ಲೋಕಾರ್ಪಣೆಗೊಂಡಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಭಾರತ್ ಸಿನೆಮಾಸ್ ಆರಂಭಿಸುವ ಚಿಂತನೆಯಿದೆ ಎಂದರು.
    ಉದ್ಯಮಿ ಪ್ರಕಾಶ್ ಲೋಬೊ, ಶಿವಾನಂದ ಪೂಜಾರಿ, ಶಾಲೆಟ್ ಲೋಬೋ, ಭಾರತ್ ಸಿನೆಮಾ ಸಂಸ್ಥೆಯ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಇದ್ದರು.