Category: ರಾಜಕೀಯ

  • ಕೋಟ :ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯರನ್ನು ಬೆಂಗಳೂರಿನಲ್ಲಿ ಭೇಟಿಯಾದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್

    ಕೋಟ :ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯರನ್ನು ಬೆಂಗಳೂರಿನಲ್ಲಿ ಭೇಟಿಯಾದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಸ್ತಾನದ ಹಂಗಾರಕಟ್ಟೆ, ಕೋಡಿ ಬೆಂಗ್ರೆ, ಜಟ್ಟಿ ಕೋಡಿ ಮೀನುಗಾರಿಕಾ ಜಟ್ಟಿಗಳ ಬಗ್ಗೆ ಹಾಗೂ ಕರಾವಳಿಯ ಕಡಲ ಕೊರೆತ ಹಾಗೂ ಮೀನುಗಾರರ ಸಮಸ್ಯೆಗಳನ್ನು ಚರ್ಚಿಸಿ ಸಚಿವರ ಬಳಿ ಈ ಪ್ರದೇಶಗಳಿಗೆ ಭೇಟಿ ನೀಡುವಂತೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಹಾಗೂ ಮೀನುಗಾರ ಮುಖಂಡರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಶೀಘ್ರವೇ ಎಲ್ಲ ಪ್ರದೇಶಗಳಿಗೆ ಭೇಟಿಕೊಟ್ಟು ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳಗಾಗಿ ಭರವಸೆಯನ್ನು ನೀಡಿದರು.

    ಈ ಸಂದರ್ಭದಲ್ಲಿ ಹಂಗಾರಕಟ್ಟೆ ಜಟ್ಟಿ, ಕೋಡಿ ಬೆಂಗ್ರಿ- ಕೋಡಿ ಜಟ್ಟಿ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶಂಕರ್ ಬಂಗೇರ, ಕೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಂತೋನಿ ಡಿಸೋಜ, ರಾಜ್ಯ ಮೀನುಗಾರರ ಕಾಂಗ್ರೆಸ್‌ ಸಂಘಟನಾ ಕಾರ್ಯದರ್ಶಿ ರಮೇಶ್ ತಿಂಗಳಾಯ ಕೋಡಿ ಬೆಂಗ್ರೆ, ಕೋಟ ಪರ್ಷಿಯನ್ ಮೀನುಗಾರರ ಪ್ರಾಥಮಿಕ ಸಂಘದ ನಿರ್ದೇಶಕರಾದ ನವೀನ್ ಕುಂದಾರ್ ಕೋಡಿ ಬೆಂಗ್ರಿ, ಮೀನುಗಾರರ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಮಾಜಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ದಿನೇಶ್ ಬಂಗೇರ ಗುಂಡ್ಮಿ, ಯಂಗ್ ಬಿ ಗ್ರೇಡ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೆ ನೆಲ್ಲಿಬೆಟ್ಟು ಉಪಸ್ಥಿತರಿದ್ದರು.

  • ಬೈಂದೂರು: ಸರ್ಕಾರ ಇಲ್ಲದೇ ಇದ್ದರೂ ಧೃತಿಗೆಡಬೇಡಿ ನಾವಿದ್ದೇವೆ – ಬಿಜೆಪಿ ಅಭಿನಂದನಾ ಸಭೆಯಲ್ಲಿ ಬಿ.ವೈ.ರಾಘವೇಂದ್ರ

    ಬೈಂದೂರು: ಸರ್ಕಾರ ಇಲ್ಲದೇ ಇದ್ದರೂ ಧೃತಿಗೆಡಬೇಡಿ ನಾವಿದ್ದೇವೆ – ಬಿಜೆಪಿ ಅಭಿನಂದನಾ ಸಭೆಯಲ್ಲಿ ಬಿ.ವೈ.ರಾಘವೇಂದ್ರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೋಟ್ಯಂತರ ರೂಪಾಯಿ ಖರ್ಚುಮಾಡಿ ಉಜ್ವಲ ಯೋಜನೆ ಮೂಲಕ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ ವಿತರಣೆ ಮಾಡಿದ್ದರೂ ಗ್ಯಾಸ್ ಬೆಲೆ ಏರಿಕೆಯಾಗಿದೆ ಎಂಬ ಅಫ್ರಚಾರ ಈ ಬಾರಿಯ ಚುನಾವಣೆಯಲ್ಲಿ ಪ್ರತಿಫಲಿಸಿದೆ. ಆರೋಗ್ಯ ರಕ್ಷಣೆಗೆ ಆಯುಷ್ಮಾನ್ ಭಾರತ ಯೋಜನೆ ಅನುಷ್ಟಾನ ಮಾಡಿದ್ದರೂ ಕಾಂಗ್ರೆಸ್ ನ ಗ್ಯಾರೆಂಟಿಗಳನ್ನು ಮತದಾರರು ನಂಬಿದ್ದರ ಫಲವಾಗಿ ಈ ಬಾರಿ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲ ಎನ್ನುವ ಕಾರಣಕ್ಕೆ ಯಾರೂ ಧೃತಿಗೇಬೇಕಾಗಿಲ್ಲ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಶಿವಮೊಗ್ಗೆ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

    ಅವರು ವಂಡ್ಸೆಯಲ್ಲಿ ಹಮ್ಮಿಕೊಂಡದ್ದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಕಾಂಗ್ರೆಸ್ ಈ ರಾಜ್ಯಕ್ಕೆ ಅಪಾಯಕಾರಿಯಾದ ಗ್ಯಾರೆಂಟಿ ಗಳನ್ನು ಹಂಚಲು ಹೊರಟಿದೆ. ಹಿಂದುತ್ವದ ಅಸ್ತಿತ್ವವನ್ನು ಪ್ರಶ್ನಿಸುವ ಭಜರಂಗದಳ ನಿಷೇಧವನ್ನು ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಹಿಂದೂಗಳನ್ನು ಕೆಣಕಲು ಬಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು

    ಮುಂಬರುವ ಚುನಾವಣೆಗಳಲ್ಲಿ ನಾವು ಗೆಲುವಿಗೆ ಪಣತೊಡಬೇಕಾಗಿದೆ ಎಂದ ಅವರು ಸ್ಥಳೀಯಾಡಳಿತ ಸೇರಿದಂತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರತೀ ಮನೆಗೂ ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

    ಈ ಸಂದರ್ಭ ಶಾಸಕ ಗುರುರಾಜ್ ಗಂಟಿಹೊಳೆ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

    ಚುನಾವಣಾ ಉಸ್ತುವಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಜಿಲ್ಲಾ ಕಾರ್ಯದರ್ಶಿ ಮಾಲತಿ ಬಿ ನಾಯಕ್, ವಂಡ್ಸೆ ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ ಶೆಟ್ಟಿ ನಾರ್ಕಳಿ, ಮಂಡಲ ಪ್ರಭಾರಿ ಕಿಶೋರ್ ಕುಂದಾಪುರ, ಜಿ.ಪ. ಸದಸ್ಯರಾದ ಸುರೇಶ್ ಬಟವಾಡಿ, ರೋಹಿತ್ ಶೆಟ್ಟಿ, ಶೋಭಾ ಪುತ್ರನ್, ತಾ.ಪಂ. ಮಾಜೀ ಅಧ್ಯಕ್ಷರುಗಳಾದ ಮಹೇಂದ್ರ ಪೂಜಾರಿ, ಇಂದಿರಾ ಶೆಟ್ಟಿ, ಶ್ಯಾಮಲಾ ಕುಂದರ್ ಮಾಲಿನಿ ಕೆ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ: ಸಿಎಂ – ಡಿಸಿಎಂ ಪಟ್ಟಾಭಿಷೇಕ , ಪಟಾಕಿ ಸಿಡಿಸಿ ಸಂಭ್ರಮಿಸಿದ ಕೈ ಕಾರ್ಯಕರ್ತರು

    ಕುಂದಾಪುರ: ಸಿಎಂ – ಡಿಸಿಎಂ ಪಟ್ಟಾಭಿಷೇಕ , ಪಟಾಕಿ ಸಿಡಿಸಿ ಸಂಭ್ರಮಿಸಿದ ಕೈ ಕಾರ್ಯಕರ್ತರು

    Video:

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದು, ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಕುಂದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು.

    ಕುಂದಾಪುರದ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಪಕ್ಷದ ಮುಖಂಡರು, ಕಾರ್‍ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪರ ಘೋಷಣೆಗಳನ್ನು ಕೂಗಿದರು.

    ಈ ಸಂದರ್ಭದಲ್ಲಿ ಪಕ್ಷದ ನಾಯಕ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಕುಂದಾಪುರದಲ್ಲಿ ಕಾಂಗ್ರೆಸ್ ಸೋತಿರುವ ಬಗ್ಗೆ ನಾವು ಸಮಾಲೋಚನೆ ಮಾಡಬೇಕಾದ ಅಗತ್ಯವಿದ್ದು, ಆದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರಿದ್ದು, ಇದು ನಮ್ಮೆಲ್ಲರ ಪಾಲಿನ ಸೌಭಾಗ್ಯ. ಇದನ್ನು ಸಂಭ್ರಮಿಸೋಣ. ಚುನಾವಣೆ ವೇಳೆ ಘೋಷಿಸಿದ ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸುವ ಕಾರ್‍ಯ ಮಾಡೋಣ ಎಂದರು.
    ಕಾಂಗ್ರೆಸ್ ಜಿಲ್ಲಾ ವಕ್ತಾರ ವಿಕಾಸ್ ಹೆಗ್ಡೆ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ ಖಾರ್ವಿ ಮಾತನಾಡಿದರು.

    ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಮತ್ತಿತರರು ಉಪಸ್ಥಿತರಿದ್ದರು.
    ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ವಿನೋದ್ ಕ್ರಾಸ್ತ ಸ್ವಾಗತಿಸಿ, ನಿರೂಪಿಸಿದರು. ಇಂಟಕ್ ಅಧ್ಯಕ್ಷ ಚಂದ್ರ ಅಮಿನ್ ವಂದಿಸಿದರು.

  • ಕುಂದಾಪುರದಲ್ಲಿರುವುದು ಜೋಡೆತ್ತು ಅಲ್ಲ; ಮೂರೆತ್ತು – ಹಾಲಾಡಿ ಶ್ರೀನಿವಾಸ ಶೆಟ್ಟಿ

    ಕುಂದಾಪುರದಲ್ಲಿರುವುದು ಜೋಡೆತ್ತು ಅಲ್ಲ; ಮೂರೆತ್ತು – ಹಾಲಾಡಿ ಶ್ರೀನಿವಾಸ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಈ ಚುನಾವಣೆಯಲ್ಲಿ ನಾನು, ಕೋಟ ಶ್ರೀನಿವಾಸ ಪೂಜಾರಿ, ಅಭ್ಯರ್ಥಿ ಕಿರಣ್ ಕೊಡ್ಗಿ ಮೂವರು ಒಟ್ಟಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ನಮ್ಮದು ಜೋಡೆತ್ತು ಅಲ್ಲ, ಮೂರೆತ್ತು. ಬಹಳ ಒಳ್ಳೆಯ ಮಿತ್ರತ್ವ ನಮ್ಮದು ಎಂದು ನಿಕಟಪೂರ್ವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

    ಅವರು ಭಾರತೀಯ ಜನತಾ ಪಕ್ಷ ಕುಂದಾಪುರ ಮಂಡಲದ ವತಿಯಿಂದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಅಭಿನಂದನಾ ಸಭೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ನೂತನ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಅವರನ್ನು ಅಭಿನಂದಿಸಿ ಮಾತನಾಡಿದರು.

    ನಾನು ವಿಧಾನಸಭೆಗೆ ಪ್ರವೇಶ ಮಾಡುವ ಸಮಯ ಬಹಳ ಕಠಿಣವಾಗಿತ್ತು. ಇಡೀ ಉಡುಪಿ ಜಿಲ್ಲೆಯಿಂದ ನಾನೊಬ್ಬನೇ ಬಿಜೆಪಿ ಶಾಸಕನಾಗಿದ್ದೆ. ಜಿ.ಪಂ., ತಾ.ಪಂಗಳಲ್ಲಿಯೂ ನಾವು ಅಧಿಕಾರದಲ್ಲಿ ಇರಲಿಲ್ಲ. ಎದೆಗುಂದದೆ ಮುನ್ನೆಡೆಯಬೇಕು. ಅಧಿಕಾರ ಎನ್ನುವುದು ಸುಖದ ಸುಪತ್ತಿಗೆ ಅಲ್ಲ, ಅದು ಮೊನಚಾದ ಮುಳ್ಳಿನ ಪೀಠ ಎಂದರು.

    ಚುನಾವಣಾ ಸಮಯದಲ್ಲಿ ಪ್ರನಾಳಿಕೆ ಕೊಡುವುದು ಕ್ರಮ, ಗ್ಯಾರಂಟಿ ಕಾರ್ಡ್ ನೀಡುವ ಪದ್ದತಿ ನಮ್ಮಲ್ಲಿ ಇರಲಿಲ್ಲ. ಜನರಿಗೆ ಆಮಿಷ ಒಡ್ಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದ ಅವರು ಕ್ಷೇತ್ರದ ಜನತೆಗೆ ಸಾಮಾಜಿಕ ನ್ಯಾಯ ನೀಡುವುದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ಜನರು ವಿಶ್ವಾಸದಿಂದ ಮತ ನೀಡಿ ಚುನಾಯಿಸಿದಕ್ಕೆ ಸಾರ್ಥಕವಾಗುತ್ತದೆ ಎಂದರು.

    ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂದಾಪುರ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರು ಬರಲಿಲ್ಲ, ನಾವು ಕೇಳಿದ್ದು ಕೂಡಾ ಕಡಿಮೆ. ಆದರೆ ಕುಂದಾಪುರ ಕ್ಷೇತ್ರಕ್ಕೆ ಹಾಲಾಡಿ ಶ್ರೀನಿವಾ ಶೆಟ್ಟಿಯವರೇ ಪ್ರಮುಖ ಸ್ಟಾರ್ ಪ್ರಚಾರಕರು. ಅವರ ಮಾರ್ಗದರ್ಶನದಲ್ಲಿ ಗೆಲುವು ಸಾಧಿಸಿದ್ದೇವೆ. ಒಳ್ಳೆತನ ಗೆದ್ದಿದೆ ಎನ್ನುವ ಉದ್ಗಾರ ಕೇಳಿದಾಗ ಸಂತೋಷವಾಗುತ್ತದೆ. ಕ್ಷೇತ್ರದಲ್ಲಿ ಚುನಾವಣಾ ಸಮಯದಲ್ಲಿ ಯಾವುದೇ ಗೊಂದಲ ಇರಲಿಲ್ಲ, ಅಭಿಪ್ರಾಯ ಬೇಧ ಇರಲಿಲ್ಲ, ಒಂದೇ ಕುಟುಂಬದವರಂತೆ, ತಂಡವಾಗಿ ಕೆಲಸ ಮಾಡಿದ್ದರಿಂದ ಗೆಲ್ಲಲು ಸಾಧ್ಯವಾಯಿತು.ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರ ಮಾದರಿಯಾಗಿ ನೂತನ ಶಾಸಕ ಕಿರಣ್ ಕೊಡ್ಗಿಯವರು ಇರುತ್ತಾರೆ ಎಂದರು.
    ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಪ್ರಭಾವ ಕಡಿಮೆ ಇತ್ತು. ಉಡುಪಿ ಜಿಲ್ಲೆಯಲ್ಲಿ ಐದೂ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ವಿರೋಧ ಪಕ್ಷದಲ್ಲಿದ್ದು ಸವಾಲುಗಳನ್ನು ಸ್ವೀಕರಿಸಬೇಕಾಗುತ್ತದೆ. ಮುಂದಿನ ದಿನಗಳ ಅತ್ಯಂತ ಕಠಿಣವಾಗಬಹುದು. ಆಡಳಿತದ ಮೇಲೆ ಕಣ್ಗಾವಲು ಇಡಬೇಕಾದ ಅನಿವಾರ್ಯತೆ ಇದೆ. ಚುನಾವಣೆಯಲ್ಲಿ ಪೂರ್ವದಲ್ಲಿ ಪ್ರನಾಳಿಕೆ ಈಡೇರಿಸುವುದು ಗೆದ್ದ ಸರ್ಕಾರಗಳ ಜವಬ್ದಾರಿ. ತಪ್ಪಿದ್ದಲ್ಲಿ ಸರ್ಕಾರವನ್ನು ಎಚ್ಚರಿಸಲು ಸಿದ್ಧರಿರಬೇಕು ಎಂದರು.

    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಈ ಚುನಾವಣೆ ನನಗೂ ಅನಿರೀಕ್ಷಿತವಾಗಿತ್ತು. ಯಾವುದೇ ಪೂರ್ವ ತಯಾರಿ ಇರಲಿಲ್ಲ. 41 ಸಾವಿರ ಮತಗಳ ಅಂತರ ಗೆಲುವನ್ನು ನೀಡಿದ್ದಕ್ಕಿಂತ ಬೇರೆ ಅಭಿನಂದನೆ ಇಲ್ಲ. ಅದುವೇ ನನಗೆ ದೊಡ್ಡ ಅಭಿನಂದನೆ. ಈ ಚುನಾವಣೆಯಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಚುನಾವಣಾ ಪ್ರಭಾರಿ ಶ್ಯಾಮಲ ಕುಂದರ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುರೇಶ ಶೆಟ್ಟಿ ಕಾಡೂರು, ಜಿಲ್ಲಾ ಬಿಜೆಪಿಯ ಸದಾನಂದ ಬಳ್ಕೂರು, ಅನಿತಾ ಶ್ರೀಧರ್, ಎಸ್.ಸಿ ಮೋರ್ಚಾದ ಗೋಪಾಲ ಕಳಂಜಿ ಮೊದಲಾದವರು ಉಪಸ್ಥಿತರಿದ್ದರು.

    ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪಾ ಪೈ ವಂದೆ ಮಾತರಂ ಹಾಡಿದರು. ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ ಶೆಟ್ಟಿ ಗೋಪಾಡಿ ಸ್ವಾಗತಿಸಿ, ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗೋಪೂಜೆ ನೆರವೇರಿಸಲಾಯಿತು. ಆರತಿ ಬೆಳಗಿ ನೂತನ ಶಾಸಕರನ್ನು ಸ್ವಾಗತಿಸಲಾಯಿತು.

  • ಬೈಂದೂರು :ಗಂಟಿಹೊಳೆ ಗೆಲುವಿಗೆ ಮುಗಿಲು ಮುಟ್ಟಿದ ಹರ್ಷೋದ್ಘಾರ – ಸಹಸ್ರಾರು ಕಾರ್ಯಕರ್ತರಿಂದ ಸ್ವಾಗತ

    ಬೈಂದೂರು :ಗಂಟಿಹೊಳೆ ಗೆಲುವಿಗೆ ಮುಗಿಲು ಮುಟ್ಟಿದ ಹರ್ಷೋದ್ಘಾರ – ಸಹಸ್ರಾರು ಕಾರ್ಯಕರ್ತರಿಂದ ಸ್ವಾಗತ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಗೋಧೂಳೀ ಮುಹೂರ್ತದಲ್ಲಿ ತನ್ನ ಸ್ವಕ್ಷೇತ್ರವಾದ ಬೈಂದೂರಿಗೆ ಆಗಮಿಸಿದ ಸಂದರ್ಭ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

    ಸುಮಾರು ಸಂಜೆ 7 ಗಂಟೆಗೆ ತೆರೆದ ವಾಹನದಲ್ಲಿ ಉಡುಪಿಯಿಂದ ಗುರುರಾಜ್ ಶೆಟ್ಟಿ ಗೆ ಮಾರ್ಗದುದ್ಧಕ್ಕೂ ಬಿಜೆಪಿ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ದೊರಕಿತು.

    ಬೈಂದೂರು ವಿಧಾನಸಭಾ ಕ್ಷೇತ್ರದ ಗಡಿ ಭಾಗವಾದ ತಲ್ಲೂರಿನಲ್ಲಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರದಲ್ಲಿ ತೊಡಕಾದ ಘಟನೆಯೂ ನಡೆಯಿತು.

  • ಕುಂದಾಪುರದಲ್ಲಿ ಮತ್ತೆ ಅರಳಿದ ಕಮಲ ಹಾಲಾಡಿ ಆಪ್ತ ಕಿರಣ್ ಕೊಡ್ಗಿ ಶಾಸನ ಸಭೆಗೆ ಆಯ್ಕೆ

    ಕುಂದಾಪುರದಲ್ಲಿ ಮತ್ತೆ ಅರಳಿದ ಕಮಲ ಹಾಲಾಡಿ ಆಪ್ತ ಕಿರಣ್ ಕೊಡ್ಗಿ ಶಾಸನ ಸಭೆಗೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಈ ಬಾರಿಯ ಚುನಾವಣೆ ಅದೆಷ್ಟು ಇಂಟರೆಸ್ಟಿಂಗ್ ಆಗಿತ್ತೆಂದರೆ ಕುಂದಾಪುರದಲ್ಲಿ ಇನ್ನೇನು ಕಾಂಗ್ರೆಸ್ ಗೆದ್ದೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಹವಾ ಎಬ್ಬಿಸಿದ್ದು ಸುಳ್ಳಲ್ಲ. ಆದರೆ ಕೊನೇ ಘಳಿಗೆಯವರೆಗೂ ತನ್ನ ಚುನಾವಣೆಯಲ್ಲಿ ನಡೆಸದೇ ಇದ್ದಷ್ಟು ಪ್ರಚಾರ ನಡೆಸಿ ತನ್ನಾಪ್ತನನ್ನು ಗೆಲ್ಲಿಸಿಯೇ ಸಿದ್ಧ ಎಂದು ಪಣ ತೊಟ್ಟ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಶ್ರಮಕ್ಕೆ ಫಲ ದೊರಕಿದೆ. ಪರಿಣಾಮವಾಗಿ ಕುಂದಾಪುರದಲ್ಲಿ ಮತ್ತೆ ಬಜೆಪಿ ತನ್ನ ಕಮಲದ ಹೂವನ್ನು ಅರಳಿಸುವಲ್ಲಿ ಹಾಲಾಡಿ ಒಪ್ಪಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ಪೂರೈಸಿದ್ದಾರೆ.

    ಕಿರಣ್ ಕೊಡ್ಗಿ, ಅಪ್ಪಟ ಸಂಘಟನಾ ಚತುರ. ನಾಯಕತ್ವ ಗುಣವನ್ನು ಹೊಂದಿಲ್ಲದಿದ್ದರೂ ಕಾರ್ಯಕರ್ತರ ಜೊತೆಗಿನ ಸಂಬಂಧ, ಶಾಸಕ ಹಾಲಾಡಿಯವರ ಜೊತೆಗಿನ ವಿಧೇಯತೆ, ಹಾಲಾಡಿಗೆ ತನ್ನ ಸಹೋದರನ ಸಹಪಾಠಿ ಕಿರಣ್ ಕೊಡ್ಗಿಗೆ ಸೀಟು ಕೊಡಿ ಗೆಲ್ಲಿಸಿಕೊಡುವ ಜವಾಬ್ಧಾರಿ ನನ್ನದು ಎಂದು ನೀಡಿದ್ದ ಅಭಯವನ್ನು ಹಾಲಾಡಿ ಪೂರೈಸಿದಂತಾಗಿದೆ. ಪರಿಣಾಮವಾಗಿ 1 ಲಕ್ಷದ 1 ಸಾವಿರದ 102 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಕುಂದಾಪುರ ಕ್ಷೇತ್ರದಲ್ಲಿ ಒಟ್ಟು 165414 ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ಸಿನ ದಿನೇಶ್ ಹೆಗ್ಡೆ ಮೊಳಹಳ್ಳಿ 60172 ಮತಗಳನ್ನು ಪಡೆದರು. ಜೆಡಿಎಸ್‍ನ ರಮೇಶ್ 1029 ಮತಗಳನ್ನು ಪಡೆದುಕೊಂಡರು. ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ 1254 ಮತಗಳನ್ನು ಪಡೆದರೆ ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ್ ಜಿ. ಅವರು 725 ಮತಗಳನ್ನು ಪಡೆದುಕೊಂಡರು. ನೋಟಾ ಅವಕಾಶವನ್ನು 1132ರಷ್ಟು ಮತದಾರರು ಬಳಸಿಕೊಂಡಿದ್ದಾರೆ.

    ಇದೆಲ್ಲದರ ನಡುವೆ ಕುಂದಾಪುರದ ಮಟ್ಟಿಗೆ ಸತ್ತಂತಾಗಿದ್ದ ಕಾಂಗ್ರೆಸ್ ಇದೀಗ ದಿನೆಶ ಹೆಗ್ಡೆ ಮೊಳಹಳ್ಳಿವರ ಸ್ಪರ್ಧೆಯ ಮೂಲಕ ಮತ್ತೆ ಮರುಹುಟ್ಟು ಪಡೆದಿರುವುದಂತೂ ಸುಳ್ಳಲ್ಲ.

  • ಬೈಂದೂರಿನಲ್ಲಿ ನಿರೀಕ್ಷೆಗೂ ಮೀರಿದ ಕಾರ್ಯಕರ್ತನ ಗೆಲುವು ವಿಧಾನಸಭೆಯ ಮೆಟ್ಟಿಲು ಹತ್ತಿದ ಬರಿಗಾಲ ಸಂತ ಗುರುರಾಜ್ ಗಂಟಿಹೊಳೆ

    ಬೈಂದೂರಿನಲ್ಲಿ ನಿರೀಕ್ಷೆಗೂ ಮೀರಿದ ಕಾರ್ಯಕರ್ತನ ಗೆಲುವು ವಿಧಾನಸಭೆಯ ಮೆಟ್ಟಿಲು ಹತ್ತಿದ ಬರಿಗಾಲ ಸಂತ ಗುರುರಾಜ್ ಗಂಟಿಹೊಳೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ತನ್ನ ಪ್ರಯೋಗ ಶಾಲೆಯನ್ನಾಗಿ ಮಾಡಿಮಾಡಿಕೊಂಡಿರುವ ಕರಾವಳಿಯಲ್ಲಿ ಬಿಜೆಪಿ ಎಂದಿನಂತೆ ಗೆಲುವಿನ ನಗೆ ಬೀರಿದೆ. ಉಡುಪಿ ಜಿಲ್ಲೆಯ ಗಡಿ ಭಾಗವಾದ ಬೈಂದೂರು ವಿಧಾನಸಭಾ ಕ್ಷೇತ್ರವಾದ ಬೈಂದೂರಿನಲ್ಲಿ ಬರಿಗಾಲ ಸಂತ ಗುರುರಾಜ ಗಂಟಿಹೊಳೆಯನ್ನು ಮತದಾರರು ವಿಧಾನಸೌಧದ ಮೆಟ್ಟಿಲು ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ೧,೮೩,೪೮೦ ಮತಗಳು ಚಲಾವಣೆಯಾಗಿದ್ದು, ಕೊನೆಯ ಸುತ್ತಿನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆರೆಸ್ಸೆಸ್ ಕಾರ್ಯಕರ್ತ ಗುರುರಾಜ ಗಂಟಿಹೊಳೆ ಅವರು ೯೭೪೪೭ ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿಯವರು ೮೧೫೧೮ ಮತಗಳನ್ನು ಪಡೆದಿದ್ದು, ಗುರುರಾಜ್ ಗಂಟಿಹೊಳೆಯವರು ೧೫೯೨೯ ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

    ಜೆಡಿಎಸ್‌ನ ಮನ್ಸೂರ್ ಇಬ್ರಾಹಿಂ ೮೨೭ ಮತಗಳು, ಆಮ್ ಆದ್ಮಿ ಪಾರ್ಟಿಯ ಸಿ.ಎ. ರಮಾನಂದ ಪ್ರಭು ೧೮೪ ಮತಗಳು, ಉತ್ತಮ ಪ್ರಜಾಕೀಯ ಪಕ್ಷದ ಪ್ರಸಾದ್ ಎಸ್. ೬೨೦ ಮತಗಳು, ರಾಷ್ಟಿçÃಯ ಸಮಾಜ ದಳ(ಆರ್)ದ ಕೊಲ್ಲೂರು ಮಂಜುನಾಥ ನಾಯ್ಕ್ ೧೬೩ ಮತಗಳು, ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ಜಿ. ೫೯೭ ಮತಗಳು, ಶ್ಯಾಮ್ ಬಿ. ೨೯೨ ಮತಗಳು, ಹೆಚ್. ಸುರೇಶ್ ಪೂಜಾರಿ ೬೩೩ ಮತಗಳು ಹಾಗೂ ನೋಟಾಕ್ಕೆ ೧೧೯೯ ಮತಗಳು ಚಲಾವಣೆಯಾಗಿವೆ.

    ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಆರಂಭದಿಂದಲೂ ಗೊಂದಲದ ಗೂಡಾಗಿತ್ತು. ಕೊನೇ ಗಳಿಗೆಯಲ್ಲಿ ಹಾಲೀ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರನ್ನು ಕೈಬಿಟ್ಟು ಸಂಘ ಪರಿವಾರದ ಗುರುರಾಜ ಗಂಟಿಹೊಳೆಯವರನ್ನು ಆಯ್ಕೆ ಮಾಡಲಾಗಿತ್ತು. ಇದರಿಂದ ಸ್ವಾಭಾವಿಕವಾಗಿಯೇ ಶಾಸಕ ಸುಕುಮಾರ ಶೆಟ್ಟಿ ಅಸಮಾಧಾನಗೊಂಡಿದ್ದರು. ಇನ್ನೊಂದು ಕಡೆ ಪ್ರಬಲ ಆಕಾಂಕ್ಷಿಯಾಗಿದ್ದ ಬಾಬು ಶೆಟ್ಟಿ, ಅವರ ಜೊತೆಗಾರರಾದ ಶಂಕರ ಪೂಜಾರಿ, ಸದಾಶಿವ ಪಡುವರಿ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದರು. ಇದರಿಂದ ಬೈಂದೂರಿನಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಕ್ಷೇತ್ರಾದ್ಯಂತ ಹರಿದಾಡುತ್ತಿತ್ತು. ಇತ್ತ ಬಿಜೆಪಿ ಪ್ರಬಲ ನಾಯಕರಿಲ್ಲದೇ ಗುರುರಾಜ್ ಹೊಸ ಅಭ್ಯರ್ಥಿಯಾಗಿದ್ದರೂ ಬೈಂದೂರು ಮಂಡಲದ ಮಾಜೀ ಅಧ್ಯಕ್ಷರಾಗಿದ್ದ ಬಿ.ಎಸ್.ಸುರೇಶ್ ಶೆಟ್ಟಿ, ಮಹಿಳಾ ಮೋರ್ಛಾದ ಪ್ರಿಯದರ್ಶಿನಿ ಬಿಜೂರು ಮೊದಲಾದವರ ಸಾರಥ್ಯದಲ್ಲಿ ಕೊನೆಗೂ ಯಶಸ್ಸು ಕಂಡಿದ್ದಾರೆ.

  • ಬೈಂದೂರು :ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ಕಳಿ ಚಂದ್ರಯ್ಯ ಆಚಾರ್ಯ ಮನವಿ

    ಬೈಂದೂರು :ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ಕಳಿ ಚಂದ್ರಯ್ಯ ಆಚಾರ್ಯ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನಗಳನ್ನು ಒದಗಿಸಿರುವ ಹಿನ್ನೆಲೆಯಲ್ಲಿ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆಯವರನ್ನು ಬೆಂಬಲಿಸುವಂತೆ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಕಳಿ ಚಂದ್ರಯ್ಯ ಆಚಾರ್ಯ ಅವರು ಮನವಿ ಮಾಡಿದ್ದಾರೆ.
    ಬೈಂದೂರು ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ವಿಶ್ವಕರ್ಮ ಸಮುದಾಯದ ಮಠ ಮಂದಿರಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿರುವುದು ಮಾತ್ರವಲ್ಲದೆ ಸಮುದಾಯದ ದೇವಸ್ಥಾನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಸಹಕರಿಸಿದೆ. ಈ ನಿಟ್ಟಿನಲ್ಲಿ ಸಮುದಾಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರನ್ನು ಬೆಂಬಲಿಸುವುದು ಸೂಕ್ತ ಎಂದು ಅವರು ತಿಳಿಸಿದರು.

    ಉಪ್ರಳ್ಳಿ ಶ್ರೀ ಕಾಳಿಕಾಂಬ ದೇವಸ್ಥಾನದ ಮುಂಭಾಗದ ರಸ್ತೆ ಕಾಂಕ್ರೀಟೀಕರಣ, ಕಾಂಕ್ರಟ್ ಸೈಡ್ ವಾಲ್, ಶೀಟ್ ಮಾಡು, ಕಚೇರಿ ಹಾಗೂ ಗುರುಗಳ ವಾಸ್ತವ್ಯ ಕಟ್ಟಡ ಹಾಗೂ ಸಭಾಂಗಣಕ್ಕೆ 2 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ಬಿಜೆಪಿ ಸರಕಾರ ಒದಗಿಸಿದೆ. ಇದರ ಜೊತೆಗೆ ಸಭಾಂಗಣದ ಮುಂದುವರಿದ ಕಾಮಗಾರಿಗೆ ಒಂದುವರೆ ಕೋಟಿ ರೂಗಳ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟಿದ್ದು, ಸಂಸದರಾದ ಬಿ. ವೈ. ರಾಘವೇಂದ್ರ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
    ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಸರಕಾರವು ಸಾಕಷ್ಟು ಅನುದಾನದ ಜೊತೆಗೆ ಸಕಾರಾತ್ಮಕ ಸ್ಪಂದನೆಯನ್ನು ನೀಡಿರುವುದರಿಂದ ಪ್ರಸಕ್ತ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯದವರು ಇವುಗಳನ್ನು ಪರಿಶೀಲಿಸಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮರವಂತೆ ಗ್ರಾ. ಪಂ ಸದಸ್ಯ ಕರುಣಾಕರ ಆಚಾರ್ಯ ಮರವಂತೆ, ಬೈಂದೂರು ಬಿಜೆಪಿ ಮಂಡಲ ಕಾರ್ಯದರ್ಶಿ ಪ್ರಿಯದರ್ಶಿನಿ ಕಮಲೇಶ್ ಬೆಸ್ಕೂರು, ಬೈಂದೂರು ಬಿಜೆಪಿ ಚುನಾವಣಾ ಮಾಧ್ಯಮ ಉಸ್ತುವಾರಿ ಶ್ರೀ ಗಣೇಶ್ ಗಾಣಿಗ ಪತ್ರಿಕಾಗೋಷ್ಠಿ ಇದ್ದರು.

  • ಬೈಂದೂರು :  ಮೇ 8ರಂದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರ ಅಣ್ಣಾಮಲೈ ರೋಡ್ ಶೋ

    ಬೈಂದೂರು : ಮೇ 8ರಂದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಪರ ಅಣ್ಣಾಮಲೈ ರೋಡ್ ಶೋ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಸಿಂಗಂ ಎಂದೇ ಖ್ಯಾತಿ ಪಡೆದಿರುವ ಕೆ. ಅಣ್ಣಾಮಲೈ ಅವರು ಮೇ 8ರಂದು ಬೈಂದೂರು ಕ್ಷೇತ್ರದ ವಿವಿಧಡೆಯಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ರೋಡ್ ಶೋ ನಡೆಸಿ ಮತ ಯಾಚಿಸಲಿದ್ದಾರೆ.

    ಬೆಂಳಗ್ಗೆ 8.30ಕ್ಕೆ ತ್ರಾಸಿಯಿಂದ ರೋಡ್ ಶೋ ಆರಂಭಗೊಂಡು, ಮರವಂತೆ, ನಾವುಂದ, ಅರಹೊಳೆ ಬೈಪಾಸ್ ನಾಗೂರು, ಕಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದ, ಬಿಜೂರ್, ಯಡ್ತರೆ, ಅನಂತರ ಬೈಂದೂರು ತಲುಪಲಿದೆ.
    ಅಣ್ಣಾಮಲೈ ಅವರು ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲವು ವರ್ಷ ಸೇವೆ ಸಲ್ಲಿಸಿ, ದಕ್ಷತೆಯ ಮೂಲಕ ಹೆಸರು ಗಳಿಸಿದರು. ಆನಂತರ ಬಿಜೆಪಿ ಸೇರಿದ ಅವರು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮೇ 8ರಂದು ಬೈಂದೂರು ಕ್ಷೇತ್ರಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಪರವಾಗಿ ಮತಯಾಚನೆ ಮಾಡುತ್ತಿರುವುದು ವಿಶೇಷ. ಅವರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳಲ್ಲಿ ಇನ್ನಷ್ಟು ಹುಮ್ಮಸ್ಸು ತುಂಬಲಿದ್ದಾರೆ.

  • ಸಾಸ್ತಾನ :ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಸಾಸ್ತಾನ ಪೇಟೆಯಲ್ಲಿ ಮತಯಾಚನೆ

    ಸಾಸ್ತಾನ :ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಸಾಸ್ತಾನ ಪೇಟೆಯಲ್ಲಿ ಮತಯಾಚನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಇಂದು ಸಾಸ್ತಾನ ಪೇಟೆಯಲ್ಲಿ ಮತಯಾಚನೆ ಮಾಡಿದರು.

    ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಶಂಕರ್ ಎ ಕುಂದರ್ ರವರು ಹಾಗೂ ಈ ಸಂದರ್ಭದಲ್ಲಿ ಪಾಂಡೇಶ್ವರ ಗ್ರಾಮ ಪಂಚಾಯತ್ ಹಾಗೂ ಐರೋಡಿ ಗ್ರಾಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.