Category: ರಾಜಕೀಯ

  • ಸಿದ್ಧಾಪುರ :ಡಬ್ಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ದಿ ಸ್ಥಿರ – ಅಮಿತ್ ಶಾ

    ಸಿದ್ಧಾಪುರ :ಡಬ್ಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ದಿ ಸ್ಥಿರ – ಅಮಿತ್ ಶಾ

    ಸಿದ್ಧಾಪುರದಲ್ಲಿ ಅಮಿತ್ ಷಾ ರೋಡ್ ಶೋ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಬಿಜೆಪಿ ಸಮಾನತೆಯ ಆಧಾರದಲ್ಲಿ ಆಡಳಿತ ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಡಬ್ಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಸ್ಥಿರವಾಗಿದೆ. ಇದು ಮುಂದುವರಿಯಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

    ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ಧಾಪುರದಲ್ಲಿ ರೋಡ್ ಶೋ ನಡೆಸಿ, ಬಳಿಕ ಮಾತನಾಡಿದರು.

    ಬೈಂದೂರಿನಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದರೆ ವಿಜಯೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಅವರು ಹೇಳಿದರು.

    ರಾಷ್ಟ್ರದಲ್ಲಿ ಸುರಕ್ಷತೆಗೆ ನಮ್ಮ ಸರ್ಕಾರ ಒತ್ತು ನೀಡುತ್ತಿದೆ. ಪಿಎಫ್‍ಐಯಂತಹ ಸಂಘಟನೆಗಳನ್ನು ನಿಷೇಧ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿರುವುದು, ವಿದ್ವಾಂಸಕ ಚಟುವಟಿಕೆಗಳ ನಿರ್ಮೂಲನೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದಲ್ಲಿ ಸುರಕ್ಷತೆಯ ವಾತಾವರಣ ನಿರ್ಮಾಣವಾಗಿದೆ ಇವತ್ತು ನಿರ್ಮಾಣವಾಗಿದೆ. ಬಾಂಬ್ ದಾಳಿಯಂತಹ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ ಎಂದರು.

    ಕರಾವಳಿ ಭಾಗದಲ್ಲಿ ರೈತರ ಹಿತಾಸಕ್ತಿಯ ಕಾಪಾಡುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಅಡಿಕೆ ಕೃಷಿಕರಿಗೆ ಬೆಂಬಲ ನೀಡಿದ್ದರಿಂದ ಉತ್ತಮ ಧಾರಣೆ ಲಭಿಸಿದೆ. ಎಲ್ಲ ಸ್ತರಗಳ ಜನರಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ಬದ್ದವಾಗಿದೆ ಎಂದರು.

    ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕ್ಷೇತ್ರದ ಅಭ್ಯರ್ಥಿ ಗುರುರಾಜ ಗಂಟಿಹೊಳೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ನಾಯಕ ಕುಯಿಲಾಡಿ, ಬೈಂದೂರು ಮಂಡಲದ ಅಧ್ಯಕ್ಷ ದೀಪಕ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ಮೊದಲಾದವರು ಉಪಸ್ಥಿತರಿದ್ದರು.

  • ಕುಂದಾಪುರ :ಕಿರಣ್ ಕೊಡ್ಗಿಯವರು ದಾಖಲೆಯ ಅಂತರದಲ್ಲಿ ಜಯ ಗಳಿಸಲಿದ್ದಾರೆ – ವಿಜೇಂದ್ರ ಗುಪ್ತ

    ಕುಂದಾಪುರ :ಕಿರಣ್ ಕೊಡ್ಗಿಯವರು ದಾಖಲೆಯ ಅಂತರದಲ್ಲಿ ಜಯ ಗಳಿಸಲಿದ್ದಾರೆ – ವಿಜೇಂದ್ರ ಗುಪ್ತ

    ಕುಂದಾಪುರ ಮಿರರ್ ಸುದ್ದಿ…
    Video:

    ಕುಂದಾಪುರ :ಕೇಂದ್ರದ ನರೇಂದ್ರ ಮೋದಿ ಸರಕಾರ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ಸರಕಾರದ ಅಭಿವೃದ್ದಿ ಕಾರ್ಯಗಳು, ರಾಷ್ಟ್ರೀಯತೆಗೆ ನೀಡಿದ ಒತ್ತು, ಡಬ್ಬಲ್ ಇಂಜಿನ್ ಸರಕಾರದ ಸಾಧನೆಯನ್ನು ಜನತೆ ಗಮನಿಸಿದ್ದಾರೆ. ಈ ಚುನಾವಣೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಭಾವ, ಕ್ಷೇತ್ರದಲ್ಲಿನ ಸಾಧನೆಗಳು, ಕಿರಣ್ ಕೊಡ್ಗಿಯವರನ್ನು ದಾಖಲೆಯ ಅಂತರದಲ್ಲಿ ಜಯ ಗಳಿಸಲಿದ್ದಾರೆ ಎಂದು ದೆಹಲಿ ಸರ್ಕಾರದ ವಿರೋಧ ಪಕ್ಷದ ನಾಯಕ, ಉಡುಪಿ ಜಿಲ್ಲಾ ಬಿಜೆಪಿ ಉಸ್ತುವಾರಿ ವಿಜೇಂದ್ರ ಗುಪ್ತ ಹೇಳಿದರು.
    ಅವರು ಕುಂದಾಪುರ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
    ಶಾಂತಿ ಸುವ್ಯವಸ್ಥತೆಗೆ ಸರ್ಕಾರ ಆಧ್ಯತೆ ನೀಡಿದೆ. ಇವತ್ತು ಬಾಂಬ್ ಸ್ಪೋಟದ ಪ್ರಕರಣಗಳು ಇಲ್ಲ, ವಿದ್ವಾಂಸಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಸುರಕ್ಷತೆಯಲ್ಲಿ ಜನರು ಇದ್ದಾರೆ. ಭದ್ರತೆಗೆ ಧಕ್ಕೆ ತರುವ, ಗಲಾಭೆಗಳ ಸೃಷ್ಟಿಗೆ ಉತ್ತೇಜನ ನೀಡುವ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ದಿಟ್ಟ ನಿಲುವಿನಿಂದ ದೇಶ, ಕರ್ನಾಟಕದಲ್ಲಿ ಜನ ನಿರ್ಭೀತಿಯಿಂದ ಇದ್ದಾರೆ ಎಂದರು.
    ೪೦% ಕಮಿಷನ್ ಆರೋಪದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ದಾಖಲೆ ರಹಿತ ಆರೋಪ. ಕಾಂಗ್ರೆಸ್ ಬಳಿ ಈ ಬಗ್ಗೆ ಸ್ಪಷ್ಟವಾದ ದಾಖಲೆ ಇದ್ದರೆ ಕಾನೂನು ಹೋರಾಟ ಮಾಡಲಿ, ಸುಮ್ಮನೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ, ಅದು ಗಾಳಿಯಲ್ಲಿ ಗುಂಡು ಹಾರಿಸಿದಂತೆ ಎಂದು ಪ್ರತಿಕ್ರಿಯಿಸಿದರು.
    ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರಕಾರ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್, ಜೆಡಿ‌ಎಸ್ ಪಕ್ಷಗಳ ಯಾವ ತಂತ್ರಗಾರಿಕೆಯೂ ಈ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ. ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಡಬ್ಬಲ್ ಇಂಜಿನ್ ಸರ್ಕಾರ ಮುಂದುವರಿಯಲಿದೆ ಎಂದರು.
    ಈ ಸಂದರ್ಭದಲ್ಲಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಕ್ಷೇತ್ರದ ಪ್ರಭಾರಿ ಶ್ಯಾಮಲ ಕುಂದರ್, ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ,  ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಶೆಟ್ಟಿ ಬೀಜಾಡಿ, ಸತೀಶ ಪೂಜಾರಿ ವಕ್ವಾಡಿ, ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು ಉಪಸ್ಥಿತರಿದ್ದರು.
  • ಬಸ್ರೂರು ಚರ್ಚ್‌ಗೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ ಹೆಗ್ಡೆ ಭೇಟಿ

    ಬಸ್ರೂರು ಚರ್ಚ್‌ಗೆ ಕಾಂಗ್ರೆಸ್ ಅಭ್ಯರ್ಥಿ ದಿನೇಶ ಹೆಗ್ಡೆ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಸ್ರೂರು ಸಂತ ಫಿಲಿಪ್ ಚರ್ಚ್‌ಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ ಹೆಗ್ಡೆ ಭೇಟಿ ನೀಡಿದರು.
    ಈ ಸಂದರ್ಭದಲ್ಲಿ ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
    ಚರ್ಚ್‌ನ ಧರ್ಮಗುರು ಫಾ.ಚಾರ್ಲ್ಸ್ ನೊರೋನ್ನ ದಿನೇಶ ಹೆಗ್ಡೆ ಅವರನ್ನು ಸ್ವಾಗತಿಸಿಕೊಂಡರು. ಈ ಸಂದರ್ಭದಲ್ಲಿ ಚರ್ಚ್ ಉಪಾಧ್ಯಕ್ಷೆ ಜಸಿಂತಾ ಮೆಂಡೊನ್ಸಾ, ಕಾರ್ಯದರ್ಶಿ ಸತೀಶ್ ಕರ್ವಾಲ್ಲೋ ಉಪಸ್ಥಿತರಿದ್ದರು.
  • ಬೈಂದೂರು: ಹಿಂದುತ್ವ ಯಾರ ಮನೆಯ ಆಸ್ತಿ ಅಲ್ಲ – ಡಿ.ಕೆ.ಶಿವಕುಮಾರ್

    ಬೈಂದೂರು: ಹಿಂದುತ್ವ ಯಾರ ಮನೆಯ ಆಸ್ತಿ ಅಲ್ಲ – ಡಿ.ಕೆ.ಶಿವಕುಮಾರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಿಜೆಪಿಯವರು ಹಿಂದುತ್ವ ವನ್ನು ಗುತ್ತಿಗೆ ಪಡೆದಿಲ್ಲ. ಹಿಂದುತ್ವ ಯಾರ ಮನೆಯ ಆಸ್ತಿಯೂ ಅಲ್ಲ. ನಾನೂ ಹಿಂದೂನೇ, ಸಿದ್ಧರಾಮಯ್ಯನೂ ಹಿಂದೂನೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ

    ಭಾನುವಾರ ಬೈಂದೂರಿನ ಜೆ.ಎನ್.ಆರ್ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

    ಬೈಂದೂರಿನಲ್ಲಿ ಐವತ್ತು ಸಾವಿರ ಮತಗಳ ಅಂತರದಿಂದ ಗೋಪಾಲ ಪೂಜಾರಿಯವರನ್ನು ಗೆಲ್ಲಿಸುವ ಪಣ ತೊಟ್ಟಿರುವುದು ಖುಷಿ ಕೊಟ್ಟಿದೆ ಎಂದ ಅವರು, ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟ ಆಡಳಿತ ನಡೆಸಿದ್ದರ ಪರಿಣಾಮ ವಲಸೆ ಕಾರ್ಯಕ್ರಮ ನಡೆಯುತ್ತಿದೆ ಎಂದರು.

    ಬಿಜೆಪಿ ಡ್ಯಾಂ ಒಡೆದಿದೆ ಎಂದಿದ್ದಕ್ಕೆ ಬೊಮ್ಮಾಯಿ ಕಾಂಗ್ರೆಸ್ ಡ್ಯಾಂನಲ್ಲಿ ನೀರಿಲ್ಲ ಎಂದಿದ್ದಾರೆ. ನಾನು ಬಿಜೆಪಿ ಡ್ಯಾಂ ಒಡೆದಿದೆ ಎಂದು ಹೇಳಿದ್ದನ್ನು ಅವರು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದ ಅವರು, ಡ್ಯಾಂನ ಬೀಗ ಜಗದೀಶ್ ಶೆಟ್ಟರ್ ಕೈಯಲ್ಲಿತ್ತು ಎನ್ನುವುದನ್ನು ಬಿಜೆಪಿಯ ಬೊಮ್ಮಾಯಿ ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.

    ನಮ್ಮಲ್ಲಿ ಹಿರಿಯರಿಗೆ ವಿಶೇಷ ಗೌರವವಿದೆ ಎಂದ ಡಿಕೆಶಿ, ಮನೆಯ ಹಿರಿಯರಿಗೆ ವಯಸ್ಸಾದ ತಕ್ಷಣ ಹೊರಹಾಕುವ ಸಂಸ್ಕೃತಿ ಬಿಜೆಪಿಯದ್ದು ಎಂದು ಛೇಡಿಸಿದರು.

    ಬೈಂದೂರು ಪುಣ್ಯಕ್ಷೇತ್ರ. ಅಧಿಕಾರ ನಶ್ವರ, ಸಾಧನೆ ಅಜರಾಮರ, ಮತದಾರನೇ ಈಶ್ವರ ಪರಮೇಶ್ವರರು. ಬಿಜೆಪಿ ದೂರ ಇಡ್ಬೇಕು ಅಂತ ಜೆಡಿಎಸ್ ಜೊತೆ ಸೇರ್ಕೊಂಡ್ವಿ. ಆದರೆ ಕುಮಾರವಸ್ಬಾಮಿ ಉಳಿಸಿಕೊಂಡಿಲ್ಲ. ಅವರಿಗೆ ಪಾಪ ಆ ಯೋಗವಿಲ್ಲ ಎಂದು ವ್ಯಂಗ್ಯವಾಡಿದರು.

    ದಕ್ಷಿಣ ಕನ್ನಡದ ಮೂವರು ಎಂಎಲ್ಲೆಗಳು ಯಾಕೆ ಕೋರ್ಟಿನಿಂದ ಸ್ಟೇ ತಕ್ಕೊಂಡ್ರಿ ಅಂತ ಹೇಳ್ಬೇಕಲ್ಲ ಎಂದ ಅವರು ನಡೆದಂತೆ ನುಡಿಯುವ ಸಂಸ್ಕೃತಿ ಕಾಂಗ್ರೆಸ್ಸಿನದ್ದು ಎಂದರು.

  • ಬೈಂದೂರು :ಬಿಜೆಪಿ ಮುಖಂಡರುಗಳಾದ ಬಾಬು ಹೆಗ್ಡೆ, ಶಂಕರ ಪೂಜಾರಿ, ಸಹಿತ ಹಲವರು ಕಾಂಗ್ರೆಸ್ ಸೇರ್ಪಡೆ

    ಬೈಂದೂರು :ಬಿಜೆಪಿ ಮುಖಂಡರುಗಳಾದ ಬಾಬು ಹೆಗ್ಡೆ, ಶಂಕರ ಪೂಜಾರಿ, ಸಹಿತ ಹಲವರು ಕಾಂಗ್ರೆಸ್ ಸೇರ್ಪಡೆ

    Video:

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ನಾನು 32 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಸದಸ್ಯನಾಗಿ, ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದೇನೆ. ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ದುಡಿದಿದ್ದೇನೆ. ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಮೂರು ಅವಧಿಗಳಲ್ಲಿಯೂ ಶಾಸಕ ಸ್ಥಾನದ ಅಭ್ಯರ್ಥಿತನ ನೀಡುವುದಾಗಿ ವಂಚಿಸುತ್ತಾ ಬಂದಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ ತಿಳಿಸಿದರು.
    ಅವರು ರವಿವಾರ ಬೈಂದೂರಿನ ಜೆಎನ್‍ಆರ್ ಕಲ್ಯಾಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಮಾತನಾಡಿದರು.

    ನನ್ನ ಮೇಲೆ ಯಾವುದೇ ಕ್ರಿಮಿನಲ್ ಅಪಾಧನೆಗಳಿಲ್ಲ, ಪದವಿ ಶಿಕ್ಷಣ ಪಡೆದಿದ್ದೇನೆ. ತಳಮಟ್ಟದಿಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದೇನೆ. ಹಾಗಿದ್ದು ನನಗೆ ಯಾವ ಮಾನದಂಡ ಕೊರತೆ ಎಂದು ಟಿಕೆಟು ನಿರಾಕರಿಸಿದ್ದಾರೆ ಗೊತ್ತಿಲ್ಲ. ಬಿಜೆಪಿ ನಂಬಿಸಿ ಮೋಸ ಮಾಡಿದ್ದಾರೆ. ಬಿಜೆಪಿಯ ಎಲ್ಲ ಕುಯುಕ್ತಿಯನ್ನು ಬಯಲಿಗೆಳೆಯುತ್ತೇನೆ ಎಂದ ಅವರು, ನನ್ನ ಹಿರಿತನ, ಆರ್ಹತೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಗೌರವ ನೀಡುವುದಾಗಿ ಹೇಳಿದ್ದಾರೆ. ಈ ಬಾರಿ ಸರ್ಕಾರ ರಚಿಸಲು ಬೈಂದೂರಿನಿಂದ ಒಂದು ಸ್ಥಾನ ಕಾಂಗ್ರೆಸ್ ಖಂಡಿತಾ ಗೆಲ್ಲಲಿದೆ ಎಂದು ಡಿಕೆ ಶಿವಕುಮಾರ್ ಅವರಿಗೆ ಬಾಬು ಹೆಗ್ಡೆ ಮಾತು ನೀಡಿದರು.
    ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಂಕರ ಪೂಜಾರಿ ತಗ್ಗರ್ಸೆ, ತಾ.ಪಂ. ಮಾಜಿ ಸದಸ್ಯ ಸದಾಶಿವ ಪಡುವರಿ, ಮೌಲನಾ ದಸ್ತಗೀರ್ ಸಾಹೇಬ್, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟ ಪೂಜಾರಿ ಸಹಿತ ಅನೇಕ ಬಿಜೆಪಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

    ಈ ಸಂದರ್ಭದಲ್ಲಿ ಉದ್ಯಮಿ ಯು,ಬಿ ಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ, ಪಕ್ಷದ ಮುಖಂಡರಾದ ಎಂ.ಎ ಗಫೂರು, ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ವಾಸುದೇವ ಯಡಿಯಾಳ, ಸಂಜೀವ ಶೆಟ್ಟಿ ಸಂಪಿಗೇಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಶೋಕ ಪೂಜಾರಿ ಬೀಜಾಡಿ, ಗೌರಿ ದೇವಾಡಿಗ, ಮದನ್ ಕುಮಾರ್, ಪ್ರದೀಪ ಕುಮಾರ್ ಶೆಟ್ಟಿ, ಡಾ.ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.

  • ಬೈಂದೂರು : ಗುರುರಾಜ ಗಂಟಿಹೊಳೆ ಬೈಂದೂರಿನ ಚೌಕಿದಾರ ಆಗುತ್ತಾರೆ-ಸಚಿವ ಕೋಟ

    ಬೈಂದೂರು : ಗುರುರಾಜ ಗಂಟಿಹೊಳೆ ಬೈಂದೂರಿನ ಚೌಕಿದಾರ ಆಗುತ್ತಾರೆ-ಸಚಿವ ಕೋಟ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಜನಸಾಮಾನ್ಯರ ನಡುವೆ ಇರುವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಭಾರತೀಯ ಜನತಾ ಪಕ್ಷ ನೀಡಿದೆ. ಮೇ 13ರಂದು ಅವರು ಪ್ರಜಾತಂತ್ರದ ದೇಗುಲವನ್ನು ಗುರುರಾಜ್ ಗಂಟಿಹೊಳೆಯವರು ಪ್ರವೇಶ ಮಾಡುತ್ತಾರೆ. ಬಡವರ ನಡುವೆ ಇರುವ ಯುವಜನರ ಉತ್ಸಾಹದ ಸಂಕೇತ ವಿಧಾನಸಭೆ ಪ್ರವೇಶವೇ ಪ್ರಜಾತಂತ್ರ ವ್ಯವಸ್ಥೆಯ ಸೊಬಗು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ????????????????????????????????????

    ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ನಾಮಪತ್ರ ಸಲ್ಲಿಕೆಯ ಅಂಗವಾಗಿ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.
    ಇದು ವ್ಯಕ್ತಿಗಳ ನಡುವೆ ನಡೆಯುವ ಚುನಾವಣೆಯಲ್ಲ, ಸೈದ್ದಾಂತಿಕವಾದಂತಹ ನಡುವೆ ನಡೆಯುವ ಚುನಾವಣೆ, ಇದು ಭಯೋತ್ಪಾದನೆ ವೈಭವೀಕರಿಸು ಮತ್ತು ವಿರೋಧಿಸುವವರ ನಡುವೆ ನಡೆಯುವ ಚುನಾವಣೆ ಎನ್ನುವ ರೀತಿಯಲ್ಲಿ ಹೇಳಿದ್ದೇನೆಯೇ ಹೊರತು ಗೋಪಾಲ ಪೂಜಾರಿಯವರನ್ನು ಭಯೋತ್ಪಾದಕ ಎಂದು ಹೇಳಿಲ್ಲ. ಸ್ವಾಭಾವಿಕವಾಗಿ ಹೇಳುವ ಮಾತನ್ನೇ ಅಂದು ಹೇಳಿದ್ದೇನೆ. ಆದರೆ ಗೋಪಾಲ ಪೂಜಾರಿಯವರು ಅದನ್ನು ರಾಜಕಾರಣದ ವಿಚಾರವಾಗಿ ಬಳಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ರಾಜಕೀಯ ತಂತ್ರಗಾರಿಕೆ ಎಂದು ಅಭಿಪ್ರಾಯ ಪಟ್ಟರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ 23 ಬಿಜೆಪಿ, ಪರಿವಾರದ ಜನರ ಕಗ್ಗೊಲೆಯಾಯಿತು. 1700ಕ್ಕೂ ಜನರ ಮೇಲಿನ ಪ್ರಕರಣ ವಾಪಸ್ಸು ಪಡೆಯಲಾಯಿತು. ಭಯೋತ್ಪಾದನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರನ್ನು ಮತ್ತೆ ಏನು ಹೇಳಬೇಕು. ರಾಜ್ಯದಲ್ಲಿ ಭಯೋತ್ಪಾದನೆ ನಿಗ್ರಹ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಲೇಬೇಕು. ಗುರುರಾಜ ಗಂಟಿಹೊಳೆಯಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಭಯೋತ್ಪಾದಕರು ಬೈಂದೂರು ಭಾಗಕ್ಕೆ ತಲೆ ಹಾಕುವುದಿಲ್ಲ. ಬೈಂದೂರಿನ ಚೌಕಿದಾರ ಗುರುರಾಜ ಗಂಟಿಹೊಳೆ ಆಗುತ್ತಾರೆ ಎಂದರು.

    ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಈ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗುರುರಾಜ ಗಂಟಿಹೊಳೆ ಗೆಲುವು ಸಾಧಿಸಲಿದ್ದಾರೆ. ಗುರುರಾಜ ಗಂಟಿಹೊಳೆಯ ಹಿಂದೆ ಯುವ ಶಕ್ತಿ ಇದೆ. ಕಾರ್ಯಕರ್ತರು ಪೂರ್ಣ ಶ್ರಮವಹಿಸಿ ಅವರನ್ನು ಗೆಲ್ಲಿಸಿಕೊಡಲಿದ್ದಾರೆ. ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಮುಖ್ಯ. ಕಾರ್ಯಕರ್ತರು ಯಾವತ್ತೂ ಮಾಜಿ ಆಗಲಾರ. ಡಬ್ಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ದಿ ವೇಗವಾಗುತ್ತದೆ. ಬೈಂದೂರು ಕ್ಷೇತ್ರದಲ್ಲಿ 780 ಕೋಟಿ ವೆಚ್ಚದ ಪ್ರತಿ ಮನೆಗೂ ಕುಡಿಯುವ ನೀರು ನೀಡುವ ಯೋಜನೆ ಪ್ರಗತಿಯಲ್ಲಿದೆ. ಮರವಂತೆ ಹೊರಬಂದರು ಅಭಿವೃದ್ದಿಗೆ 80 ಕೋಟಿ ಟೆಂಡರ್ ಆಗಿದೆ ಎಂದರು.
    ಸಚಿವ ಸುನಿಲ್ ಕುಮಾರ್ ಮಾತನಾಡಿ ತುಷ್ಟೀಕರಣದ ರಾಜಕಾರಣ ಕಾಂಗ್ರೆಸ್ ಮಾಡುತ್ತದೆ. ಬಿಜೆಪಿ ಸರ್ವವ್ಯಾಪ್ತಿ ರಾಜಕಾರಣ ಮಾಡುತ್ತದೆ. ಜನ ಆಲೋಚನೆ ಮಾಡಿ ಮತ ಚಲಾಯಿಸಬೇಕು. ಉಡುಪಿ ಜಿಲ್ಲೆಯ ಐದು ಸ್ಥಾನಗಳನ್ನು ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

    ಅಭ್ಯರ್ಥಿ ಗುರುರಾಜ ಗಂಟಿಹೊಳೆ ಮಾತನಾಡಿ, ಬಿಜೆಪಿಯ ಕಾರ್ಯಕರ್ತರಲ್ಲಿ ನಾಳೆಯ ನಿರೀಕ್ಷೆ ಇರುವುದಿಲ್ಲ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ಅವಕಾಶ ನೀಡಿದೆ. ಜನ ಆಶೀರ್ವಾದ ಮಾಡಿದರೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ನಾವು ಚುನಾವಣೆ ಬಂದಾಗ ವೇಷ ಕಟ್ಟುವವರಲ್ಲ. ನಾವು ನಿರಂತರವಾಗಿ ಜನರ ಜೊತೆಗೆ ಇರುತ್ತೇವೆ ಎಂದರು.
    ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಉದಯಕುಮಾರ್ ಶೆಟ್ಟಿ, ಪಕ್ಷದ ಉಸ್ತುವಾರಿ ಬ್ರಿಜೇಶ್ ಚೌಟ, ಪ್ರಣಯ ಕುಮಾರ ಶೆಟ್ಟಿ, ಸುರೇಶ ಬಟ್ವಾಡಿ, ಬಿ ಕಿಶೋರ್ ಕುಮಾರ್, ಸುರೇಶ ಶೆಟ್ಟಿ ಬಿಎಸ್. ರೋಹಿತ್ ಕುಮಾರ್ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ಕೃಷ್ಣಪ್ರಸಾದ್ ಅಡ್ಯಂತಾಯ, ಆನಂದ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
    ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರ್ವಹಿಸಿದರು.

  • ಬೈಂದೂರು: ರಾಜ್ಯದಲ್ಲಿ 60 ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ – ಸ್ಟಾರ್ ಪ್ರಚಾರಕಿ ಶೃತಿ ಅಭಿಪ್ರಾಯ

    ಬೈಂದೂರು: ರಾಜ್ಯದಲ್ಲಿ 60 ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ – ಸ್ಟಾರ್ ಪ್ರಚಾರಕಿ ಶೃತಿ ಅಭಿಪ್ರಾಯ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಾರ್ಟಿ 60 ಹೊಸ ಮುಖಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದು ಚಿತ್ರನಟಿ, ಬಿಜೆಪಿ ಸ್ಟಾರ್ ಪ್ರಚಾರಕಿ ಶೃತಿ ಹೇಳಿದ್ದಾರೆ.

    ಬೈಂದೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪಕ್ಷ ಎನ್ನುವುದನ್ನು ಈ ಬಾರಿ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದ ಶೃತಿ, ಹೊಸ ಮುಖಗಳು ಶಾಸಕರಾಗುವ ಮೂಲಕ ರಾಜ್ಯದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಎಂದರು.

    ಈಗಾಗಲೇ ಎಲ್ಲಾ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಪ್ರತಿದಿನ ಮಾಧ್ಯಮಗಳಲ್ಲಿ ಅಭ್ಯರ್ಥಿಗಳ ಆಸ್ತಿ, ಮೌಲ್ಯಗಳು ಹುಬ್ಬೇರಿಸುತ್ತಿವೆ. ಆದರೆ ಬೈಂದೂರು ಅಭ್ಯರ್ಥಿ ಗುರುರಾಜ ಶೆಟ್ಟಿಯವರ ಗುಣವೇ ಆಸ್ತಿ ಹಾಗೂ ಮೌಲ್ಯವಾಗಿರುವುದು ಬೈಂದೂರಿನ ಜನತೆಯ ಅದೃಷ್ಟ ಎಂದರು. ಈ ಬಾರಿ ಗುರುರಾಜ ಶೆಟ್ಟಿ ಗಂಟಿಹೊಳೆಯವರನ್ನು ಅತ್ಯಧಿಕ ಬಹುಮತದಲ್ಲಿ ಗೆಲ್ಲಿಸುವ ಮೂಲಕ ಬೈಂದೂರು ರಾಜ್ಯಕ್ಕೇ ಮಾದರಿಯಾಗಲಿದೆ ಎಂದು ಹೇಳಿದರು.

  • ಬೈಂದೂರು :ಬಿಜೆಪಿಗರಿಗೆ ಭಯೋತ್ಪಾದನೆ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ – ಕೆ ಗೋಪಾಲ ಪೂಜಾರಿ

    ಬೈಂದೂರು :ಬಿಜೆಪಿಗರಿಗೆ ಭಯೋತ್ಪಾದನೆ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ – ಕೆ ಗೋಪಾಲ ಪೂಜಾರಿ

    ಬೈಂದೂರಲ್ಲಿ ಕೆ. ಗೋಪಾಲ ಪೂಜಾರಿ ಶಕ್ತಿ ಪ್ರದರ್ಶನ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು : ಭಯೋತ್ಪಾದಕರ ದಾಳಿಯಿಂದ ಪ್ರಾಣ ತ್ಯಾಗ ಮಾಡಿದವರು ಕಾಂಗ್ರೆಸ್ ನಾಯಕರುಗಳು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷದ ಮೇಲೆ ಅಪವಾದ ಮಾಡಲಾಗುತ್ತದೆ. ಬಿಜೆಪಿಗೆ ಭಯೋತ್ಪಾದನೆಯ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಹೇಳಿದರು.

    ಅವರು ಬೈಂದೂರಿನಲ್ಲಿ ನಾಮಪತ್ರ ಸಲ್ಲಿಕೆಯ ಮುನ್ನ ಬೈಂದೂರು ಮತ್ತು ವಂಡ್ಸೆ ಬ್ಲಾಕ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

    ನಾನು 4 ಬಾರಿ ಕ್ಷೇತ್ರದ ಶಾಸಕನಾಗಿದ್ದೇನೆ. ಸುಳ್ಳು ಭರವಸೆ ಕೊಟ್ಟಿಲ್ಲ. ಕ್ಷೇತ್ರದ ಅಭಿವೃದ್ದಿಗೆ ದುಡಿದಿದ್ದೇನೆ. ಕಳೆದ ಐದು ವರ್ಷದ ಅವಧಿಯಲ್ಲಿ 94ಸಿ ಹಕ್ಕುಪತ್ರ ಕೊಡಲಾಗಲಿಲ್ಲ. ಕೇವಲ ಮೂರು ಅಕ್ರಮ ಸಕ್ರಮ ಬೈಠಕ್ ಆಯಿತು. ಮೀನುಗಾರರಿಗೆ ಅಗತ್ಯದಷ್ಟು ಸೀಮೆಎಣ್ಣೆ ಕೊಡಲಾಗಲಿಲ್ಲ. ಬಂದರುಗಳ ಅಭಿವೃದ್ದಿಯಾಗಲಿಲ್ಲ, ಮೀನುಗಾರಿಕಾ ಮನೆಗಳನ್ನು ಕೊಡಲಾಗಲಿಲ್ಲ. ಕ್ಷೇತ್ರದ ನಿಜವಾದ ಅಭಿವೃದ್ದಿಗೆ ಕಾಂಗ್ರೆಸ ಪಕ್ಷಕ್ಕೆ ಅವಕಾಶ ಕೊಡಿ ಎಂದರು.

    ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭಯೋತ್ಪಾದಕರಿಗೆ ಹೋಲಿಸುತ್ತಾರೆ. ಇಂದಿರಾಗಾಂಧಿ, ರಾಜೀವ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಇಂಥಹ ತ್ಯಾಗಿಗಳ ದೇಶಭಕ್ತ ಪಕ್ಷ ನಮ್ಮದು. ಯಡಮೊಗೆಯ ಉದಯ ಗಾಣಿಗ ಹತ್ಯೆ ಮಾಡಿದ್ದು ಯಾರು? ಬಿಜೆಪಿ ಪಕ್ಷದ ಗ್ರಾಮ ಪಂಚಾಯತ್ ಅಧ್ಯಕ್ಷನ ನೇತೃತ್ವದಲ್ಲಿ ಕೊಲೆಯಾಗುತ್ತದೆ. ಕೋಟದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನ ನೇತೃತ್ವದಲ್ಲಿ ಜೋಡಿ ಕೊಲೆಯಾಗುತ್ತದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರೆಲ್ಲ ಜನರನ್ನು ಎದುರಿಸಲಾಗದೇ ಓಡಿದ್ದೇಕೆ? ಎಂದರು.

    ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಇವತ್ತು ಕಾಂಗ್ರೆಸ್ ಪಕ್ಷವನ್ನು ಆರೋಪಿಸುವ ಬಿಜೆಪಿ ಇವತ್ತು ಪರಿವಾರದ ಪಕ್ಷವಾಗಿದೆ. ಪರಿವಾರಕ್ಕೆ ಅವಕಾಶ ಕೊಡುತ್ತಿದೆ. ಬೈಂದೂರು ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಅವಕಾಶ ಕೊಡದೆ ಸಂಘಪರಿವಾರದವರಿಗೆ ಟಿಕೆಟು ನೀಡಿದ್ದಾರೆ. ಇದು ಬಿಜೆಪಿಯ ವಾಸ್ತವ ಸ್ಥಿತಿ ಎಂದ ಅವರು, ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಯಾವ ಅಸ್ತ್ರವನ್ನು ಬೇಕಾದರೂ ಪ್ರಯೋಗಿಸಬಹುದು. ಮತದಾರರು ಜಾಗೃತವಾಗಿರಬೇಕು. ಬಿಜೆಪಿ ಯಾವುದೇ ಅಸ್ತ್ರ ಬೇಕಾದರೂ ಯಾವ ಕ್ಷಣದಲ್ಲಿ ಬೇಕಾದರೂ ಪ್ರಯೋಗಿಸಬಹುದು ಎಂದರು.
    ಕಾಂಗ್ರೆಸ್ ಪಕ್ಷದ ವಕ್ತಾರ ವಿಕಾಸ್ ಹೆಗ್ಡೆ, ಪ್ರಚಾರ ಸಮಿತಿಯ ಪ್ರಮುಖರಾದ ಡಾ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಪ್ರಕಾಶ್ಚಂದ್ರ ಶೆಟ್ಟಿ, ಎಸ್.ರಾಜು ಪೂಜಾರಿ, ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ, ರಮೇಶ ಗಾಣಿಗ ಕೊಲ್ಲೂರು, ರಘುರಾಮ ಶೆಟ್ಟಿ, ಪ್ರಸನ್ನಕುಮಾರ್ ಶೆಟ್ಟಿ, ವಿಜಯ ಶೆಟ್ಟಿ, ಗೌರಿ ದೇವಾಡಿಗ, ಮಂಜುಳ ದೇವಾಡಿಗ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್‍ನ ಪ್ರಮುಖರು ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ ನಿವೃತ್ತ ಎಸಿಎಫ್ ಅಧಿಕಾರಿ ಪರಮಯ್ಯ ಗೊಂಡ, ಸುಬ್ಬಣ್ಣ ಶೆಟ್ಟಿ ಶಿರೂರು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು.

    ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಸ್ವಾಗತಿಸಿದರು. ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಗುಡಿಬೆಟ್ಟು ವಂದಿಸಿದರು.

  • ಬೈಂದೂರು ಕ್ಷೇತ್ರ :ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ನಾಮಪತ್ರ ಸಲ್ಲಿಕೆ

    ಬೈಂದೂರು ಕ್ಷೇತ್ರ :ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ನಾಮಪತ್ರ ಸಲ್ಲಿಕೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ವಿಧಾನಸಭಾ ಚುನಾವಣೆಯಲ್ಲಿ ಸ್ವರ್ಧಿಸಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಇಂದು ಬೈಂದೂರಿನ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ಅವರು ನಾಮಪತ್ರ ಸ್ವೀಕರಿಸಿದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ವಾಸುದೇವ ಯಡಿಯಾಳ್, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಎಸ್. ರಾಜು ಪೂಜಾರಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

  • ಬೈಂದೂರು: 35 ಸಾವಿರ ಲೀಡ್ ಗೆ ಗೆಲ್ಲುತ್ತೇನೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ – ಗೋಪಾಲ ಪೂಜಾರಿ

    ಬೈಂದೂರು: 35 ಸಾವಿರ ಲೀಡ್ ಗೆ ಗೆಲ್ಲುತ್ತೇನೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ – ಗೋಪಾಲ ಪೂಜಾರಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನಿರೀಕ್ಷೆಗೂ ಮೀರಿದ ಜನ ಬೆಂಬಲ ವ್ಯಕ್ತವಾಗುತ್ತಿರುವುದು ಸಂತೋಷ ತಂದಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ. ಬೈಂದೂರಿನಲ್ಲಿ ಮಂಗಳವಾರ ಯೆಡ್ತೆರೆಯಿಂದ ಬೈಂದೂರಿನ ವರೆಗೆ ಹಮ್ಮಿಕೊಳ್ಳಲಾದ ಕಾಂಗ್ರೆಸ್ ಕಾರ್ಯಕರ್ತರ ಕಾಲ್ನಡಿಗೆಯ ಮೆರವಣಿಗೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.

    ಯಾರು ಏನು ಬೇಕಾದರೂ ಹೇಳಲಿ. ಬಿಜೆಪಿಯಿಂದ ಜನಸಾಮಾನ್ಯರಿಗೆ ಆಗಿರುವ ಸಮಸ್ಯೆಗಳನ್ನು ಗ್ರಾಮೀಣ ಭಾಗದ ಮಹಿಳೆಯರೂ ಸೇರಿದಂತೆ ಎಲ್ಲಾ ವರ್ಗದ ಜನ ಻ರಿತುಕೊಂಡಿದ್ದಾರೆ. ಹಿಂದೆಂದೂ ಕಾಣದ ಸಂಖ್ಯೆಯಲ್ಲಿ ಇಂದಿನ ಮೆರವಣಿಗೆಯಲ್ಲಿ ಕಾರ್ಯಕರ್ತರು ನನ್ನ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆ ಎಂದ ಅವರು ನನ್ನ ಕ್ಷೇತ್ರ ಮೀನುಗಾರರ ಸಮಸ್ಯೆ ಪರಿಹರಿಸುತ್ತೇನೆ ಎಂದರು.

    ಈಗಾಗಲೇ ಒಂದು ಸುತ್ತಿನ ಕ್ಷೇತ್ರ ಬೇಟಿ ಮುಗಿದಿದೆ. ಪಕ್ಷದ ಭರವಸೆಗಳನ್ನು ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಈ ಬಾರಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲವು ಸಾಧಿಸುತ್ತೇನೆ ಎಂದರು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಮೊದಲಾದವರು ಇದ್ದರು.