Category: ರಾಜಕೀಯ

  • ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜಾನುವಾರುಗಳ ಅನುತ್ಪಾದಕತೆ ನೀಗಿಸುವ ಕುರಿತು ಸಲ್ಲಿಸಿದ ಯೋಜನೆಗೆ ಕೇಂದ್ರ ಪಶುಸಂಗೋಪನಾ ಸಚಿವರ ಪ್ರಶಂಸೆ: ಬಿ.ವೈ.ರಾಘವೇಂದ್ರ

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜಾನುವಾರುಗಳ ಅನುತ್ಪಾದಕತೆ ನೀಗಿಸುವ ಕುರಿತು ಸಲ್ಲಿಸಿದ ಯೋಜನೆಗೆ ಕೇಂದ್ರ ಪಶುಸಂಗೋಪನಾ ಸಚಿವರ ಪ್ರಶಂಸೆ: ಬಿ.ವೈ.ರಾಘವೇಂದ್ರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಶೇಷವಾಗಿ ತಾಂಡಾ ಜನರುಗಳ ಜಾನುವಾರುಗಳಲ್ಲಿನ ಬಂಜೆತನವನ್ನು ನೀಗಿಸಿ ಅವುಗಳನ್ನು ಅನುತ್ಪಾದಕತೆಯಿಂದ ಉತ್ಪಾದಕತೆಯತ್ತ ಸಾಗಿಸುವ ಯೋಜನೆಯನ್ನು ರೂ. 25 ಕೋಟಿಗಳಿಗೆ ತಯಾರಿಸಿ ಕೇಂದ್ರ ಹೈನುಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಮೀನುಗಾರಿಕೆ ಸಚಿವರಾದ ಪರಷೋತ್ತಮ್ ರೂಪಲಾ ರವರಿಗೆ ಸಲ್ಲಿಸಿದ್ದು ಇದನ್ನು ಸಚಿವರು ಮುಕ್ತ ಕಂಠದಿಂದ ಪ್ರಶಂಸಿಸಿ ಇದಕ್ಕೆ ಅನುದಾನ ಒದಗಿಸುವ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮಾನ್ಯ ಸಂಸದರು ತಿಳಿಸಿದರು.

    ಭಾರತ ಗೋಪ್ರಧಾನ ದೇಶ, ಬಡರೈತರು ಅದರಲ್ಲಿಯೂ ತಾಂಡಾದ ಲಂಬಾಣಿ ಜನಾಂಗದವರು ಗೋಮಾತೆಯ ಮೇಲೇ ಭಕ್ತಿ ಮತ್ತು ಜೀವನದ ಆಸರೆ ಹೊಂದಿದ್ದಾರೆ. ಅನುತ್ಪಾದಕ ಗೋವುಗಳನ್ನು ಸಾಕುವ ರೈತರು ಅನುಭವಿಸುವ ನಷ್ಟ ಅಪಾರ. ಈ ಹಸುಗಳನ್ನು ರೈತರು ಹಾಲು ಕೊಡದಿದ್ದರೂ ಸಾಕಲೇಬೇಕು. ಗೋಹತ್ಯಾ ನಿಷೇಧ ಕಾನೂನು ಪ್ರಸಕ್ತ ಜಾರಿಯಲ್ಲಿದೆ. ಅನುತ್ಪಾದಕ ಗೋವುಗಳು ರೈತರಿಗೆ ಹೊರೆಯಾಗಬಾರದು, ಈ ಯೋಜನೆಯಲ್ಲಿ ಅನುತ್ಪಾದಕ ರಾಸುಗಳನ್ನು ವಿವಿಧ ಹಳ್ಳಿಗಳಲ್ಲಿ ಪತ್ತೆ ಹಚ್ಚಿ, ಈ ಅನುತ್ಪಾದಕತೆಯ ಕಾರಣವನ್ನು ವೈಜ್ಞಾನಿಕ ವಿಧಾನದಲ್ಲಿ ಪತ್ತೆ ಹಚ್ಚಿ, ಇವುಗಳನ್ನು ವಿವಿಧ ಗುಂಪುಗಳಲ್ಲಿ ವರ್ಗೀಕರಿಸಿ, ಈ ಜಾನುವಾರುಗಳಿಗೆ ವಿವಿಧ ತರದ ಚಿಕಿತ್ಸೆಯನ್ನು ನೀಡಿ, ಅವುಗಳ ಸೂಕ್ತ ಅನುಸರಣೆಯನ್ನು ಅವು ಗರ್ಭ ಧರಿಸುವವರೆಗೆ ಅಥವಾ ಹಾಲು ನೀಡುವಂತೆ ಮಾಡಿ, ಅವುಗಳ ಅನುತ್ಪಾಕತೆಯನ್ನು ನೀಗಿಸಿ ಉತ್ಪಾದಕತೆಯತ್ತ ಸಾಗುವಂತೆ ಮಾಡಿ, ಈ ಸಂಶೋಧನೆಯಲ್ಲಿ ಹೊರಹೊಮ್ಮುವ ಸಂಶೋಧನಾ ಪರಿಣಾಮವನ್ನು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯರಿಗೆ ತಲುಪಿಸುವ ಉದ್ದೇಶವನ್ನು ಈ ಯೋಜನೆಯಲ್ಲಿ ಹೊಂದಲಾಗಿದೆ.

    ಶೂನ್ಯ ಉತ್ಪನ್ನ ಹೊಂದಿರುವ ಅನುತ್ಪಾದಕ ಗೋವುಗಳು ದಿನವೊಂದಕ್ಕೆ 10 ಲೀಟರ್ ನೀಡುವಂತಾದರೂ ಸಹ ವರ್ಷವೊಂದಕ್ಕೆ 19,000ರೂಪಾಯಿ ನಿವ್ವಳ ಆದಾಯವನ್ನು ನೀಡುವ ರಾಸುಗಳಾಗಿ ರೈತನಿಗೆ ಲಾಭವನ್ನು ಖಂಡಿತಾ ತಂದುಕೊಡುತ್ತವೆ. ಇದರಿಂದ ಅನುತ್ಪಾದಕ ಬರಡು ರಾಸಿನ ಮುಖಬೆಲೆ ರೂ. 6,000-00 ಇರುವುದು ಪ್ರಸಕ್ತ ಮಾರುಕಟ್ಟೆ ಕನಿಷ್ಟ ದರವಾಗಿ 45,000-00 ಕ್ಕೆ ಏರಲಿದೆ. ಕಾರಣ ರೈತರಿಗೆ ಅತ್ಯಂತ ಉಪಯೋಗಿವಾಗಿರುವ ಮತ್ತು ಅನುತ್ಪಾದಕತೆಗೆ ಕಾರಣ ಪತ್ತೆ ಮಾಡುವ ಸಂಶೋಧನಾ ಅಂಶಗಳನ್ನು ಹೊಂದಿರುವ ಈ ಯೋಜನೆಯ ಅನುಷ್ಠಾನ ಪ್ರತಿ ಹಳ್ಳಿಯಲ್ಲೂ ಸಹ ಆಗಬೇಕಿದೆ ಎಂದು ಸಚಿವರು ತಿಳಿಸಿದರು ಎಂದು ಸಂಸದರು ವಿವರಿಸಿದರು.

    ಈ ಯೋಜನೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೈನುಗಾರಿಕೆಯನ್ನೇ ಮುಖ್ಯ ಕಸುಬಾಗಿರಿಸಿಕೊಂಡಿರುವ ತಾಂಡಾ ಜನರ ಜಾನುವಾರುಗಳ ಅನುತ್ಪಾದಕತೆಯನ್ನು ಮತ್ತು ಅವುಗಳಲ್ಲಿನ ಬಂಜೆತನವನ್ನು ನಿವಾರಿಸಿ ಅವುಗಳನ್ನು ಗರ್ಭಧರಿಸಿ ಕರು ಹಾಕುವಂತೆ ಮಾಡುವ ಯೋಜನೆಯನ್ನು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಅಧೀನದ ಪಶುವೈದ್ಯಕೀಯ ಮಹಾವಿದ್ಯಾಲಯದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇದನ್ನು ಸಂಸದರು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಸಲ್ಲಿಸಲು ಸೂಚನೆ ನೀಡಿ ಅದರಂತೆ ಯೋಜನೆಯನ್ನು ಸಲ್ಲಿಸಲಾಗಿತ್ತು.

    ಈ ಯೋಜನೆಗೆ ಮಾನ್ಯ ಕೇಂದ್ರ ಪಶುಸಂಗೋಪನೆ ಸಚಿವರು ಉತ್ತಮ ಯೋಜನೆಯೆಂದು ಹಾಗೂ ರೈತರಿಗೆ ಉಪಯುಕ್ತವೆಂದು ಪ್ರಶಂಸಿಸಿದ್ದು ಇಡೀ ದೇಶಕ್ಕೆ ಈ ಮಾದರಿಯ ಯೋಜನೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

  • ಕುಂದಾಪುರ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎ.ಜಿ ಕೊಡ್ಗಿಯವರಿಗೆ ಶ್ರದ್ದಾಂಜಲಿ ಸಭೆ

    ಕುಂದಾಪುರ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎ.ಜಿ ಕೊಡ್ಗಿಯವರಿಗೆ ಶ್ರದ್ದಾಂಜಲಿ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಎ.ಜಿ ಕೊಡ್ಗಿಯವರು ಜಿಲ್ಲೆಯ ಓರ್ವ ಮುತ್ಸದ್ಧಿ ರಾಜಕಾರಣಿಯಾಗಿದ್ದರು. ಶಾಸಕರಾಗಿ, ಸಹಕಾರಿ ಧುರೀಣರಾಗಿ, ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ರಾಜಕೀಯವಾದ ಮುತ್ಸದ್ಧಿಯನವನ್ನು ಅವರು ಹೊಂದಿದ್ದರು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

    ಅವರು ಕುಂದಾಪುರ ಹೋಟೆಲ್ ಶರೋನ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ ವತಿಯಿಂದ ಮಾಜಿ ಶಾಸಕ, ಸಹಕಾರಿ ಧುರೀಣ ಎ.ಜಿ.ಕೊಡ್ಗಿಯವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ದೀಪ ಬೆಳಗಿಸಿ, ಎ.ಜಿ.ಕೊಡ್ಗಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಮಾತನಾಡಿದರು.

    ತನಗೆ ಲಭಿಸಿದ ಹುದ್ದೆಯ ಮಹತ್ವ ಅರಿತು ತನ್ನ ಕರ್ತವ್ಯ ನಿರ್ವಹಿಸುತ್ತಿದ್ದರು. ಜಿಲ್ಲಾ ಪರಿಷತ್, ತಾಲೂಕು ಪಂಚಾಯತ್‍ಗಳಲ್ಲಿ ಅವರು ಸದಸ್ಯರಾಗಿದ್ದಾಗ ಸಾಕಷ್ಟು ಕಾನುನು ಅರವು ಹೊಂದಿದ್ದರು. ಕಾಯ್ದೆ, ಕಾನೂನು ತಿಳಿದುಕೊಂಡು ಸಭೆಗಳಿಗೆ ಹೋಗುತ್ತಿದ್ದರು. ಸಭೆಯಲ್ಲಿ ಕೊಡ್ಗಿಯವರು ಬರುತ್ತಿದ್ದಂತೆ ಅಧಿಕಾರಿಗಳು ಹೆದರುತಿದ್ದ ವಾತವರಣವಿತ್ತು. ಇವತ್ತು ಅದು ಮರೆಯಾಗಿದೆ ಎಂದರು.

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಎ.ಜಿ ಕೊಡ್ಗಿಯವರು ನೇರ ನಿಷ್ಠುರವಾದಿ. ತನ್ನದೇಯಾದ ಶಿಸ್ತನ್ನು ಅವರು ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಮೈಗೂಡಿಸಿಕೊಂಡವರು. ರಾಜಕೀಯ ಕ್ಷೇತ್ರದಲ್ಲಿ ದಿಟ್ಟ ಹೋರಾಟಗಾರರಾಗಿ ಗುರುತಿಸಿಕೊಂಡವರು. ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದರು. ರಾಜಕಾರಣದಿಂದ ನಿವೃತ್ತಿ ಪಡೆದ ಬಳಿಕ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ ಮೂಲಕ ತನ್ನೂರಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡವರು ಎಂದು ಅಭಿಪ್ರಾಯ ಪಟ್ಟರು.

    ಮಾಣಿಗೋಪಾಲ ಮಾತನಾಡಿ, ಎ.ಜಿ ಕೊಡ್ಗಿಯವರು ದೇವರಾಜ ಅರಸು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅವರಿಗೆ ಅರಸು ಸಂಪುಟದಲ್ಲಿ ಸಚಿವರಾಗುವ ಅವಕಾಶಗಳಿದ್ದವು. ಸ್ವತಃ ಭೂಮಾಲಿಕರಾಗಿದ್ದರೂ ಕೂಡಾ ಅವರು ಭೂ ಮಸೂಧೆಯ ಸಂದರ್ಭದಲ್ಲಿ ಜನರ ಪರ ನಿಂತಿದ್ದರು. ಜಿಲ್ಲಾ ಪರಿಷತ್ ಮೂಲಕವೂ ಅನೇಕ ಕೊಡುಗೆಯನ್ನು ಅವರು ನೀಡಿದ್ದರು. ಜಾತಿ, ಮತ, ಪಂಥವನ್ನು ಮೀರಿದ ವ್ಯಕ್ತಿ ಅವರದ್ದಾಗಿದ್ದರು ಎಂದರು.

    ಕೋಟ ಬ್ಲಾಕ್ ಅಧ್ಯಕ್ಷ ಶಂಕರ ಕುಂದರ್, ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಕೆ. ಸದಾನಂದ ಶೆಟ್ಟಿ, ಹರಿಪ್ರಸಾದ್, ಸತೀಶ ಕಿಣಿ ಬೆಳ್ವೆ, ಬಿ. ಹಿರಿಯಣ್ಣ, ಸಂಪಿಗೆಡಿ ಸಂಜೀವ ಶೆಟ್ಟಿ, ಕೃಷ್ಣದೇವ ಕಾರಂತ, ದೇವಾನಂದ ಶೆಟ್ಟಿ, ಜ್ಯೋತಿ ಪುತ್ರನ್ , ವಿಕಾಸ್ ಹೆಗ್ಡೆ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಯರಾಮ ಶೆಟ್ಟಿ ಬೆಳ್ವೆ, ಶರತ ಹೆಗ್ಡೆ ಕೆದೂರು, ದರ್ಮ ಪ್ರಕಾಶ್, ದೇವಕಿ ಸಣ್ಣಯ್ಯ, ದಿನೇಶ ಹೆಗ್ದೆ, ಎ. ಪಿ. ಚಾತ್ರ, ಇಚ್ಚಿತಾರ್ಥ ಶೆಟ್ಟಿ, ನಾರಾಯಣ್ ಆಬಾರ್, ಅಶ್ವತ್ ಕುಂದಾಪುರ, ನಟರಾಜ್ ಹೊಳ್ಳ, ಅಭಿಜಿತ್ ಪೂಜಾರಿ, ಪ್ರಭಾವತಿ ಶೆಟ್ಟಿ, ನ್ಯಾಯವಾದಿ ರವಿರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
    ವಿನೋದ್ ಕ್ರಾಸ್ತಾ ಸ್ವಾಗತಿಸಿದರು. ಕೃಷ್ಣ ಪೂಜಾರಿ ಅಮಾಸೆಬೈಲು ವಂದಿಸಿದರು. ಸೂರ್ಯಪ್ರಕಾಶ್ ದಾಮ್ಲೆ ಶ್ರದ್ದಾಂಜಲಿ ಸಭೆಯನ್ನು ನಿರ್ವಹಿಸಿದರು.

  • ಕುಂದಾಪುರ: ಬಿಜೆಪಿ ಯುವ ಮೋರ್ಚಾದಿಂದ ‘ವಿಕಾಸ ತೀರ್ಥ’ ಬೃಹತ್ ಬೈಕ್ ರ್‍ಯಾಲಿ

    ಕುಂದಾಪುರ: ಬಿಜೆಪಿ ಯುವ ಮೋರ್ಚಾದಿಂದ ‘ವಿಕಾಸ ತೀರ್ಥ’ ಬೃಹತ್ ಬೈಕ್ ರ್‍ಯಾಲಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ೮ ವರ್ಷಗಳ ಯಶಸ್ವಿ ಆಡಳಿತವನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕುಂದಾಪುರದ ವತಿಯಿಂದ ‘ವಿಕಾಸ ತೀರ್ಥ ಬೃಹತ ಬೈಕ್ ರ್‍ಯಾಲಿ’ ರವಿವಾರ ನಡೆಯಿತು.

    ರ್‍ಯಾಲಿಗೆ ಚಾಲನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ನರೆಂದ್ರ ಮೋದಿ ಸರಕಾರದ ಜನಪರ ಆಡಳಿತವನ್ನು ಸಹಿಸಲಾಗದೇ ವಿಪಕ್ಷಗಳು ಟೀಕೆ ಮಾಡುತ್ತಿವೆ. ಒಂದು ರಾಜಕೀಯ ಪಕ್ಷವಾಗಿ ಸಮರ್ಥ ಆಡಳಿತ ವ್ಯವಸ್ಥೆಯೊಂದಿಗೆ ಸಾಮಾನ್ಯ ಜನರಿಗೆ ಆಡಳಿತದ ಒಟ್ಟು ಮಾಹಿತಿಯನ್ನು ಕೊಡುವಂತಹ ಈ ವಿಕಾಸ ತೀರ್ಥ ಯಾತ್ರೆ ಅತ್ಯಂತ ಪರಿಣಾಮಕಾರಿಯಾಗಿ ಮುನ್ನಡೆಯಲಿ. ಅಭಿವೃದ್ಧಿ ಹಾಗೂ ದೇಶ ರಕ್ಷಣೆಯಲ್ಲಿ ತೋರಿದ ಉತ್ಸಾಹ, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ತಂದಿರುವ ಅನೇಕ ಸುಧಾರಣೆಗಳು ಜನರಿಗೆ ಖುಷಿ ನೀಡಿದೆ ಎಂದರು.

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಬಿಜೆಪಿ ಜಿಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಮಂಡಲ ಪ್ರಭಾರಿ ಬಕಾಡಿ ಸುಪ್ರಸಾದ್ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ಸಹ ಪ್ರಭಾರಿ ರಾಜೇಶ್ ಕಾವೇರಿ, ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು,ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ ಶೆಟ್ಟಿ. ರಾಜ್ಯ ಯುವಮೋರ್ಚಾ ಕಾರ್ಯಕರಣಿ ಸದಸ್ಯ ಪ್ರಜ್ವಲ್ ಶೆಟ್ಟಿ ,ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಕುಂದಾಪುರ,ಶರತ್ ಶೆಟ್ಟಿ ಉಪ್ಪುಂದ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ., ಸದಸ್ಯರು, ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿಂದ ಆರಂಭಗೊಂಡ ಬಕ್ ರ್‍ಯಾಲಿಯು ಬಸ್ರೂರು ಮೂರುಕೈ ಜಂಕ್ಷನ್ ಮೂಲಕವಾಗಿ, ಹೆದ್ದಾರಿಯಿಂದ ಸಾಗಿ ಕೋಟೇಶ್ವರ, ಬೀಜಾಡಿಯವರೆಗೆ ಸಾಗಿ, ಮತ್ತೆ ಕುಂದಾಪುರ ನಗರದಲ್ಲಿ ಸಮಾಪನಗೊಂಡಿತು. ರ್‍ಯಾಲಿಯಲ್ಲಿ ನೂರಾರು ಮಂದಿ ನಾಯಕರು, ಕಾರ್‍ಯಕರ್ತರು, ಜನಪ್ರತಿನಿಽಗಳು ಪಾಲ್ಗೊಂಡಿದ್ದರು.

  • ವಿಕಾಸ್ ಬೈಕ್ ಯಾತ್ರೆ ಹಾಸ್ಯಸ್ಪದ :ಕುಂದಾಪುರ ಬ್ಲಾಕ್ ಕಾಂಗ್ರೆಸ್

    ವಿಕಾಸ್ ಬೈಕ್ ಯಾತ್ರೆ ಹಾಸ್ಯಸ್ಪದ :ಕುಂದಾಪುರ ಬ್ಲಾಕ್ ಕಾಂಗ್ರೆಸ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಪ್ರದಾನಿ ನರೇಂದ್ರ ಮೋದಿಯವರ ಸರ್ಕಾರದ 8 ವರ್ಷ ಆಡಳಿತವನ್ನು ಪೂರೈಸಿದ ಸಂದರ್ಭದಲ್ಲಿ ವಿಕಾಸ್ ತೀರ್ಥ ಬೈಕ್ ಯಾತ್ರೆ ಆಯೋಜನೆ ಹಾಸ್ಯಾಸ್ಪದ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

    ಕಳೆದ 8ವರ್ಷಗಳಿಂದ ಪೆಟ್ರೋಲ್, ಡಿಸೇಲ್, ಗ್ಯಾಸನಂತಹ ದಿನಬಳಕೆ ಆಹಾರ ವಸ್ತುಗಳ ಬೆಲೆ ಗಗನಕ್ಕೆರಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ನೊಂದಿದಾರೆ. ಕಟ್ಟಡ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ.

    ಕೇಂದ್ರದ ಬಿಜೆಪಿ ಸರಕಾರ ಮತ್ತು ಪಕ್ಷ ತನ್ನ ವೈಫಲ್ಯವನ್ನು ಮುಚ್ಚಿಡಲು ಕೋಮುಗಲಭೆಯಂತಹ ಸೂಕ್ಷ್ಮ ವಿಚಾರಗಳನ್ನು ಸೃಷ್ಟಿಸಿ ಜನರ ಶಾಂತಿ ಸಾಹಬಾಳ್ವೆ ಮತ್ತು ನೆಮ್ಮದಿಯನ್ನು ಕೆಡಿಸುತ್ತಿಸುತ್ತಿದೆ .

    ದೇಶದ ಪ್ರಧಾನಿಯಾದವರು ಪಾಲಿಸಬೇಕಾದ ರಾಜಧರ್ಮ ನರೇಂದ್ರ ಮೋಧಿಯಿಂದ ಪಾಲನೆಯಾಗುತ್ತಿಲ್ಲ. ಸಾಂವಿಧಾನಿಕ ಹುದ್ದೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬೆದರಿಸಲಾಗುತ್ತಿದೆ.

    ದೇಶ ಕಳೆದ 8 ವರ್ಷದಿಂದ 30 ವರ್ಷ ಹಿಂದೆ ತಳ್ಳಲ್ಪಟ್ಟಿದೆ. ಈ ವಿಕಾಸ ಬೈಕ್ ಯಾತ್ರೆ ಯಾವ ಉದ್ದೇಶಕ್ಕೆ ನೆಡೆಸಲಾಗುತ್ತಿದೆ ಎಂದು ಜನರಿಗೆ ತಿಳಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆಗ್ರಹಿಸಿದ್ದಾರೆ.

  • ಕೇಂದ್ರ ಸರಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರಪಯೋಗ – ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ

    ಕೇಂದ್ರ ಸರಕಾರದಿಂದ ಸಾಂವಿಧಾನಿಕ ಸಂಸ್ಥೆಗಳ ದುರಪಯೋಗ – ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಮಣಿಸಲು ಬಳಸಿಕೊಂಡ ಸ್ವಾತಂತ್ರ್ಯ ನಂತರದ ಪ್ರಥಮ ಪ್ರಧಾನಿ ನರೇಂದ್ರ ಮೋದಿ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ.

    ವಿರೋಧ ಪಕ್ಷಗಳ ಮಣಿಸಲು ಸ್ವಾಯತ್ತ ಸಂಸ್ಥೆ ಗಳಾದ ಐಟಿ ,ಇಡಿ ಮತ್ತು ಸಿಬಿಐ ಯಂತಹ ಸಂಸ್ಥೆಗಳನ್ನು ಕಳೆದ 8 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಗ್ರಹ ಸಚಿವ ಅಮಿತ್ ಷಾ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರದ್ರಷ್ಟಕರ ವಿಚಾರ .

    ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ನಾಯಕರುಗಳನ್ನು ಮತ್ತು ದೇಶದ ವಿರೋಧ ಪಕ್ಷದ ಮುಖಂಡರನ್ನುಮಣಿಸಲು ಸ್ವಾಯತ್ತ ಸಂಸ್ಥೆ ಗಳ ದುರ್ಬಳಕೆ ಮಾಡಿ ದಾಳಿ ಮಾಡುವುದು ನಿರಂತರವಾಗಿ ನಡೆಯುತ್ತಾ ಬಂದಿದ್ದು,
    ಪ್ರಜೆಗಳ ಸ್ವಾತಂತ್ರ್ಯ ಕಿತ್ತುಕೊಂಡು ಅಧಿಕಾರ ದುರ್ಬಳಕೆ ಮಾಡುತ್ತಿರುವುದು ಖಂಡನೀಯ.

    ಇಂತಹ ಸರ್ವಾಧಿಕಾರಿ ಆಡಳಿತಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಉತ್ತರ ನೀಡಲಿದ್ದಾರೆ.

  • ಕುಂದಾಪುರ: 224 ಕ್ಷೇತ್ರಗಳಲ್ಲಿಯೂ ಹಿಂದೂ ಮಹಾಸಭಾ ಸ್ಪರ್ಧೆ – ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ

    ಕುಂದಾಪುರ: 224 ಕ್ಷೇತ್ರಗಳಲ್ಲಿಯೂ ಹಿಂದೂ ಮಹಾಸಭಾ ಸ್ಪರ್ಧೆ – ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬಿಜೆಪಿ ಸುಳ್ಳು ಹೇಳಿಕೊಂಡೇ ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಜಕಾರಣದೊಳಗೆ ಪ್ರವೇಶ ಮಾಡಿದೆ. ಪ್ರದಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿದರೆ ಪ್ರಾಮಾಣಿಕರನ್ನು ಹುಡುಕಿತಗೆಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ. ಬಿಜೆಪಿ ನಕಲಿ ಹಿಂದೂತ್ವ ಪ್ರತಿಪಾದಿಸುತ್ತಾ ಕಾಂಗ್ರೆಸ್‍ಕ್ಕಿಂತ ಮಿಗಿಲಾಗಿ ಜಾತ್ಯತೀತೆ ಮುಖವಾಡ ಧರಿಸಿ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.

    ಅವರು ಕುಂದಾಪುರದ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಸಂಘ ಪರಿವಾರ ಹೊರತು ಪಡಿಸಿ ಎಲ್ಲಾ ಹಿಂದೂ ಸಂಘಟನೆಯನ್ನು ಸಂಪರ್ಕಿಸಿ, ಹಿಂದೂ ಸಮಾಜದ ರಕ್ಷಣೆಯ ವಿಚಾರದಲ್ಲಿ ಒಮ್ಮತದ ತೀರ್ಮಾನ ತಗೆದುಕೊಳ್ಳಲಿದ್ದಾರೆ ಎಂದರು.

    ಮಕ್ಕಳಿಗೆ ಯಾವ ರೀತಿ ಶಿಕ್ಷಣವನ್ನು ನೀಡಬೇಕು ಎಂದು ಎಡ ಪಂಥೀಯ ಹಾಗೂ ಸ್ವಯಂಘೋಷಿತ ಬುದ್ಧಿಜೀವಿಗಳ ನಿರ್ಧಾರವನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ. ಇಷ್ಟು ವರ್ಷಗಳಿಂದ ಸುಳ್ಳು ಇತಿಹಾಸವನ್ನು ಬೋಧಿಸಿ ಮಕ್ಕಳಿಗೆ ನಮ್ಮ ದೇಶವನ್ನಾಳಿದ ವೀರ ಸ್ಪದೇಶಿ ಹಿಂದೂ ರಾಜರುಗಳ, ಹಾಗೂ ಅನೇಕ ಮಹನೀಯರ ಜೀವನ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕøತಿಯನ್ನು ವಂಚಿತರನ್ನಾಗಿ ಮಾಡಿದ್ದು, ಇನ್ನಾದರೂ ದೇಶವನ್ನು ಲೂಟಿ ಮಾಡಿದ ವಿದೇಶಿ ಹಾಗೂ ಸ್ವದೇಶಿ ಆಕ್ರಮಣಕಾರರುಗಳ ಹಾಗೂ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳ ಬಗ್ಗೆ ಸತ್ಯವನ್ನು ತಿಳಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.

    ಕೇವಲ ಪಠ್ಯ ಪುಸ್ತಕಗಳನ್ನು ಬದಲಾಯಿಸಿದರೆ ಸಾಲದು, ಇವತ್ತಿನ ಕಾಲಘಟ್ಟದಲ್ಲಿ ಶಿಕ್ಷಣ ಮಕ್ಕಳಿಗೆ ಹಾಗೂ ಪೋಷಕರಿಗೆ ಅಘೋಷಿತ ಶಿಕ್ಷೆಯಾಗಿದೆ. ಮಕ್ಕಳಿಗಿಂತ ಭಾರವಾದ ಪುಸ್ತಕಗಳು ಹಾಗೂ ಇತರ ವಿಷಯಗಳಿಂದ ಶಿಕ್ಷಣದ ಹೆಸರಿನ ಮೇಲೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳು ಪೋಷಕರನ್ನು ಹಗಲು ದರೋಡೆ ಮಾಡುತ್ತಿವೆ. ಇದಕ್ಕೆ ಸರ್ಕಾರವು ಹಿಂಬಾಲಿನಿಂದ ಬೆಂಬಲ ನೀಡುತ್ತದೆ. ಇದು ಬದಲಾಗಬೇಕು. ಎಸ್.ಎಸ್.ಎಲ್.ಸಿ ತನಕ ಉಚಿತ ಶಿಕ್ಷಣ ನೀಡಬೇಕು. ಅದು ಸರ್ಕಾರದ ಹಿಡಿತದಲ್ಲಿಯೇ ಇರಬೇಕು. ಹಾಗೆಯೇ ಆರೋಗ್ಯ ಕ್ಷೇತ್ರವನ್ನು ಸರ್ಕಾರ ಗಟ್ಟಿಗೊಳಿಸಬೇಕು ಎಂದರು.

    ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ ಮಾತನಾಡಿ, ಅಖಿಲ ಭಾರತ ಹಿಂದೂ ಮಹಾಸಭಾ ಹೊಂದಾಣಿಕೆ ರಾಜಕೀಯ ಮಾಡುವುದಿಲ್ಲ. ಸಮಸ್ತ ಹಿಂದೂಗಳ ರಕ್ಷಣೆ ನಮ್ಮ ಉದ್ದೇಶ. ಮತಗಳಿಗೋಷ್ಕರ ಒಲೈಕೆ ರಾಜಕಾರಣ ಮಾಡುವುದಿಲ್ಲ. ಗ್ರಾಮ ಸಭೆ, ತಾ.ಪಂ., ಜಿ.ಪಂ. ವಿಧಾನಸಭಾ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದರು.
    ಸುದ್ಧಿಗೋಷ್ಠಿಯಲ್ಲಿ ಯುವ ಸಭಾ ಜಿಲ್ಲಾಧ್ಯಕ್ಷರಾದ ಪ್ರತಾಪ್ ಸಾಕೂರು, ದ.ಕ ಜಿಲ್ಲಾಧ್ಯಕ್ಷರಾದ ಪ್ರಮೋದ್ ಉಚ್ಚಿಲ್, ಧಾರ್ಮಿಕ ಸಭಾದ ರಾಘವೇಂದ್ರ ಉಳ್ಳೂರ, ದೇವಿಕಾ ಭಟ್, ದೀಪಾ ಕಿಣಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಶೈಲೇಶ್ ಉಪಸ್ಥಿತರಿದ್ದರು.

  • ಕುಂದಾಪುರ – ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯುಂದ ಪರಿಸರ ದಿನಾಚರಣೆ ಪ್ರಯುಕ್ತ “ಹಸಿರಿಂದ ಉಸಿರು ” ಕಾರ್ಯಕ್ರಮ

    ಕುಂದಾಪುರ – ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ವತಿಯುಂದ ಪರಿಸರ ದಿನಾಚರಣೆ ಪ್ರಯುಕ್ತ “ಹಸಿರಿಂದ ಉಸಿರು ” ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಾರ್ಯಕ್ರಮವನ್ನು ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಯವರು ಉದ್ಘಾಟಿಸಿದರು.

    ಕಾರ್ಯಕ್ರಮದಲ್ಲಿ ಕುಂದಾಪುರ ಮಂಡಲ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ,ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಬೀಜಾಡಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು,ಸಂಪತ್ ಶೆಟ್ಟಿ ಶಾನಾಡಿ,ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ರಾಜ್, ಯುವಮೋರ್ಚಾ ಕುಂದಾಪುರ ಮಂಡಲ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ಬಂಗೇರಾ,ಸುನಿಲ್ ಖಾರ್ವಿ, ಕುಂದಾಪುರ ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸಂಪತ್ ಶೇರಿಗಾರ್ ,ಕುಂದಾಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಕಡ್ಗಿಮನೆ,ಯುವಮೋರ್ಚಾ ಉಪಾಧ್ಯಕ್ಷ ಅಭಿಷೇಕ್ ಅಂಕದಕಟ್ಟೆ, ಕಾರ್ಯದರ್ಶಿ ಅರುಣ್ ಕುಮಾರ್,ಸಫಲ್ ಶೆಟ್ಟಿ, ಸಂತೋಷ್ ಪೂಜಾರಿ ,ಆಶ್ರಯ್ ಶೆಟ್ಟಿ, ಶೇರಿಗಾರ್, ನಗರ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಪುರಸಭೆ ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ , ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ್ ಕೆ ಎಸ್ ,ರೈತ ಮೋರ್ಚಾ ಅಧ್ಯಕ್ಷ ಸುನಿಲ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ನಾಗೇಶ್ ಬಳ್ಕೂರು,ಪುರಸಭೆ ಸದಸ್ಯರಾದ ಅಶ್ವಿನಿ ಪ್ರದೀಪ್ ,ರಾಘವೇಂದ್ರ ಖಾರ್ವಿ,ದಿವಾಕರ ಕಡ್ಗಿ,ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌರಭೀ ಪೈ , ಮಂಡಲ ಕಾರ್ಯದರ್ಶಿ ಸುರೇಂದ್ರ ಕಾಂಚನ್ , ಸ್ವರೂಪ್ ಶೆರಿಗಾರ್ ,ಶಾಲಾ ಆಡಳಿತ ಮಂಡಳಿ ಸದಸ್ಯರು,, ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

  • ಪರಾಜಯ ಮರೆತು ಕಾರ್ಯನಿರ್ವಹಿಸಿ ಜನವಿಶ್ವಾಸ ಪಡೆಯಿರಿ-ಮಂಜುನಾಥ ಭಂಡಾರಿ

    ಪರಾಜಯ ಮರೆತು ಕಾರ್ಯನಿರ್ವಹಿಸಿ ಜನವಿಶ್ವಾಸ ಪಡೆಯಿರಿ-ಮಂಜುನಾಥ ಭಂಡಾರಿ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ತಳಮಟ್ಟದಲ್ಲಿ ಪಕ್ಷ ಸಂಘಟನೆ ಇನ್ನಷ್ಟು ಬಲಗೊಳ್ಳುವ ಅಗತ್ಯವಿದೆ. ಅಗತ್ಯ ಅಭಿವೃದ್ದಿ ಕಾರ್ಯಗಳ ಬಗ್ಗೆ ಒತ್ತು ನೀಡಿ ಜನರ ವಿಶ್ವಾಸ ಗಳಿಸಿಕೊಳ್ಳುವ ಕೆಲಸ ಕಾರ್ಯಕರ್ತರು ಮಾಡಬೇಕಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತಿದ್ದೇವೆ ಎನ್ನುವುದನ್ನು ಮರೆತು ಬಿಟ್ಟು ಜನಪರ ಕೆಲಸದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.

    ಅವರು ಶನಿವಾರ ಹೆಮ್ಮಾಡಿಯ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ನಡೆದ ಗಂಗೊಳ್ಳಿ ಜಿ.ಪಂ. ವ್ಯಾಪ್ತಿಯ ಕ್ಷೇತ್ರವಾರು ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ನನ್ನ ವಿಧಾನ ಪರಿಷತ್ ಕ್ಷೇತ್ರ ವ್ಯಾಪ್ತಿಯಲ್ಲಿ 13 ವಿಧಾನಸಭಾ ಕ್ಷೇತ್ರ, 26 ಬ್ಲಾಕ್‍ಗಳು, 70-80 ಜಿ.ಪಂ. ಕ್ಷೇತ್ರಗಳು ಬರುತ್ತವೆ. ಪರಿಷತ್ ಸದಸ್ಯರಿಗೆ ಸಿಗುವ ಅನುದಾನವನ್ನು ಅಗತ್ಯವಿರುವ ಗ್ರಾ.ಪಂ.ಗಳಿಗೆ ಅದ್ಯತೆ ನೆಲೆಯಲ್ಲಿ ಹಂಚಿಕೆ ಮಾಡಲಾಗುವುದು. ಎಲ್ಲೆಲ್ಲ ಅಗತ್ಯವಿದೆ ಅನ್ನುವುದನ್ನು ತಿಳಿಸುವಂತಹ ಕಾರ್ಯ ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕಿದೆ ಎಂದ ಅವರು, ತನ್ನನ್ನು ಕಳೆದ ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ ಗ್ರಾ.ಪಂ. ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
    ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆ ಹತ್ತಿರ ಬರುವಾಗ ಬಿಜೆಪಿಯವರು ಭಾವನಾತ್ಮಕ ನೆಲೆಯಲ್ಲಿ ಜನರನ್ನು ಮರುಳು ಮಾಡಲು ಅನೇಕ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತದೆ. ಇದರಿಂದ ನಮ್ಮ ಕಾರ್ಯಕರ್ತರು ವಿಚಲಿತರಾಗದೇ, ನಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು, ಬಲವರ್ಧನೆಯಲ್ಲಿ ಕೈಜೋಡಿಸಬೇಕು. ಹಿಂದೆ 4 ಬಾರಿ ಶಾಸಕನಾಗಿದ್ದು, ಆಗ ಬೈಂದೂರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಆಯಾಯ ಗ್ರಾಮಗಳಲ್ಲಿ ತಿಳಿಸುವ ಪ್ರಯತ್ನವನ್ನು ಸದಸ್ಯರು, ಸ್ಥಳೀಯ ಮುಖಂಡರು ಮಾಡಬೇಕು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಲ್ಲೂರಿನಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ಆರಂಭಗೊಳ್ಳಲಿದೆ ಎಂದವರು ಹೇಳಿದರು.

    ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷೆ ರೋಶನಿ ಒಲಿವೆರಾ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಪ್ರದೀಪ್ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

    ಗಂಗೊಳ್ಳಿ ಜಿ.ಪಂ. ವ್ಯಾಪ್ತಿಯ ಗುಜ್ಜಾಡಿ, ಹೆಮ್ಮಾಡಿ, ಕಟ್‍ಬೆಲ್ತೂರು, ಹೊಸಾಡು, ಗಂಗೊಳ್ಳಿ ಹಾಗೂ ತ್ರಾಸಿ ಗ್ರಾ.ಪಂ. ಸದಸ್ಯರು, ನಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಪಕ್ಷದ ಮುಖಂಡರಾದ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ಸ್ವಾಗತಿಸಿ, ಶರತ್ ಕುಮಾರ್ ಶೆಟ್ಟಿ ವಂದಿಸಿದರು.

  • ಬಿಜೆಪಿ ಸರಕಾರ ಕಮಿಷನ್ ಸರಕಾರ, ದರಪಟ್ಟಿ ನಿಗದಿಪಡಿಸಿ ಕೆಲಸ ಮಾಡುತ್ತಿದೆ -ಮಂಜುನಾಥ ಭಂಡಾರಿ ಲೇವಡಿ

    ಬಿಜೆಪಿ ಸರಕಾರ ಕಮಿಷನ್ ಸರಕಾರ, ದರಪಟ್ಟಿ ನಿಗದಿಪಡಿಸಿ ಕೆಲಸ ಮಾಡುತ್ತಿದೆ -ಮಂಜುನಾಥ ಭಂಡಾರಿ ಲೇವಡಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಿಜೆಪಿ ಸರಕಾರ ಕಮಿಷನ್ ಸರಕಾರವಾಗಿದೆ. ಇಂತ ಕೆಲಸಕ್ಕೆ ಇಂತಿಷ್ಟು ಎಂಬ ದರಪಟ್ಟಿ ನಿಗದಿಪಡಿಸಿ ಕೆಲಸ ಮಾಡುತ್ತಿದ್ದಾರೆ. ಈ ಸರಕಾರದಿಂದ ಒಳಿತನ್ನು ಬಯಸಲು ಆಗಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಲೇವಡಿ ಮಾಡಿದ್ದಾರೆ.

    ಹೆಮ್ಮಾಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರ 40% ಕಮಿಷನ್ ಪಡೆಯುವ ಬಗ್ಗೆ ಕೆಂಪಣ್ಣ ಎನ್ನುವರು ಪ್ರಧಾನಿಯವರಿಗೆ ಪತ್ರ ಬರೆದು ವರ್ಷ ಕಳೆದಿದೆ. ಕೂಡ ಪ್ರಧಾನಮಂತ್ರಿ ಕಾರ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಿಂದಿನ ಪ್ರಧಾನಿಯವರಿಗೆ ಮೌನ ಮುರಿಯಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ ಈಗಿನ ಪ್ರಧಾನಿಯವರ ಮೌನದಿಂದ ಇರುವುದು ಅವರು ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಒಪ್ಪಿದಂತಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ದೂರಿದರು.

    ಹಿಂದೆ ಪ್ರಧಾನಿಯವರು ಕರ್ನಾಟಕಕ್ಕೆ ಬಂದಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರಕಾರ ಎಂದು ರಾಜಕೀಯವಾಗಿ ಲೇವಡಿ ಮಾತನಾಡಿದ್ದರು. ಆದರೆ ಈಗ ಜನರು, ಗುತ್ತಿಗೆದಾರರು ಸರಕಾರದ ಬಗ್ಗೆ ಪರ್ಸೆಂಟ್ ವಿಚಾರದ ಲೇವಡಿ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ 40 ಶೇಖಡಾ ಕಮಿಷನ್ ಆರೋಪಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದಿದ್ದಾರೆ. ಮಠಾಧೀಶರೊಬ್ಬರು ಕೂಡ ಮೂವತ್ತು ಶೇಖಡಾ ಕಮಿಷನ್ ವಿಚಾರ ಪ್ರಸ್ತಾಪ ಮಾಡಿದ್ದಾರೆ ಎಂದರು.

    ಜಾತಿಗಳ ಮಧ್ಯೆ, ಕೋಮುಗಳ ಮಧ್ಯೆ ಕಂದಕ ನಿರ್ಮಾಣ ಮಾಡಿ ಅದರಿಂದ ಉಪಯೋಗ ಪಡೆಯಲಾಗುತ್ತಿದೆ. ಬಿಜೆಪಿಯವರು ಮಾತ್ರ ದೇಶ ಭಕ್ತರಲ್ಲ. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರು ದೇಶ ಭಕ್ತರು. ಅವರು ವಿಭಜನೆ ಮಾಡಿದ್ದು ನಾವೇನು ಎದೆ ಬಗೆದು ರಾಷ್ಟ್ರ ಭಕ್ತಿ ಬಗ್ಗೆ ತೋರಿಸಲು ಆಗುವುದಿಲ್ಲ. ಕೋಮು ಭಾವನೆಗೆ ಜನರು ಬೆಲೆ ನೀಡಬಾರದು ಎಂದು ಮಂಜುನಾಥ್ ಭಂಡಾರಿ ಹೇಳಿದರು.

     

  • ತತ್ವ ಸಿದ್ದಾಂತ ಆಧಾರಿತ ರಾಜಕಾರಣ ಬಿಜೆಪಿಯ ಧ್ಯೇಯ- ಬೈಕಾಡಿ ಸುಪ್ರಸಾದ್ ಶಟ್ಟಿ

    ತತ್ವ ಸಿದ್ದಾಂತ ಆಧಾರಿತ ರಾಜಕಾರಣ ಬಿಜೆಪಿಯ ಧ್ಯೇಯ- ಬೈಕಾಡಿ ಸುಪ್ರಸಾದ್ ಶಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಭಾರತೀಯ ಜನತಾ ಪಾರ್ಟಿಯು ಕಾರ್ಯಕರ್ತರ ಆಧಾರಿತ ಸಂಘಟನೆಯಾಗಿದ್ದು ದೇಶಭಕ್ತಿ ಮತ್ತು ರಾಷ್ಟ್ರವಾದಿ ರಾಜಕಾರಣವನ್ನು ಮಾಡಿ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರನಿರ್ಮಾಣದ ತತ್ವವನ್ನು ನಂಬಿಕೊಂಡು ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಮೂಲ ತತ್ವದ ಆಧಾರದಲ್ಲಿ ರಾಜಕಾರಣ ಮಾಡುವ ಪಕ್ಷ ನಮ್ಮದು ಎಂದು ಜಿಲ್ಲಾ ಉಪಾಧ್ಯಕ್ಷರು ಕುಂದಾಪುರ ಮಂಡಲದ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.


    ಹಾಲಾಡಿ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ಹಾಲಾಡಿ ಮಹಾಶಕ್ತಿ ಕೇಂದ್ರದ ಪಕ್ಷ ಸಂಘಟನೆಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ಕುಂದಾಪುರ ವಿಧಾನಸಭಾ ಕ್ಷೇತ್ರ ಸಂಘಟನಾತ್ಮಕವಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಇಡೀ ರಾಜ್ಯಕ್ಕೆ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಸಭೆಯಲ್ಲಿ ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಕುಂದಾಪುರ ಮಂಡಲದ ಹಾಲಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶಂಕರ ಮೊಗವೀರ ಅಧ್ಯಕ್ಷತೆಯನ್ನು ವಹಿಸಿದರು. ಕರ್ನಾಟಕ ರಾಜ್ಯ ಆಹಾರ ನಿಗಮ ಮಂಡಳಿಯ ಉಪಾಧ್ಯಕ್ಷರಾದ ಕಿರಣ್ ಕೊಡ್ಗಿ, ಕುಂದಾಪುರದ ಬಿಜೆಪಿ ಕ್ಷೇತ್ರ ಅಧ್ಯಕ್ಷ ರಾದ ಶಂಕರ್ ಅಂಕದಕಟ್ಟೆ , ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ, ಸತೀಶ್ ಪೂಜಾರಿ ವಕ್ವಾಡಿ, ಹಾಗೂ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗೋಪಾಲ ಕಾಂಚನ ವೇದಿಕೆಯಲ್ಲಿದ್ದರು..

    ಪಕ್ಷ ಸಂಘಟನೆಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಶಕ್ತಿಕೇಂದ್ರದ ಅಧ್ಯಕ್ಷರು ಪಕ್ಷದ ಮುಖಂಡರು, ಹಾಗೂ ವಿವಿಧ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    ಹಾಲಾಡಿ ಬಿಜೆಪಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಶಂಕರ್ ಮೊಗವೀರ ಸ್ವಾಗತಿಸಿದರು. ವಂದೇ ಮಾತರಂ ಗೀತೆಯನ್ನು ಮಂಡಲ ಕಾರ್ಯದರ್ಶಿ ಸುರೇಂದ್ರ ಕಾಂಚನ್ ಸಂಗಮ್ ಹಾಡಿದರು.

    ಹಾಲಾಡಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಹೆಂಗವಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.