Category: ರಾಜಕೀಯ

  • ಕುಂದಾಪುರ : ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ನಿವಾಸಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ

    ಕುಂದಾಪುರ : ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ನಿವಾಸಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಇಂದು ಹೈಕಾಡಿಯ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಅವರ ನಿವಾಸಕ್ಕೆ ಬೇಟಿ ನೀಡಿದರು .

    ಶಿವಮೊಗ್ಗ ಲೋಕಸಭಾ ಕ್ಷೇತ್ರದ ಲೋಕಸಭಾ ಚುನಾವಣೆ ಕುರಿತು ಕೆ. ಪ್ರತಾಪಚಂದ್ರ ಶೆಟ್ಟಿ ಯವರಿಂದ ಸಲಹೆ ಮತ್ತು ಮಾರ್ಗದರ್ಶನ ಪಡೆದರು.

    ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ , ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ , ರಾಜು ಪೂಜಾರಿ ಬೈಂದೂರು, ಶ್ರೀ ಡಿ.ಆರ್. ರಾಜು ಕಾರ್ಕಳ , ರೋಶನ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು .

  • ಮಾಜೀ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಕೋಟಾ

    ಮಾಜೀ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ ಕೋಟಾ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಶುಕ್ರವಾರ ಮಾಜೀ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

    ಈ ಸಂದರ್ಭ ಚುನಾವಣೆಯಲ್ಲಿ ಹಾಲಾಡಿಯವರ ಬೆಂಬಲ ಕೋರಿದರು. ಈ ಸಂದರ್ಭ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ದಾಖಲೆಯ ಅಂತರದಿಂದ ಗೆಲುವು ಸಾಧಿಸುವಲ್ಲಿ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

  • ಕುಂದಾಪುರ: ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ ಪೂಜಾರಿ- ಬಿಜೆಪಿಯಿಂದ ಅಚ್ಚರಿಯನಿರ್ಧಾರ

    ಕುಂದಾಪುರ: ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ ಪೂಜಾರಿ- ಬಿಜೆಪಿಯಿಂದ ಅಚ್ಚರಿಯನಿರ್ಧಾರ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜೀ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ.

    ಪಂಚಾಯತ್ ರಾಜ್ ಕ್ಷೇತ್ರದ ಚುನಾವಣೆಯ ಮೂಲಕ ವಿಧಾನಪರಿಷತ್ ಪ್ರವೇಶಿಸಿದ್ದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಮಾಜೀ ಸ್ಪೀಕರ್ ಆಗಿದ್ದಾರೆ, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆಯನ್ನು ನಿರ್ವಹಿಸಿದ್ದಾರೆ. ಪಂಚಾಯತ್ ಸದಸ್ಯರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೋಟಾ, ಇದೀಗ ರಾಜ್ಯ ರಾಜಕಾರಣದಿಂದ ಕೇಂದ್ರದತ್ತ ನಡೆಯಲು ಸಿದ್ಧತೆ ನಡೆಸಿದಂತಾಗಿದೆ.

  • ಕುಂದಾಪುರ: ಮಾಜಿ ಶಾಸಕ ಬಿ ಎಂ ಸುಕುಮಾರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಖಚಿತ – ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ

    ಕುಂದಾಪುರ: ಮಾಜಿ ಶಾಸಕ ಬಿ ಎಂ ಸುಕುಮಾರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಖಚಿತ – ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿಜೆಪಿ ಹಿರಿಯ ಮುಖಂಡ ಬಿ ಎಂ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದೆ. ಸೋಮವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ರಾಜ್ಯಸಭಾ ಸದಸ್ಯ ರಣದೀಪ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆಯ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಎಂ ಸುಕುಮಾರ್ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್ ನೀಡದೆ ಗುರುರಾಜ್ ಗಂಟಿಹೊಳೆಯವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಇದರಿಂದ ಬೇಸರಗೊಂಡಿದ್ದ ಮಾಜಿ ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ ರಾಜಕೀಯವಾಗಿ ತಟಸ್ಥ ಧೋರಣೆ ಅನುಸರಿಸಿದ್ದರು.

    ಇದೀಗ ಸೋಮವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದು ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದೆ. ಈ ಸಂದರ್ಭ ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಮರೋಳಿ ಸೇರಿದಂತೆ ಹಲವು ರಾಜ್ಯ ನಾಯಕರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸುಕುಮಾರ್ ಶೆಟ್ಟಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

  • ಸಾಲಿಗ್ರಾಮ – ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ರವರಿಗೆ ಸರಕಾರದಲ್ಲಿ ಉನ್ನತ ಹುದ್ದೆ ನೀಡದ ಕುರಿತು ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆ

    ಸಾಲಿಗ್ರಾಮ – ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ರವರಿಗೆ ಸರಕಾರದಲ್ಲಿ ಉನ್ನತ ಹುದ್ದೆ ನೀಡದ ಕುರಿತು ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ರವರಿಗೆ ಸರಕಾರದಲ್ಲಿ ಉನ್ನತ ಹುದ್ದೆ ನೀಡದ ಕುರಿತು ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆ ಗುರುವಾರ ಸಾಲಿಗ್ರಾಮ ಪಟ್ಟಣ ಪಂಚಾಯಿತ್‍ನ ವಿರೋಧ ಪಕ್ಷದ ನಾಯಕರ ಶ್ರೀನಿವಾಸ್ ಅಮೀನ್‍ರವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಜರಗಿತು.

    ಈ ಸಂದಭದಲ್ಲಿ ಮಾತನಾಡಿದ ಶ್ರೀನಿವಾಸ ಅಮೀನ್ ಕೋಟ ಕಾಂಗ್ರೆಸ್‍ನ ಅಧ್ಯಕ್ಷ ಶಂಕರ್ ಎ ಕುಂದರ್ ರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡು ವಿಧಾನಸಭಾ ಕ್ಷೇತ್ರ ಮತ್ತು 2023ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಎರಡು ಬಾರಿ ಟಿಕೆಟ್ ವಂಚಿತರಾಗಿ, ಹಾಗೆ ಅದರ ಮಧ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷಕ್ಕಾಗಿ ಸಾಕಷ್ಟು ವರ್ಷಗಳಿಂದ ಶ್ರಮಿಸಿದ್ದಾರೆ ಈ ಎಲ್ಲಾ ಸಂದರ್ಭದಲ್ಲಿ ಇವರಿಗೆ ಅವಕಾಶ ಸಿಗದೆ ಇದ್ದಾಗ ಆಗಿನ ನಾಯಕರಾದ ಓಸ್ಕರ ಫೆರ್ನಾಂಡಿಸ್‍ರವರು ಸಮಾಧಾನಪಡಿಸಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಉನ್ನತ ಸ್ಥಾನವನ್ನು ನೀಡುವ ಭರವಸೆ ನೀಡಿದರು, ಆದರೆ ಪ್ರಸ್ತುತ ನಮ್ಮ ಸರಕಾರ ಅವರಿಗೆ ಯಾವುದೇ ನಿಗಮ ಮಂಡಳಿ ಸ್ಥಾನಮಾನ ನೀಡದೆ ಅನ್ಯಾಯ ಎಸಗಿದೆ ಪಕ್ಷದ ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆ ಸ್ಪಂದಿಸುವವರು ಆದರೆ ಅಂತಹ ಮುಖಂಡರಿಗೆ ಸರಕಾರದಲ್ಲಿ ಉನ್ನತ ಹುದ್ದೆ ನೀಡುವಲ್ಲಿ ಎಡವಿದೆ ರಾಜ್ಯ ನಾಯಕರು ತಳಮಟ್ಟದ ಮುಖಂಡರಿಂದ ಸಾಮಾನ್ಯ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ.ಇದು ನ್ಯಾಯವೇ ಈ ಬಗ್ಗೆ ಪಕ್ಷದ ತಳಮಟ್ಟದ ಕಾರ್ಯಕರ್ತರು ಏಕ ನಿರ್ಧಾರ ಕೈಗೊಳ್ಳಲು ಇಚ್ಛಿಸಿದ್ದಾರೆ ಪಕ್ಷದ ಈ ನಿರ್ಲಕ್ಷ್ಯದಿಂದ ನಾವುಗಳು ಪಕ್ಷದ ವಿರುದ್ಧ ಕಾರ್ಯನಿರ್ವಹಿಸುವ ದಿನಗಳು ಎದುರಾಗಿದೆ ಎಂದು ಎಚ್ಚರಿಸಿ ಸಾಮೂಹಿಕ ರಾಜೀನಾಮೆಗೆ ಹಂತಕ್ಕೆ ತಲುಪಿದ್ದೇವೆ ಎಂದು ಬೇಸರ ಹೊರಹಾಕಿದರು.

    ಈ ವೇಳೆ ಮಾತನಾಡಿದ ವಡ್ಡರ್ಸೆ ಭಾಗದ ಕಾಂಗ್ರೆಸ್ ಮುಖಂಡ ಶಂಕರ್ ಎ ಕುಂದರ್ ಬೇರೆ ಪಕ್ಷದಲ್ಲಿದ್ದರೆ ಇವತ್ತು ಉನ್ನತ ಸ್ಥಾನಮಾನ ಸಿಗುತ್ತಿತ್ತು ಆದರೆ ಪಕ್ಷದ ರಾಜ್ಯ ನಾಯಕರಿಂದ ಹಿಡಿದು ಜಿಲ್ಲಾ ಮಟ್ಟದ ಮುಖಂಡರು ನಿರ್ಲಕ್ಷ್ಯ ತೋರಿರುವುದು ಎದ್ದು ಕಾಣುತ್ತಿದೆ.ಕುಂದರ್ ಈವರೆಗೆ ಪ್ರಬಲವಾಗಿ ಯಾವುದೇ ಹುದ್ದೆ ಬಗ್ಗೆ ಪಟ್ಟು ಹಿಡಿದವರಲ್ಲ ಆದರೆ ಪ್ರಸ್ತುತ ಸರಕಾರದಲ್ಲಿ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡಲು ಹಿಂದೆಟು ಹಾಕುವ ಸ್ಥಿತಿಯ ಬಗ್ಗೆ ಖೇದ ವ್ಯಕ್ತಪಡಿಸಿದರು.

    ಕೋಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಬಂಗೇರ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನ ಗುರುತಿಸಿ ಅವರಿಗೆ ಹುದ್ದೆಯನ್ನು ನೀಡದೇ ಇದೊಂದು ಘೋರ ದುರಂತ, ನಮ್ಮ ನಾಯಕರಾದ ಶಂಕರ್ ಎ ಕುಂದರ್ ರವರಿಗೆ ಯಾವುದೇ ಸ್ಥಾನಮಾನವನ್ನ ನೀಡದೇ ಇದ್ದಲ್ಲಿ ಇನ್ನೂ ಒಂದು ವಾರದಲ್ಲಿ ಶಂಕರ್ ಕುಂದರವರು ಕರೆಯಲಿರುವ ಬೃಹತ್ ಬೆಂಬಲಿಗರ ಸಮಾವೇಶದಲ್ಲಿ ಅವರನ್ನು ಬೆಂಬಲಿಸಿ, ಅವರ ಜೊತೆಗೂಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವ್ಯಾರು ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಹಾಗೆ ಶಂಕರ್ ಎ ಕುಂದರ್ ರವರ ಎಲ್ಲ ಅಭಿಮಾನಿ ಬಳಗದವರು ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಿ ತಟಸ್ಥ ನಿಲುವನ್ನು ತೋರಪಡಿಸಲಿದ್ದೇವೆ ಎಂದು ಹೇಳಿದರು.

    ಈ ವೇಳೆ ಹನೆಹಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ರಮಾನಂದ ಶೆಟ್ಟಿ ಬಾರಕೂರು, ಹಿಂದುಳಿದ ವರ್ಗದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ ,ಕಾಂಗ್ರೆಸ್ ಹಿರಿಯ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಕೋಟ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರೇಖಾ ಪಿ ಸುವರ್ಣ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ಗುಂಡ್ಮಿ ಪುನೀತ್ ಪೂಜಾರಿ ಪಾರಂಪಳ್ಳಿ, ಗಣೇಶ್ ಬಡಹೋಳಿ,,ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ರವಿ ಪೂಜಾರಿ ಕೋಟ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುನಿಲ್ ಮಡಿವಾಳ ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ಗಣೇಶ್ ಕೆ ನೆಲ್ಲಿಬೆಟ್ಟು ನಿರ್ವಹಿಸಿದರು.

  • ಕುಂದಾಪುರ :ಪಕ್ಷ ಘೋಷಿಸಿದ ಅಭ್ಯರ್ಥಿಗೆ ಬೆಂಬಲ – ಕೆ. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆಗೆ ಸ್ವಾಗತ

    ಕುಂದಾಪುರ :ಪಕ್ಷ ಘೋಷಿಸಿದ ಅಭ್ಯರ್ಥಿಗೆ ಬೆಂಬಲ – ಕೆ. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆಗೆ ಸ್ವಾಗತ

    ಕುಂದಾಪುರ ಮಿರರ್ ಸುದ್ದಿ….

    ಕುಂದಾಪುರ: ಕಾಂಗ್ರೆಸ್ ಪಕ್ಷ ಸೇರುವವರನ್ನು ಸ್ವಾಗತಿಸುವುದಾಗಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಹಾಗೂ ಪಕ್ಷದ ಹಿರಿಯ ಮುಖಂಡರು ಹೇಳಿದ್ದು, ಪಕ್ಷದ ನಿಲುವಿಗೆ ನಮ್ಮ‌ ಸಹಮತ ಇರುವುದಾಗಿ ಮಾಜಿ‌ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಂ. ದಿ‌ನೇಶ್ ಹೆಗ್ಡೆ ಮೊಳಹಳ್ಳಿ ಮುಂತಾದವರು ಜಂಟಿ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.

    ಮಾಜಿ‌ ಸಂಸದರಾಗಿರುವ ಕೆ. ಜಯಪ್ರಕಾಶ್ ಹೆಗ್ಡೆಯವರು ಮರಳಿ ಕಾಗ್ರೆಸ್ ಪಕ್ಷ‌ ಸೇರ್ಪಡೆಯಾಗುವ ಕುರಿತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಮಾತುಕತೆ ನಡೆಯುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಹಿಂದೆ ಕಾಂಗ್ರೆಸ್ ಪಕ್ಷದ ಸಂಸದರಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರ‌ ವಿಶ್ವಾಸವನ್ನು ಗಳಿಸಿಕೊಂಡಿದ್ದ ಅವರು, ಮರಳಿ ಕಾಂಗ್ರೆಸ್‌ ಪಕ್ಷವನ್ನು ಸೇರುವುದಿದ್ದಲ್ಲಿ ನಾವು ಸ್ವಾಗತಿಸುತ್ತೇವೆ.

    ಕಾಂಗ್ರೆಸ್ ಪಕ್ಷದೊಂದಿಗೆ ಅಪರಿಮಿತ ಸಂಬಂಧಗಳನ್ನು‌ ಹೊಂದಿರುವ ಚಿಕ್ಕಮಗಳೂರ-ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಹೈಕಮಾಂಡ್ ಯಾರೇ ಅಭ್ಯರ್ಥಿಗಳನ್ನು‌ ಘೋಷಣೆ ಮಾಡಿದರೂ ಪಕ್ಷದ ನಿಷ್ಠಾವಂತ‌ ಕಾರ್ಯಕರ್ತರುಗಳಾದ ನಾವುಗಳು ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

    ಜಿಲ್ಲಾ‌ ಕಾಂಗ್ರೆಸ್ ಸಮಿತಿಯ ವಕ್ತಾರ ಕೆ. ವಿಕಾಸ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಸರಸು ಡಿ ಬಂಗೇರ, ಜ್ಯೋತಿ ವಿ ಪುತ್ರನ್, ರಾಜ್ಯ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ದೇವಾನಂದ ಶೆಟ್ಟಿ ಹಳ್ನಾಡು, ರಮೇಶ್ ಗಾಣಿಗ ಕೊಲ್ಲೂರು, ಮದನ್ ಕುಮಾರ್ ಉಪ್ಪುಂದ, ವಿಜಯಾಧರ ಪೂಜಾರಿ, ಪುರಸಭಾ ಸದಸ್ಯ ಅಬು ಮಹಮ್ಮದ್, ಎನ್ಎಸ್ ಯುಐ ಮುಖಂಡ ಸುಜನ್ ಶೆಟ್ಟಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • ಕೋಟೇಶ್ವರ ಶಕ್ತಿ ಕೇಂದ್ರದಲ್ಲಿ ಮೊದಲ ಯುವ ಚೌಪಾಲ್ ಗೆ ಶಾಸಕ ಕಿರಣ್ ಕೊಡ್ಗಿ ಚಾಲನೆ

    ಕೋಟೇಶ್ವರ ಶಕ್ತಿ ಕೇಂದ್ರದಲ್ಲಿ ಮೊದಲ ಯುವ ಚೌಪಾಲ್ ಗೆ ಶಾಸಕ ಕಿರಣ್ ಕೊಡ್ಗಿ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲದ ನೇತೃತ್ವದಲ್ಲಿ ಯುವ ಚೌಪಾಲ್ ಕಾರ್ಯಕ್ರಮದ ಉದ್ಘಾಟನೆಯು ಕೋಟೇಶ್ವರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ನಡೆಯಿತು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿ, ಯುವ ಚೌಪಾಲ್ ಕಾರ್ಯಕ್ರಮವು ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯಲಿದ್ದು ಪ್ರತಿ ಯುವಕರು ಭಾಗಿಯಾಗಿ ಕೇಂದ್ರ ಸರ್ಕಾರದ ಯೋಜನೆಯ ಸಂಪೂರ್ಣ ಮಾಹಿತಿ ಪಡೆದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದರು.

    ಪ್ರಧಾನ ಭಾಷಣಕಾರರಾಗಿ ಆದರ್ಶ ಕೆಲ ಮಾತನಾಡಿ ಯುವ ಸಮೂಹಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಮತ್ತು ಸಮಗ್ರ ಮಾಹಿತಿಯನ್ನು ನೀಡಿದರು.

    ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ನಿಯೋಜಿತ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಲೋಕಸಭಾ ಚುನಾವಣಾ ಸಂಚಾಲಕ ಸತೀಶ್ ಪೂಜಾರಿ, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಪ್ರಧಾನ ಕಾರ್ಯದರ್ಶಿ ಸುನೀಲ್ ಖಾರ್ವಿ, ಸಂಪತ್ ಶೇರಿಗಾರ್ ಉಪಸ್ಥಿತರಿದ್ದರು.

    ಮಂಡಲ ಕಾರ್ಯದರ್ಶಿ ಸುರೇಂದ್ರ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು, ಅವಿನಾಶ್ ಉಳ್ತೂರು ಸ್ವಾಗತಿಸಿ, ಸುನೀಲ್ ಖಾರ್ವಿ ಧನ್ಯವಾದ ಅರ್ಪಿಸಿದರು, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ ವಂದೇ ಮಾತರಂ ಗೀತೆ ಹಾಡಿದರು.

  • ನಾಡಾ: ಲೋಕಸಭಾ ಚುನಾವಣೆ ಬಳಿಕ ಸಂಸತ್ ಭವನದ ವೀಕ್ಷಕ ಗ್ಯಾಲರಿಯಲ್ಲಿ ಕಾಂಗ್ರೆಸ್ ಕೂರಲಿದೆ – ಸಂಸದ ಬಿವೈಆರ್.

    ನಾಡಾ: ಲೋಕಸಭಾ ಚುನಾವಣೆ ಬಳಿಕ ಸಂಸತ್ ಭವನದ ವೀಕ್ಷಕ ಗ್ಯಾಲರಿಯಲ್ಲಿ ಕಾಂಗ್ರೆಸ್ ಕೂರಲಿದೆ – ಸಂಸದ ಬಿವೈಆರ್.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದೇಶದಲ್ಲಿ 18 ಕೋಟಿ ಸದಸ್ಯತ್ವವನ್ನು ಹೊಂದಿರುವ ಬಿಜೆಪಿ ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿಯವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂದು ನೆಹರೂ ಮಾಡಿದ ತಪ್ಪಿಗೆ ಇಂದು ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯ ಬಳಿಕ ಸಂಸತ್ತಿನ ವೀಕ್ಷಕ ಗ್ಯಾಲರಿಯಲ್ಲಿ ಕೂರುವ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೆಂದ್ರ ಹೇಳಿದ್ದಾರೆ.

    ಬೈಂದೂರು ತಾಲುಕಿನ ನಾಡದಲ್ಲಿ “ಗಾಂವ್ ಚಲೋ” ಅಭಿಯಾನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕೆಂದ್ರ ಸರ್ಕಾರ ರೈತರಿಗೆ ಕೃಷಿ ಸಮ್ಮಾನ್ ಯೋಜನೆ, ಪ್ರತೀ ವರ್ಷ 2 ಲಕ್ಷ ಕೋಟಿ ಗೊಬ್ಬರ ಸಬ್ಸಿಡಿ, ಜನಧನ್ ಖಾತೆ ಮೂಲ ನೇರ ಹಣ ವರ್ಗಾವಣೆ ಸೌಲಭ್ಯ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸೌಲಭ್ಯ ಹೀಗೇ ನೂರಾರು ಕಾರ್ಯಕ್ರಮ ಜ್ಯಾರಿಗೆ ತಂದಿದ್ದಾರೆ. ಈಗಾಗಲೇ ತೀರ್ಥಹಳ್ಳಿ – ಆಗುಂಬೆ ಸಂಪರ್ಕಕ್ಕೆ ಸುರಂಗ ಮಾರ್ಗ ಚಿಂತನೆ ನಡೆದಿದ್ದು, ಪ್ರಸ್ತಾವನೆ ಸಿದ್ಧಗೊಳ್ಳುತ್ತಿದೆ ಎಂದರು. ಭಾರತ ಈ ಹಿಂದೆ ಆರ್ಥಿಕ ಸ್ಥಿತಿಯಲ್ಲಿ 30ನೇ ಸ್ಥಾನದಲ್ಲಿದ್ದು, ಮೋದಿ ಆಡಳಿತದ 9 ವರ್ಷದಲ್ಲಿ 5ನೇ ಸ್ಥಾನಕ್ಕೆ ಬಂದಿದೆ. ಮುಂದಿನ ಅವಧಿಯಲ್ಲಿ 3 ನೇ ಸ್ಥಾನಕ್ಕೆ ಏರಲಿದೆ ಎಂದರು.ವಿಮಾನ ನಿಲ್ದಾಣಗಳ ಸಂಕ್ಯೆ ದುಪ್ಪಟ್ಟಾಗಿವೆ. 40 ಸಾವಿರ ರೈಲು ಬೋಗಿಗಳು ವಂದೇ ಮಾತರಂ ದರ್ಜೆಗೇರಲಿವೆ ಎಂದರು.

    ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ, ಪ್ರಾಸ್ತಾವಿಸಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಿಶೋರ್ ಕುಮಾರ್, ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ, ಸಂಚಾಲಕ ಮಹೇಂದ್ರ ಪೂಜಾರಿ, ಸಹ ಸಂಚಾಲಕ ಸಾಮ್ರಾಟ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ, ಉಪಸ್ಥಿತರಿದ್ದರು. ಅಶೋಕ್ ಶೆಟ್ಟಿ ಸಂಸಾಡಿ ಸ್ವಾಗತಿಸಿದರು. ಪ್ರತೀಶ್ ಶೆಟ್ಟಿ ವಂದಿಸಿದರು.

  • ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಬೀಜಾಡಿ, ಬೈಂದೂರಿಗೆ ದೀಪಕ್ ಶೆಟ್ಟಿ ಮುಂದುವರಿಕೆ

    ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಬೀಜಾಡಿ, ಬೈಂದೂರಿಗೆ ದೀಪಕ್ ಶೆಟ್ಟಿ ಮುಂದುವರಿಕೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಉಡುಪಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಮಂಡಲಗಳ ನೂತನ ಅಧ್ಯಕ್ಷರ ಆಯ್ಕೆ ನಡೆದಿದ್ದು, ಕುಂದಾಪುರ ಮಂಡಲದ ಅಧ್ಯಕ್ಷರಾಗಿ ಬೀಜಾಡಿ ಸುರೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ಕುಂದಾಪುರ ಅವರು ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿ ಆದೇಶ ನೀಡಿದ್ದು, ಬೈಂದೂರು ಮಂಡಲ ಅಧ್ಯಕ್ಷರಾಗಿ ಹಿಂದಿನ ಅವಧಿಯ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರನ್ನೇ ಮುಂದುವರೆಸಲಾಗಿದೆ. ಉಡುಪಿ ಗ್ರಾಮಾಂತರ ರಾಜೀವ ಕುಲಾಲ್, ಉಡುಪಿ ನಗರ ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ ಕಾಪು ಹಾಗೂ ನವೀನ್ ನಾಯಕ್ ಕಾರ್ಕಳ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
    ಕೆಲವು ದಶಕಗಳಿಂದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಬೀಜಾಡಿ ಸುರೇಶ್ ಶೆಟ್ಟಿ ಕುಂದಾಪುರ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪತ್ನಿ ಶ್ರೀಲತಾ ಶೆಟ್ಟಿ ಹಿಂದಿನ ಅವಧಿಯಲ್ಲಿ ಕೋಟೇಶ್ವರ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದರು. ಸುರೇಶ್ ಶೆಟ್ಟಿ ಆಯ್ಕೆಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸ್ವಾಗತಿಸಿದ್ದಾರೆ.

  • ಕುಂದಾಪುರ :ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಮೋರ್ಚಾ ಉಪಾಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆ

    ಕುಂದಾಪುರ :ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಮೋರ್ಚಾ ಉಪಾಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಕರ್ನಾಟಕ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಸಾಸ್ತಾನದ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆಯಾಗಿದ್ದಾರೆ.

    ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷರಾದ ರಘು ಕೌಟಿಲ್ಯಾ ಘೋಷಿಸಿದ್ದಾರೆ. ಪ್ರಾರಂಭ ಕಾಲಘಟ್ಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ, ವಿಶ್ವಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಹಿಂದೂ ಸಂಘಟನೆ, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಣೆ, ಸಮುದಾಯದ ಸಂಘಟನೆಗಳ ಪ್ರಮುಖರಾಗಿ, ಸ್ಥಳೀಯ ವಿವಿಧ ದೇವಳಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು ಕಳೆದ
    32 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಬಿಜೆಪಿ ಸ್ಥಳೀಯ ಮಟ್ಟದ ಸ್ಥಾನೀಯ ಸಮಿತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ, ಐರೋಡಿ ಗ್ರಾಮಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಕುಂದಾಪುರ ಬಿಜೆಪಿ ಮಂಡಲ ಸಮಿತಿಯ ಉಪಾಧ್ಯಕ್ಷರಾಗಿ, ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಬಿಜೆಪಿಗೆ ಬಲ ತುಂಬಿದ್ದಾರೆ.