ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ರವರಿಗೆ ಸರಕಾರದಲ್ಲಿ ಉನ್ನತ ಹುದ್ದೆ ನೀಡದ ಕುರಿತು ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆ ಗುರುವಾರ ಸಾಲಿಗ್ರಾಮ ಪಟ್ಟಣ ಪಂಚಾಯಿತ್‍ನ ವಿರೋಧ ಪಕ್ಷದ ನಾಯಕರ ಶ್ರೀನಿವಾಸ್ ಅಮೀನ್‍ರವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಜರಗಿತು.
ಈ ಸಂದಭದಲ್ಲಿ ಮಾತನಾಡಿದ ಶ್ರೀನಿವಾಸ ಅಮೀನ್ ಕೋಟ ಕಾಂಗ್ರೆಸ್‍ನ ಅಧ್ಯಕ್ಷ ಶಂಕರ್ ಎ ಕುಂದರ್ ರವರು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಂಡು ವಿಧಾನಸಭಾ ಕ್ಷೇತ್ರ ಮತ್ತು 2023ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಎರಡು ಬಾರಿ ಟಿಕೆಟ್ ವಂಚಿತರಾಗಿ, ಹಾಗೆ ಅದರ ಮಧ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷಕ್ಕಾಗಿ ಸಾಕಷ್ಟು ವರ್ಷಗಳಿಂದ ಶ್ರಮಿಸಿದ್ದಾರೆ ಈ ಎಲ್ಲಾ ಸಂದರ್ಭದಲ್ಲಿ ಇವರಿಗೆ ಅವಕಾಶ ಸಿಗದೆ ಇದ್ದಾಗ ಆಗಿನ ನಾಯಕರಾದ ಓಸ್ಕರ ಫೆರ್ನಾಂಡಿಸ್‍ರವರು ಸಮಾಧಾನಪಡಿಸಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಉನ್ನತ ಸ್ಥಾನವನ್ನು ನೀಡುವ ಭರವಸೆ ನೀಡಿದರು, ಆದರೆ ಪ್ರಸ್ತುತ ನಮ್ಮ ಸರಕಾರ ಅವರಿಗೆ ಯಾವುದೇ ನಿಗಮ ಮಂಡಳಿ ಸ್ಥಾನಮಾನ ನೀಡದೆ ಅನ್ಯಾಯ ಎಸಗಿದೆ ಪಕ್ಷದ ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆ ಸ್ಪಂದಿಸುವವರು ಆದರೆ ಅಂತಹ ಮುಖಂಡರಿಗೆ ಸರಕಾರದಲ್ಲಿ ಉನ್ನತ ಹುದ್ದೆ ನೀಡುವಲ್ಲಿ ಎಡವಿದೆ ರಾಜ್ಯ ನಾಯಕರು ತಳಮಟ್ಟದ ಮುಖಂಡರಿಂದ ಸಾಮಾನ್ಯ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದಾರೆ.ಇದು ನ್ಯಾಯವೇ ಈ ಬಗ್ಗೆ ಪಕ್ಷದ ತಳಮಟ್ಟದ ಕಾರ್ಯಕರ್ತರು ಏಕ ನಿರ್ಧಾರ ಕೈಗೊಳ್ಳಲು ಇಚ್ಛಿಸಿದ್ದಾರೆ ಪಕ್ಷದ ಈ ನಿರ್ಲಕ್ಷ್ಯದಿಂದ ನಾವುಗಳು ಪಕ್ಷದ ವಿರುದ್ಧ ಕಾರ್ಯನಿರ್ವಹಿಸುವ ದಿನಗಳು ಎದುರಾಗಿದೆ ಎಂದು ಎಚ್ಚರಿಸಿ ಸಾಮೂಹಿಕ ರಾಜೀನಾಮೆಗೆ ಹಂತಕ್ಕೆ ತಲುಪಿದ್ದೇವೆ ಎಂದು ಬೇಸರ ಹೊರಹಾಕಿದರು.
ಈ ವೇಳೆ ಮಾತನಾಡಿದ ವಡ್ಡರ್ಸೆ ಭಾಗದ ಕಾಂಗ್ರೆಸ್ ಮುಖಂಡ ಶಂಕರ್ ಎ ಕುಂದರ್ ಬೇರೆ ಪಕ್ಷದಲ್ಲಿದ್ದರೆ ಇವತ್ತು ಉನ್ನತ ಸ್ಥಾನಮಾನ ಸಿಗುತ್ತಿತ್ತು ಆದರೆ ಪಕ್ಷದ ರಾಜ್ಯ ನಾಯಕರಿಂದ ಹಿಡಿದು ಜಿಲ್ಲಾ ಮಟ್ಟದ ಮುಖಂಡರು ನಿರ್ಲಕ್ಷ್ಯ ತೋರಿರುವುದು ಎದ್ದು ಕಾಣುತ್ತಿದೆ.ಕುಂದರ್ ಈವರೆಗೆ ಪ್ರಬಲವಾಗಿ ಯಾವುದೇ ಹುದ್ದೆ ಬಗ್ಗೆ ಪಟ್ಟು ಹಿಡಿದವರಲ್ಲ ಆದರೆ ಪ್ರಸ್ತುತ ಸರಕಾರದಲ್ಲಿ ನಿಗಮ ಮಂಡಳಿಯಲ್ಲಿ ಸ್ಥಾನಮಾನ ನೀಡಲು ಹಿಂದೆಟು ಹಾಕುವ ಸ್ಥಿತಿಯ ಬಗ್ಗೆ ಖೇದ ವ್ಯಕ್ತಪಡಿಸಿದರು.
ಕೋಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಬಂಗೇರ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನ ಗುರುತಿಸಿ ಅವರಿಗೆ ಹುದ್ದೆಯನ್ನು ನೀಡದೇ ಇದೊಂದು ಘೋರ ದುರಂತ, ನಮ್ಮ ನಾಯಕರಾದ ಶಂಕರ್ ಎ ಕುಂದರ್ ರವರಿಗೆ ಯಾವುದೇ ಸ್ಥಾನಮಾನವನ್ನ ನೀಡದೇ ಇದ್ದಲ್ಲಿ ಇನ್ನೂ ಒಂದು ವಾರದಲ್ಲಿ ಶಂಕರ್ ಕುಂದರವರು ಕರೆಯಲಿರುವ ಬೃಹತ್ ಬೆಂಬಲಿಗರ ಸಮಾವೇಶದಲ್ಲಿ ಅವರನ್ನು ಬೆಂಬಲಿಸಿ, ಅವರ ಜೊತೆಗೂಡಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾವ್ಯಾರು ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಹಾಗೆ ಶಂಕರ್ ಎ ಕುಂದರ್ ರವರ ಎಲ್ಲ ಅಭಿಮಾನಿ ಬಳಗದವರು ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡಿ ತಟಸ್ಥ ನಿಲುವನ್ನು ತೋರಪಡಿಸಲಿದ್ದೇವೆ ಎಂದು ಹೇಳಿದರು.
ಈ ವೇಳೆ ಹನೆಹಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ರಮಾನಂದ ಶೆಟ್ಟಿ ಬಾರಕೂರು, ಹಿಂದುಳಿದ ವರ್ಗದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ ,ಕಾಂಗ್ರೆಸ್ ಹಿರಿಯ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಕೋಟ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರೇಖಾ ಪಿ ಸುವರ್ಣ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ಗುಂಡ್ಮಿ ಪುನೀತ್ ಪೂಜಾರಿ ಪಾರಂಪಳ್ಳಿ, ಗಣೇಶ್ ಬಡಹೋಳಿ,,ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ರವಿ ಪೂಜಾರಿ ಕೋಟ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುನಿಲ್ ಮಡಿವಾಳ ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ಗಣೇಶ್ ಕೆ ನೆಲ್ಲಿಬೆಟ್ಟು ನಿರ್ವಹಿಸಿದರು.











