ಕುಂದಾಪುರ :ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ – ವಿದ್ಯಾರ್ಥಿ ಸಂಸತ್ ಚುನಾವಣೆ :ಶಾಲಾ ನಾಯಕನಾಗಿ ವಿಘ್ನೇಶ್ ರಾಜೇಶ್ ಪ್ರಭು, ಉಪನಾಯಕನಾಗಿ ಹರಿದಾಸ್ ಆರ್ ಮಲ್ಯ ಆಯ್ಕೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಪರಿಕಲ್ಪನೆ ಮತ್ತು ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ ಪ್ರಸ್ತುತ ಸಾಲಿನ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕರ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಾಯಿತು. ಸಾರ್ವತ್ರಿಕ ಚುನಾವಣೆಯ ಅರಿವು ಮೂಡಿಸುವ ಸಲುವಾಗಿ ಚುನಾವಣೆಯನ್ನು ಇ.ವಿ.ಎಮ್ ಆಪ್ ಮೂಲಕ ನಡೆಸಲಾಯಿತು.

ಶಾಲಾ ನಾಯಕನಾಗಿ ವಿಘ್ನೇಶ್ ರಾಜೇಶ್ ಪ್ರಭು 267 ಮತಗಳಿಂದ ಮತ್ತು ಉಪನಾಯಕನಾಗಿ ಹರಿದಾಸ್ ಆರ್ ಮಲ್ಯ 311 ಮತಗಳಿಂದ ಆಯ್ಕೆಯಾಗಿದ್ದು, ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಭೋದಕ – ಭೋದಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Comments

Leave a Reply

Your email address will not be published. Required fields are marked *

More posts