ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬೇಳೂರು ಶ್ರೀ ಗೋಪಾಲಕೃಷ್ಣ ವೆಂಕಟರಮಣ ದೇವಸ್ಥಾನದ ಜೀರ್ಣೊದ್ಧಾರಕ್ಕೆ ರೂ.5 ಲಕ್ಷದ ನೆರವು

0
6

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬೇಳೂರು ಗ್ರಾಮದ ಮೊಗೆಬೆಟ್ಟು ಶ್ರೀ ಗೋಪಾಲಕೃಷ್ಣ ವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ರೂ.5 ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುಧೀರ್‌ ಹಂಗಳೂರುರವರು ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ವ್ಯವಸ್ಥಾಪನಾ ಸಮಿತಿಯವರಿಗೆ ಹಸ್ತಾಂತರಿಸಿದರು.

ಈ ಬಗ್ಗೆ ಸಂದರ್ಭ ಮಾತನಾಡಿದ ಯೋಜನಾಧಿಕಾರಿಯವರು ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ಇರಬೇಕೆಂದರೆ ಎಲ್ಲಾ ಕಾರ್ಯಗಳು ನಿರ್ವೀಘ್ನವಾಗಿ ಜರುಗಲು ಆಧ್ಯಾತ್ಮಿಕ ಹಾಗೂ ಶ್ರದ್ಧಾ ಕೇಂದ್ರಗಳಾಗಿರುವ ದೇವಸ್ಥಾನಗಳು ಅತ್ಯಗತ್ಯವೆಂದು ಮನಗಂಡಿರುವ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮೋತ್ಥಾನ ಟ್ರಸ್ಟ್‌ ಮೂಲಕ ದೇಣಿಗೆಯನ್ನು ಒದಗಿಸಿಕೊಡುತ್ತಿದ್ದಾರೆ. ಇದಲ್ಲದೇ ಯೋಜನೆಯ ಸದಸ್ಯರ ಹಾಗೂ ಸ್ಥಳೀಯರ ಸಹಕಾರದಿಂದ ಗ್ರಾಮದ ದೇವಸ್ಥಾನದ, ಚರ್ಚ್‌, ಮಸೀದಿಗಳ ಸ್ವಚ್ಛತೆಯನ್ನು ವಾರ್ಷಿಕವಾಗಿ 02 ಬಾರಿ ಮಾಡಲಾಗುತ್ತಿದ್ದು, ಕಸಗಳ ವಿಲೇವಾರಿಗೆ ಕಸದ ಡಬ್ಬಿಯನ್ನು ಕೂಡ ಒದಗಿಸಿಕೊಡಲಾಗಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತೆಗೆ ಪ್ರಮುಖ ಆದ್ಯತೆ ನೀಡಲಾಗಿರುತ್ತದೆ.

Click Here

ಕೇವಲ ತಮ್ಮ ಸ್ವಾರ್ಥಕ್ಕಾಗಿ ಜೀವನವನ್ನು ಸವಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇಡೀ ಗ್ರಾಮದ ಧಾರ್ಮಿಕ ಕಾರ್ಯಗಳಿಗೆಂದು ಸ್ಥಳೀಯ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿರುವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಕಾರ್ಯ ಶ್ಲಾಘನೀಯವಾದದ್ದು ಎಂದು ತಿಳಿಸಿದರು. ತಾಲೂಕಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಳೆದ 05 ವರ್ಷಂದೀಚೆಗೆ ಒಟ್ಟು 97 ಲಕ್ಷದ 35 ಸಾವಿರ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಿಕೊಡಲಾಗಿದ್ದು, ಇದು ನೆರವು ನೀಡುತ್ತಿರುವ 39 ನೇ ದೇವಸ್ಥಾನವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಶ್ರೀ ಗೋಪಾಲಕೃಷ್ಣ ವೆಂಕಟರಮಣ ದೇವಸ್ಥಾನದ ಅಧ್ಯಕ್ಷರಾದ ಚಂದ್ರಶೇಖರ ಅಡಿಗ, ದೇವಸ್ಥಾನದ ಅರ್ಚಕರಾದ ಶ್ರೀಧರ ಅಡಿಗ, ಧಾರ್ಮಿಕ ಮುಖಂಡರಾದ ಶ್ರೀನಿವಾಸ ಉಡುಪ ಕೊಡ್ಲಿ, ಆನಂದ ಶೆಟ್ಟಿ ನಿವೃತ್ತ ಪೋಲೀಸ್‌ ಕಾನ್ಸ್‌ಟೇಬಲ್‌, ಬೇಳೂರು ಮಾಜಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, ಜಯಶೀಲಾ ಶೆಟ್ಟಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯ ಅಧ್ಯಕ್ಷರಾದ ಸುಕುಮಾರ ಶೆಟ್ಟಿ ವಲಯ ಮೇಲ್ವಿಚಾಕರಾದ ಹೇಮಲತಾ, ಸ್ಥಳೀಯ ಸೇವಾಪ್ರತಿನಿಧಿ ಉಷಾ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here