ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ :ವಿಭಾಗೀಯ ಮಟ್ಟಕ್ಕೆ ಜಿಗಿದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲಿನ ಮೂವರು ವಿದ್ಯಾರ್ಥಿಗಳು

0
509

ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ : ಆಗಸ್ಟ್ 02ರಂದು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿ ನಡೆದ ಜಿಲ್ಲಾ ಮಟ್ಟದ 14 ರ ವಯೋಮಾನದ ಕಲಾತ್ಮಕ ಏಕಲ್ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಸಾನಿಧ್ಯ ಎಸ್ ಮೊಗವೀರ (7ನೇ ತರಗತಿ) ಹಾಗು ಸಾಂಪ್ರದಾಯಿಕ ಯೋಗಾಸನ ಸ್ಪರ್ಧೆಯಲ್ಲಿ ವಂಶಿತ್(7ನೇ ತರಗತಿ) ಹಾಗೆಯೇ ತಾಳಾತ್ಮಕ ಯುಗಲ್ ಯೋಗಾಸನ ಸ್ಪರ್ಧೆಯಲ್ಲಿ ಸಾನಿಧ್ಯ ಎಸ್ ಮೊಗವೀರ(7ನೇ ತರಗತಿ) ಹಾಗೂ ಅಮೂಲ್ಯ (7ನೇ ತರಗತಿ) ಇವರ ಜೋಡಿ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ/ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Click Here

LEAVE A REPLY

Please enter your comment!
Please enter your name here