ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಪ್ರಸ್ತುತ ಸಂಸದರಾಗಿರುವ ಜಗದೀಶ್ ಶೆಟ್ಟರ್ ಮಂಗಳವಾರ ಉಡುಪಿ ಜಿಲ್ಲೆಯ ಸಾಸ್ತಾನದ ಐರೋಡಿ ವಾಸುಕೀ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದೇಗುಲದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಮಧ್ಯಸ್ಥ ಬರಮಾಡಿಕೊಂಡು ಮುಖ್ಯಮಂತ್ರಿ ಆಗುದಕ್ಕಿಂತ ಮೊದಲು ನಮ್ಮ ದೇಗುಲವನ್ನು ಸಂದರ್ಶಿಸಿದ ಶೆಟ್ಟರ್ ಕೆಲವೆ ದಿನಗಳಲ್ಲಿ ಮುಖ್ಯಮಂತ್ರಿ ಪಟ್ಟವನ್ನಲ್ಲಂಕರಿಸಿದರು. ಈ ಹಿನ್ನಲ್ಲೆಯಲ್ಲಿ ದೇಗುಲವನ್ನು ವಿಶೇಷವಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಭೇಟಿ ನಂತರ ದೇವರ ಅನುಗ್ರಹದಿಂದ ಕೇಂದ್ರ ಸಚಿವರಾಗಿ ಹೊರಹೊಮ್ಮಲ್ಲಿದ್ದಾರೆ ಎಂದು ಪ್ರಾರ್ಥಿಸಿದರು.
ಇದೇ ವೇಳೆ ದೇಗುಲದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ ಸಲ್ಲಿಸಿದ ಶೆಟ್ಟರ್ ಅವರನ್ನು ಶಾಲು ಹೋದಿಸಿ ಗೌರವಿಸಿದರು. ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾಹುಕಾರ್, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ, ಶಕ್ತಿ ಕೇಂದ್ರದ ಆಧ್ಯಕ್ಷ ರಮೇಶ್ ಕಾರಂತ್, ಮುಖಂಡರಾದ ಶಂಕರ್ ಕುಲಾಲ್, ಸಂಜೀವ ಪೂಜಾರಿ, ಸಂಸದರ ಆಪ್ತರಾದ ಜಗನಾಥ್ ಬಂಗೇರ ಬಂಟ್ವಾಳ ಇದ್ದರು.











