ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗೆ ಭೂಮಿ ಪೂಜೆ

ಕುಂದಾಪುರ ಮಿರರ್ ಸುದ್ದಿ…

ಬೈಂದೂರು :ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ, ರೋಬೋ ಸಾಫ್ಟ್ ಟೆಕ್ನಾಲಜಿಸ್ ಸಂಸ್ಥೆಯ CSR ನಿಧಿ ಮೂಲಕ ಶಾಲಾ ಕೊಠಡಿಯ ನಿರ್ಮಾಣವಾಗಲಿದ್ದು ಇಂದು ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಗಂಟಿಗೊಳೆ, ಈ ಕನಸಿಗೆ ರೆಕ್ಕೆಪುಕ್ಕ ನೀಡಿದ್ದು ಬೈಂದೂರು ಉತ್ಸವ. ಬೈಂದೂರು ಉತ್ಸವದ ಯಶಸ್ಸು, ಗುರಿ ಇಂದು ಬೈಂದೂರು ಕ್ಷೇತ್ರದಲ್ಲಿ ಇಂತಹ ಕಾರ್ಯಗಳನ್ನು ನಮ್ಮಿಂದ ದಾನಿಗಳ ಮೂಲಕ ಮಾಡಿಸುತ್ತಿದೆ. ಬೈಂದೂರು ಉತ್ಸವ ಯಶಸ್ಸು ಈ ರೀತಿಯ ಕಾರ್ಯಕ್ರಮಗಳ ಮೂಲಕ ಪ್ರತಿಧ್ವನಿಸುತ್ತಿರುವುದು ಬೈಂದೂರಿನ ಗೆಲುವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೋಬೋಸಾಫ್ಟ್‌ ಟೆಕ್ನಾಲಜೀಸ್‌ ಸಂಸ್ಥೆಯ ಸಿಇಒ ರಾನ್ ಮಹಾನ್, ಗ್ಲೋಬಲ್‌ ಸೇಲ್ಸ್‌ ಸಂಸ್ಥೆಯ Executive Vice-President ಸ್ಟೀಫನ್, Global Delivery ಇದರ Executive Vice-President ಶ್ರೀನಿಧಿ ರಾವ್, ಎಚ್‌ಆರ್‌ ರೀನಾ ಮಲಿಕ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts