ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಇಂದಿರಾ ಕ್ಯಾಂಟೀನ್ ಕುಂದಾಪುರ ಉಸ್ತುವಾರಿ ಆರಾಟೆ ಕೃಷ್ಣ ಪೂಜಾರಿ ಅವರನ್ನು ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು.
ರಾಜ್ಯ ಸರ್ಕಾರದಿಂದ ಇಂದಿರಾ ಗಾಂಧಿ ಜನ್ಮದಿನದಂದು ನೀಡಲಾಗುವ ಅತ್ಯುತ್ತಮ ಇಂದಿರಾ ಕ್ಯಾಂಟೀನ್* ಪ್ರಶಸ್ತಿ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ದೊರೆತಿರುವುದಾಗಿ ಪ್ರಕಟಿಸಲಾಗಿದ್ದು ಪತ್ರವನ್ನು ಪುರಸಭೆ ಕುಂದಾಪುರಕ್ಕೆ ಬರೆಯಲಾಗಿತ್ತು .
ಸ್ವಚ್ಛತೆ , ನೈರ್ಮಲ್ಯ , ಆಹಾರದ ಗುಣಮಟ್ಟ , ಸಮರ್ಪಕ ನಿರ್ವಹಣೆ ಹಾಗೂ ಸೇವೆಯನ್ನು ಗುರುತಿಸಿ ಮೈಸೂರು ವಿಭಾಗದ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮೊದಲ ಸ್ಥಾನ ಕುಂದಾಪುರದ ಇಂದಿರಾ ಕ್ಯಾಂಟೀನ್ ಆಯ್ಕೆಗೊಂಡಿದೆ.
ಈ ಪ್ರಶಸ್ತಿ ಇಂದಿರಾಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶ್ರೀ ಯು ಆರ್ ರಾವ್ ಅಡಿಟೋರಿಯಂನ ನೆಹರು ತಾರಾಲಯದಲ್ಲಿ ಮಾನ್ಯ ಪೌರಾಡಳಿತ ಸಚಿವರಾದ ಎಚ್ ಸಿ ಬಾಲಕೃಷ್ಣರವರು ನೀಡುವುದಾಗಿ ತಿಳಿಸಿರುತ್ತಾರೆ.
ಬ್ಲಾಕ್ ಕಾಂಗ್ರೆಸ್ ನ ಅಭಿನಂದನಾ ಕಾರ್ಯಕ್ರಮದಲ್ಲಿ ನಾಯಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆದೂರು ಸದಾನಂದ ಶೆಟ್ಟಿ , ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ , ಸದಸ್ಯರಾದ ಚಂದ್ರ ಅಮೀನ್ , ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಟ್ಯಾಕ್ಸಿ ಅಸೋಸಿಯೇಷನ್ ಕಾರ್ಯದರ್ಶಿ ಮಾಣಿ ಉದಯ್ , ಗ್ಯಾರಂಟಿ ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ , ಆಶಾ ಕರ್ವಾಲೋ, ಪುರಸಭೆ ನಾಮ ನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ , ಸದಾನಂದ ಖಾರ್ವಿ , ರೇವತಿ ಶೆಟ್ಟಿ , ಕೇಶವ್ ಭಟ್ , ಅರುಣ್ ಪಟೇಲ್ , ರಿಯಾಜ್ ಕೋಡಿ ಇನ್ನಿತರರು ಉಪಸ್ಥಿತರಿದ್ದರು.












