ಕುಂದಾಪುರ :ಅಗಲಿದ ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ಕುಂದಾಪುರ ಪುರಸಭೆ ಪೌರ ಕಾರ್ಮಿಕರಿಂದ ಭಾವಪೂರ್ಣ ಶ್ರದ್ದಾಂಜಲಿ.

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ಬಸ್ರೂರು ಅಪ್ಪಣ್ಣ ಹೆಗ್ಡೆ ಸ್ಮರಣಾರ್ಥವಾಗಿ ಕುಂದಾಪುರ ಗುರುಜ್ಯೋತಿ ಜ್ಯೂಸ್ ಸೆಂಟರ್ ಮುಂಭಾಗದಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮಾಲೀಕ ನರಸಿಂಹ ಪೂಜಾರಿ ಮತ್ತು ಸತೀಶ್ ಪೂಜಾರಿ ಶೃದ್ದಾಂಜಲಿ ಸಲ್ಲಿಸಿದರು. ಜೊತೆಗೆ ಕುಂದಾಪುರದ ಪುರಸಭೆ ಪೌರ ಕಾರ್ಮಿಕರು ದೀಪ ಬೆಳಗಿಸಿ ಅಗಲಿದ ಚೇತನಕ್ಕೆ ನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ವಕೀಲರಾದ ವಿಕಾಸ್ ಹೆಗ್ಡೆ,ಮಾಜಿ ಪುರಸಭಾ ಸದಸ್ಯ ಪ್ರಕಾಶ್ ಖಾರ್ವಿ, ಪುರಸಭೆ ಪೌರ ಕಾರ್ಮಿಕರ ಮೇಲ್ವಿಚಾರಕ ನಾಗರಾಜ್, ಹರೀಶ್ ಹಂಗಳೂರು, ದಿನೇಶ್ ಪೂಜಾರಿ, ಅರುಣ್, ರಾಘವೇಂದ್ರ ದೇವಾಡಿಗ, ರಾಮಚಂದ್ರ ಮೇಸ್ತ, ಶರತ್ ಖಾರ್ವಿ, ನಾಗರಾಜ್ ಮೊಗವೀರ, ಮಾಣಿ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts