ಕುಂದಾಪುರ :ಫೆ.21ರಂದು ಕುಂದಾಪುರ ಫ್ರೆಂಡ್ಸ್ ಸರ್ಕಲ್ ಇದರ 35ನೇ ವಾರ್ಷಿಕೋತ್ಸವದ ಸಮಾರಂಭ

0
92

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಇಲ್ಲಿನ ಮೀನು ಮಾರ್ಕೆಟ್ ರಸ್ತೆ ಫ್ರೆಂಡ್ಸ್ ಸರ್ಕಲ್ (ರಿ).,ಭಾರತ ಸಾಧನಾ ಸಂಘ ಸಿರಿ ಹಾಗೂ ಕರ್ನಾಟಕ ಸಂಘ ರತ್ನ ಗೌರವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯ 35 ನೇ ವಾರ್ಷಿಕೋತ್ಸವದ ಸಮಾರಂಭವು ಮೀನು ಮಾರ್ಕೆಟ್ ರಸ್ತೆಯ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನ ಬಳಿಯ ಬಯಲು ರಂಗ ಮಂಟಪದಲ್ಲಿ ಫೆ.21 ರಂದು ಜರುಗಲಿದ್ದು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿಯ ಉಪಾಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ ನೆರವೇರಿಸಲಿದ್ದು, ಸಭಾ ಅಧ್ಯಕ್ಷತೆಯನ್ನು ಕುಂದಾಪುರ ವಿಧಾನಸಭಾ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ವಹಿಸಿಸಲಿದ್ದಾರೆ. ಕಾರ್ಯಕ್ರಮಕ್ಕೆ ಶುಭಾಶಂಸನೆಯನ್ನು ಕುಂದಾಪುರ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ತಜ್ಞರು ಡಾ. ನಾಗೇಶ್ ಮಾಡಲಿದ್ದಾರೆ. ಅತಿಥಿಗಳಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಜೇಶ್ ಕಾರಂತ್, ಜನನಿ ಕೇಕ್ ಪ್ಯಾಲೇಸ್ ನ ದಿನಕರ್ ಶೆಟ್ಟಿ, ಕುಂದಾಪುರ ಉದಯ ಜ್ಯುವೆಲ್ಲರ್ಸ್ ಅಕ್ಷಯ ಶೇಟ್ ಭಾಗವಹಿಸಲಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಸಾದನೆಗೈದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕೋಡಿ ಗಂಗಾಧರ್ ಪೂಜಾರಿ ಇವರಿಗೆ ಸನ್ಮಾನ, ಮನೋರಂಜನಾ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯರಿಂದ ಗಾನ ಲಹರಿ ಹಳೆಯ ಆಯ್ದ ಸುಮಧುರ ಕರೋಕೆ ಚಲನಚಿತ್ರ ಗೀತೆ ಮತ್ತು ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಓಂಕಾರ್ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ನಾಟಕ : ಕಥೆ ಈಗ ಶುರು… ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Click Here

LEAVE A REPLY

Please enter your comment!
Please enter your name here