ಕಂಡ್ಲೂರು :ರಾಜ್ಯ ಬಜೆಟ್‍ನಲ್ಲಿ ಕರಾವಳಿಗರ ನಿರ್ಲಕ್ಷ್ಯ – ರಾಜ್ಯ ಸರ್ಕಾರದ ವಿರುದ್ಧ ಕಾವ್ರಾಡಿ ಪಂಚಾಯತ್ ಎದುರು ಬಿಜೆಪಿ ಪ್ರತಿಭಟನೆ

0
368

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ : ರಾಜ್ಯ ಬಜೆಟ್‍ನಲ್ಲಿ ಕರಾವಳಿಗರ ನಿರ್ಲಕ್ಷ್ಯ ಮತ್ತು ಕರಾವಳಿ ಜಿಲ್ಲೆಗಳ ಯಾವುದೇ ಯೋಜನೆಗೆ ಅನುದಾನ ನೀಡದೆ ಮಲತಾಯಿ ಧೋರಣೆ ಮಾಡುತ್ತಿರುವ ಕರ್ನಾಟಕದ ಜನವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಮತ್ತು ಗ್ರಾಮೀಣ ಭಾಗದ ರೈತರು, ಜನಸಾಮಾನ್ಯರು ಎದರಿಸುತ್ತಿರುವ ವಿವಿಧ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಬೈಂದೂರು ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ಎದುರು ಏಕಕಾಲದಲ್ಲಿ ಪ್ರತಿಭಟನೆ ಗುರುವಾರ ನಡೆಯಿತು.
ಇಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ಜನರು ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಹಾಗೂ ಜನ ಸಾಮಾನ್ಯರ ವಿವಿಧ ಅಭಿವೃದ್ಧಿ ಬೇಡಿಕೆಗಳನ್ನು ಬಜೆಟ್‍ನಲ್ಲಿ ಸಹ ಈಡೇರಿಸಲು ಸರಕಾರ ವಿಫಲವಾಗಿದೆ. ಆ ಹಿನ್ನಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದ ಹಾಗೂ ಜಿಲ್ಲೆಯ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಜನರ ಅಭಿವೃದ್ಧಿ ಬೇಡಿಕೆ ಈಡೇರಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
ಗ್ರಾಮೀಣ ಆಶ್ರಯ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಮಾಡಬೇಕು, ಮತ್ಸಾಶ್ರಯ ವಸತಿ ಯೋಜನೆಯಡಿ ಮೀನುಗಾರರಿಗೆ ವಸತಿ ನೀಡಬೇಕು, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಹಾಕಿರುವ ಅರ್ಹ ಎಲ್ಲರಿಗೂ ಕಾರ್ಡ್ ನೀಡಬೇಕು, ಹದಗೆಟ್ಟ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡಬೇಕು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು ಅನುದಾನ ನೀಡಬೇಕು, ವಿವಿಧ ಹಿಂದುಳಿದ ವರ್ಗಗಳ ಹಾಗೂ ಪ. ಜಾತಿ ಮತ್ತು ಪ.ಪಂಗಡಗಳ ಸಮುದಾಯ ಭವನ ನಿರ್ಮಾಣ /ಅಭಿವೃದ್ಧಿಗೆ ಅನುದಾನ ಒದಗಿಸಬೇಕು, ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಒದಗಿಸಬೇಕು, ರೈತರು ಪಡೆಯುತ್ತಿರುವ ಕೃಷಿ ಸಾಲವನ್ನು ಪ್ರಸ್ತುತ ಜಿಪಿಎಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಮಾಡಿಸಲು ಕಡ್ಡಾಯಗೊಳಿಸುವುದನ್ನು ಕೈಬಿಡಬೇಕು ಎಂದು ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

Click Here

LEAVE A REPLY

Please enter your comment!
Please enter your name here