ಬಸ್ರೂರು‌ ಮೂಡ್ಕೇರಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ‌ ನಾಲ್ಕು ಶಾಸನ ಪತ್ತೆ

0
142

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬಸ್ರೂರು ಪ್ರಾಚೀನ‌ ದೇವಸ್ಥಾನವೆಂದು‌ ಕರೆಯಲ್ಪಡುವ ಮೂಡ್ಕೇರಿ ಭಾಗದ ಶ್ರೀ ಆದಿನಾಥೇಶ್ವರ ದೇವಸ್ಥಾನ ಇತಿಹಾಸದ ಪುಸ್ತಕದಲ್ಲಿ ದಾಖಲಾಗಿರುವ ದೇವಸ್ಥಾನವಾಗಿದೆ. ಇಲ್ಲಿಯ ಈ ಹಿಂದೆ ಪ್ರಕಟಗೊಂಡಿರುವ ಒಂದು ಶಾಸನದ ಮಾಹಿತಿ

ಶ್ರೀ ಆದಿನಾಥೇಶ್ವರ ಪ್ರಾಕಾರದ ಒಳಗಡೆ ಬಾವಿಕಟ್ಟೆ ನೆಲಕ್ಕೆ ಹಾಸಿದ ಶಾಸನ ಉಲ್ಲೇಖ

ವಿಜಯನಗರ ವಂಶದ ರಾಜ ವೀರಪ್ರತಾಪ ದೇವರಾಯರ
ಕನ್ನಡ ಲಿಪಿಯಂತೆ ಶಕವರುಷ ೧೩೫೩ ಸಾಧಾರಣ‌ ಸಂ| ಸಿಂಹ ಮಾಸ (ದ್ವಿ ಬು) ಅಂದರೆ ಕ್ರಿ.ಶ ೧೪೩೦ ಜುಲೈ(೧೫೯೫) ೩೧ ಸೋಮವಾರದಂದು ಹಾಕಿಸಿದ ಶಾಸನ ಸರಿ ಸುಮಾರು ೪೩೧ ವರ್ಷದ ಹಳೆ ಶಾಸನದಲ್ಲಿ ಶ್ರೀ ದೇವಾಲಯದ ಉಲ್ಲೇಖವಿದೆ.

ವಿಷಯ: ವಿಜಯನಗರ ಚಕ್ರವರ್ತಿ ವೀರ ಪ್ರತಾಪ ದೇವರಾಯ ಮಹಾರಾಯರ ಕಾಲದಲ್ಲಿ ಬಾರಕೂರು ರಾಜ್ಯದ ಮಹಾಪ್ರಧಾನ ಚಂಡರಸ ಒಡೆಯನು ನೋಡಿಕೊಳ್ಳುತ್ತಿರುವಾಗ ಬಸರೂರ ಮೂಡುಕೇರಿಯ ಹಲರು ಸೆಟ್ಟಿಕಾರರು ಮತ್ತು ಅಳಿಯ ಬಳಿಯ‌ ಸೆಟ್ಟಿಕಾರರು ಶ್ರೀ ಆದಿನಾಥೇಶ್ವರ ದೇವಸ್ವಕ್ಕಾಗಿ ಮಾಡಿದ ಭೂದಾನವನ್ನು ಶಾಸನ ತಿಳಿಸುತ್ತದೆ.
ಇಂತಹ ಅನೇಕ‌ ಇತಿಹಾಸದ ದಾಖಲೆ ಶ್ರೀ ಆದಿನಾಥೇಶ್ವರ ದೇವಾಲಯವನ್ನು‌‌‌ ಪರಿಚಯಿಸುವಂತಿದೆ.

ಅಪ್ರಕಟಿತ ಶಾಸನ ಮಾಹಿತಿ
ಇತಿಹಾಸ ಪ್ರಸಿದ್ದ ಬಸ್ರೂರಿನ ಪ್ರಾಚೀನ ದೇವಸ್ಥಾನವಾಗಿರುವ ಮೂಡ್ಕೇರಿ ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ನಾಲ್ಕು ಶಾಸನ ಅಪ್ರಕಟಿತ ಪತ್ತೆಯಾಗಿದೆ.
ಶಾಸನ ವರದಿಯಂತೆ

೧. ಶಿವನ ತ್ರಿಪುಂಡ್ರರ ಶಾಸನ (ಹಣೆಯ ಮೇಲಿರುವ ಮೂರು ಅಡ್ಡ ಪಟ್ಟಿಗಳು)

ಪಠ್ಯ: ಪಟಿ ೧ ರ ತುಕ ೧೯||೦

ಶಾಸನದ ಮಾಹಿತಿ
ಇದು ಈ ಪಟ್ಟಿಯ ತೂಕಕ್ಕೆ ಸಂಬಂಧಿಸಿದ್ದಾಗಿದೆ. ಈ ಪಟ್ಟಿ ಶಿವಲಿಂಗ ತ್ರಿಪುಂಡ್ರ ದ ಹಿಂಭಾಗದಲ್ಲಿ‌ ಪತ್ತೆಯಾಗಿದೆ.

೨. ದೇವರ ಪ್ರಭಾವಳಿಯಲ್ಲಿ ಶಾಸನ

Click Here

ಪಠ್ಯ : ನಗ ೩ಕೆ ಅಶಲು ||೬|೦

ಶಾಸನದ ಮಾಹಿತಿ
ಕಂಚಿನ ಪ್ರಭಾವಳಿಯ ನಗ ಮೂರು ಹಾಗೂ ಅದರ ಅಸಲು ೬ ರೂ ಬಳಕೆಯಾಗಿರುವುದನ್ನು ಇಲ್ಲಿ‌ ತಿಳಿಸಲಾಗಿದೆ.

೩. ನಾಗರ ಹೆಡೆಯ ಹಿಂಭಾಗ ಶಾಸನ

ಪಠ್ಯ :
೧.ಕಂಚಿನ ತೆಲೆ ಬೆಳ್ಳಿಯ ರುದ್ರಕ್ಷಿ ಶಿ
೨.ರ ನಾಗರ ಹೆಡೆ ೧ ರ ಕಾಲ ೮ ೧೯೨೩ ೩

ಶಾಸನದ ಮಾಹಿತಿ
ಶ್ರೀ ಆದಿನಾಥ ದೇವರ ಹಿಂಭಾಗ ನಾಗರ ಹೆಡೆಯ ಹಿಂಭಾಗದಲ್ಲಿ ಶಾಸನ ಪತ್ತೆಯಾಗಿದ್ದು ಕಂಚು‌, ಬೆಳ್ಳಿ‌, ರುದ್ರಾಕ್ಷಿ, ಉಲ್ಲೇಖದೊಂದಿಗೆ‌ ಕಾಲಮಾನವನ್ನು ಉಲ್ಲೇಖಿಸಲಾಗಿದೆ.

೪. ಕಂಚಿನ ಧಾರಾಪಾತ್ರೆಯಲ್ಲಿ ಶಾಸನ

ಲಪಠ್ಯ : ಶ್ರೀ ಅದಿನಾಥ ದೇವರಿಗೆ |ಬ| ಪರಮೆಸ್ವಾರೈಯನ ಭಕ್ತಿ ವಸುದರೆ ಬಟಲು ೧ ತುಕ ನೆ ೨

ಶಾಸನದ ಮಾಹಿತಿ
ಶ್ರೀ ಆದಿನಾಥ ದೇವರಿಗೆ ಪಾತ್ರೆ ದಾನ ನೀಡಿದ ಉಲ್ಲೇಖಿಸಲಾಗಿದೆ.

ಈ ಶಾಸನವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡರೆಡ್ಡಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾಗಿರುವ ಎಸ್. ವೈ. ನಿರ್ಮಲಾ ಬಸವರಾಜ್ ಎನ್ ಅಕ್ಕಿ ಧಾರವಾಡ ಇವರ ಮಾರ್ಗದರ್ಶನದಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು, ಬಸ್ರೂರು ಅಶೋಕ ಬಿ.ಕೆ. ಇವರ ಸಹಕಾರದಲ್ಲಿ ಪತ್ತೆ ಹಚ್ಚಲಾಗಿದೆ. ಇವರೊಂದಿಗೆ ದೇವಸ್ಥಾನದ ಅರ್ಚಕರಾದ ಅರುಣ್ ಭಟ್ ಮೂಡ್ಕೇರಿ, ಶ್ರವಣ್ ಭಟ್, ಕೃಷ್ಣ ಕಳಂಜಿ, ಹರ್ಷ ಮೂಡ್ಕೇರಿ ಹಾಗೂ ಪ್ರಶಾಂತ ಮಡಿವಾಳ ಅಧ್ಯಯನಕ್ಕೆ ಸಹಕರಿಸಿದ್ದಾರೆ‌.

“ಕರಾವಳಿಯ ಇತಿಹಾಸದಲ್ಲಿ ರಾಜರು ಮತ್ತು ರಾಣಿಯರನ್ನು ಒಳಗೊಂಡಂತೆ ಪ್ರಮುಖರು ದೇವರುಗಳಿಗೆ ಆಭರಣ, ಹಾರ ಮತ್ತು ಪೂಜಾ ಸಾಮಗ್ರಿಗಳನ್ನು ನೀಡಿರುವ ಬಗ್ಗೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಹಾಗೆಯೇ ಸಾಕಷ್ಟು ಸರಿ ನೀಡಿದ ವಸ್ತುಗಳ ಒಳಭಾಗದಲ್ಲಿ ಒಂದು ಸಾಲಿನ ಅಥವಾ ಪಟ್ಟಿ ಶಾಸನವನ್ನು ಬರೆದಿರುವುದು ಕಂಡುಬರುತ್ತದೆ. ಇದೆ ಮಾದರಿಯಲ್ಲಿ ಬಸ್ರೂರಿನ ಶ್ರೀ ಆದಿನಾಧೇಶ್ವರ ದೇವಸ್ಥಾನದಲ್ಲಿ ಶ್ರೀ ಆದಿನಾಧೇಶ್ವರ ಸ್ವಾಮಿಯ ತ್ರಿಪುಂಡ್ರ, ಧಾರಾಪಾತ್ರೆ, ಪ್ರಭಾವಳಿ ಮತ್ತು ನಾಗರಹೆಡೆಯ ಹಿಂಭಾಗದಲ್ಲಿ ಅಪ್ರಕಟಿತ ಪಟ್ಟಿ ಶಾಸನವು ಕಂಡುಬಂದಿದೆ”. ಅಜಯ ಕುಮಾರ್ ಶರ್ಮಾ ಶಿವಮೊಗ್ಗ – ಭಾರತೀಯ ಇತಿಹಾಸ ಸಂಕಲನ ಸಮಿತಿ ರಾಜ್ಯ ವಿದ್ವತ್ ಪ್ರಮುಖ

Click Here

LEAVE A REPLY

Please enter your comment!
Please enter your name here