ಕೋಟೇಶ್ವರ :ಪ್ರಿಮ್ ರೋಸ್ ಫೌಂಡೇಶನ್ ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ

0
193

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಪ್ರಿಮ್ ರೋಸ್ ಫೌಂಡೇಶನ್ ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ: ಆರತಿ ಎತ್ತಿ ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕರು

ಚಿರಂತನ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ ಮುನ್ನಡೆಸುತ್ತಿರುವ ಪ್ರಿಮ್‌ರೋಸ್ ಫೌಂಡೇಶನ್ ಶಾಲೆಯಲ್ಲಿ ಇಂದು (ಜೂನ್ 8, 2026) ಹೊಸ ಶೈಕ್ಷಣಿಕ ವರ್ಷದ ಮೊದಲ ದಿನವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.

ಶಾಲೆಗೆ ಬಂದ ಮಕ್ಕಳು ಹಾಗೂ ಅವರನ್ನು ಬಿಡಲು ಬಂದ ಪೋಷಕರು ಅತ್ಯಂತ ಸಂತಸದಿಂದ ಶಾಲಾ ಆವರಣದೊಳಗೆ ಹೆಜ್ಜೆ ಇಟ್ಟರು. ಮಕ್ಕಳನ್ನು ಸ್ವಾಗತಿಸಲು ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ಚಿಂತನಾ ರಾಜೇಶ್, ಅಕಾಡೆಮಿಕ್ ಲೀಡ್ ವಿಲ್ಮಾ ಡಿಸಿಲ್ವಾ ಹಾಗೂ ಪ್ರಾಂಶುಪಾಲೆ ವಿನುತಾ ಬಿ. ಶೆಟ್ಟಿ ಅವರು ಉಪಸ್ಥಿತರಿದ್ದು, ಮಕ್ಕಳಿಗೆ ಮತ್ತು ಪೋಷಕರಿಗೆ ಆತ್ಮೀಯ ಸ್ವಾಗತ ಕೋರಿ, ಹೊಸ ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.

ಶಾಲೆಯ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿ, ಮೆಂಟರ್‌ಗಳಾದ ಮಂಜುಳಾ ಮತ್ತು ರೇಷ್ಮಾ ಅವರು ಶಾಲೆಯ ಹೊಸ್ತಿಲು ತುಳಿದ ಪುಟಾಣಿ ಮಕ್ಕಳಿಗೆ ಸಾಂಪ್ರದಾಯಿಕವಾಗಿ ಆರತಿ ಎತ್ತಿ, ತಿಲಕವನ್ನಿಟ್ಟು ಪ್ರೀತಿಯಿಂದ ಬರಮಾಡಿಕೊಂಡರು.

Click Here

LEAVE A REPLY

Please enter your comment!
Please enter your name here