ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಚಿರಂತನ ಎಜುಕೇಷನಲ್ ಇನ್ ಸ್ಟಿಟ್ಯೂಷನ್ಸ್ (ರಿ) ಸಂಸ್ಥೆಯ ಆಡಳಿತಕ್ಕೊಳಪಟ್ಟ ಪ್ರಿಮ್ ರೋಸ್ ಫೌಂಡೇಶನ್ ಶಾಲೆಯಲ್ಲಿ ಜೂನ್ 6, 2026ರಂದು ಶಾಲಾ ವರ್ಷದ ಪ್ರಥಮ ಪೋಷಕ- ಶಿಕ್ಷಕರ ಸಭೆ ಜರುಗಿತು.
ಪ್ರಾಂಶುಪಾಲೆ ವಿನುತಾ ಬಿ. ಶೆಟ್ಟಿ ಅವರು ಪೋಷಕರನ್ನು ಸ್ವಾಗತಿಸಿ, ಶಾಲೆಯ ಹಿನ್ನೆಲೆ, ಉದ್ದೇಶ ಹಾಗೂ ಶೈಕ್ಷಣಿಕ ದೃಷ್ಟಿಕೋನದ ಪರಿಚಯ ನೀಡಿದರು. ಶೈಕ್ಷಣಿಕ ಮುಖ್ಯಸ್ಥೆ ವಿಲ್ಮಾ ಡಿಸಿಲ್ವಾ ಅವರು ಪ್ರಸಕ್ತ ಸಾಲಿನ ವಾರ್ಷಿಕ ಶೈಕ್ಷಣಿಕ ಯೋಜನೆ ಮತ್ತು ಚಟುವಟಿಕೆಗಳ ರೂಪುರೇಷೆಗಳನ್ನು ಮಂಡಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಡಾ. ಚಿಂತನಾ ರಾಜೇಶ್ ಅವರು ‘ಪೋಷಕತ್ವ ಮತ್ತು ಮಕ್ಕಳ ಪಾಲನೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಇಂದಿನ ದಿನಗಳಲ್ಲಿ ಮಕ್ಕಳನ್ನು ಮಾನಸಿಕ ಹಾಗೂ ಸಾಮಾಜಿಕವಾಗಿ ಹೇಗೆ ಸದೃಢರಾಗಿ ಬೆಳೆಸಬೇಕು ಎನ್ನುವ ಕುರಿತು ಪೋಷಕರಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು.
ಮಂಜುಳಾ ಅವರು ಪ್ರಾರ್ಥಿಸಿ, ನಿರೂಪಿಸಿದರು. ಪ್ರಶಾಂತ್ ಹಾಗೂ ರೇಷ್ಮಾ ಸಹಕರಿಸಿದರು.









