ಮೆಸ್ಕಾಂನ ವಿದ್ಯುತ್ ಜಾಲವನ್ನು ಖಾಸಗಿಕರಣ ಮಾಡುವ ವಿರುದ್ಧ ಪ್ರತಿಭಟನೆ

0
99

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮೆಸ್ಕಾಂ ಕಂಪನಿಯ ಉಡುಪಿ, ಮಂಗಳೂರು ಹಾಗೂ ಶಿವಮೊಗ್ಗ ವಲಯದಲ್ಲಿರುವ ಹಲವಾರು ವಿದ್ಯುತ್ ಜಾಲಗಳನ್ನು ಟಾಟಾ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ ನವರು ನಡೆಸುವುದಾಗಿ ಕೆಇಆರ್‍ಸಿಗೆ ಅರ್ಜಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಜಾಲಗಳು ಖಾಸಗಿಕರಣದತ್ತ ತಿರುಗುವ ಸಂಶಯ ಎದುರಾಗಿದೆ. ಈ ಖಾಸಗಿಕರಣದ ವಿರುದ್ಧ ಕುಂದಾಪುರ ವಿಭಾಗದ ಕೋಟ ಉಪವಿಭಾಗದಲ್ಲಿ ಕ.ವಿ.ಪ್ರ.ನಿ ನೌಕರರ ಸಂಘ, ಕೋಟ ಉಪವಿಭಾಗ ಕೋಟ ಶಾಖಾಕಛೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಂಪನಿಯ 50ಕ್ಕೂ ಹೆಚ್ಚು ನೌಕರರು ಮತ್ತು ಗುತ್ತಿಗೆದಾರರು, ಗ್ರಾಹಕರು ಸೇರಿ ಖಾಸಗೀಕರಣದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದರು.

ಪ್ರತಿಭಟನೆಯಲ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಕಂಪನಿಗೆ ಆಗುವ ನಷ್ಟಗಳನ್ನು ತಿಳಿಸಿದರು ಜೊತೆಗೆ ಇದರ ವಿರುದ್ಧ ಮುಂದಿನ ಹೋರಾಟಕ್ಕೆ ಅಣಿಯಾಗುವಂತೆ ನೌಕರರಿಗೆ ಕರೆಕೊಟ್ಟರು.

ಈ ವೇಳೆ ಕೋಟ ಸಹಾಯಕ ಇಂಜಿನಿಯರ್ ಪ್ರಶಾಂತ ಶೆಟ್ಟಿ,ಶಿರಿಯಾರ ಶಾಖಾಧಿಕಾರಿಗಳಾದ ವೈಭವ ಶೆಟ್ಟಿ,ಸಾಸ್ತಾನ ಶಾಖಾಧಿಕಾರಿ ಮಹೇಶ ಕೆ. ಮಾತಾನಾಡಿ ಮುಂದಿನ ದಿನಗಳಲ್ಲಿ ಖಾಸಗೀಕರಣ ಅದರೆ ಉಗ್ರ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಚಂದ್ರಶೇಖರ ಕೋಟ, ಶಿರಿಯಾರ ಮೇಲ್ವಿಚಾರಕರಾದ ಉಮೇಶ,ಸೌಕರರ ಸಂಘದ ಸದಸ್ಯರು, ಗುತ್ತಿಗೆದಾರರು,ನೌಕರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here