ಶ್ರೀ ಕೃಷ್ಣ ಪ್ರಸಾದ್ ಸಮೂಹ ಸಂಸ್ಥೆಗಳು ಮತ್ತು ಶ್ರೀಕೃಷ್ಣ ಪ್ರಸಾದ್ ಫೌಂಡೇಶನ್ ವಂಡಾರು ಬ್ರಹ್ಮಾವರ ಸಮಾಜ ಸೇವೆ ಮತ್ತು ಉದ್ಯಮೋನ್ಮುಖತೆ, ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಹಾಗೂ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್‍ನ ಸಾಧನೆ

0
338

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಜೂ.14: ಸೇವಾ ಸಂಕಲ್ಪ 2012ರಲ್ಲಿ ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಒಂದು ಸಣ್ಣ ಕನಸಾಗಿ ಆರಂಭವಾದ ಈ ಸಂಸ್ಥೆಯು, ಗುಣಮಟ್ಟ, ವಿಶ್ವಾಸ ಮತ್ತು ಬದ್ಧತೆಯ ಮೂಲಕ ಇಂದು ಭಾರತದ ಪ್ರಮುಖ ಗೋಡಂಬಿ ಸಂಸ್ಕರಣಾ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಅಡಿಯಲ್ಲಿ ಅಭಿಮನ್ಯು ಇಂಪೋರ್ಟ್ ಅಂಡ್ ಎಕ್ಸ್‍ಪೋರ್ಟ್, ಶ್ರೀ ಕೃಷ್ಣಾನುಗ್ರಹ ಅಗ್ರೋ ಪ್ರೈವೇಟ್ ಲಿಮಿಟೆಡ್, ಶ್ರೀ ಕೃಷ್ಣಪ್ರಸಾದ್ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೀ ಕೃಷ್ಣಪ್ರಸಾದ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಇಂಡಸ್ಟ್ರಿ ಸೇರಿದಂತೆ ವಿವಿಧ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಕುಟುಂಬಗಳಿಗೆ ಉದ್ಯೋಗಾವಕಾಶ ನೀಡುವ ಮೂಲಕ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ.

Click Here

2024ರಲ್ಲಿ ಸ್ಥಾಪಿತವಾದ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್, ಶಿಕ್ಷಣ, ಆರೋಗ್ಯ, ಕಲೆ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಏಕಪೋಷಕ ಕುಟುಂಬಗಳ ಮಕ್ಕಳಿಗೆ ಶಿಕ್ಷಣದ ಬೆಂಬಲ ನೀಡುವ ಉದ್ದೇಶದಿಂದ, ಪ್ರತಿವರ್ಷ ಕನಿಷ್ಠ 10 ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವಿದ್ಯಾರ್ಥಿವೇತನ, ಆರೋಗ್ಯ ಸಹಾಯ, ಕಲಾ ಪ್ರತಿಭೆಗಳ ಪ್ರೋತ್ಸಾಹ ಮತ್ತು ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಫೌಂಡೇಶನ್ ಅನೇಕರ ಬದುಕಿಗೆ ಆಶಾಕಿರಣವಾಗಿದೆ.
ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂಬ ತತ್ವವನ್ನು ಜೀವನ ಮೌಲ್ಯವಾಗಿ ಅಳವಡಿಸಿಕೊಂಡಿರುವ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‍ನ ಅಧ್ಯಕ್ಷರಾದ ಸಂಪತ್ ಶೆಟ್ಟಿ ಅವರ ನೇತೃತ್ವದಲ್ಲಿ, ಸಂಸ್ಥೆಯು ಉದ್ಯಮ ಯಶಸ್ಸಿನೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಸೇವಾ ಸಂಕಲ್ಪ:
ಸೇವ ಸಂಕಲ್ಪ ಸಂಸ್ಥೆಯ ಮಹತ್ವಕಾಂಕ್ಷಿ ಕಾರ್ಯಕ್ರಮ: ಈ ವರ್ಷದ “ಸಂಕಲ್ಪ” ಕಾರ್ಯಕ್ರಮ ಜೂನ್ 14 ಆದಿತ್ಯವಾರ ಬೆಳಿಗ್ಗೆ 9.30ಕ್ಕೆ ಕೋಟೇಶ್ವರದ ಯುವ ಮೆರಿಡಿಯನ್ ನಲ್ಲಿ ನಡೆಯಲಿದೆ. ಏಕಪೆÇೀಷಕ ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು, ಸಂಸ್ಥೆಯ ಉದ್ಯೋಗಿಗಳ ಮಕ್ಕಳು, ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಒಟ್ಟು ಅಂದಾಜು ರೂ.9306562.00 ಲಕ್ಷ ಮೌಲ್ಯದ ನೆರವು ವಿತರಿಸಲು ಸಂಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಲೋಕಸಭಾ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿ, ಮ್ಯಾನೇಜಿಂಗ್ ಡೈರೆಕ್ಟರ್ ಆಫ್ ಯುವಮೇರಿಡಿಯನ್ ಬಿ ಉದಯ್ ಕುಮಾರ್ ಶೆಟ್ಟಿ, ಮ್ಯಾನೇಜಿಂಗ್ ಡೈರೆಕ್ಟರ್ ಆಫ್ ಯುವಮೇರಿಡಿಯನ್ ಬಿ ವಿನಯ್ ಕುಮಾರ್ ಶೆಟ್ಟಿ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಮೇಶ ಶೆಟ್ಟಿಕೊತ್ತಾಡಿ , ಹಿರಿಯ ಪತ್ರಕರ್ತರುಹಾಗೂ ಜನಸೇವಾ ಟ್ರಸ್ಟ್ ನ ಪ್ರವರ್ತಕರಾದ ವಸಂತ ಗಿಳಿಯಾರ, ದಿನೇಶ್ ಶೆಟ್ಟಿ ಮೊಳಹಳ್ಳಿ ಜಯರತ್ನ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರು, ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರಿ ಆಡಳಿತ ನಿರ್ದೇಶಕರಾದ ಸಂಪತ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ತರಬೇತಿ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯರಾದ ರಾಜೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಸಂಕಲ್ಪ 2026-ಸಿಬ್ಬಂದಿ ಕಲ್ಯಾಣ ಮತ್ತು ಸಾಮಾಜಿಕ ನೆರವು:
ಸಿಬ್ಬಂದಿಯ ಕೌಶಲ್ಯ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಉದ್ದೇಶಿಸಿ ಆರಂಭವಾದ “ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮ -ಸಂಕಲ್ಪ”ದಡಿಯಲ್ಲಿ, ಸಂಸ್ಥೆಯ ಉದ್ಯೋಗಿಗಳಿಗೆ ನುರಿತ ತರಬೇತುದಾರರ ಮೂಲಕ ವೃತ್ತಿಪರ ಮತ್ತು ವೈಯಕ್ತಿಕ ಬೆಳವಣಿಗೆಗೆ ಅವಕಾಶ ಕಲ್ಪಿಸಲಾಗದೆ.
ಶ್ರೀ ರಾಮ ವಿದ್ಯಾಕೇಂದ್ರ ಟ್ರಸ್ಟ್ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಟ್ರಸ್ಟ್ ಕಲ್ಲಡ್ಕ ಇಲ್ಲಿನ ಕೆಲವು ಮಕ್ಕಳ ಸಮಗ್ರ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲಾಗಿದೆ. ಕುಂದಾಪುರದ ಬಿ ಬಿ ಹೆಗ್ಡೆ ಕಾಲೇಜಿಗೆ 50 ಕಂಪ್ಯೂಟರ್ ವಿತರಣೆ ಕೊಡುಗೆ, ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಸ್ಥಳೀಯ 3 ಸರಕಾರಿ ಶಾಲೆಗೆ ತಲಾ 3 ಕಂಪ್ಯೂಟರ್ ವಿತರಣೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಾನುವಾರಕಟ್ಟೆ -3, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ-3, ಸರಕಾರಿ ಹಿರಿಯ ಪ್ರಾಥಮಿಕ ಬೋರ್ಡ್ ಶಾಲೆ ಬ್ರಹ್ಮಾವರ-3, ಅದುರೋ ಫೌಂಡೇಶನ್ ಬಡಕುಟುಂಬದ ವಿದ್ಯಾಭ್ಯಾಸಕ್ಕೆ & ವೈದ್ಯಕೀಯ ಕ್ಯಾಂಪ್ ಗೆ ಸಹಾಯಧನ, ಶಿಕ್ಷಣ ದತ್ತು ಸ್ವೀಕಾರ 2025-2026 ಬಡಕುಟುಂಬದಿಂದ ಬಂದ 5 ವಿದ್ಯಾರ್ಥಿಗಳ 2026-2027ನೇ ಸಾಲಿನ ಕಾಲೇಜು ಶುಲ್ಕವನ್ನು ಸಂಸ್ಥೆಯಿಂದ ಭರಿಸಲಾಗಿದೆ. ಶಿಕ್ಷಣ ದತ್ತು ಸ್ವೀಕಾರ 2026-2027 ಬಡಕುಟುಂಬದಿಂದ ಬಂದ 14 ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಸಂಸ್ಥೆಯಿಂದ ಭರಿಸಲಾಗಿದೆ.
ವಿದ್ಯಾರ್ಥಿ ವೇತನ ವಿತರಣೆ: 2026-2027 ಸಂಸ್ಥೆಯ ಹಾಗೂ ಊರಿನ ಏಕಾಪೆÇೀಷಕ 19 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ವಿದ್ಯಾರ್ಥಿವೇತನನ ವಿತರಣೆ, ದೀನಬಂಧು ಅನುಧಾನಿತ ಹಿರಿಯ ಪ್ರಾಥಮಿಕ ಶಾಲೆ ವಂಡಾರು ಮತ್ತು ಮಹಾತ್ಮಾ ಗಾಂಧಿ ಪ್ರೌಢ ಶಾಲೆ ಸೈಬ್ರಕಟ್ಟೆ ಅತಿಥಿ ಶಿಕ್ಷಕರ ವಾರ್ಷಿಕ ವೇತನ ನೀಡಲಾಗುತ್ತಿದೆ. ಪ್ರೇಮ ನೀರ್ಜೆಡ್ಡು ವೈದ್ಯಕೀಯ ವೆಚ್ಚದ ಸಹಾಯ ಮಾಡಲಾಗಿದೆ. ಕೋಟ ಆಸರೆ ಕೊರಗ ಸಮುದಾಯ ವಸತಿ ಗ್ರಹ ನಿರ್ಮಾಣ ಆಸರೆ ಯೋಜನೆಯಡಿ ಕೊರಗ ಸಮುದಾಯ ವಸತಿ ಗ್ರಹ ನಿರ್ಮಾಣಕ್ಕೆ ಸಹಾಯಧನ ನೀಡಲಾಗಿದೆ. ಬ್ರಹ್ಮಾವರ ಒಳಚರಂಡಿ ನಿರ್ಮಾಣ ಈಶ್ವರ ದೇವಾಲಯದ ಹತ್ತಿರ ಸುಸಜ್ಜಿತ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಸಾಲಿಕೇರೆ ಬಸ್ ನಿಲ್ದಾಣ ರಚನೆ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ಸುಸಜ್ಜಿತ ಸಾಲಿಕೇರೆ ಬಸ್ ನಿಲ್ದಾಣ ರಚನೆ. ಶಾಲಾ ಮಕ್ಕಳ ಪುಸ್ತಕ ಬ್ಯಾಗ್ ಕೊಡೆ ವಿತರಣೆ ಬ್ರಹ್ಮಾವರ ಸಮೀಪದ 3 2026-2027 ನೇ ಶಾಲಿನ ದ್ವಿತೀಯ ವರ್ಷದ ಶಾಲಾ ಶುಲ್ಕ ಶಾಲಾ ಮಕ್ಕಳ ಪುಸ್ತಕ ಬ್ಯಾಗ್ ವಿತರಣೆ ಮಾಡಲಾಗಿದೆ ಎಂದು ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಜನರಲ್ ಮ್ಯಾನೇಜರ್ ಸುಹಾಸನ ಶೆಟ್ಟಿ, ಸೇಲ್ಸ್ ಜನರಲ್ ಮ್ಯಾನೇಜರ್ ಶ್ರೀನಿವಾಸ್, ಸೇಲ್ಸ್ ಜನರಲ್ ಮ್ಯಾನೇಜರ್, ಎಚ್.ಆರ್. ಜನರಲ್ ಮ್ಯಾನೇಜರ್ ಚಂದ್ರಶೇಖರ್, ಎಚ್.ಆರ್ ಮ್ಯಾನೇಜರ್ ಶ್ರೀಮತಿ ವಿನಯ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Click Here

LEAVE A REPLY

Please enter your comment!
Please enter your name here