ತಾಪಮಾನಕ್ಕೆ ಮನುಕುಲವೇ ಕಾರಣ – ಡಾ.ಕೃಷ್ಣ ಕಾಂಚನ್

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪ್ರಸ್ತುತ ವಾತಾವರಣದ ವೈಪರೀತ್ಯ ಹೆಚ್ಚುತ್ತಿರುವ ತಾಪಮಾನಕ್ಕೆ ಮನುಕುಲವೇ ಕಾರಣವಾಗಿದೆ ಎಂದು ಕೋಟದ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಹೇಳಿದರು.
ಇಲ್ಲಿನ ಕೋಟದ ಸಹಕಾರಿ ವ್ಯವಸಾಯಕ ಸಂಘ, ಸಹಕಾರ ಇಲಾಖೆ ಉಡುಪಿ, ಜಿಲ್ಲಾ ಸಹಕಾರಿ ಯೂನಿಯನ್ ಸಂಯೋಜನೆಯೊಂದಿಗೆ ಸಹಕಾರಿ ಸಪ್ತಾಹದ ಅಂಗವಾಗಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಪೇತ್ರಿ ಅನ್ನಪೂರ್ಣ ನರ್ಸರಿ ಇವರ ಸಹಯೋಗದೊಂದಿಗೆ 308ನೇ ಭಾನುವಾರದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ ನೀ ನೋ ಎಂಬ ಉಷ್ಣ ಮಾರುತ ಇಡೀ ಜಗತ್ತಿಗೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಇದರಕ್ಕೆ ಕಾರಣ ಜಗತ್ತಿನಾದ್ಯಂತ ಹಸಿರಿಗೆ ಕೊಡಲಿ ಆಧುನಿಕ ತಂತ್ರಜ್ಞಾನಗಳ ಅವಲಂಬನೆ ಪ್ರಕೃತಿಯ ಮೇಲೆ ಬಾರಿ ಪರಿಣಾಮ ಬಿರುತ್ತಿದೆ. ಈ ದಿಸೆಯಲ್ಲಿ ಪ್ರತಿಯೊಂದು ಭಾಗದಲ್ಲೂ ಪರಿಸರ ಉಳಿಸಿ ಬೆಳೆಸುವ ಕಾರ್ಯ ನಡೆದರೆ ಪ್ರಸ್ತುತ ಹಾಗೂ ಮುಂದಿನ ತಲೆಮಾರಿ ಸಹಕಾರಿಯಾಗಲಿದೆ ಎಂದರಲ್ಲದೆ ಪಂಚವರ್ಣದ ಪ್ರಕೃತಿ ಕಾಳಜಿಯ ಕಾರ್ಯಕ್ರಮ ಇತರಿಗೆ ಪ್ರೇರಣೆಯಾಗಿದೆ ಎಂದರು.
ಸಹಕಾರಿ ಹಸಿರು ಹೆಜ್ಜೆ ಅಂಗವಾಗಿ ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಹಾಗೂ ಕೋಟ ಸಹಕಾರಿ ಸಂಘದ ವಠಾರದಲ್ಲಿ ಗಿಡ ನೆಡಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್ ಉದ್ಘಾಟಿಸಿದರು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್ ಇವರುಗಳನ್ನು ಸನ್ಮಾನಿಸಲಾಯಿತು.
ಸಾಲಿಗ್ರಾಮ ಹೆದ್ದಾರಿಯಲ್ಲಿ ಭಾಗಿಯಾದ ಗಣ್ಯರು
ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಿಡ ನಡುವ ಕಾರ್ಯಕ್ರಮದಲ್ಲಿ ಕೋಟ ಸಿ ಎ ಬ್ಯಾಂಕ್ ಸಿಇಒ ಶರತ್ ಕುಮಾರ್ ಶೆಟ್ಟಿ, ಪತ್ರಿಕಾ ವಿತರಕ ನಾಗೇಶ್ ಶೆಣೈ, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ, ಸಾಲಿಗ್ರಾಮ ದೇಗುಲದ ಟೃಸ್ಟಿ ತಾರಾನಾಥ ಹೊಳ್ಳ,ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ಚಂದ್ರ ಪೂಜಾರಿ, ಪಾಂಡೇಶ್ವರ ಕಳಿಬೈಲು ಕೊರಗಜ್ಜ ದೈವಸ್ಥಾನದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ ಭಾಗಿಯಾದರು.
ಕೋಟ ಸಹಕಾರಿ ವ್ಯವಸಾಯಕ ಸಂಘದ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ್ ಹಂದೆ, ನಿರ್ದೇಶಕರಾದ ವಸಂತಿ ಎ ಪೂಜಾರಿ, ಪ್ರೇಮ ಮೆಂಡನ್, ರಂಜಿತ್ ಬಾರಿಕೆರೆ, ಚಂದ್ರ ಪೂಜಾರಿ, ರವೀಂದ್ರ ಕಾಮತ್, ಶೇಖರ್ ಮರಕಾಲ,ಮಾಜಿ ಸಿಇಓ ಶೋಭಾ ಶೆಟ್ಟಿ, ಉಪಸ್ಥಿತರಿದ್ದರು.
ಸಂಘದ ಸಿಇಒ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪ್ರತಿಜ್ಞಾವಿಧಿ ಭೋದಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ವಂದಿಸಿದರು. ಕಾರ್ಯಕ್ರಮವನ್ನು ಸಿಬ್ಬಂದಿ ಮಂಜುನಾಥ ನಿರೂಪಿಸಿದರು.












