ಕೋಟದ ಪಂಚವರ್ಣ ಸಂಘಟನೆ ಕಛೇರಿ ಸ್ಥಳಾಂತರ

0
122

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟದ ಕ್ರಿಯಾಶೀಲ ಸಂಘಟನೆಯಾದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಕಛೇರಿಯನ್ನು ಕೋಟ ಶಿವರಾಮ ಕಾರಂತ ಹುಟ್ಟಿದ ಮನೆಯ ಕಟ್ಟಡಕ್ಕೆ ಭಾನುವಾರ ಸ್ಥಳಾಂತರಗೊಂಡಿತು.

Click Here

ಕಛೇರಿಯನ್ನು ಸಾಲಿಗ್ರಾಮ ಶ್ರೀಗುರುನರಸಿಂಹ ದೇಗುಲದ ಮಾಜಿ ಅಧ್ಯಕ್ಷ ಕೆ.ಅನಂತಪದ್ಮನಾಭ ಐತಾಳ್ ಉದ್ಘಾಟಿಸಿದರು.

ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ದೀಪ ಬೆಳಗಿಸಿ ಶುಭಹಾರೈಸಿದರು.

ಸಾಲಿಗ್ರಾಮ ದೇಗುಲದ ಟ್ರಸ್ಟಿ ಕೆ.ತಾರಾನಾಥ ಹೊಳ್ಳ, ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕುಂದರ್, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಸಕಡ್ ಫೌಂಡೇಶನ್ ಪ್ರವರ್ತಕ ಶ್ರೀಕಾಂತ್ ಶೆಣೈ, ಕೋಟ ಜಾಮೀಯಾ ಮಸೀದಿಯ ಅಧ್ಯಕ್ಷ ಬಷೀರ್ ಸಾಹೇಬ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಮಾಜಿ ಅಧ್ಯಕ್ಷ ಗಿರೀಶ್ ಆಚಾರ್, ಅಜಿತ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ, ಉಪಾಧ್ಯಕ್ಷೆ ಪುಷ್ಭ ಹಂದಟ್ಟು, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here