ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕಿನ ವಂಡ್ಸೆ ವಲಯದ ದೇವಲ್ಕುಂದ ಕಾರ್ಯಕ್ಷೇತ್ರದಲ್ಲಿ ದೃಷ್ಟಿ ಗಣಪತಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಹೊಲಿಗೆ ತರಬೇತಿ ಶಿಬಿರ ಉದ್ಘಾಟನೆ ಬಟ್ಟೆ ವಿನಾಯಕ ಸಭಾಭವನದಲ್ಲಿ ನಡೆಯಿತು.
ಉದ್ಘಾಟನಾ ಸಂದರ್ಭದಲ್ಲಿ ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಕೃಷಿ ಉತ್ಪನ್ನ ಸಮಿತಿಯ ಉಪಾಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವೆಂಕಟೇಶ್ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶೋಭಾ ಪುತ್ರನ್, ಕೇಂದ್ರ ಒಕ್ಕೂಟ ಸಮಿತಿಯ ಉಪಾಧ್ಯಕ್ಷರಾದ ಶಶಿಧರ ಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರಾಜ್ಯ ಭಜನಾ ಪರಿಷತ್ ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಬಸ್ರೂರು, ವಂಡ್ಸೆ ವಲಯದ ಮೇಲ್ವಿಚಾರಕರಾದ ಚಂದ್ರ ಮಧುವನ, ಹಾಗೂ ಹೊಲಿಗೆ ತರಬೇತುದಾರರಾದ ಯಾಸ್ಮಿನ್‍ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕರಾದ ಚಂದ್ರ ಮಧುವನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಣುಕಾ ಕೋಡಪದವು ಕಾರ್ಯಕರ್ಮ ನಿರೂಪಿಸಿದರು. ಸೇವಾ ಪ್ರತಿನಿಧಿ ಯಶೋಧ ಸ್ವಾಗತಿಸಿ ವಂದಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು , ಸೇವಾ ಪ್ರತಿನಿಧಿಯವರಾದ ನಾಗರತ್ನ, ವನಿತಾ ಉಪಸ್ಥಿತರಿದ್ದರು.












