ಆಲೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0
7

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕುಂದಾಪುರ ತಾಲೂಕಿನ ಚಿತ್ತೂರು ವಲಯದ ಆಲೂರು ಸಿರಿ ಜ್ಞಾನವಿಕಾಸ ಕೇಂದ್ರ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಆಲೂರು,ಆಲೂರು ಬಿ, ಹರ್ಕೂರು ಒಕ್ಕೂಟದ ವತಿಯಿಂದ, ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ, ಉದ್ಯಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ) ಕುಂದಾಪುರ ತಾಲೂಕು, ಗ್ರಾಮ ಪಂಚಾಯತ್ ಆಲೂರು, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರು, ಪ್ರೆಸೆಂಟ್ ಸಂಸ್ಥೆ ಕುಂದಾಪುರ, ನಮ್ಮ ಪರಸ್ಪರ ಆಸರೆ ಸೊಸೈಟಿ (ರಿ) ನಮ್ಮ ಭೂಮಿ, ಹಟ್ಟಿಅಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗ್ರಾಮ ಪಂಚಾಯತ್ ಸಭಾಭವನ ಆಲೂರು ಇಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರಾದ ಡಾ.ಅತುಲ್ ಕುಮಾರ್ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮವನ್ನು ಆಲೂರು ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ನಾರಾಯಣ ಶೆಟ್ಟಿ ನೆರವೇರಿಸಿದರು.
ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಲೂರಿನ ವೈದ್ಯಾಧಿಕಾರಿ ಡಾ.ರಂಗನಾಥ್ ವೈ.ಪಿ, ಎಸ್.ಡಿ.ಎಂ ಆಯುರ್ವೇದ ಕಾಲೇಜು ಕುತ್ಪಾಡಿ ಉಡುಪಿ ಇಲ್ಲಿನ ಸಹ ಪ್ರಾದ್ಯಾಪಕ ಡಾ.ರವಿಕೃಷ್ಣ, ನಮ್ಮ ಭೂಮಿ ಸಂಸ್ಥೆಯ ಸಹ ನಿರ್ದೇಶಕಿ ಕೃಪಾ ಎಂ.ಎನ್, ಆಲೂರು-ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಂಜಯ್ಯ ಶೆಟ್ಟಿ, ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ಕಳಿ ಇಲ್ಲಿನ ಮುಖ್ಯಸ್ಥರಾದ ಡಾ.ರಾಜೇಶ್ ಬಾಯರಿ, ಮಾರಿಕಾಂಬ ದೇವಸ್ಥಾನ ಆಲೂರು ಇದರ ಮುಖ್ಯಸ್ಥರಾದ ಅಪ್ಪು ಕುಲಾಲ್, ಆಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೇಶ್ ಎನ್ ದೇವಾಡಿಗ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೂಪಾ ಗೋಪಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಗೋಪಾಲ್, ಪ್ರೆಸೆಂಟ್ ಸಂಸ್ಥೆ ಕುಂದಾಪುರ ಇದರ ಕೋಟ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.
ಆಲೂರು ಸರಕಾರಿ ಪ್ರೌಢಶಾಲೆಯ ಪ್ರಾಧ್ಯಾಪಕ ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ ಕೋಡಪದವು ಸ್ವಾಗತಿಸಿದರು. ಚಿತ್ತೂರು ವಲಯದ ಮೇಲ್ವಿಚಾರಕ ಮಂಜುನಾಥ್ ನಾಯಕ್ ವಂದಿಸಿದರು. ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಚಂದ್ರಮತಿ, ಜಯಲಕ್ಷ್ಮಿ ಹಾಗೂ ಸುಮಂಗಲ, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here