ಕೋಟೇಶ್ವರ :ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ‘ಅನ್ವೇಷಣೆ’ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕಾರ್ಯಾಗಾರ

0
7

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೋಟೇಶ್ವರದ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕರ ಬೋಧನಾ ಕೌಶಲ್ಯವನ್ನು ವೃದ್ಧಿಸುವ ಉದ್ದೇಶದಿಂದ ‘ಅನ್ವೇಷಣೆ – ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕಾರ್ಯಾಗಾರ’ ಆಯೋಜಿಸಲಾಯಿತು.

Click Here

ಕಾರ್ಯಕ್ರಮದಲ್ಲಿ Learner’s Envision Centre, ಮಂಗಳೂರು ಇದರ ಸಂಪನ್ಮೂಲ ವ್ಯಕ್ತಿಗಳಾದ ಪುನೀತ್ ಕುಮಾರ್ ಶೆಟ್ಟಿ (ಗಣಿತ) ಹಾಗೂ ಅಂಕುರ್ ಕುಮಾರ್ ಯಾದವ್ (ವಿಜ್ಞಾನ) ಅವರು ಶಿಕ್ಷಕರಿಗೆ ನವೀನ, ಚಟುವಟಿಕೆ ಆಧಾರಿತ ಹಾಗೂ ಅನುಭವಾತ್ಮಕ ಬೋಧನಾ ವಿಧಾನಗಳ ಕುರಿತು ತರಬೇತಿ ನೀಡಿದರು. ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ಬೇಕಾಗುವ ವಿವಿಧ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ವ್ಯವಸ್ಥಾಪಕ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಅವರು ಅಧ್ಯಕ್ಷೀಯ ನುಡಿಗಳ ಮೂಲಕ, ಕಲಿಕೆ ಎನ್ನುವುದು ಒಂದು ನಿರಂತರ ಸ್ಪರ್ಧೆ,ಇಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸನ್ನು ಸಾಧಿಸಲೇ ಬೇಕು.ಇಂದಿನ ಕಾರ್ಯಾಗಾರ ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಮಾರ್ಗದರ್ಶಕವಾಗಲಿ ಎಂದು ಶುಭ ಹಾರೈಸಿದರು. ಶಾಲೆಯ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಅವರು ಶಿಕ್ಷಕರ ನಿರಂತರ ವೃತ್ತಿಪರ ಬೆಳವಣಿಗೆಯ ಮಹತ್ವವನ್ನು ತಿಳಿಸಿದರು.
ಮೂರು ಅಧಿವೇಶನಗಳಲ್ಲಿ ನಡೆದ ಕಾರ್ಯಾಗಾರದಲ್ಲಿ ಶಿಕ್ಷಕರು ವಿವಿಧ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತರಗತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಪರಿಣಾಮಕಾರಿ ಬೋಧನಾ ತಂತ್ರಗಳನ್ನು ಕಲಿತರು. ಕಾರ್ಯಾಗಾರವು ಶಿಕ್ಷಕರಲ್ಲಿ ಸೃಜನಾತ್ಮಕ ಹಾಗೂ ತಾರ್ಕಿಕ ಚಿಂತನೆ ಬೆಳೆಸುವಲ್ಲಿ ಸಹಕಾರಿಯಾಯಿತು.
ಶಿಕ್ಷಕಿ ಸಂಧ್ಯಾರವರು ನಿರೂಪಿಸಿದರು.
ಶಿಕ್ಷಕಿ ರೇಣುಕಾ ಅವರು ಸ್ವಾಗತಿಸಿ ಶಿಕ್ಷಕಿ ಚೇತನ ವಂದಿಸಿರು.

Click Here

LEAVE A REPLY

Please enter your comment!
Please enter your name here