ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸುದೀರ್ಘ ಸೇವೆ ಸಲ್ಲಿಸಿ ತನ್ನ ಆಡಳಿತ ಅವಧಿಯಲ್ಲಿ ಕಾಲೇಜಿನ ದಾಖಲಾತಿ ಹಾಗೂ ಫಲಿತಾಂಶದಲ್ಲಿ ಗಣನೀಯ ಬದಲಾವಣೆ ತರಲು ಶ್ರಮಿಸಿದ ಪ್ರಾಂಶುಪಾಲರಾದ ರಾಮಕೃಷ್ಣ ಬಿ. ಜಿ. ಯವರು ಇಂದು ಸೇವಾ ನಿವೃತ್ತಿಯ ಹೊಸ್ತಿಲಲ್ಲಿ ಅವರನ್ನು ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗದವರು ಸನ್ಮಾನಿಸಿ ಗೌರವಿಸಿದರು.
ನೇರ ನಡೆಯ ಶ್ರೀಯುತರು ಮೂಲತಃ ಸಾಗರ ತಾಲೂಕಿನ ಬಿಳಿಯೂರಿನವರು. ಇದೇ ಸಂಸ್ಥೆಯಲ್ಲಿ 13 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಅವರು 5 ವರ್ಷಗಳ ಹಿಂದೆ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ ಇಲ್ಲಿಗೆ ವರ್ಗಾವಣೆ ಗೊಂಡು ಕಾಲೇಜಿನ ಶೈಕ್ಷಣಿಕ ಏಳಿಗೆಗೆ ದುಡಿದಿರುತ್ತಾರೆ.
ಅವರನ್ನು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ, ಅವರ ಆತ್ಮೀಯರು, ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚಂದ್ರಶೇಖರ್ ಮಣೂರು, ಶಿವಾನಂದ ನಾಯಕ, ಗಣಪತಿ ಬಿ. ಆರ್. ಪ್ರಾಂಶುಪಾಲರುಗಳಾದ ವಿಶ್ವನಾಥ್ ಕರಬ, ಗಣಪತಿ ಅವಭೃತ, ನಿವೃತ್ತ ಪ್ರಾಂಶುಪಾಲ ರಾಜೀವ ನಾಯ್ಕ್ ಉಪಸ್ಥಿತರಿದ್ದರು.












