ಕೋಟೇಶ್ವರ :ಗುರು ಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

0
388

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ವಕ್ವಾಡಿ :ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಸೆಪ್ಟೆಂಬರ್ 4ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್ ಶೆಟ್ಟಿಯವರು ಮಾತನಾಡಿ ನಮ್ಮ ಸಂಸ್ಕೃತಿ ನಮಗೆ ಹೆಮ್ಮೆ. ವಿದ್ಯಾರ್ಥಿಗಳಲ್ಲಿ ದೇಸಿ ಸಂಸ್ಕೃತಿಯಲ್ಲಿನ ಮೌಲ್ಯಗಳನ್ನು ಹುಟ್ಟುಹಾಕಿ ಮುಂದಿನ ಪರಂಪರೆಗೆ ತಲುಪುವಂತೆ ಮಾಡಬೇಕು. ಪ್ರತಿಯೊಂದು ಮಗುವೂ ಪ್ರತಿಭಾ ಸಂಪನ್ನವಾಗಿರುತ್ತದೆ. ಅದನ್ನು ಗುರುತಿಸಿ ಬೆಳೆಸಬೇಕಾಗುದುದು ನಮ್ಮ ಕರ್ತವ್ಯ ಎಂದರು. ಈ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಶ್ರೀ ಕೃಷ್ಣ ಮತ್ತು ರಾಧೆಯ ವೇಷಭೂಷಣ ಧರಿಸಿ ಎಲ್ಲರ ಮನಸೆಳೆದರು. ಉತ್ತಮ ಕೃಷ್ಣ, ಉತ್ತಮ ರಾಧೆ ಹಾಗೂ ಯಶೋದೆ–ಕೃಷ್ಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಶ್ರೀಕೃಷ್ಣನ ಜೀವನದ ಪ್ರೀತಿ, ಸತ್ಯ, ಧರ್ಮ ಮತ್ತು ಸೌಹಾರ್ದತೆಯ ಸಂದೇಶವನ್ನು ಮಕ್ಕಳಿಗೆ ತಿಳಿಸುವ ಮೂಲಕ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು. ಪ್ರಾಂಶುಪಾಲರಾದ ರೂಪಾ ಶೆಣೈ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ವೀಣಾರವರು ಕಾರ್ಯಕ್ರಮ ನಿರೂಪಿಸಿ, ಶುಭಲಕ್ಷ್ಮಿ ವಂದಿಸಿದರು.

Click Here

LEAVE A REPLY

Please enter your comment!
Please enter your name here