ಕೋಟೇಶ್ವರದ ಚಿರಂತನ ಶಿಕ್ಷಣ ಸಂಸ್ಥೆಯ ಇಬ್ಬರು ಶಿಕ್ಷಕಿಯರು ಹಾಗೂ ಮುಖ್ಯಸ್ಥೆಯರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವ

0
10

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಹಾಗೂ ಶೈಕ್ಷಣಿಕ ಕೊಡುಗೆಯನ್ನು ಗುರುತಿಸಿ, ಕೋಟೇಶ್ವರದ ಚಿರಂತನ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್‌ ಲೀಡ್ ವಿಲ್ಮಾ ಡಿ’ಸಿಲ್ವಾ ಹಾಗೂ ಪ್ರಾಂಶುಪಾಲೆ ವಿನುತಾ ಬಿ. ಶೆಟ್ಟಿ ಅವರು ‘ಭಾರತ್ ರಾಷ್ಟ್ರೀಯ ಶಿಕ್ಷಕ ಶ್ರೇಷ್ಠತಾ ಪ್ರಶಸ್ತಿ–2026’ ಗೆ ಆಯ್ಕೆಯಾಗಿದ್ದಾರೆ.

CED – Centre for Educational Development Foundationನ Award Council ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ, ಇವರ ಶೈಕ್ಷಣಿಕ ಅನುಭವ, ಬೋಧನಾ ಕ್ಷೇತ್ರದಲ್ಲಿನ ಕೊಡುಗೆ, ನಾಯಕತ್ವ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಸೆಪ್ಟೆಂಬರ್ 13ರಂದು ನವದೆಹಲಿಯ IILM ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ CED – Bharat Education Leadership Conclave ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ವಿಲ್ಮಾ ಡಿ’ಸಿಲ್ವಾ ಹಾಗೂ ವಿನುತಾ ಬಿ. ಶೆಟ್ಟಿ ಅವರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ಶೈಕ್ಷಣಿಕ ಹಾಗೂ ವೃತ್ತಿಪರ ಪಯಣವನ್ನು ಒಳಗೊಂಡ ‘Shining Beyond Limits: A Story of Passion and Purpose’ ಎಂಬ ವಿಶೇಷ ಕಾಫಿ ಟೇಬಲ್ ಪುಸ್ತಕವೂ ಬಿಡುಗಡೆಯಾಗಲಿದೆ. ಇವರನ್ನೂ ಸೇರಿ ಇತರ ಪ್ರಶಸ್ತಿ ಪುರಸ್ಕೃತರ ಸಾಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಅವರ ಕೊಡುಗೆಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲಾಗುತ್ತದೆ.

ಈ ಶೈಕ್ಷಣಿಕ ವರ್ಷದಲ್ಲಿ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಿಸಿರುವ ಚಿರಂತನ ಎಜುಕೇಶನ್ ಟ್ರಸ್ಟ್, ಪ್ರಿ-ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣದ ಜೊತೆಗೆ ಶಿಕ್ಷಕರ ತರಬೇತಿ ಹಾಗೂ ಮಕ್ಕಳ ಮತ್ತು ಹದಿಹರೆಯದವರ ಮಾರ್ಗದರ್ಶನ ಕ್ಷೇತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದೆ.

Click Here

ಸಂಸ್ಥೆಯ ಅಕಾಡೆಮಿಕ್‌ ಲೀಡ್ ಹಾಗೂ ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಉದ್ಯೋಗಿಗಳು ಒಂದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂಸ್ಥೆಯ ಶೈಕ್ಷಣಿಕ ತಂಡಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಇದು ಸಂಸ್ಥೆಯ ಶಿಕ್ಷಕರಿಗೆ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ನಿರ್ದೇಶಕಿ ಡಾ. ಚಿಂತನಾ ರಾಜೇಶ್ ತಿಳಿಸಿದ್ದಾರೆ.

ಪರಿಚಯ – ವಿಲ್ಮಾ ಡಿ’ಸಿಲ್ವಾ
28 ವರ್ಷಗಳ ಶೈಕ್ಷಣಿಕ ಅನುಭವ ಹೊಂದಿರುವ ವಿಲ್ಮಾ ಡಿ’ಸಿಲ್ವಾ ಅವರು ಶಿಕ್ಷಕಿ, ಶಾಲಾ ನಾಯಕಿ ಹಾಗೂ ಶೈಕ್ಷಣಿಕ ಮಾರ್ಗದರ್ಶಕಿಯಾಗಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನ ಡಾನ್ ಬಾಸ್ಕೋ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಬಳಿಕ ಬಸ್ರೂರಿನ ಶ್ರೀ ಶಾರದಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 16 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಂತರ ಕುಂದಾಪುರದ HMM ಹಾಗೂ VKR ಶಾಲೆಗಳಲ್ಲಿ ಅಕಾಡೆಮಿಕ್‌ ಕೋಆರ್ಡಿನೇಟರ್‌ ಆಗಿ ಕಾರ್ಯನಿರ್ವಹಿಸಿದರು.

ಪ್ರಸ್ತುತ ಚಿರಂತನ ಶಿಕ್ಷಣ ಸಂಸ್ಥೆಗಳ ಅಕಾಡೆಮಿಕ್‌ ಲೀಡ್ ಆಗಿ ಶಿಕ್ಷಕರಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡುವುದರ ಜೊತೆಗೆ, ಮಕ್ಕಳ ಕಲಿಕೆ ಮತ್ತು ಸಮಗ್ರ ಬೆಳವಣಿಗೆಗೆ ಅಗತ್ಯವಾದ ವಿವಿಧ ಚಟುವಟಿಕೆಗಳ ರೂಪುರೇಷೆ ಹಾಗೂ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರೀಮತಿ ವಿನುತಾ ಬಿ. ಶೆಟ್ಟಿ
ಶ್ರೀಮತಿ ವಿನುತಾ ಬಿ. ಶೆಟ್ಟಿ ಅವರು 16 ವರ್ಷಗಳ ಶೈಕ್ಷಣಿಕ ಅನುಭವ ಹೊಂದಿರುವ ಸಮರ್ಪಿತ ಭಾವದ ಶಿಕ್ಷಕಿ ಹಾಗೂ ಆಪ್ತಸಮಾಲೋಚಕಿ. B.Ed. (ಹಿಂದಿ ಶಿಕ್ಷಾಸ್ನಾತಕ)ನಲ್ಲಿ ಚಿನ್ನದ ಪದಕ ಪಡೆದಿರುವ ಅವರು, ECCE ಹಾಗೂ ಯೆನೆಪೋಯ ವಿಶ್ವವಿದ್ಯಾಲಯದಿಂದ Guidance & Counsellingನಲ್ಲಿ PGDCG ಪೂರ್ಣಗೊಳಿಸಿದ್ದಾರೆ. ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ವಿ ಕೆ ಆರ್ ಹೈ ಸ್ಕೂಲ್, ಸುಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಶಿಕ್ಷಕಿ, ಹಾಗೂ ಅಕಾಡೆಮಿಕ್ ಕೋಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಚಿರಂತನ ಸಂಸ್ಥೆಯ ಪ್ರಿಮ್ ರೋಸ್ ಫ಼ೌಂಡೇಶನ್ ಶಾಲಾ ವಿಭಾಗದ ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಗು ಕೇಂದ್ರಿತ ಶಿಕ್ಷಣ, ಶಿಕ್ಷಕರ ಮಾರ್ಗದರ್ಶನ, ಸಮಾಲೋಚನೆ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

Click Here

LEAVE A REPLY

Please enter your comment!
Please enter your name here