ಯಜ್ಞದಂತೆ ಪಸರಿಸಿದ ಪಂಚವರ್ಣ ಪರಿಸರ ಕಾಳಜಿ – ಗೋಪಾಲ್ ಪೂಜಾರಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಂಘಟನೆ ಸಾವಿರಾರು ಇರಬಹುದು ಆದರೆ ಪಂಚವರ್ಣದಂತಹ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಅಲ್ಲದೆ ಅವರ ಪರಿಸರ ಕಾಳಜಿ ಯಜ್ಞದಂತೆ ಪಸರಿಸಿದೆ ಎಂದು ಕೊಮೆ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಪೂಜಾರಿ ಹೇಳಿದರು.
ಭಾನುವಾರ ತೆಕ್ಕಟ್ಟೆ ಪಂಚಾಯತ್ ವ್ಯಾಪ್ತಿಯ ಕೊಮೆ ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿವರ್ಷ ಹಮ್ಮಿಕೊಳ್ಳುವ ಮೂರು ತಿಂಗಳ ಹಸಿರು ಹೆಜ್ಜೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪರಿಸರಕ್ಕಾಗಿ ನಮ್ಮ ಸಮಯವನ್ನು ಮಿಸಲಿರಿಸಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ನಿತ್ಯನಿರಂತವಾಗಿಸಿಕೊಳ್ಳುವ ಜಿಲ್ಲೆಯ ಅಪರೂಪದ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.
ತೆಕ್ಕಟ್ಟೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್ ಮಾತನಾಡಿ ಮಕ್ಕಳನ್ನು ಕೇಂದ್ರಿಕರಿಸಿಕೊಂಡು ಪರಿಸರ ಕಾಳಜಿ ಕಾರ್ಯಕ್ರಮ ಅರ್ಥಪೂರ್ಣ ಇಂತಹ ಸಂಘಟನೆಗಳು ಗಲ್ಲಿಗಲ್ಲಿಗಳಲ್ಲಿ ಹುಟ್ಟಿಕೊಂಡರೆ ಪರಿಸರವನ್ನು ಸಮೃದ್ಧಿಗೊಳಿಸಬಹುದು ಎಂದರು.
ಇದೇ ವೇಳೆ ಮುಂಜಾನೆ ಮನೆ ಮನೆಗೆ ತೆರಳಿ ಗಿಡ ನೆಟ್ಟು ಜಾಗೃತಿ ಮೂಡಿಸಲಾಯಿತು.
ಸಭೆಯಲ್ಲಿ ಮಕ್ಕಳಿಗೆ ಗಿಡ ಹಸ್ತಾಂತರಿಸಿ ಸೆಲ್ಫಿ ಕಳುಹಿಸಿ ಬಹುಮಾನ ಗೆಲ್ಲಿ ಎಂಬ ಮಾಹಿತಿ ನೀಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಪ್ರತಿಜ್ಞಾ ವಿಧಿ ಭೋದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೊಮೆ ಶನೀಶ್ವರ ದೇಗುಲದ ಮುಖ್ಯಸ್ಥ ನರಸಿಂಹ ಮೊಗವೀರ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ, ತೆಕ್ಕಟ್ಟೆ ಪಂಚಾಯತ್ ಮಾಜಿ ಸದಸ್ಯ ಗೋಪಾಲ್ ಕಾಂಚನ್, ಸ್ಥಳೀಯರಾದ ಗಣೇಶ್ ಕಾಂಚನ್, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಪರಿಸರ ಜಾಗೃತಿ ಮಾಹಿತಿ ನೀಡಿದರು. ಸದಸ್ಯರಾದ ಪ್ರಭಾಕರ್ ಬಿಎಸ್ ಎನ್ ಎಲ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು. ಕಾರ್ಯಕ್ರಮ ಸಂಯೋಜಕಿ ರೇವತಿ ತೆಕ್ಕಟ್ಟೆ ಸಹಕರಿಸಿದರು.












